ಬೆಂಗಳೂರು: ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ದಲಿತ ಸಮುದಾಯಕ್ಕೆ ಸೇರಿದ ಶ್ರೀರಾಮ ಎನ್ನುವವರ ಮೆಲೆ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯ ಕಾರ್ಯದರ್ಶಿ ಹರಿದಾಸ್ ಭಟ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿರುವ ಘಟನೆ ನಡೆದಿದೆ. ಈ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದಲಿತ
ಮೇ 6 ರಂದು ಹರಿದಾಸ್ ಭಟ್ ನನ್ನನ್ನು ಕರೆದು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಶ್ರೀರಾಮ ದೂರನ್ನು ನೀಡಿದ್ದಾರೆ. ಈ ಘಟನೆಯನ್ನು ಹತ್ತಕ್ಕೂ ಹೆಚ್ಚು ಜನ ನೋಡಿದ್ದಾರೆ. ಅವರನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ದಲಿತ
ಇದನ್ನೂ ಓದಿ: ಕವಿ ಜಿ ಎಸ್ ಸಿದ್ಧಲಿಂಗಯ್ಯ ನಿಧನ
ದೂರು ವಾಪಸ್ಸು ತೆಗೆದುಕೊಳ್ಳಬೇಕೆಂದು ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೂ ಒತ್ತಡ ಹೇರಿದಂತೆ ಕಾಣುತ್ತಿದೆ. ಹಾಗಾಗಿ ಪ್ರಕರಣ ದಾಖಲಿಸಲು ವಿಳಂಭ ಮಾಡುತ್ತಿದ್ದಾರೆ.
ಹರಿದಾಸ್ ಜೊತೆಯಲ್ಲಿದ್ದ ಮಂಜುನಾಥ್ ಎನ್ನುವವರಿಂದ ಬೆದರಿಕೆ ಹಾಕಿದ್ದು, ಕೊಟ್ಟಿರುವ ದೂರನ್ನು ವಾಪಸ್ಸು ತೆಗೆದುಕೊಳ್ಳುದಿದ್ದರೆ ನಿನ್ನ ಮೇಲೆ ಹಲ್ಲೆ ನಡೆಯುತ್ತದೆ ಹಾಗೂ ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಹೆದರಿಸಿದರು. ನಾನು ಇದಕ್ಕೆ ಬಗ್ಗದಿದ್ದಾಗ ನನ್ನನ್ನು ಸೇವಿಯಿಂದ ವಜಾ ಮಾಡಿದ್ದಾರೆ ಎಂದು ಶ್ರೀರಾಮ್ ಆರೋಪಿಸಿದ್ದಾರೆ.
ಶ್ರೀರಾಮ್ ಅವರು ಜನಶಕ್ತಿ ಮೀಡಿಯಾ ಜೊತೆ ಮಾತನಾಡಿ ನಾನು ಯಾವುದೇ ತಪ್ಪು ಮಾಡಿಲ್ಲ, ದಲಿತ ಮತ್ತು ನೌಕರರ ಸಂಘದ ಉಪಾಧ್ಯಕ್ಷ ಎಂಬ ಕಾರಣಕ್ಕೆ ಈ ರೀತಿ ನನ್ನ ಮೇಲೆ ನಡೆಸಿದ್ದಾರೆ. ನನಗೆ ನಿರ್ಭೀತಿಯಿಂದ ಕೆಲಸ ಮಾಡಲು ಆಗುತ್ತಿಲ್ಲ. ಆಗಿರುವ ಅನ್ಯಾಯಕ್ಕೆ ನ್ಯಾಯವನ್ನು ದೊರಕಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ ಪೊಲೀಸರು ಎರಡು ದಿನಗಳಿಂದ ಪ್ರಕರಣ ದಾಖಲಿಸದೆ ನನಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ನೋಡಿ: ಪುಸ್ತಕ ಬಿಡುಗಡೆ |ಒಕ್ಕೂಟವೋ ತಿಕ್ಕಾಟವೂ | ಬಿ. ಶ್ರೀಪಾದ್ ಭಟ್
ಬಿಜೆಪಿ ಆಡಳಿತದಲ್ಲಿ ಇನ್ನು ಮುಂದೆ ಇದೆಲ್ಲ ಮಾಮೂಲಾಗಲಿದೆ. ಇಡೀ ದೇಶದಲ್ಲಿ ಜನರ ಮನಸ್ಸನ್ನು ಕೆಟ್ಟದಾಗಿ ಕಟ್ಟುತ್ತಿದ್ದಾರೆ.ದುಡಿಯುವ ಜನರಿಗೆ ಇನ್ನು ಮುಂದೆ ಯಾವುದೇ ಬೆಲೆ ಇರುವುದಿಲ್ಲ. ದುಡಿಯುವ ಜನ ಮತ್ತೊಂದು ಸ್ವಾತಂತ್ರ್ಯ ಚಳುವಳಿಗೆ ಧುಮುಕಬೇಕು. ಇದಕ್ಕೆ ಬೇರೆ ದಾರಿ ಖಂಡಿತ ಇಲ್ಲ. ಏಕೆಂದರೆ ಬಿಜೆಪಿ ನಿಯಂತ್ರಿಸುತ್ತಿರುವ ಶಕ್ತಿಗಳು ಸಾವಿರಾರು ವರ್ಷಗಳ ಅವಧಿಯುದ್ದಕ್ಕೂ ಈ ದೇಶದಲ್ಲಿ ನಡೆದುಕೊಂಡು ಬಂದಿರುವುದೇ ಹೀಗೆಯೇ. ಜಾತಿಯನ್ನು ಬಳಸಿಕೊಂಡು ಯಾವಾಗಲೂ ನಮಗೆ ನಾವೇ ವೈರಿಗಳಂತೆ ಕಚ್ಚಾಡಿಕೊಂಡು ಇರುವಂತೆ ಮಾಡುತ್ತಿದ್ದಾರೆ. ಆದ್ದರಿಂದ ನಾವು ಒಂದಾಗುವಹಾಗಿಲ್ಲ. ಶೋಷಣೆ ನಿಲ್ಲುವಹಾಗಿಲ್ಲ. ನಮ್ಮಲ್ಲಿರುವ ಜೀವಕಾರುಣ್ಯವನ್ನೇ ಬತ್ತಿಸಲಾಗುತ್ತಿದೆ. ಎಚ್ಚರ, ಎಚ್ಚರ ಪ್ರತಿಭಟಿಸಿ ನಿಲ್ಲುವುದೊಂದೇ ದಾರಿ.