ಮರಕುಂಬಿಯ ದಲಿತರ ಮನೆಗೆ ಬೆಂಕಿ ಹಚ್ಚಿದ ಪ್ರಕರಣ – 101 ಜನರ ವಿರುದ್ಧದ ಆರೋಪ ಸಾಬೀತು

ಘಟನೆ ಖಂಡಿಸಿ ಸಿಪಿಐಎಂ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ
ಕೊಪ್ಪಳ: ಹತ್ತು ವರ್ಷಗಳ ಹಿಂದೆ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ನಡೆದ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ 101 ಜನರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸಪೆನ್ಸ್ ನ್ಯಾಯಾಲಯವು ಆದೇಶ ನೀಡಿದೆ.

ಅದರಲ್ಲಿ ಹಲವರ ಮೇಲೆ ಜಾತಿನಿಂದನೆಗೆ ಸಂಬಂಧಿಸಿದ ಆರೋಪಗಳಿವೆ. ಶಿಕ್ಷೆಯ ಪ್ರಮಾಣ ಅಕ್ಟೋಬರ್ 24 ರಂದು ಪ್ರಕಟವಾಗಲಿದೆ. ಒಟ್ಟು 117 ಜನ ಆರೋಪಿಗಳಿದ್ದರು. ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದನ್ನು ಪ್ರಶ್ನಿಸಿದ್ದಕ್ಕೆ ಸವರ್ಣೀಯರು ದಲಿತ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಹಚ್ಚಿದ ಮೇಲೆ ಸುಮಾರು ಮೂರು ತಿಂಗಳ ಕಾಲ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಗಂಗಾವತಿ ಡಿವೈಎಸ್‌ಪಿ, ಡಿಎಆರ್ ಸಿಬ್ಬಂದಿ ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ಬಂದೋಬಸ್ತ್ ನಡುವೆ ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಯಿತು.

ಇದನ್ನೂ ಓದಿ: ನಕಲಿ‌ ಕೋರ್ಟ್ ಅದಕ್ಕೊಬ್ಬ ನಕಲಿ ಜಡ್ಜ್ ! | ಮೋದಿ ಕಾಲದಲ್ಲಿ ಎಲ್ಲವೂ ಸಾಧ್ಯ ಎಂದ ನೆಟ್ಟಿಗರು

ಮೃತ ವಿರೇಶ್‌ ಮನೆಗೆ ಸಿಪಿಐಎಂ ನಿಯೋಗ, ಎಂ ಎ ಬೇಬಿ, ಜಿವಿ ಶ್ರೀರಾಮರೆಡ್ಡಿ, ರಾಧಾಕೃಷ್ಣರನ್ನು ಚಿತ್ರದಲ್ಲಿ ಕಾಣಬಹುದು

ಏನಿದು ಪ್ರಕರಣ: ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ 2015ರಲ್ಲಿ ಕ್ಷೌರ ದಂಗಡಿಗೆ ಮತ್ತು ಹೋಟೆಲ್‌ನಲ್ಲಿ ದಲಿತರಿಗೆ ಪ್ರವೇಶ ನೀಡದೆ ಇರುವ ಕುರಿತು ಗಲಾಟೆ ಯಾಗಿತ್ತು. ಇದಾದ ಮೇಲೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಸಹ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿ ದ್ದರು. ಆದರೆ ಅಂದೇ ರಾತ್ರಿಯ ವೇಳೆ ದಲಿತ ಕೇರಿಗೆ ಸರ್ವಣೀಯರು ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಇದಾದ ಮೇಲೆ ಗ್ರಾಮದ ಸುಮಾರು 117 ಜನರ ವಿರುದ್ಧ ಪ್ರಕರಣ ಪ್ರಕರಣ ದಾಖ ಲಾಗಿತ್ತು. ಪ್ರಕರಣದಲ್ಲಿನ ಆರೋಪಿಗಳಲ್ಲಿ ಕೆಲವರು ಸಾವನ್ನಪ್ಪಿದ್ದಾರೆ. ಈ ಪೈಕಿ 101 ಜನರ ವಿರುದ್ಧ ಆರೋಪ ಸಾಬೀತಾಗಿದೆ.

 

ಕೊಲೆಯಾದ ಸಿಪಿಐಎಂ ನಾಯಕ ವಿರೇಶ
ಕೊಲೆಯಾದ ಸಿಪಿಐಎಂ ನಾಯಕ ವಿರೇಶ

ಪ್ರಮುಖ ಸಾಕ್ಷಿಯಾಗಿದ್ದ ನಾಯಕನ ಕೊಲೆ : ದಲಿತರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಹೋರಾಟ ನಡೆಸಿದ್ದ ಸಿಪಿಐಎಂನ ವೀರೇಶ ಮರಕುಂಬಿಯನ್ನು ಕೊಪ್ಪಳದ ರೈಲು ನಿಲ್ದಾಣದ ಬಳಿ ಕೊಲೆ ಮಾಡಲಾಗಿತ್ತು. ಮರಕುಂಬಿ ಪ್ರಕರಣ ವಿಚಾರಣೆಯಲ್ಲಿದ್ದು, ವೀರೇಶ ಪ್ರಮುಖ ಸಾಕ್ಷಿದಾರರಾಗಿದ್ದರು.  ‘ಪ್ರಕರಣ ಸಂಬಂಧ ಅವರು ಜುಲೈ 10, 2015 ರಂದು ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ಹೇಳಬೇಕಾಗಿತ್ತು. ಆದರೆ, ಅಂದು ಬೆಳಿಗ್ಗೆಯೇ ಅವರ ಶವ ಕೊಪ್ಪಳದ ಹೊರವಲಯದ ರೈಲು ಹಳಿ ಮೇಲೆ ಪತ್ತೆಯಾಗಿತ್ತು’  ‘ವೀರೇಶ ಅವರನ್ನು ಕೊಲೆ ಮಾಡಿ ಹಳಿ ಮೇಲೆ ಎಸೆಯಲಾಗಿದೆ. ಆದರೆ, ಪೊಲೀಸರು  ಮೃತರ ಪ್ಯಾಂಟಿನಲ್ಲಿ ಡೆತ್‌ನೋಟ್‌ ಇತ್ತು ಎಂದು ಸುಳ್ಳು ಹೇಳುವ ಮೂಲಕ, ಕೊಲೆಯನ್ನು ಆತ್ಮಹತ್ಯೆಯನ್ನಾಗಿ ಬಿಂಬಿಸಿ, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗಿತ್ತು.

ಎಸ್‌ಎಫ್‌ಐ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ

100 ಆರೋಪಿಗಳ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ 100 ಜನರನ್ನು ಸೋಮವಾರ ಬಂಧಿಸಲಾಗಿದೆ. ವಿಚಾರಣೆಗೆ ಹಾಜರಾಗಿದ್ದವರನ್ನು ಆರೋಪ ಸಾಬೀತಾದ ಹಿನ್ನೆಲೆ ಬಂಧಿಸಲಾಗಿದೆ. ಇನ್ನೋರ್ವ ನ್ಯಾಯಾ ಲಯಕ್ಕೆ ಹಾಜರಾಗದೆ ಇರುವುದರಿಂದ ಬಂಧಿಸಲು ಆಗಿಲ್ಲ. ಆತನ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಗಳೂರಿನ ಟೌನ್‌ಹಾಲ್‌ ಮುಂಭಾಗ ನಡೆದ ಪ್ರತಿಭಟನೆ

ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ : ಈ ಕುರಿತು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು ಬಸವರಾಜ ಪ್ರತಿಕ್ರಿಯಿಸಿದ್ದು, ಸುಧೀರ್ಘ ಹೋರಾಟಕ್ಕೆ ಸಿಕ್ಕ ಜಯ, ನ್ಯಾಯಾಲಯದ ತೀರ್ಪು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

ದಲಿತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಮರಕುಂಬಿಯಿಂದ ಬೆಂಗಳೂರು ವರೆಗೆ ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಗಂಗಾವತಿಯ ಪೊಲೀಸ್‌ ಠಾಣೆಯ ಮುಂಭಾಗ ನಿರಂತರವಾಗಿ ಪ್ರತಿಭಟನೆ ನಡೆಸಲಾಗಿತ್ತು.  ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ,  ಮಾಜಿ ಮಂತ್ರಿ, ಡಿಎಸ್ಎಸ್ಎಂಎಂ ಅಖಿಲ ಭಾರತ ಅಧ್ಯಕ್ಷರಾದ ರಾಧಾಕೃಷ್ಣನ್, ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ, ಸಿಪಿಐಎಂ ನಾಯಕರಾದ ಯು. ಬಸವರಾಜ, ಗೋಪಲಾಕೃಷ್ಣ ಅರಳಹಳ್ಳಿ, ನಿತ್ಯಾನಂದ ಸ್ವಾಮಿ, ಜಿ. ನಾಗರಾಜ, ನಿರುಪಾದಿ, ಗಂಗಾಧರ ಸ್ವಾಮಿ, ಎಂ. ಬಸವರಾಜ್‌, ಹುಸೇನಪ್ಪ, ಅಮರೇಶ್‌ ಕಡಗದ್‌, ಮಾಳಮ್ಮ , ಜಿ ಹುಲಿಗೆಮ್ಮ, ಶಿವಣ್ಣ ಬೆಣಕಲ್ ಸೇರಿದಂತೆ ನೂರಾರು ಮಂದಿ ನೇತೃತ್ವ ವಹಿಸಿದ್ದರು.

 

ಇದನ್ನೂ ನೋಡಿ: ಜನ ಕೇಂದ್ರಿತ ಅಭಿವೃದ್ಧಿ ಇಂದಿನ ತುರ್ತು – ಡಾ. ಚಂದ್ರ ಪೂಜಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *