ಮತ್ತೊಂದು “ಸ್ಸಾರಿ” ……ಮಾಹಿತಿ ಲಭ್ಯವಿಲ್ಲದ್ದಕ್ಕೆ ಅಲ್ಲ

ವೇದರಾಜ ಎನ್‌ ಕೆ

ಕೇಂದ್ರ ಸರಕಾರದಿಂದ ಈ ವಾರ ಮತ್ತೊಂದು ‘ಸ್ಸಾರಿ’ ವ್ಯಕ್ತಗೊಂಡಿದೆ. ಕಳೆದ ಒಂದು ವರ್ಷದ ರೈತ ಹೋರಾಟದಲ್ಲಿ ಪ್ರಾಣ ಕಳಕೊಂಡವರ ಬಗ್ಗೆ ಮಾಹಿತಿ ಇಲ್ಲ ಎಂದು ಸಂಸತ್ತಿನಲ್ಲಿ ಹೇಳಬೇಕಾಗಿ ಬಂದದ್ದಕ್ಕೆ ಅಲ್ಲ, ಹೆದ್ದಾರಿ ಉದ್ಘಾಟನೆಗೆ ತೆಂಗಿನಕಾಯಿ ಒಡೆದಾಗ ರಸ್ತೆಯೇ ಬಿರುಕು ಬಿಟ್ಟದ್ದಕ್ಕೂ ಅಲ್ಲ, ಸೇನಾಪಡೆಗಳು ದಂಗೆಕೋರರು ಎಂದು ಸಾಮಾನ್ಯ ನಾಗರಿಕರನ್ನು ಬಲಿ ತೆಗೆದುಕೊಂಡದ್ದಕ್ಕೆ ಸ್ವತಃ ಗೃಹಮಂತ್ರಿಗಳೇ ಖೇದ ವ್ಯಕ್ತಪಡಿಸಿದರುಇವಲ್ಲದೆ ಡಿಸೆಂಬರ್ 6 ಮತ್ತು ದೀದಿ ಧಾವಂತಈ ವಾರ ವ್ಯಂಗ್ಯಚಿತ್ರಕಾರರ ಗಮನ ಸೆಳೆದ ವಿಷಯಗಳು.

ನಾಗಾಲ್ಯಾಂಡಿನಲ್ಲಿ ಸೇನಾಪಡೆಗಳವರು ದಂಗೆಕೋರರ ವಿರುದ್ಧ ಎಂದು ನಡೆಸಿದ ಹೊಂಚುದಾಳಿ ಕಾರ್ಯಾಚರಣೆಯಲ್ಲಿ ತಮ್ಮ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 17 ಗಣಿ ಕೆಲಸಗಾರರು ಬಲಿಯಾಗಿದ್ದಾರೆಂಬ ಸುದ್ದಿ ದೇಶವನ್ನು ತಲ್ಲಣಗೊಳಿಸಿದೆ.  ಇದು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ(AFSPA)ಯ ಬಗ್ಗೆ ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ, ಆಳುವ ಪಕ್ಷದ ಬೆಂಬಲಿಗರು ಕೂಡ

ಸತೀಶ ಆಚಾರ್ಯ, ಫೇಸ್ ಬುಕ್

ಈ ಕಾಯ್ದೆ ಸಶಸ್ತ್ರ ಪಡೆಗಳಿಗೆ ನೀಡಿರುವ ಅಧಿಕಾರ ಅವು ಭದ್ರತೆಯ ಹೆಸರಿನಲ್ಲಿ ಕಣ್ಣುಮುಚ್ಚಿ ಮನಬಂದಂತೆ ವರ್ತಿಸಲು  ಅವಕಾಶ ಕಲ್ಪಿಸಿದೆ ಎಂಬುದು ಪ್ರಜಾಪ್ರಭುತ್ವವಾದಿಗಳ ಮುಖ್ಯ ಆಕ್ಷೇಪ.

“AFSPA ಪ್ರದೇಶದಿಂದ ತುರ್ತು ಸಹಾಯಕ್ಕೆ ಕರೆ ಬಂದಿದೆ, ಧಾವಿಸು!”

ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ

ಸೇನಾಪಡೆ ಇದಕ್ಕೆ ಕ್ಷಮೆ ಕೇಳಿದೆ.  ನಾಗಾಲ್ಯಾಂಡಿನಲ್ಲಿ ಮಾತ್ರವಲ್ಲ, ಇಡೀ ಈಶಾನ್ಯ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.  ಗೃಹಮಂತ್ರಿಗಳು ಕೂಡ ಸಂಸತ್ತಿನಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

ಪಿ.ಮಹಮ್ಮದ್‍, ವಾರ್ತಾಭಾರತಿ

ಜತೆಗೇ ಗೃಹಮಂತ್ರಿಗಳು, ಸಶಸ್ತ್ರ ಪಡೆಗಳವರು ನಿಲ್ಲಿ ಎಂದು ಹೇಳಿದರೂ ಕೆಲಸಗಾರರು ಓಡಲಾರಂಭಿಸಿದ್ದರಿಂದ  ಈ ತಪ್ಪು ಸಂಭವಿಸಿತು ಎಂದು ಪರೋಕ್ಷವಾಗಿ ಇದಕ್ಕೆ ಸಮರ್ಥನೆ ನೀಡಿದ್ದಾರೆ ಎಂದಿರುವುದಾಗಿ  ವರದಿಯಾಗಿದೆ. “ಅವರು ನಮ್ಮನ್ನು ನಿಲ್ಲಿ ಎನ್ನಲಿಲ್ಲ, ನಾವೇನೂ ಪಲಾಯನ ಮಾಡಲಿಲ್ಲ, ನೇರವಾಗಿ ಗುಂಡು ಹಾರಿಸಿದರು” ಎಂದು ಇದರಲ್ಲಿ ಬದುಕುಳಿದವರೊಬ್ಬರು ಹೇಳಿರುವುದು ಸ್ವತಃ ಆಳುವ ಪಕ್ಷದ ರಾಜ್ಯ ಮುಖಂಡರಿಗೂ ಮುಜುಗರ ಉಂಟು ಮಾಡಿದೆಯಂತೆ. “ಗೃಹಮಂತ್ರಿಗಳಿಂದ ಇಂತಹ ಸುಳ್ಳು ಯಾಕೆ” ಎಂದು ಪ್ರಶ್ನಿಸಿದ್ದಾರಂತೆ.

ಕಾಶ್ಮೀರ ಭಾರತಮಾತೆಯ ಶಿರಸ್ಸು ಈಶಾನ್ಯ ಭಾರತ ಕೈಗಳು, ದಂಡಕಾರಣ್ಯ ಆಕೆಯ ಹೃದಯ ಎಂದೆಲ್ಲ ಹೇಳುತ್ತಿರುವ ಆಳುವ ಪಕ್ಷದ  ಕೇಂದ್ರ ಮುಖಂಡತ್ವವೇ ಈಗ ತನ್ನ ಮಿತ್ರಪಕ್ಷಗಳಿಂದ ಮಾತ್ರವಲ್ಲ,, ತನ್ನದೇ ಸ್ಥಳೀಯ ಮುಖಂಡರಿಂದ ಟೀಕೆಯನ್ನು ಎದುರಿಸಬೇಕಾದ ಮುಜುಗರಕ್ಕೆ ಒಳಗಾದಂತೆ ಕಾಣುತ್ತದೆ.

“..ಸರಿ,.. ನೋಡೀ,,, … ನಾನು ನಿಜವಾಗಿ
 ಹೇಳಿದ್ದು… .. ಅರ್ಥಮಾಡಿಕೊಳ್ಳಿ.. ..”

ಮಂಜುಲ್, ನ್ಯೂಸ್‍ 9

***

ಪ್ರಧಾನ ಮಂತ್ರಿಗಳೇ  ಕ್ಷಮೆ ಕೋರಿ,  ಮೂರೂ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡಿರುವಾಗ,  ಈ ಬೇಡಿಕೆಯ ಮೇಲೆ ಈ ಒಂದು ವರ್ಷದ ಹೋರಾಟದಲ್ಲಿ ಪ್ರಾಣ ಕಳಕೊಂಡ ಪ್ರತಿಭಟನಾಕಾರರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂಬ ಆಗ್ರಹವನ್ನು ತಿರಸ್ಕರಿಸುತ್ತ ಕೃಷಿ ಮಂತ್ರಿಗಳು ಈ ರೀತಿ ಪ್ರಾಣ ಕಳಕೊಂಡ ರೈತರ ದಾಖಲೆ ಸರಕಾರದ  ಬಳಿ ಇಲ್ಲವಾದ್ದರಿಂದ ಪರಿಹಾರ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ.

“ನೋ ಡಾಟಾ”( ಮಾಹಿತಿ ಇಲ್ಲ) ಸರಕಾರ ಎಂಬ ಹೆಸರು ಗಳಿಸಿರುವ ಸರಕಾರದ ಈ ಉತ್ತರದಿಂದ ಪ್ರಜಾಪ್ರಭುತ್ವವಾದಿಗಳಿಗೆ ಆಶ್ಚರ್ಯವೇನೂ ಆಗಿಲ್ಲವಂತೆ.

ಸರಕಾರವೇ ‘ಆರೋಗ್ಯ ಯೋಧ”ರು ಎಂದು ಹಾಡಿಹೊಗಳಿದ, ಮಹಾಮಾರಿಯೊಂದಿಗೆ ಸೆಣಸಿ ಜೀವತೆತ್ತವರ ಮಾಹಿತಿ ಇಲ್ಲ, ಲಾಕ್‍ ಡೌನಿನಿಂದ ಸಂಕಟ ಪಟ್ಟ ವಲಸೆ ಕಾರ್ಮಿಕರ  ಮಾಹಿತಿ ಇಲ್ಲ, ಉದ್ಯೋಗ ನಷ್ಟದ ಮಾಹಿತಿ ಇಲ್ಲ, ಕೊನೆಗೆ ಪೆಗಸಸ್ ಬಳಕೆ ಮಾಹಿತಿಯೂ ಇಲ್ಲ ಎಂದಿರುವುದನ್ನು ಈ ಹಿಂದೆ ಕೇಳಿದ್ದೇವೆ ತಾನೇ?

ನಮ್ಮ ಮೂಗಿನಡಿಯಲ್ಲಿಯೇ ಏನು ನಡೆಯುತ್ತಿದೆ ಎಂಬುದರ ಸುಳಿವೂ
ನಮಗೆ ಇಲ್ಲವಾದರೂ, ಪೆಗಸಸ್ ಬಳಸಿ ಗೂಢಚಾರಿಕೆ
ಮಾಡುವ ಅರೋಪ ನಮ್ಮ ಮೇಲಿದೆ. ವಿಚಿತ್ರ!”

ಸಜಿತ್‍ ಕುಮಾರ್, ಡೆಕ್ಕನ್ ಹೆರಾಲ್ಡ್

ಹೌದು,  ದಿಲ್ಲಿ ಗಡಿಗಳಲ್ಲಿ ಒಂದು ವರ್ಷದ ಕಾಲ ಗಟ್ಟಿಯಾಗಿ ಕೂತಿರುವ ಯಾವುದೇ  ರೈತರನ್ನು ಕೇಳಿ ಹೇಳುತ್ತಾರೆ…..

ಅವರ ಬಳಿ  ಅಂಕಿಅಂಶಗಳು ಇರಲಿಕ್ಕೂ ಇಲ್ಲ. ಹತ್ತು ದಿನಗಳ
ಹಿಂದೆಯಷ್ಟೇ ನಮ್ಮನ್ನು ರೈತರು ಎಂದು ಅವರು ಒಪ್ಪಿಕೊಂಡಿರುವುದು.”

ಕೀರ್ತೀಶ್, ಬಿಬಿಸಿ ನ್ಯೂಸ್‍ ಹಿಂದಿ

ಹೌದಲ್ಲವೇ! ಆದರೂ, “ಕೇವಲ ಕೆಲವೇ ದಾರಿ ತಪ್ಪಿದ ರೈತರು ಆಂದೋಲನ ನಡೆಸುತ್ತಿದ್ದಾರೆ” ಎಂಬ ಪಕ್ಕಾ ಮಾಹಿತಿ ಇರುವ ಸರಕಾರದ ಬಳಿ, ಪ್ರಧಾನಿಯಿಂದ ಹಿಡಿದು ವಾಟ್ಸ್  ಆಪ್‍ ಕಾರ್ಯಕರ್ತನ ವರೆಗೆ ಎಲ್ಲರಿಗೂ ಈ ಪ್ರತಿಭಟನಾಕಾರರು ಖಾಲಿಸ್ತಾನೀಗಳು, ಪಾಕಿಸ್ತಾನ ಪ್ರಾಯೋಜಿತರು, ಚೀನಾದಿಂದ ಹಣ ಪಡೆಯುತ್ತಿರುವವರು  ದೇಶದ್ರೋಹಿಗಳು ಎಂಬಿತ್ಯಾದಿ ಪೂರ್ಣ ಮಾಹಿತಿ ಇರುವಾಗ, ಗಡಿಗಳಲ್ಲಿ ಕೂತ ಪ್ರತಿಟನಾಕಾರರು ಯಾವ ದಿನ ಪಿಜ್ಜಾ ತಿನ್ನುತ್ತಾರೆ, ಯಾವ ದಿನ ಬಿರಿಯಾನಿ ತಿನ್ನುತ್ತಾರೆ ಎಂದೆಲ್ಲಾ ಮಾಹಿತಿ ಕೊಡುತ್ತಿರುವಾಗ, ಒಬ್ಬ ಮಂತ್ರಿಣಿಯ ಬಳಿಯಂತೂ ದಿಲ್ಲಿಯಿಂದ ಯಾವ ದರದಲ್ಲಿ ಎಷ್ಟು ಬಾಡಿಗೆ ಜನಗಳನ್ನು ತಂದು ಕೂರಿಸುತ್ತಿದ್ದಾರೆ ಎಂಬ ಪಕ್ಕಾ ಮಾಹಿತಿ ಇರುವಾಗ, ಎಷ್ಟು ಪ್ರತಿಭಟನಾಕಾರರು ಪ್ರಾಣ ಕಳಕೊಂಡರು ಎಂಬ ಮಾಹಿತಿ ನಿಜವಾಗಿಯೂ ಇಲ್ಲ ಎಂದು ನಂಬಬೇಕೇ ಎಂದೊಬ್ಬ ರೈತ ಮುಖಂಡರು ಕೇಳಿದ್ದಾರೆ.

ಸತ್ಯಮೇವ ಜಯತೇ”*

*ಮಾಹಿತಿ ಲಭ್ಯ ಇಲ್ಲ

ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

***

ಉದ್ಘಾಟನೆಗಳ ಪರ್ವ ನಡೆಯುತ್ತಿರುವ ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ ಆಳುವ ಪಕ್ಷದ ಶಾಸಕಿಯೊಬ್ಬರು ಹೊಸದಾಗಿ ನಿರ್ಮಾಣಗೊಂಡ 7 ಕಿ.ಮೀ. ರಸ್ತೆಯನ್ನು ತೆಂಗಿನಕಾಯಿ ಒಡೆದು ಉದ್ಘಾಟಿಸಲು ಹೋದಾಗ ಅದು ಒಡೆಯುವ ಬದಲು ರಸ್ತೆಯೇ ಬಿರುಕು ಬಿಟ್ಟಿತು ಎಂಬ ವರದಿ ಸಹಜವಾಗಿಯೇ ವ್ಯಂಗ್ಯಚಿತ್ರಕಾರರ ಗಮನ ಸೆಳೆದಿದೆ.

ಪಂಜು ಗಂಗೊಳ್ಳಿ, ಫೇಸ್‍ ಬುಕ್

ಈ ಅನುಭವದಿಂದಾಗಿ ..ಇನ್ನು ಮುಂದೆ ರಸ್ತೆ ಉದ್ಘಾಟನೆಯನ್ನು ಟೊಮ್ಯಾಟೋ ಒಡೆದು ಮಾಡಬೇಕು ಎಂದು ಪಾರ್ಟಿಯ ನಿರ್ದೇಶನ ಬಂದಿದೆಯಂತೆ…!

ಮತ್ತು ತೆಂಗಿನಕಾಯಿ-ಪ್ರೂಫ್‍ ರಸ್ತೆ ಬೇಕೆಂಬ ಜನತೆಯ ಬೇಡಿಕೆ ಹೆಚ್ಚುತ್ತ ಹೋಗುತ್ತಿದೆಯಂತೆ…!

 

ಮನ್ಸೂರ್ ನಖ್ವಿ, ದೈನಿಕ್‍ ಭಾಸ್ಕರ್

ಉದ್ಘಾಟನೆ ಮುಂತಾದವುಗಳಿಗೆ ತೆಂಗಿನಕಾಯಿ ಬಳಕೆಯನ್ನು ನಿಲ್ಲಿಸಬೇಕು ಎಂಬ ಆದೇಶ ಜಾರಿ ಮಾಡುವುದಲ್ಲದೆ, “ತಪಸ್ಸಿನಲ್ಲಿ ಏನೋ ಕೊರತೆ ಉಳಿದು ಬಿಟ್ಟಿತು” ಎಂಬಂತಹದೇನಾದರೂ ಹೇಳಿಕೆಗಳನ್ನು ಪ್ರಕಟಿಸುವುದೂ ಅಗತ್ಯವಾಗಬಹುದು……           ಎಂದು ಸಲಹೆ ನೀಡುತ್ತಾರೆ  ಈ ವ್ಯಗ್ಯಚಿತ್ರಕಾರರು.

ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್‍ ಆಫ್‍ ಇಂಡಿಯ

***

ಈ ನಡುವೆ ಮತ್ತೊಂದು ಡಿಸೆಂಬರ್ 6 ಬಂದು ಹೋಗಿದೆ…ಅಂದು ಅಯೋಧ್ಯೆಯ ಹವಾಮಾನದ ಗುಣಮಟ್ಟ ಬಹಳ ಕೆಳ ಮಟ್ಟದಲ್ಲಿತ್ತಂತೆ….ಭಕ್ತರು ಕೆಮ್ಮುತ್ತಲೇ ದೇವರನ್ನು ಸ್ವರಿಸಿಕೊಂಡಿದ್ದಾರೆ, ಜತೆಗೇ ಈಗ ಮಥುರಾವನ್ನೂ….

ಸಂದೀಪ ಅಧ್ವರ್ಯ, ಟೈಂಸ್‍ ಆಫ್‍ ಇಂಡಿಯ

ಅತ್ತ ಪರಿನಿರ್ವಾಣದ ದಿನ ಡಾ. ಅಂಬೇಡ್ಕರ್ ರವರಿಗೂ ಎಚ್ಚರಿಕೆ…

ಬಾಬಾ! ಸಂವಿಧಾನವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ!!
ಆ ಮಂದಿ ಈ ಕಡೆಗೇ ಬರುತ್ತಿದ್ದಾರೆ!!!”

ಇರ್ಫಾನ್ , ನ್ಯೂಸ್‍ ಕ್ಲಿಕ್

***

ಆಳುವ ಪಕ್ಷದ ಪರಿಸ್ಥಿತಿ ಹೆಚ್ಚೆಚ್ಚು ನಗೆಗೀಡಾಗುತ್ತಿರುವಂತೆ ಪ್ರತಿಪಕ್ಷಗಳ ನಾಯಕತ್ವಕ್ಕೆ ಟಿಎಂಸಿಯ ಧಾವಂತ, ಆಳುವವರು  ತುಸು ನಿರಾಳವಾಗಲು ಅವಕಾಶ ಮಾಡಿ ಕೊಟ್ಟಂತೆ ಕಾಣುತ್ತದೆ…

ಮಿಕಾ ಅಜೀಜ್, ಫೇಸ್‍ ಬುಕ್                                                       ಪಿ.ಮಹಮ್ಮದ್, ಫೇಸ್‍ ಬುಕ್

ಇದೇ ಧಾವಂತದ ಭಾಗವಾಗಿ ದೀದಿ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ,  ಅಲ್ಲಿ ವಿಡಂಬನಕಾರರನ್ನು ಭೇಟಿ ಮಾಡಿದಾಗ….

ನನ್ನ ವಾಕ್‍ ಸ್ವಾತಂತ್ರ್ಯದ ಹಕ್ಕನ್ನು ತುಳಿಯಲಾಯಿತು..ನನ್ನನ್ನು ಕಂಬಿ ಎಣಿಸುವಂತೆ ಮಾಡಲಾಯಿತು
… ವರ್ಷಗಳ ನಂತರವೂ ಆರೋಪ ಎದುರಿಸುತ್ತಿದ್ದೇನೆ
..ಹೊಸ ಕೇಸುಗಳನ್ನು ಹಾಕುವ ಭಯವೂ ಇದೆ”

ಅಸಹ್ಯ! ಇದು ಆಗಿರುವುದು ಯಾವಾಗ? ಎಲ್ಲಿ?:              “ ಕೊಲ್ಕತಾದಲ್ಲಿ, 2012ರಲ್ಲಿ”

(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

2012ರಲ್ಲಿ ಕೊಲ್ಕತಾದ ಜಾಧವಪುರ ವಿಶ್ವವಿದ್ಯಾಲಯದ ಒಬ್ಬ ಪ್ರಾಧ್ಯಾಪಕರನ್ನು ಅವರು ದೀದಿಯ ಬಗ್ಗೆ ಒಂದು ವಿಡಂಬನೆಯ ಇ-ಮೇಲನ್ನು ಫಾರ್ವರ್ಡ್ ಮಾಡಿದ್ದಕ್ಕೆ ಬಂಧಿಸಿದ್ದನ್ನು ಈ ಕಾರ್ಟೂನ್‍ ನೆನಪಿಸಿದೆಯಲ್ಲವೇ?

ಪರ್ಯಾಯ ಇಲ್ಲಿದೆ ಎಂದಿದ್ದಾರೆ, ಆದರೆ ನಿಜಕ್ಕೂ ಇದು ಪರ್ಯಾಯವೇ?

ನಾವು ಇನ್ನೊಬ್ಬ ಬಲಿಷ್ಟ, ಮಹತ್ವಾಕಾಂಕ್ಷಿ, ಕಟು ಸ್ವಭಾವದ ಮುಖ್ಯಮಂತ್ರಿಯನ್ನು ನಂಬಬಹುದೇ?”

(ಮಂಜುಲ್, ವೈಬ್ಸ್ ಆಫ್‍ ಇಂಡಿಯ)

ಗುಜರಾತ, ಉತ್ತರಪ್ರದೇಶದ ನಂತರ ಈಗ ಬಂಗಾಲ? ಈ ‘ರಾಷ್ಟ್ರೀಯ ಯೋಜನೆ’ಯ ಬಲೂನು ?

“ಇದು ಒಡೆಯುವುದಿಲ್ಲ ಎಂದು ನಿನಗೆ ಖಾತ್ರಿಯಿದೆಯೇ, ಪ್ರಶಾಂತ್..?

ಅಲೋಕ್‍ ನಿರಂತರ್, ಫೇಸ್‍ ಬುಕ್

ಕೊನೆಯದಾಗಿ, ಲಕ್ನೌ ನಲ್ಲಿ ಮಿರಾಜ್ ಜೆಟ್‍ಫೈಟರ್‍ ನ ಚಕ್ರ ಕಳವು

ಸಾಧನೆಗಳ ಪಟ್ಟಿಯಲ್ಲಿ ಸೇರಬೇಕು, ಕೇವಲ ಎಮ್ಮೆ, ಕುರಿ,
ನಾಯಿ ಕಳವಿನ ಸುದ್ದಿ ಬರುತ್ತಿದ್ದ ಪ್ರದೇಶದಲ್ಲಿ ……

( ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್ ಆಫ್‍ ಇಂಡಿಯ)

ಮತ್ತು ಕೊವಿಡ್‍-19ರ ಇನ್ನೊಂದು ರೂಪಾಂತರಿ ಒಮಿಕ್ರಾನ್ ಭಾರತದಲ್ಲಿ ಕಂಡಿರುವ ಬಗ್ಗೆ ….

Donate Janashakthi Media

Leave a Reply

Your email address will not be published. Required fields are marked *