ನವದೆಹಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ಹೈಡಲ್ ಯೋಜನೆಗೆ ಗುತ್ತಿಗೆ ನೀಡಿಕೆಯಲ್ಲಿನ ಭ್ರಷ್ಟಾಚಾರದ ತನಿಖೆಯ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರ ದೆಹಲಿ, ಗುರುಗ್ರಾಮ್ ಮತ್ತು ಉತ್ತರ ಪ್ರದೇಶದ ಬಾಗ್ಪತ್ ಸೇರಿದಂತೆ 30 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಹಲವು ತಂಡಗಳು ಗುರುವಾರ ದಾಳಿ ಆರಂಭಿಸಿವೆ.
“ಜಮ್ಮು ಕಾಶ್ಮೀರ, ದೆಹಲಿ, ಯುಪಿ, ಹರಿಯಾಣ, ಮುಂಬೈ, ಬಿಹಾರ ಮತ್ತು ರಾಜಸ್ಥಾನ ಸೇರಿದಂತೆ ಎಂಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಲಾಗಿದೆ. ಇದರಲ್ಲಿ ಸತ್ಯಪಾಲ್ ಮಲಿಕ್‌ಗೆ ಸೇರಿದ ದೆಹಲಿ, ಗುರುಗ್ರಾಮ್ ಮತ್ತು ಉತ್ತರ ಪ್ರದೇಶದ ಬಾಗ್‌ಪತ್‌ನ ಮೂರು ಸ್ಥಳಗಳಿವೆ. ಇತರ ಕೆಲವು ಸ್ಥಳಗಳು ಅವರ ಸಹವರ್ತಿಗಳಾದ IAS ಅಧಿಕಾರಿ ನವೀನ್ ಚೌಧರಿ, CVPPPL ನ ಅಂದಿನ ಅಧ್ಯಕ್ಷರಾದ ಎಂಎಸ್ ಬಾಬು; ನಿರ್ದೇಶಕರಾದ ಎಂ ಕೆ ಮಿತ್ತಲ್ ಮತ್ತು ಅರುಣ್ ಮಿಶ್ರಾ ಅವರಿಗೆ ಸೇರಿದ್ದು” ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:ಯುಪಿ | ಕಾಂಗ್ರೆಸ್ ಜೊತೆಗೆ ಎಲ್ಲವೂ ಚೆನ್ನಾಗಿದೆ ಎಂದ ಅಖಿಲೇಶ್ ಯಾದವ್; ಶೀಘ್ರದಲ್ಲೆ ಮೈತ್ರಿ ಘೋಷಣೆ ಸಾಧ್ಯೆತೆ
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಸ್ಥಳಾಂತರಿಸಲು ವಿಮಾನ ಬೇಕೆಂದು ಕೇಳಲಾಗಿದ್ದ ಮನವಿಯನ್ನು ಕೇಂದ್ರದ ಮೋದಿ ಸರ್ಕಾರವು ತಿರಸ್ಕರಿಸದಿದ್ದರೆ ಫೆಬ್ರವರಿ 2019 ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ತಪ್ಪಿಸಬಹುದಿತ್ತು ಎಂದು ಕಳೆದ ವರ್ಷ ಸತ್ಯಪಾಲ್ ಮಲಿಕ್ ಹೇಳಿದ್ದರು. ಅಲ್ಲದೆ, ಅವರು ಬಿಜೆಪಿಯಲ್ಲಿದ್ದೆ, ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿದ್ದರು.
ಸತ್ಯಾಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರಾಗಿದ್ದಾಗ ಎರಡು ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಏಪ್ರಿಲ್ 2022 ರಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸಿಬಿಐ ಅವರನ್ನು ಪ್ರಶ್ನಿಸಿತ್ತು. ಇದರಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು.
2021 ರ ಅಕ್ಟೋಬರ್‌ನಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಯಕನಿಗೆ ಸಂಬಂಧಿಸಿದ ಒಂದು ಫೈಲ್ ಸೇರಿದಂತೆ ಎರಡು ಫೈಲ್‌ಗಳನ್ನು ತೆರವುಗೊಳಿಸಲು ತನಗೆ 300 ಕೋಟಿ ರೂಪಾಯಿ ಲಂಚ ನೀಡಲಾಯಿತು ಎಂದು ಮಲಿಕ್ ಹೇಳಿದ್ದಾರೆ.
ಇದನ್ನೂ ಓದಿ:ದೆಹಲಿ ಚಲೋ ಹೋರಾಟ | ಪೊಲೀಸರ ಮತ್ತು ರೈತರ ನಡುವೆ ಘರ್ಷಣೆ; 21 ವರ್ಷದ ರೈತ ಸಾವು
ಈ ಆರೋಪದ ಆಧಾರದ ಮೇಲೆ ಸಿಬಿಐ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 14 ಸ್ಥಳಗಳಲ್ಲಿ ಶೋಧ ನಡೆಸಿದೆ. ಸಂಸ್ಥೆಯು ಎರಡು ಪ್ರಕರಣಗಳಲ್ಲಿ ಅನಿಲ್ ಅಂಬಾನಿಯವರ ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ (RGIC) ಮತ್ತು ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ (CVPPPL) ನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.
ಮಲಿಕ್ ಮಾಡಿರುವ ಆರೋಪಗಳು ಗಂಭೀರವಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಆಡಳಿತ ನಿರ್ಧರಿಸಿದೆ ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಘೋಷಿಸಿದ್ದರು.
ವಿಡಿಯೊ ನೋಡಿ: “ಮೋದಿ ಹಟಾವೋ, ದೇಶ್ ಬಚಾವೋ” – ರೈತ – ಕಾರ್ಮಿಕ – ದಲಿತರ ಒಕ್ಕೊರಲ ದನಿ Janashakthi Media