ವೇದರಾಜ ಎನ್ ಕೆ
ಪ್ರಧಾನ ಮಂತ್ರಿಗಳ ಸ್ವಂತ ಚುನಾವಣಾ ಕ್ಷೇತ್ರದಲ್ಲಿ ‘ದಿವ್ಯ–ಭವ್ಯ ಕಾಶಿ ಶ್ರೀವಿಶ್ವನಾಥ ಧಾಮ’ದ ಉದ್ಘಾಟನೆ, ಮತ್ತು ಆ ಸಂದರ್ಭದಲ್ಲಿ ಉತ್ತರ ಪ್ರದೇಶ ಸರಕಾರ ದಿಲ್ಲಿಯ ಮತ್ತು ಉತ್ತರ ಭಾರತದ ಪ್ರಮುಖ ಪತ್ರಿಕೆಗಳಿಗೆ ನೀಡಿದ ಎರಡು ಪುಟಗಳ ವರ್ಣಮಯ ಜಾಹೀರಾತು ಮತ್ತು ಬೇಟಿ ಬಚಾವೋ ಜಾಹೀರಾತುಗಳು, ಅದಕ್ಕೆ ಮೊದಲು ದಿಲ್ಲಿ ಗಡಿಗಳಲ್ಲಿ ತಮ್ಮ ಸತ್ಯಾಗ್ರಹವನ್ನು ಸದ್ಯಕ್ಕೆ ನಿಲ್ಲಿಸುವ ರೈತ ಸಂಘಟನೆಗಳ ನಿರ್ಧಾರ, ಜತೆಗೆ ಜಾಗತಿಕ ಅಸಮಾನತೆಯ ಸೂಚ್ಯಂಕ ಮತ್ತು ಪ್ರಧಾನಿಗಳ ಟ್ವಟರ್ ಖಾತೆಯ ತಾತ್ಕಾಲಿಕ ಹ್ಯಾಕ್– ಈ ವಾರ ಕಾರ್ಟೂನ್ಗಳಿಗೆ ತುತ್ತಾದ ಬೆಳವಣಿಗೆಗಳು.
ಕೊವಿಡ್ ಸಂಕಟದ ನಡುವೆಯೇ ತರಾತುರಿಯಲ್ಲಿ ಪಾಸಾದ ಮೂರೂ ಕೃಷಿ ಕಾಯ್ದೆಗಳನ್ನು 15 ತಿಂಗಳ ನಂತರ ರದ್ದುಮಾಡುವ ಮಸೂದೆಯನ್ನು ಅಷ್ಟೇ ತರಾತುರಿಯಲ್ಲಿ ಪಾಸು ಮಾಡಿಸಿಕೊಂಡ ಸರಕಾರದಿಂದ ಕೊನೆಗೂ ತಮ್ಮ ಇತರ ಆಗ್ರಹಗಳನ್ನು ಮನ್ನಿಸುವ ಬಗ್ಗೆ ಲಿಖಿತ ಆಶ್ವಾಸನೆ ಪಡೆದುಕೊಂಡ ರೈತರ ಸಂಘಟನೆಗಳು ದಿಲ್ಲಿ ಗಡಿಗಳಲ್ಲಿ ತಮ್ಮ ಸತ್ಯಾಗ್ರಹವನ್ನು ಸದ್ಯಕ್ಕೆ ನಿಲ್ಲಿಸುವ ನಿರ್ಧಾರ ಮಾಡಿದವು.
ಪಂಜು ಗಂಗೊಳ್ಳಿ, ಫೇಸ್ಬುಕ್ ಡಿಸೆಂಬರ್ 11
ಒಂದು ವರ್ಷದಿಂದ ಒಡ್ಡುತ್ತಿದ್ದ ಅಡ್ಡಿ-ಆತಂಕಗಳನ್ನು ಮೀರಿ ನಿಂತ ರೈತರು ಆಳುವವರನ್ನು ಅವರದ್ದೇ ಅಹಂಕಾರದ ಬಂದಿಗಳಾಗುವಂತೆ ಮಾಡಿ ತಂತಮ್ಮ ಊರುಗಳಿಗೆ ತೆರಳಿದ್ದಾರೆ.
ವಿನಯಶೀಲತೆಯ ಬೀಜಗಳನ್ನು ಬಿತ್ತಿದ್ದೇವೆ.
ಅವು ಮೊಳಕೆಯೊಡಲು ಬಿಡಿ
ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್, ಡಿ.10
ಆಳುವವರು ಇಟ್ಟ ಅಡ್ಡಗಟ್ಟುಗಳು, ನೆಟ್ಟ ಮೊಳೆಗಳನ್ನು ದಾಟಿ ಹೋಗಿದ್ದಾರೆ.
ಪಿ.ಮಹಮ್ಮದ್, ಫೇಸ್ ಬುಕ್ ಡಿಸೆಂಬರ್ 12
ಪ್ರಜಾಪ್ರಭುತ್ವದ ಪಾಟಗಳನ್ನು ನೆನಪಿಸಿ ಹೋಗಿದ್ದಾರೆ
ನಾನು ನಡೆದದ್ದೇ ದಾರಿ, ಹೆದ್ದಾರಿ ಎನ್ನುವವರೇ…..
ನನ್ನ ದಾರಿ, ನಮ್ಮ ದಾರಿ, ನಮ್ಮೆಲ್ಲರ ದಾರಿ
(ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ, ಡಿ.10)
ಎಂದು ಕಲಿಸಿ ಹೋಗಿದ್ದಾರೆ. ‘ಥ್ಯಾಂಕ್ಯು ಮೋದೀಜೀ’ ಗಳನ್ನು ಮುಜುಗರಕ್ಕೊಳಪಡಿಸಿದ ಸರ್ಟಿಫಿಕೇಟು(!)ಗಳೊಡನೆ ಹೋಗಿದ್ದಾರೆ….
ಮಿಕಾ ಅಝೀಝ್, ಫೇಸ್ಬುಕ್ ಡಿಸೆಂಬರ್ 11
ಆದರೂ ವೋಟಿನ ರಥ ಸಾಗಿದೆ, ಸಿಂಘು, ಟಿಕ್ತಿ, ಗಾಝೀಪುರ ಗಡಿಗಲ್ಲುಗಳನ್ನು ಕಂಡಾಗ ಮಾತ್ರ……..
“ಗಡಿಗಳಲ್ಲಿ ನಿಲ್ಲುವಂತಿಲ್ಲ”
ಸುಭಾನಿ, ಡೆಕ್ಕನ್ ಕ್ರಾನಿಕಲ್, ಡಿ.11
ಅದೀಗ ಉತ್ತರಪ್ರದೇಶದಲ್ಲಿ ಸಂಚರಿಸುತ್ತಿದೆ.
ಡಿಸೆಂಬರ್ 13 ರಂದು ಪ್ರಧಾನಿಗಳ ಸ್ವಂತ ಚುನಾವಣಾ ಕ್ಷೇತ್ರವನ್ನು ತಲುಪಿದಂತೆ ಕಾಣುತ್ತದೆ.
“ಪ್ರಜಾಪ್ರಭುತ್ವ ಘಾಟ್”ನಲ್ಲಿ
ಸಜಿತ್ ಕುಮಾರ್, ಡೆಕ್ಕನ್ ಕ್ರಾನಿಕಲ್, ಡಿ.14
ಅಧಿಕೃತವಾಗಿ ಇದು ಪ್ರಧಾನ ಮಂತ್ರಿಗಳಿಂದ ‘ಕಾಶಿ ವಿಶ್ವನಾಥ ಧಾಮ’ದ ಉದ್ಘಾಟನೆಯ ಕಾರ್ಯಕ್ರಮ.
ಡಿಸೆಂಬರ್ 13 ರಂದು ದೇಶದ ರಾಜಧಾನಿಯ ಪ್ರಮುಖ ದೈನಿಕಗಳೂ ಸೇರಿದಂತೆ ಉತ್ತರ ಭಾರತದ ದೈನಿಕಗಳಲ್ಲಿ “ದಿವ್ಯ ಕಾಶಿ-ಭವ್ಯ ಕಾಶಿ” ಎಂಬ ಉತ್ತರಪ್ರದೇಶ ಸರಕಾರದ ಎರಡು ಪುಟಗಳ ವರ್ಣಮಯ ಜಾಹೀರಾತುಗಳು ಪ್ರಕಟಗೊಂಡವು.
“ಸೋಚ್ ಈಮಾನ್ದಾರ್ -ಕಾಮ್ ದಮ್ದಾರ್” ಎಂಬುದು ಈ ಜಾಹೀರಾತಿನ ಘೋಷ ವಾಕ್ಯ
ಅಂದರೆ ಪ್ರಾಮಾಣಿಕ ವಿಚಾರ, ಬಲಯುತ ಕೆಲಸ.
ಈ ಜಾಹೀರಾತು ಹೇಳಿರುವ ‘ದಮ್ದಾರ್ ಕಾಮ್’ ಎಂದರೆ ಕಾಶಿಯ ‘ಪುನಶ್ಚೇತನ ಮತ್ತು ರೂಪಾಂತರವೇ ಹೊರತು, ಬೆಲೆಯೇರಿಕೆಯ ಹೊರೆಯನ್ನು ಹೊರುವ ಶಕ್ತಿಯನ್ನು ಕೊಡುವುದಲ್ಲ
ಮತ್ತು ಈ ‘ಪುನಶ್ಚೇತನ’ದ ಶಿಲ್ಪಿ ……………
ವಾಹ್! ಸೋಚ್ ಈಮಾನ್ದಾರ್ ಕಾಮ್…
……ದಮ್ದಾರ್
(ಸತೀಶ ಆಚಾರ್ಯ, ಡಿ. 15)
ಅಂದು ಮಧ್ಯರಾತ್ರಿಯ ವೇಳೆಯಲ್ಲಿ ಈ ಶಿಲ್ಪಿ ಉತ್ತರಪ್ರದೇಶ ಮುಖ್ಯಮಂತ್ರಿಗಳ ಜೊತೆಗೆ ಬನಾರಸ್ನ ಬೀದಿಗಳಲ್ಲಿ ಸಂಚರಿಸಿದರಂತೆ…
ಇದು ಒಳ್ಳೇದು, ಪ್ರಶ್ನೆ ಕೇಳುವವರು ಮಲಗಿರುತ್ತಾರೆ!
ಅರ್ಥ ವ್ಯವಸ್ಥೆ, ಬೆಲೆಯೇರಿಕೆ, ನಿರುದ್ಯೋಗ ಇತ್ಯಾದಿಗಳ ಬಗ್ಗೆ ಪ್ರಶ್ನೆ ಕೇಳುವವರು ….
(ಇರ್ಫಾನ್, ನ್ಯೂಸ್ ಕ್ಲಿಕ್, ಡಿ.14)
ಇತ್ತ “ಪುನಶ್ಚೇತನಗೊಂಡ , ರೂಪಾಂತರಗೊಂಡ” ದೇವಸ್ಥಾನದಲ್ಲಿಯೂ…
ದೇವರೇ, ತರಕಾರಿಗಳು ಕೈಗೆಟಕುವಂತಾಗಲಿ.
ಕುಗ್ಗುತ್ತಿರುವ ಆದಾಯ, ಉದ್ಯೋಗ ಭದ್ರತೆ, ಮಕ್ಕಳ ಶಿಕ್ಷಣ,
ಆರೋಗ್ಯ ಪಾಲನೆಯ ಬಗ್ಗೆ ಏನಾದರೂ ಮಾಡು….
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್, ಡಿ. 15)
ಅಂದು ಅಲ್ಲಿ ಪ್ರಧಾನಿಗಳ ಭಾಷಣದಲ್ಲಿ ಔರಂಗಜೇಬ್ ಹೆಸರೂ ಪ್ರಸ್ತಾಪವಾಯಿತಂತೆ…….
ಪಿ.ಮಹಮ್ಮದ್ , ಡಿ.15
ಧಾರ್ಮಿಕ ಸಮಾರಂಭದಲ್ಲಿ ಏಕೆ ಔರಂಗಜೇಬನ ಪ್ರಸ್ತಾಪ ಎಂಬ ಪ್ರಶ್ನೆ ಸಹಜವಾಗಿ ಹಲವರಲ್ಲಿ ಮೂಡಿತು.
ಕೆಲವು ತಿಂಗಳ ಹಿಂದೆ ಜಾಲಿಯಾಂವಾಲಾ ಬಾಗ್ ಸ್ಮಾರಕದ ಸಂದರ್ಭದಲ್ಲಿ ಅದು ಐತಿಹಾಸಿಕ ಸ್ಮಾರಕದ ನವೀಕರಣವೋ ಅಥವ ಡಿಸ್ನೀಕರಣವೋ ಎಂಬ ಪ್ರಶ್ನೆಯೆದ್ದಂತೆ ಇಲ್ಲೂ ಇದು ಧಾರ್ಮಿಕ ಕ್ಷೇತ್ರದ ‘ಪುನಶ್ಚೇತನ’ವೋ ಅಥವ ಸುಮಾರು 700 ಕೋಟಿ ರೂ.ಗಳ ವೆಚ್ಚದ ಪ್ರವಾಸೋದ್ಯಮ ಕಾರ್ಯವೋ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮತ್ತು ಯಾತ್ರಾಸ್ಥಳಗಳಲ್ಲಿ ಭವ್ಯಕ್ಕಿಂತ ದಿವ್ಯವೇ ಮುಖ್ಯ ಎಂದು ಭಾವಿಸುವ ಶ್ರದ್ಧಾಳುಗಳಲ್ಲಿಯೂ ಮೂಡಿದೆಯಂತೆ.
ಯಾರಿಗಾಗಿ ಈ ಮಹೋತ್ಸವ ಎಂದು ಹಲವು ನಮಾಮಿ ಗಂಗೆ ಮುಂತಾದ ಪರಿಯೋಜನೆಗಳ ಪ್ರಚಾರದ ನಂತರ ಸ್ಥಳೀಯ ಜನರು, ಪತ್ರಕರ್ತರು ಪ್ರಶ್ನಿಸುತ್ತಿದ್ದಾರಂತೆ.
ವಾಸ್ತವವಾಗಿ ಯಾರಿಗಾಗಿ ಎಂಬುದಕ್ಕಿಂತ ಯಾತಕ್ಕಾಗಿ ಎಂಬುದೇ ಹೆಚ್ಚು ಸೂಕ್ತ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಹಿಂದೆ ಫೋಟೋ ನೆಗೆಟಿವ್ಗಳನ್ನು ಪಾಸಿಟಿವ್
ಮಾಡಲು ಬೆಳಕುಕೋಣೆ ಬೇಕಾಗಿತ್ತು…
ಈಗ ನಾವು ಅದನ್ನು ಹಗಲಬೆಳಕಿನಲ್ಲೇ ಮಾಡುತ್ತೇವೆ
(ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ, ಡಿ.15)
ಹೌದು, ಈಗ ಹಾಡುಹಗಲೇ ಎಲ್ಲ ನೆಗೆಟಿವ್ಗಳನ್ನು ಪಾಸಿಟಿವ್ಗಳಾಗಿ ಪರಿವರ್ತಿಸುವ ತಂತ್ರಾಂಶಗಳು ಸಿದ್ಧಗೊಂಡಿವೆ.
ಅಂದರೆ ಬೆಲೆಯೇರಿಕೆ, ನಿರುದ್ಯೋಗ, ಆರ್ಥಿಕ ದುರವಸ್ಥೆ, ರೈತರ ಸಮಸ್ಯೆ ಮುಂತಾದ ಪರಿಹಾರ ಮಾಡದ ಅಥವ ಸೃಷ್ಟಿಸುವ ‘ನಕಾರಾತ್ಮಕ’ ಅಂಶಗಳನ್ನು ಹೀಗೆ ಹಾಡುಹಗಲೇ ‘ಸಕಾರಾತ್ಮಕ’ಗೊಳಿಸಬಹುದು!
***
ಇಂತಹ ಜಾಹೀರಾತು ಪ್ರಚಾರ ಕುರಿತಂತೆ ಈ ವಾರದ ಇನ್ನೊಂದು ಸುದ್ದಿ ‘ಬೇಟಿ ಬಚಾವೋ ಜಾಹೀರಾತು ಖರ್ಚಿನದ್ದು. ಅದೇ ವೇಳೆಗೆ ದೀರ್ಘ ಅಂತರಾಳದ ನಂತರ ಭಾರತದ ಯುವತಿ ‘ಮಿಸ್ ಯುನಿವರ್ಸ್’ ಗೆದ್ದಿರುವ ಸುದ್ದಿಯೂ ಬಂದಿದೆ.
ಪಿ.ಮಹಮ್ಮದ್, ಫೇಸ್ಬುಕ್, ಡಿ.14
ಬೇಟಿ ಬಚಾವೋ-ಬೇಟಿ ಪಢಾವೊ ಮತ್ತು ಬೇಟಿ ಬೇಟಿ ಬಚಾವೋ ಮತ್ತು ಬೇಟಿ
ಮಂಜುಲ್, ವೈಬ್ಸ್ ಆಫ್ ಇಂಡಿಯ, ಡಿ.13 ಸತೀಶ ಆಚಾರ್ಯ, ಫೇಸ್ಬುಕ್,ಡಿ.11
***
ಈ ವಾರದ ಮತ್ತೊಂದು ಸುದ್ದಿ-ಪ್ರಧಾನ ಮಂತ್ರಿಗಳ ಟ್ವಿಟರ್ ಹ್ಯಾಂಡಲ್ ನ್ನು ಯಾರೋ ಹ್ಯಾಕ್ ಮಾಡಿದ್ದಾರಂತೆ, ಅಂದರೆ ಬೇಧಿಸಿದ್ದಾರಂತೆ, ಹಾಗೆ ಬೇಧಿಸಿ ಬಿಟ್ ಕಾಯಿನ್ ನ್ನು ಕಾನೂನುಬದ್ಧ ಗೊಳಿಸಲಾಗುವುದು ಎಂಬ ಸಂದೇಶವನ್ನೂ ಹಾಕಲಾಗಿದೆಯಂತೆ.
ಪ್ರಧಾನ ಮಂತ್ರಿಗಳ ಬಾಯಿಂದ(ಅಥವ ಕೈಯಿಂದ) ಬಂದಿದ್ದರೆ ಅದು ಇನ್ನೊಂದು ‘ಮಾಸ್ಟರ್ ಸ್ಟ್ರೋಕೇ’ ಇರಬೇಕು ಎಂದು ಹಲವು ಭಕ್ತರು ರಿಟ್ವೀಟ್ ಮಾಡಿರಲೂ ಬಹುದು ಎಂಬುದು ಹಲವರ ಊಹೆ.
ನೀನು ಲೈಕ್ ಮಾಡಿದ್ದಷ್ಟೇ ತಾನೇ. ನಾನು ಲೈಕ್ ಮಾಡಿ,
ರಿಟ್ವೀಟ್ ಮಾಡಿದೆ, ಮಾಸ್ಟರ್ ಸ್ಟ್ರೋಕ್ ಎಂದು ಹೊಗಳಿದೆ
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್ , ಡಿ.13)
ಇದನ್ನು ಕೇಳಿದ ಮೇಲೆ, ಬಹುಶಃ ಈಗ ಆಳುವ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ‘ಅಚ್ಛೇದಿನ್’ ಕೂಡ ಒಬ್ಬ ಹ್ಯಾಕರ್ ನಿಂದಾಗಿಯೇ ಹರಡಿರಬಹುದೇ ಎಂದು ಪೋಲೀಸರಿಗೆ (ಉ.ಪ್ರ./ಕರ್ನಾಟಕ?) ಹೀಗೊಂದು ಐಡಿಯಾ ಹೊಳೆದಿರಬಹುದೇ ಎಂದು ಈ ವ್ಯಂಗ್ಯಚಿತ್ರಕಾರರಿಗೆ ಅನಿಸಿದೆ..
ಹ್ಯಾಕರ್: ಇಲ್ಲಾ!!! ನಾನು 2014ರಲ್ಲಿ
ಅಚ್ಛೇ ದಿನ್ ಬರಲಿದೆ ಪೋಸ್ಟ್ ಹಾಕಿಲ್ಲ!
ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್, ಡಿ.13
ತಾನು ಚೌಕೀದಾರರೆಂದು ಘೋಷಿಸಿದವರ ಟ್ವಟರ್ ಖಾತೆಗೇ ಹೀಗೆ ಕನ್ನ ಹಾಕಲು ಸಾಧ್ಯವೇ ಎಂಬುದು ಮತ್ತೊಂದು ಪ್ರಶ್ನೆ.
ಸತೀಶ ಆಚಾರ್ಯ, ಫೇಸ್ಬುಕ್, ಡಿ.14
***
ಇನ್ನೊಂದು ಜಾಗತಿಕ ವರದಿ ಪ್ರಕಟವಾಗಿದೆ- ಜಾಗತಿಕ ಅಸಮಾನತೆಯ ವರದಿ ,2022. ಇದರ ಪ್ರಕಾರ ದೇಶದ ಆದಾಯದ 57% ಮೇಲಿನ ಕೇವಲ 10% ಮಂದಿಯ ಕೈಗಳಲ್ಲಿದೆ.
ನಾವೇನೋ ಸುಮ್ಮನೇ “ದೇವರು ನಿಮಗೆ ಇನ್ನಷ್ಟು ಸಂಪತ್ತು ಕೊಡಲಿ” ಎಂದು
ಹೇಳುತ್ತಿದ್ದೆವು. ದೇವರೇನಾದರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಬಹುದೇ?
ಕೀರ್ತೀಶ್, ಬಿಬಿಸಿ ನ್ಯೂಸ್ ಹಿಂದಿ ಡಿ.11
ಇದೂ ಸಾಲದೆಂಬಂತೆ ಈ ವರದಿ, ಬ್ರಿಟಿಶ್ ವಸಾಹತುಶಾಹೀ ಆಳ್ವಿಕೆಯ ಸಮಯದಲ್ಲೂ ಇಷ್ಟೊಂದು ಅಸಮಾನತೆ ಇರಲಿಲ್ಲ, ಮೇಲಿನ 10% ಜನರ ಆದಾಯ ದೇಶದ ಆದಾಯದ 50% ಇತ್ತು, ಸ್ವಾತಂತ್ರ್ಯದ ನಂತರ ಪಂಚವಾರ್ಷಿಕ ಯೋಜನೆಗಳಿಂದಾಗಿ ಇದು 35-40%ಕ್ಕೆ ಇಳಿಯಿತು. 1990ರ ಮಧ್ಯಭಾಗದಲ್ಲಿ ಇದು ಮತ್ತೆ ಏರುತ್ತ ಹೋಗಿ, ಈಗ ಜಗತ್ತಿನಲ್ಲಿ ಅತಿ ಹೆಚ್ಚುಅಸಮಾನತೆ ಇರುವ ದೇಶಗಳ ಸಾಲಿಗೆ ಸೇರಿದೆ ಎಂದು ಹೇಳಿದೆ. ಆದರೆ ನಮ್ಮ ಸರಕಾರ ಈ ಮೊದಲು ಪ್ರಕಟವಾಗಿರುವ ಕೆಲವು ಜಾಗತಿಕ ಸೂಚ್ಯಂಕಗಳಂತೆ ಇದನ್ನೂ ಒಪ್ಪಲಿಕ್ಕಿಲ್ಲ.
ಅದೆಂತಾ ಅಸಮಾನತೆಯ ಸೂಚ್ಯಂಕ?
ಸರಕಾರ ಅಸಮಾನತೆಯನ್ನು ಕೊನೆಗೊಳಿಸಲು
24x 7 ಕೆಲಸ ಮಾಡುತ್ತಿಲ್ಲವೇ?
ಮಂಜುಲ್, ನ್ಯೂಸ್9, ಡಿ.11
***
ಕೊನೆಯದಾಗಿ, ಎರಡು ಹೇಳಿಕೆಗಳು:
ಲಖಿಂಪುರ್ ಖೇರಿ ಘಟನೆ ಒಂದು ಪೂರ್ವಯೋಜಿತ ಸಂಚು ಎಂದ ಎಸ್ಐಟಿ ಹೇಳಿಕೆ …
ಮತ್ತು ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ, ಲವ್ಜಿಹಾದ್ ಮಸೂದೆ
ತರುತ್ತೇನೆ ಎಂದ ನಮ್ಮ ಹಾಲಿ ಮುಖ್ಯಮಂತ್ರಿಗಳ ಹೇಳಿಕೆ……
ಪಿ.ಮಹಮ್ಮದ್, ವಾರ್ತಾಭಾರತಿ, ಡಿ.15 ಮತ್ತು ಫೇಸ್ ಬುಕ್, ಡಿ.13