ಅಂಡಮಾನ್ -ನಿಕೋಬಾರ್ ನಲ್ಲಿ ಕೊರೊನಾ ಗಂಭೀರ: ತುರ್ತು ಕ್ರಮಕ್ಕೆ ಯೆಚೂರಿ ಆಗ್ರಹ

  • ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಿ- ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ

ನವದೆಹಲಿ: ಕೊರೊನಾ ಸೋಂಕು ಬಹಳ ಅಪಾಯಕಾರಿಯಾಗಿ ಹರಡುತ್ತಿರುವ ಅಂಡಮಾನ್‌  ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ  ತುರ್ತುಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್‌ ಹಲವಾರು ದ್ವೀಪಗಳಿರುವ ಪ್ರದೇಶ. ಒಂದು ದ್ವೀಪದಿಂದ ಇನ್ನೊಂದಕ್ಕೆ ಹೋಗಲು ಬಹಳ ಸಮಯ ತಗಲುತ್ತದೆ. ಈ ದ್ವೀಪಸಮೂಹದ ಜನಸಂಖ್ಯೆಯ ಅರ್ಧದಷ್ಟು ಉತ್ತರ ಅಂಡಮಾನಿನಲ್ಲಿದೆ. ಇಡೀ ದ್ವೀಪ ಪ್ರದೇಶದಲ್ಲಿ ಪೋರ್ಟ್‍ ಬ್ಲೇರ್ ನಲ್ಲಿ ಮಾತ್ರವೇ ಒಂದೇ ಒಂದು ಕೋವಿಡ್‍ ತಪಾಸಣೆ ಕೇಂದ್ರ ಮತ್ತು ಆಸ್ಪತ್ರೆ ಇರುವುದು. ಅಲ್ಲಿಂದ ಪೋರ್ಟ್‍ ಬ್ಲೇರ್ ಗೆ ಬರಲು ಹಲವು ದಿನಗಳೇ ಹಿಡಿಸುತ್ತವೆ.  ಯಾವುದೇ ಕೊವಿಡ್‍ ತಪಾಸಣೆಯ ಫಲಿತಾಂಶ ಬರಲು ಎಂಟು ದಿನಗಳಾಗುತ್ತವೆ. ಆ ವೇಳೆಗೆ ರೋಗಿಯ ಸ್ಥಿತಿ ಸಂಪೂರ್ಣ ಹದಗೆಟ್ಟಿರುತ್ತದೆ. ಅಲ್ಲದೆ ಈ ಆಸ್ಪತ್ರೆಯ 18 ಡಾಕ್ಟರುಗಳಿಗೆ ಕೊವಿಡ್‍ ಸೋಂಕು ತಗಲಿದೆ ಎಂದೂ ವರದಿಯಾಗಿದೆ. ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಇದು ಇಲ್ಲಿ ಬಹಳ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.   ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಪ್ರದೇಶವು ಕೇಂದ್ರಾಡಳಿತ ಪ್ರದೇಶವಾಗಿದ್ದು,  ನೇರವಾಗಿ ಕೇಂದ್ರ ಗೃಹ ಮಂತ್ರಾಲಯದ ನಿಯಂತ್ರಣದಲ್ಲಿದೆ.  ಆದ್ದರಿಂದ ಕೋವಿಡ್-19 ಸೋಂಕು  ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಜನಗಳಿಗೆ ತುರ್ತು ಪರಿಹಾರ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯೆಚೂರಿ ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರಧಾನಮಂತ್ರಿಗಳು ಈ ದ್ವೀಪಸಮೂಹದಲ್ಲಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ದ್ವೀಪಗಳಿಗೆ ಉನ್ನತ ವೇಗದ ಬ್ರಾಡ್‍ ಬ್ಯಾಂಡ್‍ ಸಂಪರ್ಕ ನೀಡುವುದಾಗಿ ಪ್ರಕಟಿಸಿದ್ದಾರೆಂದು ವರದಿಯಾಗಿದೆ. ಇದು ಹೊಸದೇನಲ್ಲ. ಹಲವು ವರ್ಷಗಳ ಹಿಂದೆಯೇ ಭಾರತ ಸರಕಾರ ಜಾರಿಗೊಳಿಸಿರುವ ಯೋಜನೆ.  ಈಗಾಗಲೇ ಚೆನ್ನೈನಿಂದ ನೀರಿನಡಿಯಲ್ಲಿ ಕೇಬಲ್‍ಗಳನ್ನು ಹಾಕುವ ಕೆಲಸವೂ ಆರಂಭವಾಗಿದೆ ಎನ್ನಲಾಗಿದೆ. ಅದೇನೇ ಇರಲಿ, ಈ ದ್ವೀಪಗಳ ಜನಗಳ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ಯಾವುದೇ ಕ್ರಮ ಸ್ವಾಗತಾರ್ಹ.  ಆದರೆ ಈಗ ತುರ್ತಾಗಿ ಕೇಂದ್ರ ಸರಕಾರ ಜನಗಳ ಬದುಕನ್ನು ಕಾಪಾಡಲು ಮತ್ತು ಪರಿಹಾರ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಮ್ಮ ಪತ್ರದಲ್ಲಿ ಯೆಚೂರಿ ಒತ್ತಾಯಿಸಿದ್ದಾರೆ.

ಕೊವಿಡ್‍ ತಪಾಸಣಾ ಕೇಂದ್ರಗಳನ್ನು ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿಸಬೇಕು, ಕೋವಿಡ್‍ ರೋಗಿಗಳ ಆರೈಕೆಗೆ ಹೆಚ್ಚು ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು, ಮತ್ತು ಜನಗಳಿಗೆ ಪರಿಹಾರಗಳನ್ನು ಯುದ್ಧೋಪಾದಿಯಲ್ಲಿ ತಲುಪಿಸಬೇಕಾಗಿದೆ. -ಸೀತಾರಾಮ್‍ ಯೆಚುರಿ

ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬೇರೆ ಚುನಾಯಿತ ಸಂಸ್ಥೆಗಳಿಲ್ಲ. ಆದ್ದರಿಂದ ಜನಗಳು ಕೇಂದ್ರ ಗೃಹ ಮಂತ್ರಾಲಯದತ್ತವೇ ನೋಡಬೇಕಾಗುತ್ತದೆ. ಆದ್ದರಿಂದ “ನಿಮ್ಮ ಸರಕಾರದ ನೇರ ಹತೋಟಿಗೆ ಬರುವ ಇಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು, ಮತ್ತು ಮೇಲೆ ಹೇಳಿದ ಅತ್ಯಗತ್ಯ ಕ್ರಮಗಳನ್ನಾದರೂ ಯುದ್ಧಸ್ತರದಲ್ಲಿ ಕೈಗೊಳ್ಳಬೇಕು” ಎಂದು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸೀತಾರಾಮ್‍ ಯೆಚುರಿ ಮನವಿ ಮಾಡಿದ್ದಾರೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ಬರೆದಿರುವ ಪತ್ರವನ್ನು ಸಿಪಿಎಂ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. https://www.cpim.org/pressbriefs/andaman-grave-health-emergency

ಅಶೋಕ್ ಗೆಹ್ಲೋಟ್ – ಸಚಿನ್ ಪೈಲಟ್ ಭೇಟಿ

–      ಒಂದು ತಿಂಗಳ ಹಿಂದೆ ಅಶೋಕ್ ಗೆಹ್ಲೋಟ್ ವಿರುದ್ಧ  ಬಂಡಾಯವೆದ್ದಿದ್ದ ಸಚಿನ್ ಪೈಲಟ್   ಜೈಪುರ: ರಾಜಸ್ಥಾನ ರಾಜಕಾರಣದಲ್ಲಿ ಗುರುವಾರ ಕ್ಷಿಪ್ರಗತಿಯಲ್ಲಿ…

ರಾಜಸ್ಥಾನ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ: ಬಿಜೆಪಿ ನಿರ್ಧಾರ

ಶುಕ್ರವಾರದಿಂದ ಆರಂಭವಾಗಲಿರುವ ಅಧಿವೇಶನ ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್‍ನ ಆಂತರಿಕ ಭಿನ್ನಮತ ಕೊನೆಗೊಂಡು ಆಡಳಿತ ಪುನರ್ ಸ್ಥಾಪನೆ ಆಯಿತು ಎನ್ನುವಷ್ಟರಲ್ಲಿ ಅಶೋಕ್ ಗೆಹ್ಲೋಟ್…

ಸೆಪ್ಟಂಬರ್‌ನಲ್ಲಿ ಶಾಲಾರಂಭಕ್ಕೆ ಆತುರವಿಲ್ಲ: ಸುರೇಶ್​ ಕುಮಾರ್

ಮಕ್ಕಳ ಆರೋಗ್ಯ, ಸುರಕ್ಷತೆ ಮುಖ್ಯ ಕಲಿಕೆಗೆ ಸಂಬಂಧಿಸಿದಂತೆ ವಿದ್ಯಾಗಮನ ಯೋಜನೆ ಜಾರಿ   ಮಂಡ್ಯ: ಸೆಪ್ಟಂಬರ್‌ನಿಂದ ಶಾಲೆಗಳ ಆರಂಭ ಮಾಡಲು ಆತುರವಿಲ್ಲ…

ಪತ್ರಕರ್ತರ ರಕ್ಷಣೆಗಾಗಿ ಪತ್ರಕರ್ತರಿಂದ ಪತ್ರ ಚಳವಳಿ

ಡಿಜಿ ಹಳ್ಳಿ ಗಲಭೆ ವರದಿ ವೇಳೆ ಮಾಧ್ಯಮದವರಿಗೆ ಹಲ್ಲೆ ಪ್ರಕರಣ   ಕೊಪ್ಪಳ : ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ…

ಯಾರು ದೇಶದ್ರೋಹಿಗಳು? ಅನಂತಕುಮಾರ್ ಹೆಗಡೆಯವರೇ ಉತ್ತರಿಸಿ..!

ಸಂಸದ ಅನಂತಕುಮಾರ್‍ ಹೆಗಡೆ ಅವರಿಗೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್‍ ಪ್ರಶ್ನೆ ‍ಕಾರವಾರ: ಭಾರತ್‍ ಸಂಚಾರ ನಿಗಮ ಲಿಮಿಟೆಡ್‍ (ಬಿಎಸ್‍ಎನ್‍ಎಲ್‍)…

ಸರ್ಕಾರ ಉಳಿಸಿಕೊಂಡ ಜಾದೂಗಾರ ಅಶೋಕ್‌ ಗೆಹ್ಲೋಟ್‌

ಜೈಪುರ:  ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಷ್ಠೆಗೆ ಕಾರಣದಿಂದ ರಾಷ್ಟ್ರೀಯ ಮಟ್ಟದಲ್ಲಿ ಕಾರಣವಾಗಿದ್ದ ರಾಜಾಸ್ಥಾನದಲ್ಲಿನ ಕಾಂಗ್ರೆಸ್‌ ಸರ್ಕಾರವನ್ನು ಸತತ ಹೋರಾಟಗಳ ಮೂಲಕ ಮುಖ್ಯಮಂತ್ರಿ…

ಹಿರಿಯೂರು ಬಳಿ ಬಸ್‌ಗೆ ಬೆಂಕಿ: 3 ಮಕ್ಕಳು ಸೇರಿ ಐವರು ಸಜೀವ ದಹನ

29 ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತಿದ್ದ ಬಸ್‌ ವಿಜಯಪುರ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಬೆಂಕಿ ಹೊತ್ತಿ…

ಪೊಲೀಸ್ ನಿಯಂತ್ರಣದಲ್ಲಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ

ಪ್ರವಾದಿ ಮಹಮದ್‌ರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ನಡೆದಿದ್ದ ಪ್ರತಿಭಟನೆ ಪ್ರತಿಭಟನೆ ವೇಳೆ ಕಿಡಿಗೇಡಿಗಳಿಂದ ಗಲಭೆ ಗಲಭೆ ನಿಯಂತ್ರಿಸಲು ಪೊಲೀಸರಿಂದ ಗೋಲಿಬಾರ್‌…

ಕೇರಳ ಭಾರಿ ಮಳೆ: ಆಲಪ್ಪುಳ ಜಿಲ್ಲೆಯಲ್ಲಿ ಕುಸಿಯಿತು 151 ವರ್ಷ ಹಳೆಯ ಚರ್ಚ್

ಇಡುಕ್ಕಿ ಭೂಕುಸಿತ: ಸಾವಿನ ಸಂಖ್ಯೆ 52ಕ್ಕೆ ಏರಿಕೆ   ಆಲಪ್ಪುಳ(ಕೇರಳ): ಜಿಲ್ಲೆಯ ಚುಂಗಮ್‌ ಕುರುವೆಲ್ಲೈ ಪದಶೇಖರಂ ಪ್ರದೇಶದಲ್ಲಿದ್ದ 151 ವರ್ಷಗಳಷ್ಟು ಹಳೆಯ…

ಸಂಸದ ಅನಂತಕುಮಾರ್ ತಮ್ಮ ಅಯೋಗ್ಯತನ ತೋರಿದ್ದಾರೆ: ಕಾಂಗ್ರೆಸ್

– ಬಿಎಸ್‍ಎನ್‍ಎಲ್ ಉದ್ಯೋಗಿಗಳನ್ನು ದೇಶದ್ರೋಹಿಗಳು ಎಂದಿದ್ದ ಸಂಸದ ಅನಂತ್ ಕುಮಾರ್   ಬೆಂಗಳೂರು: ಬಿಎಸ್‍ಎನ್‍ಎಲ್ ಉದ್ಯೋಗಿಗಳನ್ನು ದೇಶದ್ರೋಹಿಗಳು ಎಂದ ಸಂಸದ ಅನಂತ್ ಕುಮಾರ್ ಅವರು…

ಹೆಣ್ಣುಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಸುಪ್ರೀಂಕೋರ್ಟ್

  ನವದೆಹಲಿ : ಹಿಂದೂ ಉತ್ತರಾಧಿಕಾರ 2005ರ ತಿದ್ದುಪಡಿ ಕಾಯ್ದೆಯಡಿ ಹೆಣ್ಣುಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್…

ನಾರಾಯಣಾಚಾರ್ ಆಚಾರ್ಯ ಮೃತದೇಹ ಪತ್ತೆ  

ನಾಲ್ಕು ಮೃತದೇಹ ಸಿಗೋವರೆಗೂ ಕಾರ್ಯಾಚರಣೆ ನಿಲ್ಲಿಸಲ್ಲ: ಸಚಿವ ಸೋಮಣ್ಣ ಮಡಿಕೇರಿ: ಸತತ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಕಾರ್ಯಾಚರಣೆಯಲ್ಲಿ…

ಶ್ರೀಲಂಕಾ ಚುನಾವಣೆ : ರಾಜಪಕ್ಸ ಸಹೋದರರಿಗೆ ಭಾರೀ ಬಹುಮತ

ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಅವರ ಸಹೋದರ ಮಹಿಂದ ರಾಜಪಕ್ಸ ರವರು ಸ್ಥಾಪಿಸಿದ ಹೊಸ ಪಕ್ಷ  ಎಸ್ ಎಲ್ ಪಿ ಪಿ…

  • ಅಷ್ಟನ್ನೂ ಮುಂಗಡವಾಗಿ ಕೊಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ

 

ಬೆಂಗಳೂರು: ಭಾರಿ ಮಳೆ ಮತ್ತು ಪ್ರವಾಹದಿಂದ ರಾಜ್ಯದಲ್ಲಿ ಸುಮಾರು 4,000 ಕೋಟಿ ರೂ. ಹಾನಿಯಾಗಿದ್ದು, ಅಷ್ಟೂ ಹಣವನ್ನು ಮುಂಗಡವಾಗಿ ನೀಡುವಂತೆ ರಾಜ್ಯ ಸರ್ಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.

ಪ್ರಧಾನಿ ಜತೆ ವಿಡಿಯೋ ಸಂವಾದ ಮುಗಿದ ಬಳಿಕ ಕಂದಾಯ ಸಚಿವ ಆರ್.ಅಶೋಕ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಸಭೆಯ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಮನೆಗಳು, ಸರ್ಕಾರಿ ಕಟ್ಟಡಗಳು, ರಸ್ತೆ ಮತ್ತು ಸೇತುವೆ, ಬೆಳೆಗಳು ನಾಶವಾಗಿವೆ. ಇದರ ಹಾನಿ 4,000 ಕೋಟಿ ರೂ. ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಪೂರ್ಣ ಪ್ರಮಾಣದ ಸಮೀಕ್ಷೆ ನಡೆಯಬೇಕಿದ್ದು, ಅಷ್ಟೂ ಹಣವನ್ನು ಮುಂಗಡವಾಗಿ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಸಚಿವ ಅಶೋಕ ಹೇಳಿದರು.

ಮುಂಗಾರಿಗೂ ಮೊದಲೇ ಮುಂಜಾಗ್ರತೆ ಕ್ರಮಗಳನ್ನು ವಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಾಲ್ಕು ತಿಂಗಳ ಹಿಂದೆಯೇ 310 ಕೋಟಿ ರೂ. ಬಿಡುಗಡೆ ಮಾಡಿತ್ತು. ಕೇಂದ್ರ ಸರ್ಕಾರ ಮುಂಗಡ ಹಣ ನೀಡಿದರೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದರ ಜತೆಗೆ ಬಿದ್ದು ಹೋಗಿರುವ ವಿದ್ಯುತ್ ಕಂಬಗಳು, ನಾಶವಾಗಿರುವ ಸೇತುವೆ ಮತ್ತು ರಸ್ತೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರನ್ನು ಇಟ್ಟಿರುವ ಸ್ಥಳಗಳನ್ನು ವೀಕ್ಷಿಸಿ ಬಂದಿದ್ದೇನೆ. ಅಲ್ಲಿನ ಪರಿಸ್ಥಿತಿ ನೋಡಿದ್ದೇನೆ. ನಿರಂತರವಾಗಿ ಪ್ರವಾಹ, ಕಡಲ್ಕೊರೆತಕ್ಕೆ ತುತ್ತಾಗುವ 10 ಜಿಲ್ಲೆಗಳಲ್ಲಿ ಕಾಯಂ ಕಾಳಜಿ ಕೇಂದ್ರಗಳನ್ನು ಒಳಗೊಂಡ ಭವನಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 200 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಅಲ್ಲಿ ಆಸ್ಪತ್ರೆ, ಗ್ರಂಥಾಲಯ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಅಡುಗೆ ಮನೆ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಮಾಡಲಾಗುವುದು ಎಂದು ಅಶೋಕ ಹೇಳಿದರು.

ಕಾರವಾರ ಜಿಲ್ಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದಾಗ, ಸಂತ್ರಸ್ತರಿಗೆ ಅನ್ನ-ಸಾಂಬಾರ್ ಬಿಟ್ಟರೆ ಬೇರೆ ಏನೂ ಕೊಡುತ್ತಿರಲಿಲ್ಲ. ಇನ್ನು ಮುಂದೆ ಕಾಳಜಿ ಕೇಂದ್ರದಲ್ಲಿ ಮೊಟ್ಟೆ, ಹಪ್ಪಳ, ಉಪ್ಪಿನಕಾಯಿ, ಪಲ್ಯ ನೀಡಲು ತೀರ್ಮಾನಿಸಲಾಗಿದೆ. ಸಂತ್ರಸ್ತರಿಗೆ ಉತ್ತಮ ಅಹಾರ ನೀಡಬೇಕು ಎಂಬುದು ನಮ್ಮ ಉದ್ದೇಶ. 

ಕಂದಾಯ ಸಚಿವ ಆರ್.ಅಶೋಕ 

 

ಕಾಳಜಿ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ರ್ಯಾಪಿಡ್ ಪರೀಕ್ಷೆ ಮಾಡಿಸಿ, ಪಾಸಿಟಿವ್ ಆಗಿ ರೋಗ ಲಕ್ಷಣ ಕಂಡು ಬಂದರೆ, ಆಸ್ಪತ್ರೆಗೆ ಸೇರಿಸಬೇಕು ಎಂದೂ ಪ್ರಧಾನಿ ಸಲಹೆ ನೀಡಿದರೆಂದು ಅಶೋಕ ತಿಳಿಸಿದರು.

ಸಭೆಯ ಮುಖ್ಯಾಂಶಗಳು
1. ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ನಾಲ್ಕು ಸಾವಿರ ಕೋಟಿಗಳ ವಿಶೇಷ ಆರ್ಥಿಕ ನೆರವನ್ನು ಒದಗಿಸಲು ಕೋರಲಾಯಿತು.
2. ತಕ್ಷಣದ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಎಸ್.ಡಿ.ಆರ್.ಎಫ್‍ನ ಕಂತು 395 ಕೋಟಿ ರೂ. ಹಣವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಕೋರಲಾಯಿತು.0
3. ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಈಗಾಗಲೇ ತರಬೇತಿ ಪಡೆದ 200 ಎಸ್.ಡಿ.ಆರ್.ಎಫ್ ಸಿಬ್ಬಂದಿ, ನಾಲ್ಕು ಎನ್.ಡಿ.ಆರ್.ಎಫ್ ತಂಡಗಳು ಹಾಗೂ ನಾಲ್ಕು ರಕ್ಷಣಾ ಹೆಲಿಕಾಪ್ಟರ್‍ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿಯಾಗಿ 4 ಎನ್.ಡಿ.ಆರ್.ಎಫ್ ತಂಡಗಳನ್ನು ಕಳುಹಿಸಲು ಕೋರಲಾಯಿತು.
4. ದೀರ್ಘಾವಧಿ ಪರಿಹಾರವಾಗಿ ಕಾವೇರಿ ಹಾಗೂ ಕೃಷ್ಣಾ ನದಿ ಪಾತ್ರಗಳಲ್ಲಿ ಹಾಗೂ ಪಶ್ಚಿಮ ಘಟ್ಟಗಳು ವ್ಯಾಪಿಸಿರುವ ನೆರೆ ರಾಜ್ಯಗಳಲ್ಲಿ ಭೂ-ಕುಸಿತಕ್ಕೆ ಸಂಬಂಧಿಸಿದಂತೆ ಮ್ಯಾಪಿಂಗ್ ಹಾಗೂ ಮುನ್ಸೂಚನಾ ವ್ಯವಸ್ಥೆಯನ್ನು ಸ್ಥಾಪಿಸುವ ಕುರಿತು ಕೇಂದ್ರ ಭೂ ವಿಜ್ಞಾನ ಸರ್ವೇಕ್ಷಣಾ ಇಲಾಖೆ ವತಿಯಿಂದ ಅಧ್ಯಯನ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
5. ಕೇಂದ್ರ ಜಲ ಆಯೋಗದ ವತಿಯಿಂದ ಕೃಷಾ ನದಿ ಪಾತ್ರದಲ್ಲಿ ಸಮಗ್ರ ಪ್ರವಾಹ ಪರಿಸ್ಥಿತಿ ಮುನ್ಸೂಚನೆ ವ್ಯವಸ್ಥೆಯನ್ನು ಸ್ಥಾಪಿಸಲು ಕೋರಲಾಯಿತು.
6. ಕಡಲು ಕೊರೆತ ನಿಯಂತ್ರಣಕ್ಕೆ ಓಚಿಣioಟಿಚಿಟ ಅಥಿಛಿಟoಟಿe ಒiಣigಚಿಣioಟಿ ಖeಟieಜಿ Pಡಿoರಿeಛಿಣ ಯೋಜನೆಯಡಿ ಕಡಲು ಕೊರೆತವನ್ನು ಸೇರ್ಪಡೆಗೊಳಿಸಲು ಹಾಗೂ ಅದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಯಿತು.
7. ಪ್ರಸ್ತುತ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಬೆಳಗಾವಿ, ರಾಯಚೂರು ಸೇರಿದಂತೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಸತತ ಮಳೆಯಿಂದಾಗಿ 56 ತಾಲ್ಲೂಕುಗಳ 885 ಗ್ರಾಮಗಳು ಹಾನಿಗೊಳಗಾಗಿದೆ. ಪ್ರಾಥಮಿಕ ವರದಿ ಪ್ರಕಾರ ಮೂರು ಸಾವಿರ ಮನೆಗಳು, ಎಂಭತ್ತು ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ, ತೋಟಗಾರಿಕೆ ಬೆಳೆಗಳು, 3,500 ಕಿ.ಮೀ ರಸ್ತೆ, 104 ಸಣ್ಣ ನೀರಾವರಿ ಕೆರೆಗಳು, ವಿದ್ಯುತ್ ಪರಿವರ್ತಕಗಳು, 394 ಕಟ್ಟಡಗಳಿಗೆ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿದೆ.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

ಶಿಕ್ಷಣ ಸಚಿವರ ಟ್ವೀಟ್ ಬಿ.ಎಲ್.ಸಂತೋಷ್, ಅರುಣ್ ಗೆ ಟ್ಯಾಗ್: ನೆಟ್ಟಿಗರ ತರಾಟೆ

ಎಸ್ಸೆಸ್ಸೆಲ್ಸಿ ಫಲಿತಾಂಶ ಕುರಿತ ಶಿಕ್ಷಣ ಸಚಿವರು ಮಾಡಿದ್ದ ಟ್ವೀಟ್ ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ ಎಂದು ಮಾಹಿತಿ ನೀಡುವ ಸಂಬಂಧ…

ರಾಜಕೀಯ ಬೇಧ ಮರೆತು ಎಲ್ಲರೂ ಕೊಡಗಿನ ಹಾನಿಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಬೇಕು: ಡಿ.ಕೆ.ಶಿವಕುಮಾರ್

ಮಡಿಕೇರಿ: ರಾಜ್ಯಕ್ಕೆ ಕಿರೀಟದಂತಿರುವ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಪ್ರಾಕೖತ್ತಿಕ ವಿಕೋಪ ಸಂಬಂಧಿತ ರಾಜಕೀಯ ಬೇಧ ಮರೆತು ಎಲ್ಲಾ ಪಕ್ಷಗಳ ನಾಯಕರು ಒಂದಾಗಿ…

ತಲಕಾವೇರಿ ಭೂಕುಸಿತ: ಆನಂದತೀರ್ಥ ಮೃತದೇಹ ಪತ್ತೆ

–      ಉಳಿದ ನಾಲ್ವರಿಗೆ ಮುಂದುವರಿದ ಶೋಧ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ತಲಕಾವೇರಿಯಲ್ಲಿ ಆಗಸ್ಟ್ 6…

ಸೋಮವಾರ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ; ಮೊಬೈಲ್​ಗೆ  ಬರಲಿದೆ ಫಲಿತಾಂಶ

ಚಾಮರಾಜನಗರ:  ಕೊರೊನಾ ಭೀತಿಯಲ್ಲೂ ಯಶಸ್ವಿಯಾಗಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ  ಆಗಸ್ಟ್ 10ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟಗೊಳ್ಳಲಿದೆ. ಕೊರೊನಾ ಸೋಂಕಿನ…

ಬೊಲಿವಿಯ ಚುನಾವಣೆ ಮುಂದೂಡಿಕೆಗೆ ಪ್ರಬಲ ವಿರೋಧ

  ಬೊಲಿವಿಯದಲ್ಲಿ ಕಾರ್ಮಿಕ ಮತ್ತು ಜನ ಚಳುವಳಿಗಳ ಸಂಘಟನೆಗಳು ಜುಲೈ 28ರಂದು ಬೊಲಿವಿಯ ಚುನಾವಣೆಯ ಮುಂದೂಡಿಕೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿ ದೇಶವ್ಯಾಪಿ…