ಕಾವೇರಿ ವಿಚಾರ | ಉಭಯ ರಾಜ್ಯಗಳ ಸಿಎಂ ಜಂಟಿ ಸಭೆ ನಡೆಸುವಂತೆ ಸಿಪಿಐಎಂ ಒತ್ತಾಯ

ಬೆಂಗಳೂರು: ಕಾವೇರಿ ವಿಚಾರವಾಗಿ ಎರಡೂ ರಾಜ್ಯಗಳ ರೈತರ ಬಾಧೆಯನ್ನು ನಿವಾರಿಸಲು, ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿ ಸಭೆ ನಡೆಸಿ, ಕುಡಿಯುವ ನೀರನ್ನು ಹೊರತು ಪಡಿಸಿ, ಸಂಕಷ್ಟ ಪರಿಹಾರಕ್ಕೆ ಅಗತ್ಯ ನ್ಯಾಯಯುತ ನಿರ್ಧಾರ ಕೈಗೊಳ್ಳುವಂತೆ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಬುಧವಾರ ಆಗ್ರಹಿಸಿದೆ.

ಮುಂಗಾರು ಕೊರತೆಯಿಂದ ಕಾವೇರಿ ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆ ಉಂಟಾಗಿದ್ದು, ಮಾತ್ರವಲ್ಲಾ ಒಳ ಹರಿವಿನ ಕೊರತೆಯು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರೈತರಲ್ಲಿ ಬೆಳೆ ನಷ್ಟದ ಭೀತಿ ಉಂಟಾಗಿದೆ. ಇದರಿಂದ ಇರುವ ಕೊರತೆಯ ನೀರಿನ ಹಂಚಿಕೆಗಾಗಿ ಎರಡು ರಾಜ್ಯಗಳ ನಡುವೆ ವಾತಾವರಣ ಹದ ಗೆಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇದನ್ನೂ ಓದಿ: ತ್ರಿಪುರಾ | ಸಿಪಿಐಎಂ ಮತ್ತೆ ತೆಕ್ಕೆಗೆ ಪಡೆಯಲಿದೆಯೆ ‘ಮಾಣಿಕ್ ಸರ್ಕಾರ್’ ಕ್ಷೇತ್ರ?

ಸಂಕಷ್ಟ ಹಂಚಿಕೆಯ ಪರಿಹಾರದ ವಿಚಾರವೂ ಸ್ಪಷ್ಠವಾಗಿ ಇರದೇ ಇರುವುದರಿಂದ ಎರಡು ರಾಜ್ಯಗಳ ನಡುವೆ ಬಿಗುವಿನ ವಾತಾವರಣಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ, “ಎರಡೂ ರಾಜ್ಯಗಳ ರೈತರ ಬಾಧೆಯನ್ನು ನಿವಾರಿಸಲು, ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿ ಸಭೆ ನಡೆಸಿ, ಕುಡಿಯುವ ನೀರನ್ನು ಹೊರತು ಪಡಿಸಿ, ಸಂಕಷ್ಟ ಪರಿಹಾರಕ್ಕೆ ಅಗತ್ಯ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

“ಸಂಕಷ್ಠ ಪರಿಹಾರದ ವೈಜ್ಞಾನಿಕ ಕ್ರಮಗಳಿಲ್ಲದೇ ಇರುವುದು ಮತ್ತೆ ಮತ್ತೆ ಇಂತಹ ಪರಿಸ್ಥಿತಿಗಳು ಮರಳಿ ಮರಳಿ ಉದ್ಭವಿಸಲು ಕಾರಣಗಳಾಗುತ್ತಿವೆ. ಇವುಗಳ ಜೊತೆಗೆ ಜನರ ಭಾವನೆಗಳೊಂದಿಗೆ ಆಟವಾಡುವ ಭಾಷಾಂಧ ಹಾಗೂ ಮತಾಂಧ ದೇಶದ್ರೋಹಿ ಶಕ್ತಿಗಳ ಬೆಳವಣಿಗೆಗೆ ಮತ್ತು ಸಂಕುಚಿತ ರಾಜಕಾರಣಕ್ಕೆ ಕಾರಣವಾಗುತ್ತಿವೆ. ಆದ್ದರಿಂದ, ಇಂತಹ ಸಂಕಷ್ಠದ ಸ್ಥಿತಿಯನ್ನು ಎದುರಿಸಲು ಸಂಕುಚಿತ ಭಾಷಾಂಧ ಮತ್ತು ಮತಾಂಧ ಶಕ್ತಿಗಳ ಬೆಳವಣಿಗೆ ತಡೆಗೆ, ಶಾಶ್ವತವಾದ ಮತ್ತು ವೈಜ್ಞಾನಿಕವಾದ ಸಂಕಷ್ಠ ಪರಿಹಾರದ ಕ್ರಮಗಳನ್ನು ರೂಪಿಸಬೇಕು” ಎಂದು ಸಿಪಿಐಎಂ ಕೋರಿದೆ.

ಇದನ್ನೂ ಓದಿ: ಗುಜರಾತ್: ಇಸ್ರೋ ವಿಜ್ಞಾನಿಯೆಂದು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವ್ಯಕ್ತಿಯ ಬಂಧನ

ಎರಡು ರಾಜ್ಯಗಳ ರೈತರು ಹಾಗೂ ಕೂಲಿಕಾರರು ಅನುಭವಿಸುವ ಬೆಳೆ ನಷ್ಟಕ್ಕೆ ಒಕ್ಕೂಟ ಮತ್ತು ರಾಜ್ಯ ಸರಕಾರಗಳೆರಡೂ ಆಯಾ ರಾಜ್ಯಗಳಿಗೆ ಸೀಮಿತವಾಗಿ ಬೆಳೆ ಹಾಗೂ ಉದ್ಯೋಗ ನಷ್ಟ ಪರಿಹಾರ ಹಾಗೂ ವಿಮಾ ಸೌಲಭ್ಯ ಒದಗಿಸಬೇಕಿದೆ ಎಂದು ಸಿಪಿಐಎಂ, ಒಕ್ಕೂಟ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸುತ್ತದೆ.

ಕೆಲ ಭಾಷಾಂಧ ಮತ್ತು ಮತಾಂಧ ಶಕ್ತಿಗಳು ಈ ದುರಿತ ಸಂದರ್ಭವನ್ನು ಬಳಸಿಕೊಂಡು ತಮ್ಮ ರಾಜಕೀಯ ಲಾಭಕ್ಕೆ ಜನತೆಯನ್ನು ಪರಸ್ಪರರ ವಿರುದ್ದ ಎತ್ತಿಕಟ್ಟುವ ಯಾವುದೇ ದುರ್ನಡೆಗಳಿಗೆ ಆಸ್ಪದ ಕೊಡದೇ ಅವುಗಳನ್ನು ತಿರಸ್ಕರಿಸಬೇಕು. ಎರಡು ರಾಜ್ಯಗಳ ರೈತರು ಮತ್ತು ನಾಗರೀಕರು ಈ ಸಂಕಷ್ಠದ ಕಾಲದಲ್ಲಿ ಸಂಯಮ ಹಾಗೂ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ನಾಗರಿಕರಲ್ಲೂ ಸಿಪಿಐಎಂ ಮನವಿ ಮಾಡಿದೆ.

ವಿಡಿಯೊ ನೋಡಿ: ಅಸಹಜ ಸಾವುಗಳಲ್ಲಿ ಹರಿದ ನೆತ್ತರಿಗೆ ಉತ್ತರ ಕೊಡಿ – ಕೆ.ಎಸ್.‌ ವಿಮಲಾ Janashakthi Media

Donate Janashakthi Media

Leave a Reply

Your email address will not be published. Required fields are marked *