ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ಸುದ್ದು ಮಾಡುತ್ತಿರುವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ. ಕೇಸ್ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದ್ದು, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದೆ.
ಮೊನ್ನೇಯಷ್ಟೇ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ನಡೆಸಲು ಎಸ್‌ಐಟಿಗೆ ವಹಿಸಿತ್ತು, ಅದರಂತೆಯೇ ಎಸ್ಐಟಿ ತನಿಖೆ ಚುರುಕುಗಿಳಿಸಿದ್ದು, ಓರ್ವ ವ್ಯಕ್ತಿಯನ್ನ ಎಸ್‌ಐಟಿ ತನ್ನ ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ. ಆತನ ವಿಚಾರಣೆಯನ್ನ ಆರಂಭಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಸ್‌ಐಟಿ ವಶಕ್ಕೆ ಪಡೆದಿರುವ ಈ ವ್ಯಕ್ತಿ ದಿನೇಶ್ ಕಲ್ಲಹಳ್ಳಿಗೆ ಸಿಡಿ ತಂದು ಕೊಟ್ಟಿದ್ದ ಎಂದು ಹೇಳಲಾಗ್ತಿದ್ದು, ಆತ ಎಲ್ಲಿ? ಯಾವಾಗ? ಸಿಡಿಯನ್ನ ದಿನೇಶ್ ಕಲ್ಲಹಳ್ಳಿಗೆ ನೀಡಿದ ಮತ್ತು ಆತನ ಕೈಗೇ ಆ ಸಿಡಿ ಸಿಕ್ಕಿದ್ದು ಹೇಗೆ? ಯಾರು ನೀಡಿದ್ರು ಅನ್ನೋ ಹಲವು ವಿಚಾರಗಳ ಬಗ್ಗೆ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ದೂರು ವಾಪಸ್ ಬೆನ್ನಲ್ಲೆ ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿ : ನಿರಪರಾದಿ ಎಂದು ಕಣ್ಣೀರಿಟ್ಟ “ಜಾರಕಿ” ಹೊಳಿ
ಸಿಡಿಯನ್ನು ಹ್ಯಾಕರ್ ಗಳ ಮೂಲಕ ಬೆಂಗಳೂರಿನಲ್ಲಿಯೇ ಅಪ್ಲೋಡ್ ಮಾಡಿರುವ ಅಂಶಗಳು ಹೊರಗಡೆ ಬರುತ್ತಿವೆ. ಅದರೆ ಇದು ನಕಲಿ ಸಿಡಿಯಾ ಅಥವಾ ಅಸಲಿ ಸಿಡಿಯಾ ಎಂಬ ಮಾಹಿತಿ ಲಭ್ಯವಾಗಿಲ್ಲ.
ಮತ್ತೊಂದೆಡೆ ರಮೇಶ್ ಜಾರಕಿಹೊಳಿ ಸಹ ಈ ಪ್ರಕರಣದ ಬಗ್ಗೆ ದೂರು ನೀಡಲು ಮುಂದಾಗಿದ್ದು, ಇದರಲ್ಲಿ ಪಾಲ್ಗೊಂಡಿರುವವರನ್ನು ಜೈಲಿಗೆ ಕಳುಹಿಸಲು ಪಣತೊಟ್ಟಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.