‘ಕೆಟ್ಟ ಬ್ಯಾಂಕ್’ ನಿಂದ…. ‘ಕೆಟ್ಟ’ ಫೋಟೋಗ್ರಾಫರ್ ವರೆಗೆ

ಸೆಪ್ಟೆಂಬರ್ 22ರಂದು ಸರಕಾರ, ‘ರಾಷ್ಟ್ರೀಯ ಆಸ್ತಿ ಪುನರ‍್ರಚನಾ ಕಂಪನಿ(ಎನ್..ಆರ್.ಸಿ.ಎಲ್.) ಅಥವ ಹಣಕಾಸು ಆಡು ಭಾಷೆಯಲ್ಲಿಕೆಟ್ಟ ಬ್ಯಾಂಕ್ ರಚನೆಯನ್ನು ಪ್ರಕಟಿಸಿತು. ಸೆಪ್ಟೆಂಬರ್ 23ರಂದು ಅಸ್ಸಾಂನಲ್ಲಿ ಸರಕಾರದ ತೆರವು ಕಾರ್ಯಾಚರಣೆಯ ಸಮಯದಲ್ಲಿ ಒಬ್ಬ ಫೋಟೋಗ್ರಾಫರ್ ನೆಲದಲ್ಲಿ ಬಿದ್ದಿದ್ದ ವ್ಯಕ್ತಿಯ ಮೇಲೆ ನೆಗೆದಾಡುತ್ತ ಒದೆಯುತ್ತಿದ್ದ  ಫೋಟೋ ವೈರಲ್ ಆಯಿತು. ಇವೆರಡರ ನಡುವೆ ಸರಕಾರ ಕೋವಿಡ್‌ಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ ಕೊಡಲಾಗುವುದು ಎಂದೂ ಮತ್ತು ಪಿಎಂಕೇರ್ಸ್ ಸರಕಾರೀ ನಿಧಿಯಲ್ಲ ಎಂದೂ ನ್ಯಾಯಾಲಯಗಳಿಗೆ  ಹೇಳಿರುವುದು ಮತ್ತು ಗುಜರಾತಿನ ಒಂದು ಬಂದರಿನಲ್ಲಿ 3000 ಕೆಜಿ ಮಾದಕದ್ರವ್ಯಗಳ ಪತ್ತೆ ಗಮನ ಸೆಳೆಯಿತು. ಅದಕ್ಕಿಂತ ಹೆಚ್ಚಾಗಿ ಮುಖ್ಯಧಾರೆಯ ಮಾಧ್ಯಮಗಳಿಂದ ಬಗ್ಗೆ ಎಂದಿನ ಬೊಬ್ಬೆ ಕೇಳಬರಲಿಲ್ಲ ಎಂಬುದು ಗಮನ ಸೆಳೆಯಿತು.

***

ಸೆಪ್ಟೆಂಬರ್ 23 ರಂದು ಅಸ್ಸಾಂನ ಸಿಪಾಜ್ಹರ್ ನಿಂದ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತು. ಮೊದಲು ಒಬ್ಬ ವ್ಯಕ್ತಿ ಕೈಯಲ್ಲೊಂದು ಕೋಲು ಹಿಡಿದು ಸಶಸ್ತ್ರ ಪೋಲೀಸರತ್ತ ಧಾವಿಸುತ್ತಾನೆ, ಪೋಲೀಸರು ಅವನ ಮೇಲೆ ಮುಗಿ ಬೀಳುತ್ತಾರೆ. ಗುಂಡಿನ ಸದ್ದು ಕೇಳಿಸುತ್ತದೆ… ನಂತರ….. ಒಬ್ಬ ವ್ಯಕ್ತಿ ನಿಶ್ಚಲವಾಗಿ ಬಿದ್ದಿದ್ದಾನೆ, ಅವನ ಎದೆಯ ಮೇಲೆ  ರಕ್ತ ಸುರುಳಿಸುರುಳಿಯಾಗಿ ಹರಡುತ್ತಿದೆ. ಆತ ಪ್ರಾಣ ಬಿಟ್ಟಿರಬಹುದು, ಅಥವ ಬಿಡುತ್ತಿರಬಹುದು. ಆದರೂ  ಒಬ್ಬ  ಫೋಟೋಗ್ರಾಫರ್  ಆ ವ್ಯಕ್ತಿಯ ಮೇಲೆ ನೆಗೆದಾಡುತ್ತ ಒದೆಯುತ್ತಿದ್ದಾನೆ.

ಇದನ್ನು ಪಿ.ಮಹಮ್ಮದ್‍ ಅವರು ಗ್ರಾಫಿಕ್‍ ಆಗಿ ಚಿತ್ರಿಸಿದ್ದಾರೆ. ತನ್ನ ಒಡೆಯನ ಕೃತ್ಯಕ್ಕೆ ಕ್ಯಾಮರಾಕ್ಕೂ ಕಣ್ಣೀರು!

(ಶೀರ್ಷಿಕೆಯ ವ್ಯಂಗ್ಯಚಿತ್ರ- ಪಿ.ಮಹಮ್ಮದ್, ವಾರ್ತಾಭಾರತಿ)

***

ಇನ್ನೊಬ್ಬ ವ್ಯಂಗ್ಯಚಿತ್ರಕಾರರಿಗೆ ಈ ಸುದ್ದಿ ದಕ್ಷಿಣ ಆಫ್ರಿಕಾದ ಫೋಟೋ-ಪತ್ರಕರ್ತ ಕೆವಿನ್‍ ಕಾರ್ಟರ್ ನ ಪ್ರಖ್ಯಾತ ಫೋಟೋವನ್ನು ನೆನಪಿಗೆ ತಂದಿದೆ.

ಅಸ್ಸಾಂ ಗೋಲೀಬಾರ್: ಬಲಿಯಾಗಿ ಬಿದ್ದ ವ್ಯಕ್ತಿಯ ಮೇಲೆ ನೆಗೆದಾಡಿದ ಕ್ಯಾಮರಾವ್ಯಕ್ತಿ
ಸರಕಾರೀ ಕರ್ತವ್ಯದ ಮೇಲಿದ್ದಾನೆ

(ಕೆವಿನ್ ಕಾರ್ಟರ್ ಕ್ಷಮೆ ಕೋರಿ)

ಆರ್. ಪ್ರಸಾದ್, ಇಕನಾಮಿಕ್‍ ಟೈಮ್ಸ್,      ಕೆವಿನ್‍ ಕಾರ್ಟರ್ ಪ್ರಶಸ್ತಿ-ವಿಜೇತ ಪೋಟೋ-ರಣಹದ್ದು ಮತ್ತು ಮಗು

ಬರಪೀಡಿತ ಸುಡಾನ್‍ನಲ್ಲಿ 1993ರಲ್ಲಿ ಆತ ಕ್ಲಿಕ್ಕಿಸಿದ ಫೋಟೋ- ಎಲುಬುಗೂಡಿನ ಹಂದರವಾಗಿ ಬಿಟ್ಟ ಹಸುಳೆಯೊಂದು ಹತ್ತಿರದ ಆಹಾರ ಕೇಂದ್ರ ತಲುಪಲು ಹೆಣಗುತ್ತಿದೆ, ಪಕ್ಕದಲ್ಲೇ ಒಂದು ರಣ ಹದ್ದು ತನ್ನ ಬೇಟೆ ಪಡೆಯಲು ಕಾದು ಕೂತಿದೆ.  ಅದು ರೆಕ್ಕೆ ಬಿಚ್ಚಬಹುದೆಂದು 20 ನಿಮಿಷ ಈ ದೃಶ್ವವನ್ನು ಕಾದು ನೋಡಿ, ಕೊನೆಗೆ ಆತ ಈ ಫೋಟೋ ತೆಗೆದಿದ್ದನಂತೆ. ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಆ ಫೋಟೋ ಇಡೀ ಜಗತ್ತಿನ ಗಮನ ಸೆಳೆಯಿತು. ಮರುವರ್ಷ ಕಾರ್ಟರ್‌ಗೆ ಇದಕ್ಕೆ ಅತ್ಯುನ್ನತ ಪುಲಿಟ್ಝರ್ ಪ್ರಶಸ್ತಿ ಸಿಕ್ಕಿತು. ಆದರೆ ಅದಾದ ಕೆಲವೇ ದಿನಗಳಲ್ಲಿ 33 ವರ್ಷದ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡ.

ಕಾರ್ಟರ್ ಖ್ಯಾತಿ ಗಳಿಸಲು ಒಂದು ದೃಶ್ಯಕ್ಕಾಗಿ ಕಾಯುವ ಬದಲು ಆ ಮಗುವಿನ ನೆರವಿಗೆ ಧಾವಿಸಬಹುದಿತ್ತು ಎಂದು ಹಲವರು ಆಗ ನೈತಿಕ ಪ್ರಶ್ನೆ ಎತ್ತಿದ್ದರಂತೆ. ಆತನ ಆತ್ಮಹತ್ಯೆಗೆ ಇದು ಕಾರಣವಾಗಿರಬಹುದು ಎಂಬುದು ಹಲವರ ಊಹೆ. ಆತನ ದೇಹದ ಬಳಿಯಿದ್ದ ಚೀಟಿಯಲ್ಲಿ “ನನಗೆ ನಿಜಕ್ಕೂ ಖೇದವೆನಿಸುತ್ತದೆ. ಬದುಕಿನ ನೋವು ಎಂತಹ ಮಟ್ಟಕ್ಕೆ ಸಂತೋಷದ ಮೇಲೆ ಸವಾರಿ ಮಾಡುತ್ತದೆಂದರೆ ಆ ಸಂತೋಷವೇ ಅಸ್ತಿತ್ವದಲ್ಲಿ ಇರುವುದಿಲ್ಲ”  ಎಂದು ಬರೆದಿದ್ದನಂತೆ.

ಆದರೆ ಆತನ ಸೋದರಿ ಇದನ್ನು ಒಪ್ಪುವುದಿಲ್ಲ. ಕೆವಿನ್ ವರ್ಣದ್ವೇಷಿ ದಕ್ಷಿಣ ಆಫ್ರಿಕಾದಲ್ಲಿನ ಹಿಂಸಾಚಾರವನ್ನು ಕಣ್ಣಾರೆ ಕಂಡು ಮರುಗಿದವನು. ಆ ಹಿಂಸಾಚಾರ ಮತ್ತು ಜಗತ್ತಿನ ಇತರ ಹಿಂಸಾಚಾರಗಳನ್ನು ತನ್ನ ಮೂವರು ಮಿತ್ರರೊಂದಿಗೆ ಕ್ಯಾಮರಾದಲ್ಲಿ ಸೆರೆ ಹಿಡಿದು ಜಗತ್ತಿಗೆ ತೋರಿಸುತ್ತಿದ್ದವನು. “ಹಲವಾರು ಪ್ರಶ್ನೆಗಳು ಮತ್ತು ಅನ್ಯಾಯಗಳಿಗೆ ಜಗತ್ತಿನ ಕಣ್ಣು ತೆರೆಸುವ ಆತನ ಮಿಶನ್‍ ನ ನೋವು ಕೊನೆಗೆ ಅವನನ್ನೇ ನುಂಗಿತು” ಎಂದು ಆಕೆ ಹೇಳಿದ್ದಳಂತೆ.

ಇರಬಹುದೇನೋ. ಆತ ಪೋಟೋ ಪತ್ರಕರ್ತ ಮತ್ತು ಕುಣಿದಾಡಲಿಲ್ಲ. ಆದರೆ ಅಸ್ಸಾಂನ ಈ ಫೋಟೋಗ್ರಾಫರ್ ದರ್ರಾಂಗ್‍ ಜಿಲ್ಲಾ ಆಡಳಿತದ ಛಾಯಾಚಿತ್ರಗ್ರಾಹಕ. ಪತ್ರಕರ್ತನಲ್ಲ. ತೆರವು ಕಾರ್ಯಾಚರಣೆಯ ಫೋಟೋ ತೆಗೆಯಲಿಕ್ಕಾಗಿ ಸಶಸ್ತ್ರ ಪೋಲೀಸ್‍ ಪಾರ್ಟಿಯ ಭಾಗವಾಗಿ ಬಂದವನು. ಕುಣಿದಾಡಿದ. ಬಹುಶಃ ಈ ಇಬ್ಬರ ನಡುವಿನ ವ್ಯತ್ಯಾಸ ಇಷ್ಟೇ ಅಲ್ಲ.

***

ಆದರೆ ಈ ಫೋಟೋಗ್ರಾಫರ್ ಹಾಗೂ ನಮ್ಮ ‘ಮುಖ್ಯಧಾರೆ’ಯ ಬಹಳಷ್ಟು ಪತ್ರಕರ್ತರ ನಡುವೆ ಮಾತ್ರ ಬಹಳ ವ್ಯತ್ಯಾಸವೇನೂ ಇದ್ದಂತಿಲ್ಲ.

ಆತ “ಕಾನೂನುಬಾಹಿರ ವಲಸೆಗಾರ” ರನ್ನು ಅವರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಸರಕಾರೀ ಜಮೀನಿನಿಂದ ತೆರವು ಮಾಡಬೇಕಾಗಿದೆಯೆಂಬ ಅಸ್ಸಾಂ ಸರಕಾರದ ಕಾರ್ಯಾಚರಣೆಯನ್ನು ಚಿತ್ರೀಕರಿಸಲೆಂದೇ ಹೋದವನು. ಆದ್ದರಿಂದ ಆಸ್ಥಾನ ಪತ್ರಕರ್ತರ (ಗೋದಿ ಮೀಡಿಯಾ) ಪಂಗಡಕ್ಕೇ ಸೇರಿಸಬಹುದಾದವನು.

ಸತೀಶ ಆಚಾರ್ಯ, ಫೇಸ್‍ಬುಕ್

‘ಗೋದಿ ಮೀಡಿಯಾ’ ಎನಿಸಿಕೊಂಡವರು ಸತ್ಯದ ಎದೆಗೆ ಕಾಲಿಟ್ಟು ಎಗರಾಡಿದರೆ, ಈತ ‘ಕಾನೂನು ಮುರುಕ’  ಎಂದು ಸರಕಾರ ಬಗೆದಿರುವ  ವ್ಯಕ್ತಿಯ ಎದೆಯ ಮೇಲೆ, ಆತ ಆಗಲೇ ಪ್ರಾಣ ಬಿಟ್ಟಿರಬಹುದು, ಅಥವ ಬಿಡುತ್ತಿರಬಹುದು, ನೆಗೆದಾಡಿದರೆ ಅದೇ ದೇಶಭಕ್ತಿ  ಎಂದು ಭಾವಿಸಿರಬಹುದು.

***

ಹೌದು, ಈ ವ್ಯಂಗ್ಯಚಿತ್ರಕಾರರು ಸೂಚಿಸುವಂತೆ, ದೇಶದ ಹಿರಿಯ ಆಡಳಿತಗಾರರೇ  50ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಆಗಿನ ಪೂರ್ವ ಪಾಕಿಸ್ತಾನದಿಂದ (ನಿರಾಶ್ರಿತರಾಗಿ) ಬಂದವರು ಗೆದ್ದಲುಹುಳಗಳು ಎಂದು ವರ್ಣಿಸಿರುವಾಗ ಅವನ್ನು ಹೊಸಕಿ ಹಾಕುವ ಕೆಲಸದಲ್ಲಿ ಭಾಗಿಯಾಗಿದ್ದೇನೆಂದು ಆತ ಕುಣಿದಾಡಿರಬಹುದೇ?

“ಗೆದ್ದಲುಹುಳಗಳನ್ನು ಹೊರಗೆಸೆಯಿರಿ!” ಕರೆಯ ಬೆಳಕಿನಲ್ಲಿ

ಸಜಿತ್ ಕುಮಾರ್, ಡೆಕ್ಕನ್‍ ಹೆರಾಲ್ಡ್

ಬಹಳಷ್ಟು ಆಕ್ರೋಶ ವ್ಯಕ್ತಗೊಂಡಾಗ ಈ ಫೋಟೋಗ್ರಾಪರನ್ನು ಬಂಧಿಸಿದ್ದಾರಂತೆ-ಪೋಲಿಸರಲ್ಲ, ಸಿಐಡಿಯವರು. ಆದರೆ ಇದರ ಹಿಂದಿರುವ ಮನೋಭಾವ…? ಈ ಕಾರ್ಯಾಚರಣೆಯನ್ನು ಪೋಲಿಸರು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಹರ್ಷಪಡಿಸಿದ ಮುಖ್ಯಮಂತ್ರಿಗಳು ಈ ಘಟನೆಯ ಬಗ್ಗೆ ಏನೂ ಹೇಳಲಿಲ್ಲವಂತೆ.

“ಈತ ಅಸ್ಸಾಂನಲ್ಲಿ ಇಲ್ಲ. ನಿಮ್ಮ ಸುತ್ತಮುತ್ತಲೇ ಇದ್ದಾನೆ. ನಿಮ್ಮ ನೆರೆಯಲ್ಲಿದ್ದಾನೆ, ನಿಮ್ಮಸಹಯೋಗಿ ಆಗಿದ್ದಾನೆ. ನಿಮ್ಮ ಶಾಲೆ, ಕಾಲೇಜು ಅಥವ ವಾಟ್ಸ್ ಆಪ್‍ ಗುಂಪಿನಲ್ಲಿದ್ದಾನೆ. ಈತ ಒಬ್ಬ ವ್ಯಕ್ತಿಯಲ್ಲ. ಈತ ಎಲ್ಲೆಲ್ಲೂ ಸುತ್ತಮುತ್ತಲೂ ಇದ್ದಾನೆ. ನೀವು ಈತನನ್ನು ಪ್ರತಿದಿನ ನೋಡುತ್ತಿರುತ್ತೀರಿ. ಈತ ನ್ಯೂಇಂಡಿಯಾದ ಉತ್ಪನ್ನ” ಎಂದೊಬ್ಬರು. ಖೇದಭರಿತ ಟ್ವೀಟ್‍ ಮಾಡಿದ್ದಾರೆ (ಜಾಯ್@ಜಾಯ್ ದಾಸ್)

ಬಹುಶಃ ಇದು ಆತನ ನೆಗೆದಾಟವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಮಾತು ಮತ್ತು ಈ ಮೇಲೆ ಪುಲಿಟ್ಝರ್ ಪ್ರಶಸ್ತಿ ವಿಜೇತ ಫೋಟೋ-ಪತ್ರಕರ್ತನ ಕ್ಷಮೆ ಕೋರಿದ್ದು ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳಲೂ ಸಹಾಯ ಮಾಡಬಹುದು.

***

ಪಿಎಂಕೇರ್ಸ್ ಸರಕಾರೀ ನಿಧಿಯಲ್ಲ, ಒಂದು ಚಾರಿಟೇಬಲ್‍ ಟ್ರಸ್ಟ್ ಮಾತ್ರ ಎಂದು ಪ್ರಧಾನಮಂತ್ರಿಗಳ ಕಚೇರಿಯ ಅಧಿಕಾರಿಗಳು ದಿಲ್ಲಿ ಹೈಕೋರ್ಟಿಗೆ ತಿಳಿಸಿದ್ದಾರೆ.

ಇದರೊಂದಿಗೇ ಬಂದಿರುವ ಇನ್ನೊಂದು ಸುದ್ದಿ- ಕೋವಿಡ್‍ಗೆ ಬಲಿಯಾದವರ ಕುಟುಂಬಗಳಿಗೆ 50,000ರೂ. ಕೊಡಲಾಗುವುದು ಎಂದು ಕೇಂದ್ರ ಸರಕಾರದ ಪರವಾಗಿ ಸುಪ್ರಿಂ ಕೋರ್ಟಿನಲ್ಲಿ ಹೇಳಲಾಗಿದೆ.

ಆದರೆ ಇದನ್ನು ರಾಜ್ಯ ಸರಕಾರಗಳು ಕೊಡುತ್ತವೆ ಎಂದೂ ಸೂಚಿಸಲಾಗಿದೆ. ಆದ್ದರಿಂದ ಪಿಎಂಕೇರ್ಸ್‍ ಪ್ರಶ್ನೆಯೇ ಬರುವುದಿಲ್ಲ.

ಪಿ.ಮಹಮ್ಮದ್, ವಾರ್ತಾಭಾರತಿ

***

ಆದರೂ ಪಿಎಂ ಕೇರ್ ಮಾಡಿಯೇ ಮಾಡುತ್ತಾರೆ – ಕ್ರೆಡಿಟ್‍ ಬಾಚಿಕೊಳ್ಳಲು ತೊಂದರೆಯೇನಿಲ್ಲ.

ಪಂಜು ಗಂಗೊಳ್ಳಿ, ಫೇಸ್‌ಬುಕ್

***

ಗುಜರಾತಿನಲ್ಲಿರುವ  ಮುಂದ್ರಾ ಬಂದರಿನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಸುಮಾರು 3 ಸಾವಿರ ಕೆಜಿಯಷ್ಟು ಹೆರಾಯಿನ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದು ಅದರ ಅಂದಾಜು ಮೌಲ್ಯ ರೂ. 19ಸಾವಿರ ಕೋಟಿಯಷ್ಟು ಎನ್ನಲಾಗಿದೆ. ಆದರೂ ಈ ಮೊದಲು ಮುಂಬೈಯಲ್ಲಿ 60 ಗ್ರಾಂ ನಷ್ಟು ಮಾದಕದ್ರವ್ಯ ಸಿಕ್ಕಾಗ ಕಾರ್ಪೋರೇಟ್‍ ಟಿವಿ ಮಾಧ್ಯಮಗಳಲ್ಲಿ ಎದ್ದ ಭಾರೀ ಗದ್ದಲ ಈ ಬಾರಿ ಕಾಣಿಸಿಲ್ಲ ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಪಿ.ಮಹಮ್ಮದ್, ವಾರ್ತಾಭಾರತಿ

ಹೌದು, ಮುಂದ್ರಾ ಬಂದರು ಅದಾನಿ ಮಾಲಕತ್ವದಲ್ಲಿದೆ. ಮತ್ತು ….ಗುಜರಾತಿನಲ್ಲಿದೆ.

ಇರಲಿ ಬಿಡಿ. ಬಾಲಿವುಡ್ 30 ಗ್ರಾಂ ಡ್ರಗ್ಸ್‌ನಲ್ಲಿ ಇರುವ
ಟಿ.ಆರ್.ಪಿ. 3000 ಕೆ.ಜಿ.ಯಲ್ಲಿ ಎಲ್ಲಿಂದ ಬರಬೇಕು

ಇದು ಬೇರೆಯೇಹೆರೋಯಿನ್ಕೇಂದ್ರಿತ
ಸ್ಟೋರಿ. ಸರ್ಹಿರೋಯಿನ್ಕೇಂದ್ರಿತ ಅಲ್ಲ..!

            ಕೀರ್ತಿಶ್, ಬಿಬಿಸಿ ನ್ಯೂಸ್‍ ಹಿಂದಿ                      ಸುಭಾನಿ, ಡೆಕ್ಕನ್‍ ಕ್ರಾನಿಕಲ್

***

ಹಿಂದಿನ  ಸರಕಾರದ ಐದು ವರ್ಷಗಳಲ್ಲಿ ಬ್ಯಾಂಕುಗಳ ಸುಸ್ತಿ ಸಾಲಗಳ ಮೊತ್ತ 5ಲಕ್ಷ ಕೋಟಿ ರೂ. ಈ ಸರಕಾರದ ಐದು ವರ್ಷಗಳಲ್ಲಿ ಅದಕ್ಕೆ ಸೇರಿದ್ದು 13ಲಕ್ಷ ಕೋಟಿ ರೂ. ಅಂದರೆ 2014ರಲ್ಲಿದ್ದ 5 ಲಕ್ಷ ಕೋಟಿಯಿಂದ 2020ರಲ್ಲಿ 18 ಲಕ್ಷ ಕೋಟಿಗೇರಿದೆ. ಮೂರೂವರೆ ಪಟ್ಟಿಗಿಂತಲೂ ಹೆಚ್ಚು. ಆದ್ದರಿಂದ ತನ್ನ ಮುಂದೆ ನಾಲ್ಕು ಕಾರ್ಯಭಾರಗಳಿದ್ದವು ಎಂದು ಹೇಳುತ್ತ ಅದಕ್ಕಾಗಿ ಹಣಕಾಸು ಮಂತ್ರಿಗಳು ‘ಬ್ಯಾಡ್‍ ಬ್ಯಾಂಕ್‍ ಅಥವ ಕೆಟ್ಟ ಬ್ಯಾಂಕ್‍ ರಚನೆಯನ್ನು ಪ್ರಕಟಿಸಿದ್ದಾರೆ.

ನಾಲ್ಕುಆರ್ಗಳು ಚಿರಾಯುವಾಗಲಿ

ಪಂಜು ಗಂಗೊಳ್ಳಿ, ಬಿಸಿನೆಸ್‍ ಇಂಡಿಯ

***

ನಮ್ಮ ದೇಶದಲ್ಲಿ ಬ್ಯಾಂಕುಗಳು ಕೊಟ್ಟ ಸಾಲಗಳು ವಸೂಲಾಗದಿರುವುದು ಅಥವ “‘ಕೆಲಸ ಮಾಡದ ಆಸ್ತಿಗಳು’ (ಎನ್‍.ಪಿ.ಎ.) ಆಗುವುದು ಒಂದು ವಿಲಕ್ಷಣ ಸಮಸ್ಯೆ. ಏಕೆಂದರೆ, ಸರಕಾರ ಬ್ಯಾಂಕಿಂಗ್ ವ್ಯವಸ್ಥೆಯನ್ನು ದೊಡ್ಡ ವ್ಯವಹಾರಸ್ಥರಿಗೆ ದೊಡ್ಡ ಪ್ರಮಾಣದಲ್ಲಿ ಅಯಾಚಿತ ವರ್ಗಾವಣೆಗಳನ್ನು ನಡೆಸಲು ಒಂದು ಸಾಧನವಾಗಿ ಬಳಸಿಕೊಂಡಿದೆ. ಈ ‘ಕೆಟ್ಟ ಸಾಲ’ಗಳಲ್ಲಿ ಬಹುಪಾಲು ಪ್ರೀತಿಪಾತ್ರ ಕಾರ್ಪೊರೇಟ್‌ಗಳಿಗೆ ಕೊಟ್ಟ ದೊಡ್ಡ ಸಾಲಗಳು, ಅವರಿಗೆ  ಅದನ್ನು ತೀರಿಸಲು ಸಾಧ್ಯವಿದೆ. ಆದರೆ ತೀರಿಸಬೇಕಾಗಿಲ್ಲ ಎಂದೇ ಬಗೆದಿದ್ದಾರೆ. ವ್ಯವಹಾರಗಳಲ್ಲಿ ನಷ್ಟಗಳಾಗಿವೆ ಎಂಬುದು ಬಾಕಿಯಾಗಲು ಕೊಡುವ ಸಾರ್ವಜನಿಕ ಸಮರ್ಥನೆಗಳು. ಆದರೆ ಹಲವಾರು ಪ್ರಕರಣಗಳಲ್ಲಿ, ಬ್ಯಾಂಕುಗಳಿಗೆ ಬರಬೇಕಾದ ಬಾಕಿಗಳು ಬರದೇ ಹೋದರೂ, ಆ ಸಾಲ ಪಡೆದವರು ಮಾತ್ರ ತಮ್ಮ ಸಂಪತ್ತು ಹೆಚ್ಚಿಸಿಕೊಂಡುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಒಬ್ಬ ಪರಿಣಿತರು ಹೇಳಿದ್ದಾರೆ.

ನಾನೂ ಪ್ರಾಮಾಣಿಕವಾಗಿ ಹೇಳುತ್ತೇನೆ.
ನಾನೊಬ್ಬ ಕೆಟ್ಟ ಗ್ರಾಹಕ, ನನಗೆ ಒಂದು ಕೆಟ್ಟ ಸಾಲ ಬೇಕು

ಆರ್. ಪ್ರಸಾದ್, ಫೇಸ್‍ಬುಕ್

***

ಈ ಬ್ಯಾಡ್‍ ಬ್ಯಾಂಕ್‍’ ನಿಜವಾಗಿಯೂ ಎನ್‍.ಪಿ.ಎ.ಗಳ ಅಥವ ಕೆಟ್ಟಸಾಲಗಳ ಸಮಸ್ಯೆಯನ್ನು ಪರಿಹರಿಸುತ್ತದೆಯೇ?

ಈತ ಹೊರೆಯನ್ನು ಹೊರುತ್ತಾನೆ. ಈತ ವಿಫಲನಾದರೆ, ನಮ್ಮ ಬಳಿ ಬೇರೊಬ್ಬ ಇದ್ದಾನೆ!”

ಯಾರು?”                     “ನೀನು!”

ಅಲೋಕ್‍ ನಿರಂತರ್, ಫೇಸ್‍ಬುಕ್

ಹೌದು, ತೆರಿಗೆದಾರರಂತೂ ಇದ್ದಾರೆ, ಕೆಟ್ಟಸಾಲಗಳನ್ನು ಹೊರಲು. ಏಕೆಂದರೆ ಸರಕಾರ ಈ ಕೆಟ್ಟ ಬ್ಯಾಂಕ್‍ ರಚನೆಯ ಮೂಲಕ ಕೊಟ್ಟಿರುವ ಗ್ಯಾರಂಟಿಯನ್ನು ಜನಗಳ ಮೇಲೆ ತೆರಿಗೆ ಹಾಕಿ ವಸೂಲು ಮಾಡುತ್ತದೆ ತಾನೇ?

***

ಈ ನಡುವೆ ಈ ಸರಕಾರವನ್ನು ನಡೆಸುವ ಪಕ್ಷದ ರಾಜಕೀಯ ಎನ್‍.ಪಿ.ಎ.ಗಳು(‘ಕೆಲಸ ಮಾಡದ ಆಸ್ತಿಗಳು) ಕೂಡ ಹೆಚ್ಚುತ್ತಿವೆ ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು

ಇನ್ನೊಂದು ಎನ್.ಪಿ.. ಇನ್ನೊಂದು ಮುಖ ಬದಲಾವಣೆ

ಸಂದೀಪ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯಾ

ಮುಂದಿನ ಚುನಾವಣೆಗಳಲ್ಲಿ ಕೆಲಸಕ್ಕೆ ಬರದ ಆಸ್ತಿಗಳಿವು ಎನ್ನುವುದಕ್ಕಿಂತ  ಹೊರೆಯಾಗಬಹುದು ಎಂದು ಮುಖ್ಯಮಂತ್ರಿಗಳ ಬದಲಾವಣೆ ಎನ್ನಲಾಗುತ್ತಿದೆ. ಕರ್ನಾಟಕದ ನಂತರ ಗುಜರಾತಿನ ಸರದಿ.

ಈ ಸಾಲಿಗೆ ಮುಂದೆ ಸೇರುವವರು ಎಲ್ಲಿಯ ಮುಖಗಳು, ಹರಿಯಾಣ ? ತ್ರಿಪುರ? ಈ ಬಾರಿ ಕಾಂಗ್ರೆಸ್‍ ನವರೂ ಅವರನ್ನೇ ಹಿಂಬಾಲಿಸುತ್ತಾರಂತೆ-ಪಂಜಾಬಿನ ನಂತರ ರಾಜಸ್ತಾನ? ಛತ್ತೀಸ್‍ಗಡ? ಕಾರ್ಟೂನಿಸ್ಟರು ಕಾಯುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *