ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ : ರಾಜ್ಯದ ಸಂಸದರ ನಿವಾಸಕ್ಕೆ ಮುತ್ತಿಗೆ ಕರವೇ ಎಚ್ಚರಿಕೆ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಸಂಸದರು ಮೌನ ವಹಿಸಿದ್ದು, ಅವರ ಈ ಕ್ರಮವನ್ನು ಖಂಡಿಸಿ ಸಂಸದರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಎಚ್ಚರಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾವೇರಿ ನದಿ ನೀರು ವಿಚಾರದಲ್ಲಿ ನಾವು ಪ್ರತಿಭಟನೆಗೆ ಇಳಿಯುತ್ತಿದ್ದೇವೆ. ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಆದೇಶವಿದ್ದು, ನಾವು ಈ ಆದೇಶವನ್ನು ಧಿಕ್ಕರಿಸುತ್ತೇವೆ. ನಮ್ಮಲ್ಲಿ ನೀರಿಲ್ಲ, ಇಂತಹ ಸ್ಥಿತಿಯಲ್ಲಿ ದಿಲ್ಲಿಯಲ್ಲಿ ಕುಳಿತು ನೀರು ಕೊಡಿ ಎಂದರೆ ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

‘ತಮಿಳುನಾಡಿಗೆ ನೀರು ಕೊಡಲು ಹೇಗೆ ಸಾಧ್ಯ?, ಸುಪ್ರೀಂ ಕೋರ್ಟ್ ಇರಬಹುದು, ಕಾವೇರಿ ನಿಯಂತ್ರಣ ಮಂಡಳಿ ಇರಬಹುದು ನಾವು ಅದನ್ನು ಧಿಕ್ಕರಿಸುತ್ತಿವಿ. ರೈತರಿಗೆ ನೀರಿಲ್ಲ, ಬೆಂಗಳೂರಿನ ಜನರಿಗೆ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ, ಕಾವೇರಿ ‌ನೀರು ನಿರ್ವಹಣಾ ಮಂಡಳಿ ಆದೇಶವನ್ನು ಪಾಲಿಸಿ ನೀರು ಬಿಟ್ಟರೆ, ಕರ್ನಾಟಕ ರಾಜ್ಯ ಭುಗಿಲೇಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆಗಸ್ಟ್ 29ರಿಂದ ಸೆಪ್ಟೆಂಬರ್ 12ರ ವರೆಗೆ ಪ್ರತಿದಿನ 5ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಿದ್ದು, ನಾವು ಯಾರು ಅದಕ್ಕೆ ಧ್ವನಿ ಎತ್ತಲಿಲ್ಲ. ಇವತ್ತು ಮತ್ತೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡಲೇಬೇಕು ಎಂದು ಆದೇಶ ಮಾಡುವುದಾದರೇ ನಾವು ಧಿಕ್ಕರಿಸುತ್ತೇವೆ. ಏನು ಬೇಕಾದರೂ ಆಗಲಿ, ನಮ್ಮ ಮೇಲೆ ಲಾಠಿ ಚಾರ್ಜ್ ಆಗಲಿ, ಫೈರ್ ಮಾಡಿ, ಜೈಲಿಗೆ ಹಾಕಿದರೂ ನಾವು ಹೆದರುವುದು ಇಲ್ಲ. ಕಾವೇರಿ ಕನ್ನಡಿಗರ ಜೀವನದಿ. ಅದರ ರಕ್ಷಣೆಗಾಗಿ ನಾವು ಏನು ಬೇಕಾದರೂ ಮಾಡಲು ತಯಾರಿದ್ದೇವೆ’ ಎಂದು ಅವರು ತಿಳಿಸಿದರು.  ಕಾವೇರಿ ನದಿ ನೀರು 

Donate Janashakthi Media

Leave a Reply

Your email address will not be published. Required fields are marked *