ವಿಕ್ರಮ್‌ ಸಿನಿಮಾದ ಗೆಲುವಿನ ಸಂಭ್ರಮದಲ್ಲಿ ಕಮಲ್‌ ಹಾಸನ್‌

Please follow and like us:

ಕಮಲ್ ಹಾಸನ್ ಮತ್ತೆ ಟ್ರ್ಯಾಕ್‌ಗೆ ಮರಳಿದ್ದಾರೆ. ‘ವಿಕ್ರಮ್’ ಸಿನಿಮಾದಿಂದಾಗಿ ತಮ್ಮ ಕರಿಯರ್‌ನಲ್ಲೇ ಅಭೂತಪೂರ್ವ ದಾಖಲೆ ಬರೆದಿದ್ದಾರೆ. ಈವರೆಗೂ ಕಮಲ್ ಹಾಸನ್‌ ಯಾವ ಸಿನಿಮಾವೂ ಮಾಡಿರದಂತಹ ದಾಖಲೆಯನ್ನು ‘ವಿಕ್ರಮ್’ ಸಿನಿಮಾ ಮಾಡಿದೆ. ಅಲ್ಲದೆ, ಇದು ಸ್ವತಃ ಕಮಲ್ ಹಾಸನ್ ನಿರ್ಮಿಸಿದ ಸಿನಿಮಾ ಕೂಡ ಹೌದು. ಸದ್ಯ ಸಿನಿಮಾ ಗೆದ್ದ ಖುಷಿಗೆ ಅವರು ನಿರ್ದೇಶಕ ಲೋಕೇಶ್‌ ಕನಗರಾಜ್‌ ಅವರಿಗೆ ದುಬಾರಿ ಕಾರು ಗಿಫ್ಟ್ ನೀಡಿದ್ದಾರೆ. ಸದ್ಯ ಲೋಕೇಶ್‌ಗೆ ಕಮಲ್‌ ಕಾರು ಗಿಫ್ಟ್ ನೀಡುತ್ತಿರುವ ಫೋಟೋ ಸಖತ್ ವೈರಲ್ ಆಗಿದೆ.

ಈ ಚಿತ್ರವು ಹಾಲಿವುಡ್‍ನಲ್ಲೂ ಸಹ ಧೂಳೆಬ್ಬಿಸುತ್ತಿದೆ. ಖಳನಾಯಕನಾಗಿ ನಟಿಸಿದ ನಟ ಸೂರ್ಯ ರಿಗೆ ರೊಲೆಕ್ಸ್ ವಾಚ್ ಗಿಫ್ಟ್ ಮಾಡಿದ್ದಾರೆ. ಆಶ‍್ಚರ್ಯವೆಂದರೆ ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ಸಹ ರೊಲೆಕ್ಸ್.

‘ವಿಕ್ರಮ್’ ಸಿನಿಮಾ ನಿರ್ಮಾಣ ಮಾಡಿದ್ದು ಕಮಲ್​ ಹಾಸನ್ ಅವರು. ರಾಜ್ ಕಮಲ್ ಫಿಲ್ಮ್ಸ್ ಇಂಟರ್​ನ್ಯಾಷನಲ್ ಮೂಲಕ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರದಿಂದ ಅವರಿಗೆ ದುಡ್ಡಿನ ಮಳೆ ಸುರಿದಿದೆ. ಇದು ಕಮಲ್ ಹಾಸನ್ ಖುಷಿಯನ್ನು ಹೆಚ್ಚಿಸಿದೆ. ಹೀಗಾಗಿ, ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರು ಸೇರಿ ಕರ್ನಾಟಕದ ಅನೇಕ ಕಡೆಗಳಲ್ಲಿ ‘ವಿಕ್ರಮ್’ ಸಿನಿಮಾ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಕರ್ನಾಟಕದ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಸಿನಿಮಾ ಎನ್ನುವ ಖ್ಯಾತಿ ‘ವಿಕ್ರಮ್’ಗೆ ಸಿಕ್ಕಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *