బಳ್ಳಾರಿ: ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ದಶಕದ ಹಿಂದೆ ನಡೆದಿದ್ದ ಜಾತಿ ಸಂಘರ್ಷ ಪುಕರಣದಲ್ಲಿ ಇತ್ತೀಚೆಗೆ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ 101 ಅಪರಾಧಿಗಳ ಪೈಕಿ 100 ಜನರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. ಜಾತಿ
ಒಟ್ಟು 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 75 ಸಾವಿರ ದಂಡ ಹಾಗೂ ಇನ್ನುಳಿದ ಮೂವರಿಗೆ ಐದು ವರ್ಷ ಜೈಲು ಹಾಗೂ ತಲಾ 12 ಸಾವಿರ ದಂಡ ವಿಧಿಸಲಾಗಿತ್ತು. ಅದರಂತೆ 101 ಅಪರಾಧಿಗಳು ಬಳ್ಳಾರಿ ಜೈಲು ಸೇರಬೇಕಿತ್ತು. ಆದರೆ, ಶಿಕ್ಷೆಗೆ ಗುರಿಯಾಗಿದ್ದ ರಾಮಣ್ಣ ಭೋವಿ (40) ಎಂಬುವವರು ನ್ಯಾಯಾಲಯದ ಆದೇಶ ಪ್ರಕಟವಾದ ಮರುದಿನವೇ ಮೃತಪಟ್ಟರು. ಹೀಗಾಗಿ 100 ಮಂದಿಯನ್ನು ಸದ್ಯ ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಚಾಲಕರ ವಿರುದ್ಧ 314 ಪ್ರಕರಣ ದಾಖಲು
ಇದರೊಂದಿಗೆ ಬಳ್ಳಾರಿ ಜೈಲಿನಲ್ಲಿ ಸದ್ಯ 485 ಮಂದಿಯನ್ನು ಬಂಧಿಸಿಟ್ಟಂತಾಗಿದ. ಜೈಲಿನಲ್ಲಿ ಈವರೆಗೆ 220 ಸಜಾ ಬಂಧಿಗಳಿದ್ದರು. ಈ ಸಂಖ್ಯೆ ಏಕಾಏಕಿ 330ಕ್ಕೆ ಏರಿದ.
‘ಗಂಗಾವತಿ ತಾಲ್ಲೂಕು ಬಳ್ಳಾರಿ ಕೇಂದ್ರ ಕಾರಾಗೃಹದ ವ್ಯಾಪ್ತಿಗೆ ಒಳಪಡುತ್ತದೆ. ಮರಕುಂಬಿ ಪುಕರಣದಲ್ಲಿ ತೀರ್ಪು ಪಕಟವಾಗುತ್ತಲೇ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ನಮಗೆ ಸೂಚನೆಗಳು ಬಂದಿದ್ದವು. ಗುರುವಾರ ತಡರಾತ್ರಿ ಎಲ್ಲ ಅಪರಾಧಿಗಳನ್ನು ಬಳ್ಳಾರಿ ಜೈಲಿಗೆ ಕರೆತರಲಾಯಿತು. ಎಲ್ಲರನ್ನೂ ಪ್ರತ್ಯೇಕಿಸಿ ಜೈಲಿನ ಇತರ ಬಂಧಿಗಳೊಂದಿಗೆ ಇರಿಸಲಾಗಿದೆ’ ಎಂದು ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ಅವರು ‘ಪುಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ: ಉಪನ್ಯಾಸ | “ಪರಿಸರ ಪ್ರಜ್ಞೆ- ಯುವ ತಲೆಮಾರು” | ‘ಸುಸ್ಥಿರ ಸಮಾಜಕ್ಕಾಗಿ ಸ್ವಚ್ಛ ಪರಿಸರ’