ಆತ್ಮ ನಿರ್ಭರ ಭಾರತ ಎಂದರೆ ಆತ್ಮಗಳ ಮಾರಾಟವೇ?..

ದೇಶವೀಗ ಆತ್ಮನಿರ್ಭರ ಜಪ ಮಾಡುತ್ತಿದೆ. ಚೀನಾ ಗಡಿ ಕಿರಿಕ್ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಆತ್ಮನಿರ್ಭರ ಅಂದರೆ ಸ್ವಾವಲಂಬನೆ ಅಚ್ಚುಮೆಚ್ಚಿನದಾಗಿ ಕಾಣಿಸಿತ್ತು. ದೇಶವು ಎಲ್ಲದರಲ್ಲೂ ಸ್ವಾವಲಂಬಿ ಆಗುತ್ತದೆ ಎಂದು  ಜನರು ಖುಷಿ ಪಡುತ್ತಿರುವಾಗಲೇ ಈ ಸ್ವಾವಲಂಬಿ ಅಥವಾ ಆತ್ಮ ನಿರ್ಭರ್ ಅಂದರೆ ಸಾರ್ವಜನಿಕ ಉದ್ದಿಮೆಗಳನ್ನು ದೇಶದೊಳಗಿನ ಆಪ್ತ ಬಂಡವಾಳಿಗರಿಗೆ ನೀಡುವುದು ಎಂದು ಬಹುಬೇಗ ಅರ್ಥವಾಗಿಬಿಟ್ಟಿದೆ. ಈಗ ಈ ಆತ್ಮ ನಿರ್ಭರಕ್ಕೆ ಹೊಸ ಸೇರ್ಪಡೆ ವಿಮಾನ ನಿಲ್ದಾಣಗಳ ಖಾಸಗೀಕರಣ. ವಿಮಾನ ನಿಲ್ದಾಣಗಳ ಖಾಸಗೀಕರಣ ಇಂದಿನ ಬಿಜೆಪಿ ಸರ್ಕಾರದ ಯೋಜನೆ ಅಲ್ಲದಿದ್ದರೂ ಯುಪಿಎಗಿಂದ ಅತಿವೇಗವಾಗಿ ಮೋದಿ ಖಾಸಗೀಕರಣದಲ್ಲಿ ಸಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಡುವ ರೈಲ್ವೆ, ವಿಮಾನಯಾನ ವಿಭಾಗದಲ್ಲಿ ಮೊದಲಿಗೆ ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಿ ನಿರ್ವಹಣೆ ಮಾಡುತ್ತಿತ್ತು. ಬಳಿಕ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ರಾಜ್ಯಗಳು ಯೋಜನೆಗೆ ಅಗತ್ಯವಾಗಿರುವ ಭೂಮಿಯನ್ನು ನೀಡುವ ಒಪ್ಪಂದ ಮಾಡಿಕೊಳ್ಳತೊಡಗಿದವು. ನಂತರ ಸಮಪಾಲು ನೀಡುವ ಯೋಜನೆಯನ್ನು ರಾಜ್ಯಗಳ ಎದುರು ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸತೊಡಗಿತ್ತು. ಅಂದರೆ ಕೇಂದ್ರದ ಇಂತಹ ಯೋಜನೆಗಳಲ್ಲಿ ಕೇಂದ್ರದಷ್ಟೆ ಹಣವನ್ನು ರಾಜ್ಯಗಳೂ ಪಾಲು  ಹೊಂದಿದ್ದವು. ಅಂದರೆ ಇದು ಕೇವಲ ಹೂಡಿಕೆ ಮಾತ್ರ. ಬರುವ ಲಾಭದಲ್ಲಿ ಯಾವ ಪಾಲೂ ಇರುತ್ತಿರಲಿಲ್ಲ. ಈಗ ಕೇಂದ್ರ ಸರ್ಕಾರವು ಅಂತಹ ಯೋಜನೆಗಳನ್ನು ಖಾಸಗೀಕರಣ ಮಾಡುತ್ತಿದೆ. ಸಮಪಾಲು ಹೊಂದಿರುವ ರಾಜ್ಯಗಳ ಅಭಿಪ್ರಾಯ ಪಡೆಯದೆ ಈ ನಿರ್ಧಾರಕ್ಕೆ ಮುಂದಾಗಿದೆ. ಒಂದು ಖಾಸಗಿ ಉದ್ದಿಮೆಯನ್ನು ಇಬ್ಬರು ಪಾಲುದಾರರು ಹೊಂದಿದ್ದು, ಅದನ್ನು ಮಾರಾಟ ಮಾಡಬಯಸಿದರೆ ಪಾಲುದಾರರಿಬ್ಬರೂ ಸಹಮತ ಹೊಂದಿರಬೇಕಾಗುತ್ತದೆ. ಅದೇ ರೀತಿ ಸರ್ಕಾರವು ನಿಗಮಗಳ ಮೂಲಕ ಸ್ಥಾಪಿಸಿದ ಉದ್ದಿಮೆಯನ್ನು ಮಾರಾಟ ಮಾಡುವುದು ಸೇರಿದಂತೆ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವಾಗ ಸಮಪಾಲು ಹೊಂದಿರುವ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿಲ್ಲವೇ ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ. ಈ ಪ್ರಶ್ನೆ ಎದ್ದಿರುವುದು ಕೇರಳದಲ್ಲಿ, ವಿಷಯ ಏನು ಅಂದರೆ ಕೇರಳದ ರಾಜಧಾನಿ ತಿರುವನಂತಪುರದ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅದಾನಿ ಎಂಟರ್ಪ್ರೈಸಸ್ಗೆ ನೀಡುತ್ತಿದೆ.  ಮೊದಲಿಗೆ ನಿರ್ವಹಣೆಗೆ ಮಾತ್ರ  ಎಂದು ಹೇಳಲಾಗಿತ್ತು ಈಗ ಖಾಸಗೀಕರಣವೇ ಆಗುತ್ತಿದೆ. ತಿರುವನಂತಪುರದ ಜೊತೆಗೆ ಗೌಹಾತಿ ಮತ್ತು ಜೈಪುರ ವಿಮಾನ ನಿಲ್ದಾಣಗಳೂ ಅದಾನಿ ಸಮೂಹದ ಪಾಲಾಗುತ್ತಿದೆ. 50 ವರ್ಷಗಳ ಲೀಸ್ ನೀಡಲಾಗುತ್ತಿದೆ. ಈ ಮೂರು ವಿಮಾನ ನಿಲ್ದಾನಗಳ ಅಭಿವೃದ್ಧಿ, ಆಡಳಿತ ನಿರ್ವಹಣೆ ಮತ್ತು ಕಾರ್ಯಾಚರಣೆಯ ಗುತ್ತಿಗೆ ಅವಧಿ 50 ವರ್ಷದ್ದಾಗಿರುತ್ತದೆ.  ಸೇವೆಯಲ್ಲಿ ದಕ್ಷತೆ, ಪರಿಣತಿ ಹಾಗೂ ವೃತ್ತಿಪರತೆಗೆ ಈ ಖಾಸಗೀಕರಣ ಪ್ರಕ್ರಿಯೆ ನೆರವಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಅಗತ್ಯವಾದ ಬಂಡವಾಳ ಹೂಡಿಕೆಗೂ ಸಹಾಯಕವಾಗಲಿದೆ ಎಂದು ಸರ್ಕಾರ ತನ್ನ…

ಹೊಸ ಶಿಕ್ಷಣ ನೀತಿ: ಭಾರತದ ಮಹಾ ಹಿನ್ನೆಗೆತ

ಸ್ವತಂತ್ರ ಭಾರತವು ಬಂಡವಾಳಶಾಹಿಯ ಕಾರ್ಯಾಚರಣೆಯ ಅಗತ್ಯಕ್ಕೆ ಬೇಕಾಗಿರುವ ಶಿಕ್ಷಣಕ್ಕಿಂತಲೂ ಹೆಚ್ಚು ವಿಸ್ತಾರವಾದ “ಸಾರ್ವತ್ರಿಕ ಶಿಕ್ಷಣ” ಕಾರ್ಯಕ್ರಮದ ಭರವಸೆಯನ್ನು ಕೊಟ್ಟಿತು. ನವ ಉದಾರ…

ಬಾಲಾಪರಾಧಿಗಳ ವಯೋಮಿತಿಯನ್ನು 16ಕ್ಕೆ ಇಳಿಸುವುದು ಏಕೆ ತಪ್ಪು?

ಪ್ರಸಕ್ತ – ಕೆ.ಎಸ್. ವಿಮಲಾ ಸಂಪುಟ 10 ಸಂಚಿಕೆ 01 ಜನವರಿ 03, 2016 ಕೊನೆಗೂ ಬಾಲಾಪರಾಧ ನ್ಯಾಯದ ಕಾಯ್ದೆ ತಿದ್ದುಪಡಿಗೆ…

ವಿವಾಹ ನೋಂದಣಿ ಪತ್ರ ಅತ್ಯಾಚಾರಕ್ಕೆ ರಹದಾರಿಯೇ?

ಪ್ರಸಕ್ತ – ಕೆ.ಎಸ್. ವಿಮಲಾ ಸಂಪುಟ 9 ಸಂಚಿಕೆ 22 – 31 ಮೇ 2015 ಭಾರತದಲ್ಲಿ ವಿವಾಹ ಅತ್ಯಂತ ಪವಿತ್ರ…