ಹಾಸನ: ದಿನಾಂಕ 13.02.2025, ಗುರುವಾರ ದಂದು ಹಾಸನ ತಾ, ಸಾಲಗಾಮೆ ಹೋಬಳಿ, ನಿಟ್ಟೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9:30ಕ್ಕೆ ಬಿ ಜಿ ವಿ ಎಸ್ ಹಾಸನ ತಾಲೂಕು ಸಮಿತಿ ಮತ್ತು ಮಕ್ಕಳ ತಜ್ಞರ ಸಂಘದ ಸಹಯೋಗದಲ್ಲಿ ವಿಶ್ವ ರಕ್ತ ಹೀನತೆಯ ದಿವಸವನ್ನು ಆಚರಿಸಲಾಗುತ್ತಿದೆ ಎಂದು ಕಾರ್ಯದರ್ಶಿ ಬಿ.ಕೆ.ಲೋಲಾಕ್ಷಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜಿವಿಎಸ್ ಹಾಸನ ತಾಲ್ಲೂಕು ಅಧ್ಯಕ್ಷ ಹಾಗೂ ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಚ್.ಜಿ.ಮಂಜುನಾಥ್ ಹಾಗೂ ಮಕ್ಕಳ ತಜ್ಞರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ದಿನೇಶ್ ಭಾಗವಹಿಸಿ ಮಕ್ಕಳೊಂದಿಗೆ ಆರೋಗ್ಯ ಸಂವಾದ ಹಾಗೂ ತಪಾಸಣಾ ಚಟುವಟಿಕೆ ನಡೆಸಲಿದ್ದಾರೆ.
ಇದನ್ನೂ ಓದಿ: ಕಾರವಾರ | ಕೂಲಿ ಕಾರ್ಮಿಕನ ಮನೆ ಸಂಪೂರ್ಣ ಬೆಂಕಿಗಾಹುತಿ
ಈ ಸಂದರ್ಭದಲ್ಲಿ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಮಮತಾಶಿವು ನಿಟ್ಟೂರು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಡಿ.ಜ್ಯೋತಿ ಉಪಸ್ಥಿತರಿರುವರು.
ಇದನ್ನೂ ನೋಡಿ: ಬೆಂಗಳೂರು ಏರ್ ಶೋ : ಉಕ್ಕಿನ ಹಕ್ಕಿಗಳ ಮ್ಯಾಜಿಕ್ #AeroShow2025 #AeroShowBengaluru Janashakthi Media