ವೇದರಾಜ ಎನ್ ಕೆ
ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಸಂಕಟ, ಏರ್ ಇಂಡಿಯ ಮಾರಾಟದ ವಿಲಕ್ಷಣ ಅರ್ಥಶಾಸ್ತ್ರ ಮತ್ತು ಮಂತ್ರಿಮಗನ ಎಸ್.ಯು.ವಿ. ಮಾದರಿಯ ಬೆಲೆಯೇರಿಕೆ, ನಿರುದ್ಯೋಗಗಳ ಮತ್ತು ‘ಗೋದೀ ಮೀಡಿಯಾ’ದ ಅಟಾಟೋಪಗಳು, ಇವಕ್ಕೆಲ್ಲ ಮುಕುಟವಿಟ್ಟಂತೆ ವಾಹನಗಳಿಗೆ ಭಾರತೀಯ ಸಂಗೀತ ವಾದ್ಯಗಳ ಹಾರನ್ ಕಡ್ಡಾಯ- ಈ ವಾರದ ಕಥನಗಳು.
ಅಕ್ಟೋಬರ್ 10ರ ವೇಳೆಗಷ್ಟೇ ಕೇಂದ್ರ ವಿದ್ಯುತ್ ಮಂತ್ರಿಗಳು ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎಂದು ಹೇಳಿದ್ದರು. ಆದರೆ ಅಕ್ಟೋಬರ್ 12 ರ ವೇಳೆಗೆ ಪ್ರಧಾನ ಮಂತ್ರಿ ಕಚೇರಿ ದೇಶದಲ್ಲಿ ಕಲ್ಲಿದ್ದಲು ಬಿಕ್ಕಟ್ಟಿನ ಬಗ್ಗೆ ಚರ್ಚಿಸುತ್ತದೆ ಎಂಬ ಸುದ್ದಿ ಬಂತು.
ಎಲ್ಲಿದೆ ಕಲ್ಲಿದ್ದಲು ಕೊರತೆ?
(ಅಲೋಕ್ ನಿರಂತರ್, ಫೇಸ್ ಬುಕ್)
ಈ ನಡುವೆ ರಾಜಸ್ಥಾನ, ಜಾರ್ಖಂಡ್, ಬಿಹಾರ ಮತ್ತು ಪಂಜಾಬ್‌ನಲ್ಲಿ ತೀವ್ರ ವಿದ್ಯುತ್ ಕಡಿತ ಹಲವು ಗಂಟೆಗಳ ವರೆಗೆ ಹೆಚ್ಚಿದೆ; ಮಹಾರಾಷ್ಟ್ರ, ಕೇರಳ ಮತ್ತು ದೆಹಲಿ ಸೇರಿದಂತೆ ಇತರ ಹಲವೆಡೆಗಳಲ್ಲಿ ಸಂಪೂರ್ಣ ಕತ್ತಲು ಆವರಿಸುವ(ಬ್ಲಾಕ್ ಔಟ್) ಭೀತಿ ಉಂಟಾಗಿದೆ. ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ವರದಿಯ ಪ್ರಕಾರ, 16 ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ದಾಸ್ತಾನು ಸೊನ್ನೆಯಾಗುತ್ತಿದೆ, 76 ಕಡೆಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳು ನಾಲ್ಕು ದಿನಗಳಿಗಿಂತ ಕಡಿಮೆ ಕಲ್ಲಿದ್ದಲು ದಾಸ್ತಾನು ಹೊಂದಿವೆ, ಆಮದು ಮಾಡಿದ ಕಲ್ಲಿದ್ದಲನ್ನು ಅವಲಂಬಿಸಿರುವ ಟಾಟಾಗಳ ಮುಂದ್ರಾದಲ್ಲಿನ ಎಲ್ಲ ಸ್ಥಾವರಗಳು ಮುಚ್ಚಿವೆ ಎಂದು ವರದಿಯಾಗಿದೆ.
ಮಂತ್ರಿಗಳು ಹೇಳಿದ್ದೇನೋ ಸರಿ-ದೇಶದಲ್ಲಿ ಕಲ್ಲಿದ್ದಲು ಸಂಪನ್ಮೂಲದ ಕೊರತೆಯಿಲ್ಲ, ಗಣಿಗಾರಿಕೆಯ ಸಾಮರ್ಥ್ಯದ ಕೊರತೆಯೂ ಇಲ್ಲ-ಆದರೆ ಯೋಜನೆಯ, ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವಾಲಯಗಳ ನಡುವೆ ಸಮನ್ವಯದ ಕೊರತೆ ಮಾತ್ರ ದಂಡಿಯಾಗಿದೆ, ಜತೆಗೆ ಎಲ್ಲವನ್ನೂ ಮಾರುಕಟ್ಟೆಯೇ ನೋಡಿಕೊಳ್ಳುತ್ತದೆ, ಸರಕಾರವೇನೂ ಮಾಡಬೇಕಿಲ್ಲ ಎಂಬ ಮನೋಭಾವವೇ ಈ ಬಿಕ್ಕಟ್ಟಿಗೆ ಕಾರಣ, ವಿದ್ಯುತ್ತಿನಂತಹ ಮೂಲರಚನೆಗಳು ವಿಜ್ಞಾನ-ತಂತ್ರಜ್ಞಾನವನ್ನೇ ಹೆಚ್ಚಾಗಿ ಅವಲಂಬಿಸಿರುತ್ತವೆ, ಬಂಡವಾಳಶಾಹೀ ಮಾರುಕಟ್ಟೆ ನಿಯಮಗಳನ್ನಲ್ಲ ಎನ್ನುತ್ತಾರೆ ಪರಿಣಿತರು.
***
ಆದರೆ ಸರಕಾರ ಒಂದು ಪರಿಣತಿಯನ್ನು ಮಾತ್ರ ಚೆನ್ನಾಗಿ ಬೆಳೆಸಿಕೊಂಡಿದೆ.
“ಧೋರಣೆಗಳ ವಿಷಯದಲ್ಲಿ ಜನಗಳನ್ನು ನಾವು ಯಶಸ್ವಿಯಾಗಿ
ಕತ್ತಲಲ್ಲಿ ಇಟ್ಟಿದ್ದೇವೆ. ಆ ಪರಿಣತಿಯನ್ನು ಬಳಸಿಕೊಳ್ಳಿ!”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಐಟಿ ಸೆಲ್ ನಿಂದಲೂ ಒಳ್ಳೆಯ ಸಲಹೆ ಬಂದಿದೆಯಂತೆ!
“ `ಕತ್ತಲಿನ ಪ್ರಯೋಜನಗಳು’ ಎಂಬ ಆ ವಾಟ್ಸ್ ಆಪ್
ಮೆಸೇಜುಗಳ ಕಳಿಸೋದನ್ನು ಆರಂಭಿಸೋಣವೇ?”
(ಕೀರ್ತಿಶ್, ಬಿಬಿಸಿ ನ್ಯುಸ್ ಹಿಂದಿ)
***
“ಕೋಲ್ ಕ್ರೈಸಿಸ್” ಅಥವ ಕಲ್ಲಿದ್ದಲು ಬಿಕ್ಕಟ್ಟೇನು, ‘ಸೋಲ್ ಕ್ರೈಸಿಸ್’ ಅಥವ ಆತ್ಮಸಾಕ್ಷಿಯ ಬಿಕ್ಕಟ್ಟಾದರೂ ಆಳುವವರನ್ನು ಕಾಡುತ್ತಿದೆಯೇ?
“ಕೆಲವೇ ದಿನಗಳ ದಾಸ್ತಾನು ಉಳಿದಿದೆ”
(ಸಜಿತ್‍ಕುಮಾರ್, ಡೆಕ್ಕನ್ ಹೆರಾಲ್ಡ್)
***
ಲಖಿಂಪುರ ಖೇರಿ ಹತ್ಯಾಕಾಂಡದ ಪ್ರಧಾನ ಆರೋಪಿಯಾಗಿರುವ ಕೇಂದ್ರ ಮಂತ್ರಿಯ ಮಗನಿಗೆ ನೋಟೀಸು ಕಳಿಸಲಾಗಿದೆ ಎಂದು ಉತ್ತರಪ್ರದೇಶ ಸರಕಾರ ಹೇಳಿತ್ತು.
“ಆಶೀಷ್ ಮಿಶ್ರಾ ನೇಪಾಳದಲ್ಲಿ, ಪೋಲೀಸ್ ಇಲಾಖೆಯ
ನೊಟೀಸನ್ನು ಮನೆಯ ಮುಂದೆ ಅಂಟಿಸಲಾಯಿತು.”
(ಕೇಂದ್ರ ಗೃಹರಾಜ್ಯ ಮಂತ್ರಿಗಳ ಮನೆಯ ಮುಂದೆ!)
“ಜೈಹಿಂದ್ ಸರ್! ನೋಟೀಸು ಹಚ್ಚಲೇ?”
(ಇರ್ಫಾನ್, ನ್ಯುಸ್ ಕ್ಲಿಕ್)
ಆತ ಹಾಜರಾಗಲಿಲ್ಲ ಎಂದು ಉತ್ತರಪ್ರದೇಶದ ಸರಕಾರ ಸುಪ್ರಿಂ ಕೋರ್ಟಿಗೆ ಹೇಳಿದಾಗ ಅದು ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು. ಕೊನೆಗೂ ಮಂತ್ರಿಮಗ ಹಾಜರಾದ, ಸದ್ಯ ಮುಂದಿನ ವಿಚಾರಣೆಗಾಗಿ ಮೂರು ದಿನಗಳಿಗೆ ಆತನನ್ನು ಬಂಧಿಸಲಾಗಿದೆ. ಆದರೂ ರೈತ ಸಂಘಟನೆಗಳು ಕೊಟ್ಟ ಗಡುವು ಮುಗಿದರೂ ಆ ಕೇಂದ್ರ ಮಂತ್ರಿ ಇನ್ನೂ ಮಂತ್ರಿಯಾಗಿಯೇ ಇದ್ದಾರೆ.
***
ಈ ಸಂದರ್ಭದಲ್ಲಿ ಈ ವ್ಯಂಗ್ಯಚಿತ್ರಕಾರರಿಗೆ ಒಂದು ನಾಯಿಮರಿ ಕಾರಿನಡಿ ಬಿದ್ದು ಸತ್ತರೂ ತನ್ನ ಮನಸ್ಸಿಗೆ ಘಾಸಿಯಾಗುತ್ತದೆ ಎಂಬ ಮಾನ್ಯ ಪ್ರಧಾನಿಗಳ ಬಹಳ ದಿನಗಳ ಹಿಂದಿನ ಉದ್ಗಾರ ನೆನಪಾಗಿದೆ. ಆದರೇನು ಮಾಡುವುದು, ಈ ಬಾರಿ ಮಂತ್ರಿಯ ಎಸ್.ಯು.ವಿ. ಅಡಿ ಸಿಲುಕಿದ್ದು ನಾಯಿಮರಿಗಳಲ್ಲ!
“ಅದೃಷ್ಟವಶಾತ್ ತುಳಿದದ್ದು ನಾಯಿಮರಿಯನ್ನಲ್ಲ,
ಹಾಗಾಗಿದ್ದರೆ ಅವರ ಹೃದಯಕ್ಕೆ ಬಹಳ ಘಾಸಿಯಾಗುತ್ತಿತ್ತು”
(ರಾಜೇಂದ್ರ ಧೋಪಡ್ ಕರ್, ಫೇಸ್ ಬುಕ್)
ಹೌದು, ಸಜಿತ್‍ಕುಮಾರ್ ಅವರ ಚಿತ್ರ ಹೇಳುವಂತೆ, ಸ್ವಲ್ಪವೇ ದಾಸ್ತಾನು ಉಳಿದಿದೆ, ಆಮೇಲೆ ಸಂಪೂರ್ಣ ಕತ್ತಲು?!-ಆತ್ಮಸಾಕ್ಷಿಯದ್ದು.
***
ಇತ್ತ ಜನಗಳ ಮೇಲೆ ಸರಕಾರೀ ಧೋರಣೆಯ ಎಸ್.ಯು.ವಿ.ಗಳ ಹರಿದಾಟ ಮುಂದುವರೆದಿದೆ. ಒಂದು ವಾರದ ಕಾಲ ಸತತವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಏರಿಕೆ, ಲೀಟರಿಗೆ 20ರೂ.ಗಳಷ್ಟು ಏರಿಕೆ, ಅಡುಗೆ ಅನಿಲದ ಬೆಲೆಯಲ್ಲೂ ಮತ್ತೆ 25ರೂ. ಏರಿಕೆ. ಡೀಸೆಲ್ ಬೆಲೆ ಕೂಡ ಈಗ 100 ದಾಟುತ್ತಿದೆ, ಅಡುಗೆ ಅನಿಲ ಬೆಲೆ 1000 ದಾಟುತ್ತಿದೆ.
ಹೌದು, ಇಲ್ಲಿಯೂ ಸರಕಾರ ತನ್ನದೇನೂ ಪಾತ್ರ ಇಲ್ಲ ಎಂದು ತೆಪ್ಪಗಿದೆ.
“ನಾನು ಕಾರಿನಲ್ಲಿ ಇಲ್ಲ”
ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ
***
ಇದರ ಹಿಂದೆಯೇ ನಿರುದ್ಯೋಗ, ಬೆಲೆಯೇರಿಕೆಗಳ ಎಸ್.ಯು.ವಿ……
ಪಿ.ಮಹಮ್ಮದ್, ಫೇಸ್ ಬುಕ್
***
ಸಾಲದೆಂಬಂತೆ ‘ಗೋದಿ ಮಿಡಿಯಾ’ದಿಂದಲೂ ಪತ್ರಕಾರಿತೆಯ ಮೇಲೇಯೇ ಅದೇ ಅಟಾಟೋಪ…
ಪಾಕಿಸ್ತಾನ! ಆತ್ಮಹತ್ಯೆ! ಜಿಹಾದ್! *** !
(ಸತೀಶ ಆಚಾರ್ಯ, ಫೇಸ್ ಬುಕ್)
***
ಅದೇ ಬ್ರೇಕಿಂಗ್ ನ್ಯೂಸ್, ಅದೇ ಡ್ರಗ್ಸ್…..ಧ್ಯಾನ..
“….ಆ ಹೆಂಗಸು ನೋಡಿ ಡ್ರಗ್ಸ್ ಸೇವಿಸುತ್ತಿದ್ದಾಳೆ….”.
“ಇಲ್ಲಪ್ಪಾ…ಸಿಲಿಂಡರ್ ತಗೊಳ್ಲಲಾಗಿಲ್ಲ, ಒಲೆ ಊದುತ್ತಿದ್ದೇನೆ..”
(ಅಲಂಕಾರ್ ಗೋಸ್ವಾಮಿ, ಫೇಸ್ ಬುಕ್)
***
ಆದರೂ ಇವರ ಮಟ್ಟಿಗೆ, ಅದಾನಿ ಬಂದರಿನಲ್ಲಿ ಪತ್ತೆಯಾದ 3000ಕೆ.ಜಿ. ಗಿಂತ ಒಂದು ಪಾರ್ಟಿಯಲ್ಲಿ ಕಂಡ ಕೆಲವು ಗ್ರಾಂ ಗಳಷ್ಟು ಮಾದಕ ದ್ರವ್ಯಗಳಿಗೇ ಹೆಚ್ಚು ತೂಕ!
ಮಂಜುಲ್, ನ್ಯೂಸ್9
ಆದರೂ, ಇವರನ್ನು ‘ಗೋದಿ ಮಿಡಿಯಾ’ ಎನ್ನಬಾರದಂತೆ…ಇದು ದೊಡ್ಡ ದೂಷಣೆ ಮತ್ತು ಅಕ್ಷರಶಃ ಸರಿಯಲ್ಲವಂತೆ
“ಹೌದು, ನಾವು ಎಂದೂ ಯಾರ ತೊಡೆಯಲ್ಲೂ ಕೂತಿಲ್ಲ!!”
(ಮಂಜುಲ್, ಫಸ್ಟ್ ಪೋಸ್ಟ್)
ನಿಜ, ಜೇಬಿನಲ್ಲೇ ಇದ್ದವರು!!…
***
ಕೊನೆಗೂ ಏರ್ ಇಂಡಿಯ ವನ್ನು ಟಾಟಾ ಗುಂಪಿಗೆ ಮಾರುವ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಕಟಿಸಿದೆ.
68 ವರ್ಷಗಳ ಹಿಂದೆ ಈ ಟಾಟಾಗಳ ಕೈಯಲ್ಲೇ ಇದ್ದ, ಏರ್ ಇಂಡಿಯ ವನ್ನು ಮತ್ತೆ ಅವರಿಗೆ ಹಿಂದಿರುಗಿಸಲಾಗಿದೆ ಎಂದು ಹಲವರು ಹೇಳುತ್ತಿದ್ದಾರೆ, ಹರ್ಷವನ್ನೂ ವ್ಯಕ್ತಪಡಿಸುತ್ತಿದ್ದಾರೆ, ಪಾಪ, ಅದಕ್ಕಾಗಿ 18,000 ಕೋಟಿ ರೂ.ಗಳನ್ನು ತೆರಬೇಕಾಗಿ ಬಂದಿದೆ ಎಂದು ಸಹಾನುಭೂತಿಯನ್ನೂ ವ್ಯಕ್ತಪಡಿಸಿದ್ದಾರೆ.
ಟಾ-ಟಾ, ಬೈ.. ( ಸುಭಾನಿ, ಡೆಕ್ಕನ್ ಕ್ರಾನಿಕಲ್)
ಆದರೆ ವಾಸ್ತವವಾಗಿ ಈ ವ್ಯವಹಾರದಲ್ಲಿ ಸರಕಾರಕ್ಕೆ ವರ್ಗಾವಣೆಯಾಗುವುದು ಕೇವಲ 2700ಕೋಟಿ ರೂ. ಉಳಿದ 15300 ಕೊಟಿ ರೂ. ಏರ್ ಇಂಡಿಯ 2007 ರಿಂದ ಅನುಭವಿಸಿರುವ ನಷ್ಟಗಳಲ್ಲಿ ವಹಿಸಿಕೊಂಡ ಒಂದು ಸಣ್ಣ ಭಾಗ. ಅದರಲ್ಲೂ ಎಷ್ಟು ಭಾಗ ಈಗ ಕಾರ್ಪೊರೇಟ್ ಸಾಲಗಳಲ್ಲಿ ಸಾಮಾನ್ಯವಾಗುತ್ತಿರುವ ‘ಪುನರ್ರಚನೆ’ಯ ಹೆಸರಲ್ಲಿ ಮನ್ನಾ ಆಗುತ್ತದೋ ಕಾದು ನೋಡಬೇಕಷ್ಟೇ ಎನ್ನುತ್ತಾರೆ ಕೆಲವು ಪರಿಣಿತರು.
46262 ಕೋಟಿ ರೂ.ಗಳ ಬಹುದೊಡ್ಡ ಹೊರೆಯನ್ನು ಸರಕಾರವೇ ಇಟ್ಟುಕೊಂಡಿದೆ. ಅದನ್ನು ಜನಗಳ ಹಣದಿಂದಲೇ ತೀರಿಸಬೇಕಾಗಿದೆ.ಅಷ್ಟಕ್ಕೂ ಈ ನಷ್ಟ/ಸಾಲ ಹೊರೆ ಉಂಟಾದ್ದು 28 ಹೊಸ ವಿಮಾನಗಳನ್ನು ಖರೀದಿಸಬೇಕೆಂದಿದ್ದ ಏರ್ ಇಂಡಿಯ, ಇದ್ದಕ್ಕಿದಂತೆ ಯಾವ ಸರಿಯಾದ ಯೋಜನೆಯೂ ಇಲ್ಲದೆ 68 ಹೊಸ ವಿಮಾನಗಳನ್ನು ಖರೀದಿಸುವಂತೆ ಮಾಡಿದ ಭಾರತ ಸರಕಾರದ ಧೋರಣೆಯಿಂದಾಗಿ; ಅದಕ್ಕಾಗಿ 50,000 ಕೋಟಿ ರೂ. ಸಾಲ ಮಾಡಬೇಕಾಯಿತು. ಈಗ ಆ ಸಾಲದಲ್ಲಿ ಬಹುಭಾಗ ಭಾರತದ ನಾಗರಿಕರ ತಲೆಯ ಮೇಲೆಯೇ ಇರುತ್ತದೆ, ಆ ಸಾಲದಿಂದ ಖರೀದಿಸಿದ ಹೊಸ ವಿಮಾನಗಳು ಮಾತ್ರ, ಈ 68ವರ್ಷಗಳಲ್ಲಿ ಜನಗಳ ತೆರಿಗೆಯ ಹಣದಿಂದ ಈ ಸಂಸ್ಥೆ ನಿರ್ಮಿಸಿದ ಅಪಾರ ಆಸ್ತಿ-ಪಾಸ್ತಿಗಳೊಂದಿಗೆ ಟಾಟಾಗಳ ಒಡೆತನಕ್ಕೆ ಹೋಗುತ್ತವೆ, ಇದೊಂದು ವಿಲಕ್ಷಣ ಅರ್ಥಶಾಸ್ತ್ರ ಎಂದು ಕೆಲವು ಅರ್ಥಶಾಸ್ತ್ರಜ್ಞರೂ ಹೇಳಿದ್ದಾರೆ.
(ಮಂಜುಲ್, ಇಂಡಿಯಾ ವೈಬ್ಸ್)
ಏರ್ ಇಂಡಿಯಾಕ್ಕೆ ಟಾಟಾ, ಸಾಲಗಳ ಹೆಚ್ಚುವರಿ ಬ್ಯಾಗೇಜ್ ಮೇಲಿಂದಲೇ!
***
ಕಳೆದ ವಾರ ಪ್ರಧಾನಿಗಳು ತಮ್ಮನ್ನು ಟೀಕಿಸುವವರನ್ನು ತಾನು ಗೌರವಿಸುತ್ತೇನೆ ಎಂದಿದ್ದರು. ಟೀಕಿಸುವವರು ಇಲ್ಲ ಎಂದೂ ಕೊರಗಿದ್ದರು. ಆದರೆ ಈ ವಾರ ಅವರ ಪರಮಾಪ್ತ ಗೃಹಮಂತ್ರಿಗಳು ಅವರನ್ನು ಕುರಿತು ಬರುತ್ತಿರುವ ಟೀಕೆಗಳ ಬಗ್ಗೆಯೇ ಮಾತಾಡಿದ್ದಾರೆ!
ಪಿ.ಮಹಮ್ಮದ್, ವಾರ್ತಾಭಾರತಿ
ಕಳೆದ ವಾರ ನ್ಯೂಯಾರ್ಕಿನಲ್ಲಿ ಪ್ರಧಾನಿಗಳು ಭಾರತ ಪ್ರಜಾಪ್ರಭುತ್ವಗಳ ತಾಯಿ ಎಂದಿದ್ದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ನಂಬಿದರೆ ನಂಬಿ, ಭಾರತ ಒಂದು ಪ್ರಜಾಪ್ರಭುತ್ವ !
(ಆರ್. ಪ್ರಸಾದ್, ಇಕನಾಮಿಕ್ ಟೈಮ್ಸ್)
ಮತ್ತು ಅದು ಪ್ರಜಾಪ್ರಭುತ್ವ ಎಂದು ಘೋಷಿಸಿಕೊಳ್ಳುವ ಮೂರು ವರ್ಷದ ಮೊದಲು ಗಳಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನೂ ಆಚರಿಸುತ್ತಿದೆ. ಉತ್ತರಪ್ರದೇಶದ ಲಖಿಂಪುರ್ ಖೀರಿ ಈಗ ಈ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ‘ಪ್ರತೀಕ’ವಾಗುತ್ತಿದೆಯೇ?
“ಸ್ವಾತಂತ್ರ್ಯದ ಅಮೃತ ಮಹೋತ್ಸವ”, (ಮಂಜುಲ್, ನ್ಯೂಸ್9)
***
ಬಾಲಂಗೋಚಿ: ಕೇಂದ್ರ ಸಾರಿಗೆ ಮಂತ್ರಿಗಳು ವಾಹನಗಳ ಹಾರನ್ ಗಳಿಗೆ ಭಾರತೀಯ ಸಂಗೀತ ವಾದ್ಯಗಳ ದನಿಗಳನ್ನೇ ಬಳಸಬೇಕು ಎಂದು ಕಾಯ್ದೆ ತರಲಾಗುವುದು ಎಂದಿದ್ದಾರಂತೆ!
ಇದಕ್ಕೆ ಗುಜರಾತಿನ ಸೂರತ್ ನವರೊಬ್ಬರು ‘ನನ್ನ ಗಾಡಿಯ ಇಂತಹ ಹಾರನ್ ಕೇಳಿ ಪಕ್ಕಕ್ಕೆ ಸರಿಯುವ ಬದಲು ನನ್ನ ಗಾಡಿಯ ಮುಂದೆಯೇ ಕುಣಿಯಲಾರಂಬಿಸಿದರೆ ನಾನು ಸೂರತ್‍ನಿಂದ ಮುಂಬೈ ತಲುಪುವುದು ಯಾವಾಗ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಯ ವ್ಯಕ್ತಪಡಿಸಿದ್ದಾರೆ. ಈ ‘ನ್ಯೂ ಇಂಡಿಯಾ’ ಮಂತ್ರಿಗಳಿಗೆ ಇಂತಹ ಐಡಿಯಾಗಳೇ ಏಕೆ ಹೊಳೆಯುತ್ತವೆ, ಇದು ಗಮನಕ್ಕೆ ತರಲೋ ಅಥವ ಗಮನವನ್ನು ತಿರುಗಿಸಲೋ, ಮುಖ್ಯವಾಗಿ ಬೆಲೆಯೇರಿಕೆ, ನಿರುದ್ಯೋಗದಂತಹ ಪ್ರಶ್ನೆಗಳಿಂದ – ಎಂದು ಇನ್ನೊಬ್ಬರು ಟಿಪ್ಪಣಿ ಮಾಡಿದ್ದಾರೆ.
ಆದರೆ ದೇಶದ ರೈತರ ಪ್ರಶ್ನೆಯೇ ಬೇರೆ!
“ಮಂತ್ರಿಗಳ ಎಸ್.ಯು.ವಿ.ಗಳಿಗೆ ಯಾವ
ರೀತಿಯ ಹಾರನ್‍ಗಳನ್ನು ಸೂಚಿಸುತ್ತೀರಿ?”
(ಮಂಜುಲ್, ನ್ಯೂಸ್9)