ಸಿಸಿಬಿ ಧಾಳಿ: ಡ್ರಗ್ ಪೆಡ್ಲರ್‌ಗಳ ಬಂಧನ-2 ಕೋಟಿ ಮೌಲ್ಯದ ಮಾದಕವಸ್ತು ವಶ

ಬೆಂಗಳೂರು: ಕೇಂದ್ರ ಅಪರಾಧ ವಿಭಾಗ ಮಾದಕ ವಸ್ತು ನಿಗ್ರಹ ದಳದವರು ಇಂದು  ಕಾರ್ಯಾಚರಣೆ ನಡೆಸಿ ಜಾರ್ಖಂಡ್‌ನ ಕುಖ್ಯಾತ ಡ್ರಗ್ ಫೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಅವರ ಬಳಿ ಇದ್ದ ಸುಮಾರು 2 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 150 ಎಂಡಿಎಂಎ ಮತ್ತು ಎಕ್ಸಟೆಂಟ್ ಮಾತ್ರೆಗಳು, 400 ಗ್ರಾಂ ಚೆರಸ್ ಉಂಡೆಗಳು, 180 ಎಸ್‌ಎಲ್‌ಡಿ ಸ್ಟ್ರಿಪ್‌ಗಳು, 3,520 ಗ್ರಾಂ ಆಶಿಶ್ ಆಯಿಲ್, 50 ಗ್ರಾಂ ಐಡ್ರೋ ಗಾಂಜಾ, 30 ಕೆಜಿ ಗಾಂಜಾ, 2 ಮೊಬೈಲ್, 2 ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಇದನ್ನು ಓದಿ: ಸ್ಯಾಂಡಲ್‌ವುಡ್‌ ತಾರೆಯರ ಡ್ರಗ್ಸ್ ಸೇವನೆ: ಆರೋಪಿಗಳಿಗೆ ಮತ್ತೆ ಬಂಧನ ಭೀತಿ

ಆರೋಪಿಗಳಿಂದ ವಶಪಡಿಸಿಕೊಂಡ ಮಾದಕ ವಸ್ತುಗಳು ಹಾಗೂ ಇನ್ನಿತರ ವಸ್ತುಗಳ ಮೌಲ್ಯ ಅಂದಾಜು 2 ಕೋಟಿ ರೂಪಾಯಿಗಳು ಆಗಿರಬಹುದೆಂದು ತಿಳಿದು ಬಂದಿದೆ.

ದೆಹಲಿ ಮೂಲದ ಖದೀಮನೊಬ್ಬ ವಿದೇಶಿ ವೆಂಡರ್‌ಗೆ ಬೀಟ್ ಕಾಯಿನ್ ಮೂಲಕ ಹಣ ಪಾವತಿಸಿ ಡಾರ್ಕ್‌ವೆಬ್‌ಸೈಟ್‌ನ ಟಾರ್ ಬ್ರೌಸರ್ ಬಳಸಿಕೊಂಡು ವಿಕ್ಕರ್ ಮೀ ವೆಬ್‌ಸೈಟ್‌ನಿಂದ ವಿದೇಶದಿಂದ ಕಡಿಮೆ ಬೆಲೆಗೆ ಮಾತ್ರೆಗಳು, ಚೆರೆಸ್ ಉಂಡೆಗಳು, ಎಸ್‌ಎಲ್‌ಡಿ ಸ್ಟ್ರಿಪ್‌ಗಳು. ಆಶಿಶ್ ಆಯಿಲ್, ಐಡ್ರೋ ಗಾಂಜಾ, ಗಾಂಜಾ ಇನ್ನತರ ಮಾದಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದನು.

ಅವುಗಳನ್ನು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಕ್ಕಾಗಿ ಜಾರ್ಖಂಡ್ ಮೂಲದ ಇಬ್ಬರು ಬಂಧಿತ ಆರೋಪಿಗಳಿಗೆ ತಿಂಗಳ ಸಂಬಳ ನೀಡಿ ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಮನೆ ಇರಿಸಿದ್ದನು. ಅಲ್ಲಿಂದ ಮಾದಕವಸ್ತುಗಳನ್ನು ಇನ್ನಿಬ್ಬರು ಸ್ಥಳೀಯ ವ್ಯಕ್ತಿಗಳ ಜತೆ ಸೇರಿ ಐಟಿ-ಬಿಟಿ ಕಂಪನಿಯ ಉದ್ಯೋಗಿಗಳಿಗೆ ಸರಬರಾಜು ಮಾಡಿ ಹೆಚ್ಚಿನ ಹಣ ಗಳಿಸುವ ದಂಧೆ ನಡೆಸುತ್ತಿದ್ದ ಎಂದು ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಡ್ರಗ್ಸ್ ಖರೀದಿಸುತ್ತಿದ್ದ ಗ್ರಾಹಕನೊಬ್ಬ ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರ ವಿಶೇಷ ತಂಡದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದಲ್ಲಿ ಇತ್ತೀಚೆಗೆ ನಡೆದ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದ್ದು, ಬಂಧಿತ ಆರೋಪಿಗಳಿಗೆ ಸಂಬಳ ನೀಡಿ ಮಾದಕ ವಸ್ತುಗಳನ್ನು ಮಾರಾಟ ಮಾಡಿಸುತ್ತಿದ್ದ. ದೆಹಲಿ ಮೂಲದ ಡ್ರಗ್ ಫೆಡ್ಲರ್‌ಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *