ಬೆಂಗಳೂರು :ಮುಂದಿನ ಸಂಪುಟ ಸಭೆಯಲ್ಲಿ(ಜನವರಿ 16) ಬಹು ಮುಖ್ಯವಾದಂತಹ ಜಾತಿಗಣತಿ ವರದಿ ಕುರಿತು ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಬಹುತೇಕ ಮುಂದೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಸಚಿವರೊಂದಿಗೆ ಚರ್ಚಿಸಿ ಜಾತಿಗಣತಿ ವರದಿ ಜಾರಿಯಾಗುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಣದಯ ತಿಳಿದುಬಂದಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಜಾತಿ ಗಣತಿ ವರದಿ ಜಾರಿ ಕುರಿತು ಚರ್ಚೆ ಸಾಧ್ಯತೆ ಇದ್ದು, ಸಚಿವ ಸಂಪುಟದ ಮುಂದೆ ವರದಿ ಮಂಡಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ಕಾಮತ್ ಕುಮ್ಮಕ್ಕು – ಸುನಿಲ್ ಕುಮಾರ್ ಬಜಾಲ್ ಆಕ್ರೋಶ
ಸಚಿವರೊಂದಿಗೆ ಚರ್ಚೆ ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.ಕಾನೂನು ಇಲಾಖೆ ಸಲಹೆ ಪಡೆಯಲು ಬಹುತೇಕ ತೀರ್ಮಾನಿಸಲಾಗಿದ್ದು, ಸಚಿವ ಸಂಪುಟ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಜಯಪ್ರಕಾಶ್ ಹೆಗಡೆಯವರು ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಸಂಪುಟ ಉಪ ಸಮಿತಿ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡಿ, ಸಂಪುಟ ಉಪ ಸಮಿತಿ ರಚನೆ ಮಾಡಿ, ಜಾತಿಗಣತಿ ವರದಿ ಜಾರಿಯಾಗುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ನೋಡಿ : ಮುಖ್ಯಮಂತ್ರಿಗೆ ಘೇರಾವ್ : DYFI ಕಾರ್ಯಕರ್ತರ ಬಂಧನ Janashakthi Media