ದೇವಸ್ಥಾನ ಪ್ರವೇಶಿಸಿದ್ದ ಬಾಲಕನಿಗೆ ದಂಡ ವಿಧಿಸಿದ್ದ ಐವರ ಬಂಧನ

ಕುಷ್ಟಗಿ: ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಬಾಲಕನೋರ್ವ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ಧೀಕರಿಸಿರುವ ಘಟನೆ ವಿರೋಧಿಸಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ದೂರು ದಾಖಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ ದೂರಿನ ಆಧಾರದ ಮೇಲೆ, ಮಂಗಳವಾರ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಕನಕಪ್ಪ ಪೂಜಾರಿ, ಹನುಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ, ಹಾಗೂ ಶರಣಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಿಯಾಪುರ ಗ್ರಾಮದ ಹನುಮಾನ್ ದೇವಸ್ಥಾನವನ್ನು  ಏನೂ ಅರಿಯದ ಎರಡು ವರ್ಷದ ಮಗುವೊಂದು ದೇವಾಲಯ ಪ್ರವೇಶಿಸಿದ್ದು, ಇದಕ್ಕಾಗಿ ಮಗುವಿನ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಗೊಳ್ಳಬೇಕಿರುವ ಶುದ್ಧಿ ಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ದೇವಸ್ಥಾನದ ಕೆಲವು ಮುಖಂಡರು ಷರತ್ತು ವಿಧಿಸಿದ್ದರು. ದಲಿತ ಕುಟುಂಬಕ್ಕೆ 25,000 ರೂಪಾಯಿ ದಂಡ ವಿಧಿಸಲು ಯತ್ನಿಸಿದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ದಲಿತ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಗ್ರಾಮಸ್ಥರು?

ಸೆಪ್ಟೆಂಬರ್ 4ರಂದು ಪ್ರಕರಣ ನಡೆದಿದ್ದು, ಸೆಪ್ಟೆಂಬರ್‌ 20 (ಸೋಮವಾರ) ಬೆಳಕಿಗೆ ಬಂದಿತ್ತು, ಚೆನ್ನದಾಸರ ಸಮುದಾಯಕ್ಕೆ ಸೇರಿದ ಚಂದ್ರಶೇಖರ್ ತನ್ನ ಎರಡು ವರ್ಷದ ಪುತ್ರನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೆ. 4ರಂದು ಹನುಮಂತನ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಬಂದಿದ್ದರು. ‘ಚಂದ್ರಶೇಖರ್ ಮತ್ತು ಅವರ ಕುಟುಂಬ ಸದಸ್ಯರು ದೇವಸ್ತಾನದ ಹೊರಗೆ ನಿಂತಿದ್ದರು. ಆದರೆ ಬಾಲಕ ದೇವಾಲಯದ ಒಳಗೆ ಓಡಿಹೋಗಿದ್ದನು. ಬಾಲಕನ ಪ್ರವೇಶವನ್ನು ಪೂಜಾರಿ ಆಕ್ಷೇಪಿಸಿದ್ದನು. ಮೇಲ್ಜಾತಿಯ ಕೆಲವು ಜನರು  ಪೂಜಾರಿಯ ಪರವಾಗಿ ನಿಂತರು. ಅಲ್ಲದೆ ಸೆಪ್ಟೆಂಬರ್ 11ರಂದು ಸಭೆ ಸೇರಿಸಿ ಅಲ್ಲಿ ದೇವಾಲಯದ ‘ಶುದ್ಧೀಕರಣ’ಗಾಗಿ 25,000 ರೂಪಾಯಿ ದಂಡ ತೆರುವಂತೆ ಹೇಳಿದ್ದರು.  ಆದರೆ ಗ್ರಮಾದ ಇತರೆ ಮೇಲ್ಜಾತಿಯ ಜನರು ಈ ಕ್ರಮವನ್ನು ‘ಕಠಿಣ’ ಎಂದು ವಿರೋಧಿಸಿದರು. ಇದು ಸರೊಯಾದ ಕ್ರಮವಲ್ಲ ಎಂದು ಎಚ್ಚರಿಸಿದರೂ ಕೆಲ ಜನರು ಹಾಗೂ ಊರ ಪೂಜಾರಿ ಸೇರಿಕೊಂಡು ದಂಡ ವಿಧಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *