ಉಚಿತ ಲಸಿಕೆ 75ಶೇ.! … ಪೆಟ್ರೋಲ್-ಡೀಸೆಲ್100ರೂ.!! ಆದರೂ………… ನಗಿಸಬೇಡಿ!!!

ಕೊವಿಡ್‍ ಎರಡನೇ ಅಲೆಯ ಹಾವಳಿಯೆದುರು, ದೇಶದ ಸರ್ವೋಚ್ಚ ನ್ಯಾಯಾಲಯವೂ ‘ತರ್ಕಹೀನ’ ಎಂದ ಕೇಂದ್ರ ಸರಕಾರದ “ಉದಾರೀಕೃತ ಲಸಿಕೆ ನೀತಿಯಲ್ಲಿ ಪ್ರಮುಖ ತಿಪ್ಪರಲಾಗ, ಅದನ್ನು ಸಮರ್ಥಿಸಿಕೊಳ್ಳುವ ತಿಣುಕಾಟ, ಮತ್ತು  ಇಂತವನ್ನೆಲ್ಲ  ಕಂಡು ನಗಬಾರದು, ನಗಿಸಬಾರದು ಎಂದು  ವ್ಯಂಗ್ಯಚಿತ್ರಕಾರರಿಗೇ ತಾಕೀತು -ಇದು ಈ ವಾರದ ವಿಶೇಷ.

ಆಕ್ಸಿಜನ್, ಬೆಡ್, ಅಗತ್ಯ ಔಷಧಿಗಳು ಮತ್ತಿತರ  ಕೊರತೆಗಳ ಹಾಹಾಕಾರದ ನಡುವೆ  ಎಪ್ರಿಲ್‍ 19ರಂದು ಪ್ರಕಟಿಸಿದ  ಕೇಂದ್ರ ಸರಕಾರದ  ಲಸಿಕೆ ನೀತಿಯ ಬಗ್ಗೆ ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ಜೂನ್‍ 7ರಂದು ಪ್ರಧಾನ ಮಂತ್ರಿಗಳು ಮತ್ತೊಂದು ಭಾಷಣ ಮಾಡಿದ್ದಾರೆ. ಅಂದು ರಾಜ್ಯಗಳಿಗೆ ದಾಟಿಸಿದ್ದ  18-44 ವಯೋಗುಂಪಿನ ಜನಗಳಿಗೆ ಉಚಿತ ಲಸಿಕೆಯ ಜವಾಬ್ದಾರಿ ಜೂನ್‍ 21ರಿಂದ ಕೇಂದ್ರ  ಸರಕಾರದ್ದೇ  ಎಂದಿದ್ದಾರೆ. ಒಳ್ಳೆಯದೇ.  ಆದರೂ ಹಲವಾರು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಏಕೆ?

“ಆರು ತಿಂಗಳು ತಡಮಾಡಿದ ನೇರಪ್ರಸಾರ!”

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ಮೊದಲನೆಯದಾಗಿ, ಸೋಂಕಿತರ ದೈನಂದಿನ ಸಂಖ್ಯೆ 4ಲಕ್ಷ ದತ್ತ, ಮತ್ತು ಸಾವುಗಳ ಸಂಖ್ಯೆ 4000 ದತ್ತ ಧಾವಿಸುತ್ತಿದ್ದಾಗ ಎಪ್ರಿಲ್‍ 19ರಂದು ಕೇಂದ್ರ ಸರಕಾರ ತನ್ನ “ಉದಾರೀಕೃತ ಲಸಿಕೆ ನೀತಿ”ಯನ್ನು “ಪ್ರಕಟಿಸಿದ್ದು ಏಕೆ? ಯಾರಿಗಾಗಿ?

ಈಗ ಜೂನ್‍ 7ರಂದು ಯು-ಟರ್ನ್ ಏಕೆ?  ಆದರೂ  25% ಖಾಸಗಿಯವರಿಗೆ ಮುಂದುವರೆಸಿರುವುದು ಏಕೆ? ಇಂತಹವೇ ಹಲವು ಪ್ರಶ್ನೆಗಳು. ಈ ವರ್ಷದ ಕೊವಿಡ್‍ ಸೋಂಕು ಅಂಕಿ-ಅಂಶಗಳಲ್ಲಿ ಏನಾದರೂ ಉತ್ತರ ಸಿಗಬಹುದೇ?.

ತಿಂಗಳು                  ಸರಾಸರಿ ದೈನಂದಿನ ಹೊಸ ಸೋಂಕಿತರು         ಸರಾಸರಿ ದೈನಂದಿನ ಸಾವುಗಳು

ಜನವರಿ                     15,190`                                                                         `174

ಫೆಬ್ರುವರಿ                  12,665                                                                              99

ಮಾರ್ಚ್                   35,787                                                                            186

ಎಪ್ರಿಲ್ 1-18             1,57,792                                                                        880

ಎಪ್ರಿಲ್‍19-30           3,41,921                                                                       2,757

ಮೇ 1-7                      3,32,376                                                                      3,175

ಮೇ8-ಜೂನ್ 6         2,39,303                                                                     3,713

ಜೂನ್‍ 7                    1,00,636                                                                      2,427

ಎರಡನೇ ಅಲೆ ಇಳಿಮುಖಗೊಳ್ಳಲು ಆರಂಭಿಸಿದ ನಂತರ……?

(ಮಂಜುಲ್, ಫೇಸ್‍ಬುಕ್)

***

ರಾಜ್ಯ ಸರಕಾರಗಳೇ ಕೇಳಿದವು, ಆದ್ದರಿಂದ ಕೊಟ್ಟೆವು, ಈಗ ತಮ್ಮಿಂದ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ವಾಪಾಸು ತಗೊಂಡೆವು, ಕೇಂದ್ರ ಸರಕಾರದ ಸರಳ ಸರಳೀಕೃತ ಉತ್ತರ. ಆದರೆ ವಿಷಯ ಅಷ್ಟು ಸರಳವೇ? ಹಲವರಿಗೆ ಹಲವು ಅನುಮಾನಗಳಿವೆ.

ಯಾವ ರಾಜ್ಯ ಸರಕಾರ/ಗಳು ನಾವೇ ಕೇಂದ್ರ ಸರಕಾರಕ್ಕಿಂತ ದುಪ್ಪಟ್ಟು ದರದಲ್ಲಿ ಲಸಿಕೆ ಖರೀದಿಸಿ ಹಾಕಲು ಅವಕಾಶ ಕೊಡಿ ಎಂದು ಕೇಳಿತು/ದವು?. ವಾಸ್ತವವಾಗಿ ಕೆಲವು ಸರಕಾರಗಳು ಕೇಳಿದ್ದು ಕೇಂದ್ರ ಸರಕಾರ ಕೊಡುವ ಲಸಿಕೆಗಳನ್ನು ಹೇಗೆ ಹಂಚಬೇಕು ಎಂಬುದನ್ನು ಸ್ಥಳಿಯ ಪರಿಸ್ಥಿತಿಗಳಿಗೆ ಅನುಗುಣವಾಗಿ ನಿರ್ಧರಿಸಲು ಅವಕಾಶವಿರಬೇಕು ಎಂದಷ್ಟೇ.

ಇನ್ನು 25% ವನ್ನು ಖಾಸಗಿಯವರಿಗೆ ಅವರು ನಿರ್ಧರಿಸಿದ ಬೆಲೆಗಳಲ್ಲಿ ಕೊಡಬೇಕು,  ಅವರೊಂದಿಗೆ ತಾವು ಸ್ಪರ್ಧಿಸುತ್ತೇವೆ ಎಂದಂತೂ ರಾಜ್ಯ ಸರಕಾರಗಳು ಹೇಳಲು ಸಾಧ್ಯವೇ ಇಲ್ಲವಲ್ಲ.

ಹೊಸ ಲಸಿಕೆ ನೀತಿ

(ಸುರೇಂದ್ರನ್, ದಿ ಹಿಂದು)

***

ಇದಕ್ಕಿಂತ ಮುಖ್ಯವಾಗಿ,  ಸುಪ್ರಿಂ ಕೋರ್ಟ್‍ ಎಪ್ರಿಲ್‍ 19ರ ‘ಉದಾರೀಕೃತ’  ನೀತಿಯ ಬಗ್ಗೆ ಕೇಳಿದಾಗ ಕೇಂದ್ರ ಸರಕಾರ ಈ ಅಂಶವನ್ನು ಹೇಳಲೇ ಇಲ್ಲವಲ್ಲ! ಬದಲಿಗೆ ತನ್ನ ಲಸಿಕೆ ನೀತಿ ಸಂವಿಧಾನದ ಕಲಮು 14 ಮತ್ತು 21ಕ್ಕೆ ಅನುಗುಣವಾಗಿದೆ, ಆದ್ದರಿಂದ ಅದರಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಅನಗತ್ಯ, ಇಷ್ಟೊಂದು ಬೃಹತ್‍ ಪ್ರಮಾಣದ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಕಾರ್ಯಾಂಗಕ್ಕೆ ಮುಕ್ತವಾಗಿ ಕೆಲಸ ಮಾಡುವ ಅವಕಾಶವಿರಬೇಕು ಎಂದು ಹೇಳಿದ್ದೇಕೆ ಎಂಬ ಪ್ರಶ್ನೆ ಏಳುತ್ತದೆ.

ಸರಕಾರದ ತರ್ಕವನ್ನು ಒಪ್ಪದ ಸುಪ್ರಿಂ ಕೋರ್ಟ್‍ ಈ ನೀತಿ “ನಿರಂಕುಶ  ಮತ್ತು ತರ್ಕಹೀನ’ ಎಂದು  ವರ್ಣಿಸಿತು ಎನ್ನುವುದು ಇಡೀ ದೇಶದ ಗಮನ ಸೆಳೆದಿರುವ ಸಂಗತಿ.

ನಾನು             ನಾನು                 ನಾನು?

ನಾವು…………….ನಾನು

(ಸಂದೀಪ ಅಧ್ವರ್ಯು, ಫೇಸ್‍ ಬುಕ್)

***

ಸುಪ್ರಿಂ ಕೋರ್ಟ್ ಜೂನ್ 2ರಂದು ನೀಡಿದ ತನ್ನ ಆದೇಶದಲ್ಲಿ ಲಸಿಕೆ ಖರೀದಿಯ ಬಗ್ಗೆ ನಡೆದಿರುವ ಎಲ್ಲ ಮಾತುಕತೆಗಳ ಪೂರ್ಣ ವಿವರಗಳು, 18-44 ವಯೋಗುಂಪಿನವರಿಗೆ ಲಸಿಕೆ ಕುರಿತಂತೆ ತಾರತಮ್ಯಕ್ಕೆ ಕಾನೂನಾತ್ಮಕ ಸಮರ್ಥನೆಗಳು, , ರಾಜ್ಯಗಳಿಗೆ  ಹೆಚ್ಚಿನ ಬೆಲೆಗಳು,ಹಾಗೂ ರಾಜ್ಯಗಳಿಗೆ ಮತ್ತು ಖಾಸಗಿಯವರಿಗೆ ಕೋಟಾಗಳು ಇವನ್ನು ಕೇಂದ್ರ ಸರಕಾರ ಹೇಗೆ ನಿರ್ಧರಿಸುತ್ತದೆ ಹಾಗೂ ನಿಭಾಯಿಸುತ್ತದೆ,  ಲಸಿಕೆಗೆಂದು ಬಜೆಟಿನಲ್ಲಿ ತೆಗೆದಿಟ್ಟ ರೂ.35,000 ಕೋಟಿಯನ್ನು ಹೇಗೆ ಖರ್ಚು ಮಾಡಲಾಗುತ್ತದೆ ಎಂಬಿತ್ಯಾದಿ ಹಲವು ವಿಷಯಗಳಿಗೆ  ವಿವರಗಳನ್ನು 15 ದಿನಗಳಲ್ಲಿ ಕೊಡಬೇಕು ಎಂದು ಕೇಂದ್ರ ಸರಕಾರಕ್ಕೆ ಹೇಳಿರುವುದೇ ಜೂನ್‍ 7ರ ತಿಪ್ಪರಲಾಗಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

“ಎಲ್ಲರಿಗೂ ಲಸಿಕೆ”  ಮತ್ತು “56 ಅಂಗುಲ”

(ಸತೀಶ ಆಚಾರ್ಯ, ಫೇಸ್‍ಬುಕ್)

***

ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಲದಲ್ಲಿ ತಮ್ಮ ರಣನೀತಿ ಫಲ ಕೊಟ್ಟಿಲ್ಲ. ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಾದ ಉತ್ತರಪ್ರದೇಶದಲ್ಲಿ ಕೊವಿಡ್‍ ಹಾವಳಿಯ ನಿರ್ವಹಣೆಯ ಬಗ್ಗೆ  ವಿಶೇಷವಾಗಿ ಟೀಕೆಗಳು ಬರುತ್ತಿವೆ. ಆದ್ದರಿಂದ ಸುಪ್ರಿಂ ಕೋರ್ಟಿನ ಸುತ್ತಿಗೆ ಮಾತ್ರವಲ್ಲ, ಇದು ಕೂಡ ಈ ಲಸಿಕೆ ನೀತಿಯಲ್ಲಿನ ಈ ತಿಪ್ಪರಲಾಗವನ್ನು ನಿರ್ಧರಿಸಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

(ಪಿ.ಮಹಮ್ಮದ್, ಆಂದೋಲನ)

***

ಮೇಲೆ ಹೇಳಿದಂತೆ, ಪ್ರಧಾನಿಗಳ ಭಾಷಣ ಏನೇ ಹೇಳಲಿ, ಸುಪ್ರಿಂ ಕೋರ್ಟ್ ಕೇಳಿರುವ ಮುಖ್ಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು  ಜೂನ್‍ 7ರ ಹೊಸ ನೀತಿ ನೆರವಾಗಬಹುದು, ಆದರೆ ಡಿಸೆಂಬರ್ 31ರೊಳಗೆ ಎಲ್ಲರಿಗೆ ಲಸಿಕೆ ಹಾಕುವುದನ್ನು ಖಾತ್ರಿಪಡಿಸಲು ರೂಪಿಸಿರುವ ಮಾರ್ಗಸೂಚಿಗಳ ಬಗ್ಗೆ  ತಿಳಿಸಬೇಕೆಂದು ಕೂಡ ಆ ಆದೇಶದಲ್ಲಿ ಹೇಳಲಾಗಿತ್ತು. ಪ್ರಧಾನ ಮಂತ್ರಿಗಳ ಭಾಷಣದಲ್ಲಿ ಇದರ ವಿವರವಿಲ್ಲ. ಸುಪ್ರಿಂ ಕೋರ್ಟಿಗೆ ನೀಡಬಹುದೇನೋ.

ಆದರೆ ಇದುವರೆಗೆ ಎರಡೂ ಡೋಸ್‍ ಲಸಿಕೆ ಪಡೆದವರ ಪ್ರಮಾಣ 4%ವನ್ನೂ ತಲುಪಿಲ್ಲ ಎಂಬುದು ಇದನ್ನು ಒಂದು ಮುಖ್ಯ ಪ್ರಶ್ನೆಯಾಗಿ ಮಾಡಿದೆ.

ಇತ್ತೀಚಿನ ಲಸಿಕೆ ಮಾಹಿತಿಗಳು ಹೀಗಿವೆ: ಪೂರ್ಣವಾಗಿ ಲಸಿಕೆ ಪಡೆದವರು: 3.5%; ಒಂದು ಡೋಸ್‍ ಪಡೆದವರು: 15.3%;

ಕನಿಷ್ಟ ಒಂದು ಡೋಸ್‍ ಪಡೆದವರು: ವಯಸ್ಸು 60+: 46.2%; 45+: 42.5%; 18+: 22.2%.

ಜೂನ್‍ 13 ರಂದು ಕೂಡ, ಹೊಸ ಸೋಂಕಿತರ ಸಂಖ್ಯೆ ಇಳಿದಿದ್ದರೂ, ಕೊವಿಡ್‍ ಸಾವುಗಳ ಸಂಖ್ಯೆ 3588, ಜಗತ್ತಿನಲ್ಲಿ ಅಂದು ದಾಖಲಾದ ಕೊವಿಡ್‍ ಸಾವುಗಳಲ್ಲಿ 33%.( ದಿ ಹಿಂದು, ಜೂನ್ 15).

ಲಸಿಕೆಗಳು ಕೊವಿಡ್‍ ವಿರುದ್ಧ ಸಮರದಲ್ಲಿ ಪ್ರಮುಖ ಅಸ್ತ್ರ ಎಂದು ಈಗ ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ ತಾನೇ?

ಬಾಬಾ ರಾಂದೇವ್ ಸರಕಾರದ ಕೇಂದ್ರೀಕೃತ ಲಸಿಕೀಕರಣವನ್ನು ಪ್ರಶಂಸಿಸುತ್ತ ತಾನೂ ಲಸಿಕೆ ಹಾಕಿಕೊಳ್ಳುವುದಾಗಿ ಹೇಳಿದ್ದಾರಂತೆ.

ಮೊದಲ ಅಲೆಯಲ್ಲೂ ಕೊರತೆ, ಎರಡನೇ ಅಲೆಯಲ್ಲೂ ಕೊರತೆಯೇ

20ಲಕ್ಷ ಕೋಟಿಯ ಪ್ಯಾಕೇಜ್ !!!           ಎಲ್ಲರಿಗೂ ಉಚಿತ ಲಸಿಕೆ!!!!
ನಿಧಿಗಳ ಕೊರತೆ                          ಲಸಿಕೆಗಳ ಕೊರತೆ

(ಅಲೋಕ್‍ ನಿರಂತರ್, ಫೇಸ್‍ಬುಕ್)

***

ಲಸಿಕೆ ನೀತಿಯ ಯು-ಟರ್ನಿಗೆ ಪ್ರಧಾನಿಗಳು ಕೊಟ್ಟ ಕಾರಣಗಳು ಎಷ್ಟು ನಿಜ ಎಂಬ  ಸಂದೇಹಕ್ಕೆ ಸಮಾಧಾನ ಇನ್ನೂ ಸಿಕ್ಕದಿರುವಾಗಲೇ, ಬಿಹಾರದಲ್ಲಿ, ಜೂನ್‍ 7ರಂದು (ಪ್ರಧಾನಿಗಳ ಭಾಷಣದ ದಿನವೇ ಎಂಬುದು ಕೇವಲ ಆಕಸ್ಮಿಕ) ಸಂಭವಿಸಿದ  ಕೊವಿಡ್‍ ಸಾವುಗಳ ಸಂಖ್ಯೆಯ ಬಗ್ಗೆ ಆಕ್ಷೇಪಗಳೆದ್ದು, ಅವುಗಳ ಮರು ಎಣಿಕೆ ನಡೆಸಿದಾಗ ಅದು 5424ರಿಂದ 9375ಕ್ಕೇರಿದೆ ಎಂದು ವರದಿಯಾಗಿದೆ.

ಸತ್ಯದ ಸಮಾಧಿಯ ಬಗ್ಗೆಯೂ….

“ಅವರು ಎಷ್ಟೊಂದು ಜಡ್ಡುಗಟ್ಟಿದ್ದಾರೆ ಎಂದರೆ

ಸತ್ಯವನ್ನು ಕೂಡ ಸರಿಯಾಗಿ ಸಮಾಧಿ ಮಾಡುತ್ತಿಲ್ಲ!”

(ಆರ್.ಪ್ರಸಾದ್‍, ಇಕನಾಮಿಕ್‍ ಟೈಮ್ಸ್)

***

ಆಕ್ಸಿಜನ್, ಆಸ್ಪತ್ರೆ ಬೆಡ್,  ಲಸಿಕೆ  ಇತ್ಯಾದಿಗಳ ಚರ್ಚೆ ನಡೆಯುತ್ತಿರುವಂತೆಯೇ ಪೆಟ್ರೋಲ್-ಡೀಸೆಲ್ ಬೆಲೆಗಳು ಆಳುವ ಮಂದಿಯ ಒಂದು ತೊಟ್ಟು ಕಣ್ನೀರೂ ಇಲ್ಲದೆಯೇ ಅಬಾಧಿತವಾಗಿ ಏರುತ್ತಲೇ ಸಾಗಿ 100ರೂ. ದಾಟಿಯೇ ಬಿಟ್ಟಿವೆ.

“ಉಚಿತ ಲಸಿಕೆ!!”        “ನಾನೇನೂ ತೆರಬೇಕಾಗಿಲ್ಲ?”

“ಇಲ್ಲ, ಸ್ವಲ್ಪ ಪೆಟ್ರೋಲ್‍ ಖರೀದಿಸು, ಸಾಕು!”

(ಅಲೋಕ್‍ ನಿರಂತರ್, ಫೇಸ್‍ಬುಕ್)

***

ಕಳೆದ ಆರು ವಾರಗಳಲ್ಲಿ 24ನೇ ಬಾರಿ ಪೆಟ್ರೋಲ್-ಡೀಸೆಲ್‍ ಬೆಲೆಗಳ ಏರಿಕೆಯ ನಂತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಹಲವೆಡೆಗಳಲ್ಲಿ ಲೀಟರಿಗೆ 100ರೂ. ದಾಟಿದೆ ಎಂದು ವರದಿಯಾಗಿದೆ.

“ನೆನಪಿರಲಿ, ಲಸಿಕೆ ಉಚಿತವಾಗಿದೆ”

(ಸತೀಶ ಆಚಾರ್ಯ, ಫೇಸ್ ಬುಕ್)

***

ಪೆಟ್ರೋಲ್-ಡೀಸೆಲ್ ಬೆಲೆಗಳು ಮಾತ್ರವಲ್ಲ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಏರಿವೆ. ಸಹಜವೇ.

ಅಡುಗೆ ಎಣ್ಣೆ ಬೆಲೆಗಳಂತೂ ಆಕಾಶಕ್ಕೆ ನೆಗೆದಿವೆ.

“ಕೆಲಸ ಕಳಕೊಂಡೆ”                    “ಪರ್ವಾಗಿಲ್ಲ, ಪಕೋಡಾ ಮಾರು”
“ಅದೇ ಕೆಲಸ ಮಾಡಿದ್ದು…”

( ಸಂದೀಪ ಅಧ್ವರ್ಯು, ಫೇಸ್‍ಬುಕ್)

***

ಸಗಟು ಬೆಲೆ ಸೂಚ್ಯಂಕ 12.94%ಕ್ಕೇರಿ ಹೊಸ ದಾಖಲೆ ಸೃಷ್ಟಿಸಿದರೆ, ಚಿಲ್ಲರೆ ಹಣದುಬ್ಬರ 6.3% ಕೇರಿದೆ. ಬಹುಪಾಲು ಪಟ್ರೋಲಿಯಂ ಉತ್ಪನ್ನಗಳು ಮತ್ತು ಅಡುಗೆ ಎಣ್ಣೆ ಬೆಲೆಗಳ ಏರಿಕೆಗಳೇ ಈ ಹಣದುಬ್ಬರಕ್ಕೆ ಕಾರಣ ಎನ್ನಲಾಗಿದೆ.

“ಪಕೋಡಾ ಅರ್ಥಶಾಸ್ತ್ರ”

(ಮಂಜುಲ್. ಫಸ್ಟ್ ಪೋಸ್ಟ್)

***

ಅಂದ ಹಾಗೆ ವ್ಯಂಗ್ಯಚಿತ್ರಕಾರ ಮಂಜುಲ್‍ ಅವರಿಗೆ ಟ್ವಿಟರ್ ನಿಂದ  ಸಂದೇಶ ಬಂದಿದೆಯಂತೆ- “ಭಾರತದ ಕಾನೂನು ಜಾರಿ ವಿಭಾಗದಿಂದ ‍ನಿಮ್ಮ ಟ್ವಿಟರ್‍ ಖಾತೆ ಭಾರತದ ಕಾನೂನಿನ ಉಲ್ಲಂಘನೆ ಮಾಡಿದೆ ಎಂಬ ದಾವೆ ಬಂದಿದೆ” ಎಂದು.

ಅಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು.

“ನ ಹಸೂಂಗಾ-ನ ಹಸ್ನೇ ದೂಂಗಾ”

ನಗೋದಿಲ್ಲಾ!- ನಗಲು ಬಿಡೋದಿಲ್ಲಾ!”

(ಪಂಜು ಗಂಗೊಳ್ಳಿ, ಫೇಸ್‍ ಬುಕ್)

***

ಈ ವ್ಯಂಗ್ಯಚಿತ್ರಕಾರರು ಇನ್ನೂ ಸ್ವಲ್ಪ ಮುಂದಾಲೋಚನೆ ಮಾಡಿದ್ದಾರೆ!

“ವ್ಯಂಗ್ಯಚಿತ್ರಕಾರನ ಮೇಲಷ್ಟೇ ಅಲ್ಲ, ಆತನ ಕಾರ್ಟೂನುಗಳನ್ನು

ನೋಡಿ ನಗುವವರ ಮೇಲೂ ಕ್ರಮ ಕೈಗೊಳ್ಳಿ!

(ಸುಭಾನಿ, ಡೆಕ್ಕನ್ ಕ್ರಾನಿಕಲ್)

ನಿಜ, ಈಗ ಜೋಕುಗಳು ಮತ್ತು ವಾಸ್ತವದ ನಡುವಿನ ಸೀಮಾರೇಖೆ ಕಾಣದಾಗಿರುವ ಸತ್ಯೋತ್ತರ ಕಾಲ. ಆದ್ದರಿಂದ, ನಕ್ಕೀರಾ, ಜೋಕೆ!

ಆದರೂ ಈ ಸಂದರ್ಭದಲ್ಲಿ, ಎರಡು ವಾರಗಳ ಹಿಂದೆ ಮದ್ರಾಸ್‍ ಹೈಕೋರ್ಟ್‍ ತಮಿಳುನಾಡಿನ ವ್ಯಂಗ್ಯಚಿತ್ರಕಾರ ಜಿ. ಬಾಲಾ ಅವರ ಮೇಲೆ ಹಾಕಿದ್ದ ಎಫ್‍.ಐ.ಆರ್. ರದ್ದು ಮಾಡಿದೆ ಎಂಬ ಸುದ್ದಿಯನ್ನು ನೆನಪಿಸಿಕೊಳ್ಳಬಹುದು. ಅವರು ಅಕ್ಟೋಬರ್ 23, 2017ರಂದು ತಿರುನಲ್ವೇಲಿ ಕಲೆಕ್ಟರ್‍ ಕಚೇರಿಯೆದುರು ಒಂದು ಕುಟುಂಬದ ನಾಲ್ಕು ಜನರು ಆತ್ಮದಹನ ಮಾಡಿಕೊಂಡದ್ದನ್ನು ಕೇಳಿ ಆಕ್ರೋಶದಿಂದ ಒಂದು ಕಾರ್ಟೂನ್ ರಚಿಸಿದ್ದರು. ಲೇವಾದೇವಿಗಾರನೊಬ್ಬನ ಕಿರುಕುಳದಿಂದ ಬೇಸತ್ತು ಆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿತ್ತು. ಆ ವ್ಯಂಗ್ಯಚಿತ್ರದಲ್ಲಿ  ಆಗಿನ ಮುಖ್ಯಮಂತ್ರಿಗಳು, ಜಿಲ್ಲಾ ಕಲೆಕ್ಟರ್‍ ಮತ್ತು ನಗರ ಪೋಲಿಸ್‍ ಕಮಿಷನರ್‍ ಗಳನ್ನು “ಸೂಕ್ತವಲ್ಲದ ರೀತಿ”ಯಲ್ಲಿ ಬಿಂಬಿಸಲಾಗಿದೆ ಎಂಬ ಕಲೆಕ್ಟರ್‍ ದೂರಿನ ಮೇಲೆ ಎಫ್‍.ಐ.ಆರ್. ಹಾಕಿ ಬಂಧಿಸಲಾಗಿತ್ತು. ಜಾಮೀನು ಪಡೆದ ಬಾಲಾ ಈ ಎಫ್‍.ಐ.ಆರ್. ರದ್ದು ಮಾಡಬೇಕೆಂದು ಮದ್ರಾಸ್‍ ಹೈಕೋರ್ಟಿನ ಮಧುರೈ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಅಪರಾಧಿತ್ವ ಎಂಬುದೇನೂ ಇಲ್ಲ,  ಪ್ರಜಾಪ್ರಭುತ್ವ ಬದುಕುಳಿಯಲು ವಿಚಾರ, ಅಭಿವ್ಯಕ್ತಿ  ಮತ್ತು ವಾಕ್‍ ಸ್ವಾತಂತ್ರ್ಯಗಳೇ ಬುನಾದಿಗಳು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *