ಸಿಬಿಸಿಎಸ್ ಪದ್ದತಿಯನ್ನು ಕೈ ಬಿಟ್ಟು ಕನ್ನಡ ಬೋಧನೆಯನ್ನು ಅವಶ್ಯಕ ವಿಷಯ ಎಂದು ಕಡ್ಡಾಯಗೊಳಿಸುವಂತೆ ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ದೇವನೂರು ಮಹದೇವ, ಚನ್ನವೀರ ಕಣವಿ, ಗುರುಲಿಂಗ ಕಪಾಸೆ ಉಪನ್ಯಾಸಕರಾದ ಡಾ. ರಾಜೇಂದ್ರ ಚೆನ್ನಿ, ಡಾ. ಪುರುಷೋತ್ತಮ ಬಿಳಿ ಡಾ. ಎಂ.ಡಿ. ಒಕ್ಕುಂದ ಹಾಗೂ ಡಾ. ವಿಠಲ್ ಭಂಡಾರಿ ಸೇರಿದಂತೆ 55 ಕ್ಕೂ ಹೆಚ್ಚು ಸಾಹಿತಿಗಳು, ಸಾಂಸ್ಕೃತಿಕ ರಂಗದ ಚಿಂತಕರು ಹಾಗೂ ಉಪನ್ಯಾಸಕರು ಮುಖ್ಯಮಂತ್ರಿಗೆ ಪತ್ರವನ್ನು ಬರೆದಿದ್ದಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಸ್ನಾತಕ ಹಾಗೂ ಸ್ನಾತಕೋತ್ತರ ಹಂತಗಳಲ್ಲಿ ಸಿ.ಬಿ.ಸಿ.ಎಸ್. ಪದ್ಧತಿಯನ್ನು ಅಳವಡಿಸಿಕೊಳ್ಳಲು ಆದೇಶಿಸಿದ್ದು ಅದರ ಪ್ರಕ್ರಿಯೆಆರಂಭವಾಗಿದೆ. ಸಿ.ಬಿ.ಸಿ.ಎಸ್. (“ಚೊಯ್ಸ್ ಬೇಸ್ಡ್ಕ್ರೆಡಿಟ್ ಸಿಸ್ಟಮ್” “ಆಯ್ಕೆಯಾಧಾರಿತ ಗಳಿಕೆಯ ಪದ್ದತಿ”) ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಅಧ್ಯಯನಕ್ಕೆ ತುಂಬ ಕಡಿಮೆ ಅವಕಾಶವನ್ನು ಕಲ್ಪಿಸುತ್ತಿದೆ. ಈ ಹೊಸ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ಪದವಿ ಹಂತದಲ್ಲಿ ಕನ್ನಡ ಅಧ್ಯಯನಕ್ಕೆ ಹಾಗೂ ಕನ್ನಡ ಅಧ್ಯಾಪಕರಿಗೆ ತೀವ್ರ ಆತಂಕ ಹಾಗೂ ತೊಂದರೆಗಳು ನಿರ್ಮಾಣವಾಗುತ್ತಿವೆ. ಹಾಗಾಗಿ ಸಿ.ಬಿ.ಸಿ.ಎಸ್ ಪದ್ದತಿಯನ್ನು ಕೈ ಬಿಡಬೇಕು ಬಿಡದೆ ಹೋದಲ್ಲಿ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪತ್ರದ ಸಾರಾಂಶ ಈ ಕೆಳಗಿನಂತಿದೆ
ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಆವಶ್ಯಕ ಹಾಗೂ ಐಚ್ಛಿಕ ವಿಷಯವಾಗಿ ಬೋಧಿಸಲಾಗುತ್ತಿದ್ದು ಕನ್ನಡ ಆವಶ್ಯಕ ವಿಷಯದ ಕಾರ್ಯ ಭಾರವನ್ನು ಕಡಿತಗೊಳಿಸಲಾಗಿದೆ. ಸಿ.ಬಿ.ಸಿ.ಎಸ್. ಪದ್ಧತಿಯನ್ನು ಜಾರಿಗೆ ತರುವಲ್ಲಿ, ಬರುವ ಮೂರು ವರ್ಷಗಳಲ್ಲಿ ಕನ್ನಡ ವಿಷಯದ ೨೦ ರಿಂದ ೩೦ ತಾಸುಗಳ ಬೋಧನಾ ಕಾರ್ಯಭಾರದ ಕೊರತೆ ಎದುರಾಗುವ ಸಾಧ್ಯತೆಯಿದೆ.
ಪದವಿ ಹಂತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಬೇಕೆಂಬ ಹಿಂದಿನ ಸರ್ಕಾರದ ಆಜ್ಞೆಯನ್ನು ಕಡೆಗಣಸಿ, ಉನ್ನತ ಶಿಕ್ಷಣ ಪರಿಷತ್ತು ಯಾವ ಭಾಷೆಯನ್ನಾದರೂ ಕಲಿಯಬಹುದೆಂದು ತಿದ್ದುಪಡಿಯನ್ನು ತಂದಿದೆ. ಇದು ಅತ್ಯಂತ ಆತಂಕಕಾರಿ.
ಈ ಕಾರಣಗಳಿಂದ ಕನ್ನಡ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕನ್ನಡ ವಿಷಯದ ಅತಿಥಿ ಉಪನ್ಯಾಸಕರು ಬರುವ ವರ್ಷದಿಂದಲೇ ಕೆಲಸ ಕಳೆದುಕೊಳ್ಳುತ್ತಾರೆ. ಮುಂಬರುವ ದಿನಗಳಲ್ಲಿ ಕನ್ನಡಸ್ನಾತಕೋತ್ತರ ಪದವೀಧರರಿಗೆ ಕನ್ನಡ ಪ್ರಾಧ್ಯಾಪಕರ ಹುದ್ದೆಗಳು ಕೈ ತಪ್ಪಲಿವೆ.ಕರ್ನಾಟಕದಲ್ಲಿ ಕನ್ನಡವನ್ನು ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ಅಧ್ಯಯನ ಮಾಡುವ ಕನ್ನಡದ ಮಕ್ಕಳ ಪಾಲಿನ ಅನ್ನವನ್ನು ಕಸಿದು ಕೊಳ್ಳುವ ಸಂಕಟ ಎದುರಾಗಿದೆ.
ಇದು ಕೇವಲ ಕಾರ್ಯಭಾರ ಮತ್ತು ಉದ್ಯೋಗಾವಕಾಶದ ಪ್ರಶ್ನೆ ಮಾತ್ರವಲ್ಲ, ಪದವಿ ಹಂತದಲ್ಲಿ ಕನ್ನಡ ಭಾಷೆ, ಸಾಹಿತ್ಯ,ಕಲೆ, ಸಂಸ್ಕೃತಿ, ಹೋರಾಟಗಳ ಅಧ್ಯಯನಕ್ಕೆ ಆ ಮೂಲಕ ನಾಡು-ನುಡಿ ಕುರಿತಂತೆ ಹೊಸ ತಲೆಮಾರಿನಲ್ಲಿ ಸಹಜವಾಗಿ ಅರಳಬೇಕಾದ ಅರಿವು,ಚಿಂತನೆ ಹಾಗೂ ಮುನ್ನೋಟಗಳಿಗೆ ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ತಾವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಸಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕನ್ನಡಅಧ್ಯಾಪಕರ ಪರಿಷತ್ತು ಆರಂಭಿಸಿರುವ ತೀವ್ರ ಹೋರಾಟವನ್ನು ಬೆಂಬಲಿಸುತ್ತೇವೆ.
ಇದನ್ನು ನೋಡಿ : https://youtu.be/R0b9_LPMItA
ಎಲ್ಲ ಪದವಿಗಳಲ್ಲೂ ಆರೂ ಸೆಮಿಸ್ಟರ್ ಗಳಿಗೆ ಕನ್ನಡ ಆವಶ್ಯಕ ವಿಷಯವನ್ನು ಕಡ್ಡಾಯ ಗೊಳಿಸಬೇಕು.
ಕನ್ನಡೇತರರಿಗೆ ‘ಕನ್ನಡ ಕಲಿ-ನಲಿ’ ಮಾದರಿಯ ಪ್ರಾಥಮಿಕ ಪಠ್ಯವನ್ನು ನಿಗದಿಪಡಿಸಬೇಕು.
ನಾಡು ನುಡಿ ಎಂಬ ಕಾರಣಕ್ಕೆ ಕನ್ನಡ ಆವಶ್ಯಕ ವಿಷಯದ ಬೋಧನಾ ಕಾರ್ಯಭಾರವನ್ನು ಮೊದಲಿನಂತೆ ೫ ಗಂಟೆಗೆ ನಿಗದಿಪಡಿಸಬೇಕು.
ಎಲ್ಲ ಪದವಿಗೂ ಪ್ರತ್ಯೇಕ ಪಠ್ಯ ನಿಗದಿಗೊಳಿಸಬೇಕು.
ಬಿ.ಎ. ಕನ್ನಡ ಆನರ್ಸನ್ನು ಸದರಿ ಶೈಕ್ಷಣಕ ವರ್ಷದಿಂದಲೇ ಆರಂಭಿಸಲು ಅವಕಾಶವನ್ನು ಕಲ್ಪಿಸಬೇಕು ಮತ್ತು ನಾಡು ನುಡಿ ಎಂಬ ಕಾರಣಕ್ಕೆ ಐಚ್ಛಿಕ ಕನ್ನಡದಂತೆ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆಯನ್ನು ೫ ಕ್ಕೆ ನಿಗದಿಪಡಿಸಬೇಕು. ಪ್ರತಿತರಗತಿಯ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು ನಾಡು ನುಡಿಯ ರಕ್ಷಣೆಯ ಕಾರಣಕ್ಕೆ ೪೦ ಕ್ಕೆ ನಿಗದಿಗೊಳಿಸಬೇಕು.
ಈ ಬೇಡಿಕೆಗಳನ್ನು ಈಡೇರಿಸಿ ಪದವಿ ಹಂತದಲ್ಲಿ ಕನ್ನಡ ಎದುರಿಸುತ್ತಿರುವ ಆತಂಕಗಳನ್ನು ಪರಿಹರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ.
ತಮ್ಮ ವಿಶ್ವಾಸಿಗಳು
ನಾಡೋಜ ಡಾ. ಚೆನ್ನವೀರಕಣವಿ
ಡಾ. ಗುರುಲಿಂಗ ಕಾಪಸೆ
ನಾಡೋಜ ಬರಗೂರು ರಾಮಚಂದ್ರಪ್ಪ
ನಾಡೋಜ ದೇವನೂರು ಮಹಾದೇವ
ಡಾ. ಎಚ್.ಎಸ್. ರಾಘವೇಂದ್ರರಾವ್
ಡಿ.ಎಸ್. ನಾಗಭೂಷಣ
ಡಾ. ರಾಜೇಂದ್ರಚೆನ್ನಿ
ಡಾ. ಮಾಲತಿ ಪಟ್ಟಣಶೆಟ್ಟಿ
ವೈದೇಹಿ
ಹೇಮಾ ಪಟ್ಟಣಶೆಟ್ಟಿ
ಸುಕನ್ಯಾ ಮಾರುತಿ
ಮೂಡ್ನಾಕೂಡುಚಿನ್ನಸ್ವಾಮಿ
ಹಸನ್ ನಯೀಮ್ ಸುರಕೋಡ
ಡಾ. ಎನ್.ಆರ್. ನಾಯಕ
ಸವಿತಾ ನಾಗಭೂಷಣ
ಡಾ. ಪುರುಷೋತ್ತಮ ಬಿಳಿಮಲೆ
ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ
ಡಾ. ಸೋಮಶೇಖರಇಮ್ರಾಪೂರ
ಡಾ. ರಹಮತತರೀಕೆರೆ
ಡಾ. ಸಿದ್ಧನಗೌಡ ಪಾಟೀಲ
ಡಿ. ಉಮಾಪತಿ
ಡಾ. ವಸುಂಧರಾ ಭೂಪತಿ
ಶಾಂತಾರಾಮ ನಾಯಕ ಹಿಚ್ಕಡ
ಡಾ. ಕೆ. ಕೇಶವಶರ್ಮ
ಡಾ. ಸವಿತಾ ಬನ್ನಾಡಿ
ಕೆ. ನೀಲಾ
ಶಂಕರ ಹಲಗತ್ತಿ
ಡಾ. ಮೀನಾಕ್ಷಿ ಬಾಳಿ
ಡಾ. ಶಾಂತಾಇಮ್ರಾಪೂರ
ಡಾ. ಕೆ.ಎಸ್. ವಿಮಲಾ
ಬಸವರಾಜ ಸೂಳಿಬಾವಿ
ಡಾ. ಡಿ.ಎಂ. ಹಿರೇಮಠ
ಡಾ. ಜಿ.ಎಂ. ಹೆಗಡೆ
ಪ್ರಕಾಶಉಡಕೇರಿ
ಅಶೋಕ ಶೆಟ್ಟರ್
ಟಿ.ಎಸ್. ಗೊರವರ
ಡಾ. ಅಮರೇಶ ನುಗಡೋಣ
ನಾಗೇಶ ಹೆಗಡೆ
ಡಾ. ಕೆ.ಸಿ. ರಘು
ಆರ್.ಜಿ.ಹಳ್ಳಿ ನಾಗರಾಜ
ನಿರಂಜನಆರಾಧ್ಯ
ಮೇಟಿ ಮಲ್ಲಿಕಾರ್ಜುನ
ಸುನಂದಾ ಕಡಮೆ
ಡಾ. ಕೇಶವ ಶರ್ಮ
ಡಾ. ವಿನಯಾಒಕ್ಕುಂದ
ಡಾ. ಶ್ರೀಶೈಲ ಹುದ್ದಾರ
ಡಾ. ವಾಯ್.ಎಂ. ಭಜಂತ್ರಿ
ಡಾ. ಜಿನದತ್ತ ಹಡಗಲಿ
ನಾದ ಮಣ ನಾಲ್ಕೂರು
ಎಸ್. ಕುಮಾರ
ರಾಮಲಿಂಗಪ್ಪ ಟಿ. ಬೇಗೂರು
ಡಾ. ಸಂಗಮನಾಥ ಲೋಕಾಪೂರ
ಡಾ. ಜೆ.ಪಿ. ಶೆಟ್ಟಿ
ಡಾ. ಎಂ.ಡಿ. ಒಕ್ಕುಂದ
ಡಾ. ವಿಠ್ಠಲ ಭಂಡಾರಿ