ವೇದರಾಜ ಎನ್ ಕೆ
ಈ ವರ್ಷದ ಸಂವಿಧಾನ ದಿನಾಚರಣೆಯಲ್ಲಿ, ಪ್ರಧಾನಿಗಳು , ಅಭಿವ್ಯಕ್ತಿ ಸ್ವಾತಂತ್ರ್ಯ ಮುಂತಾದ ಹಕ್ಕುಗಳ ದುರುಪಯೋಗ ಪ್ರಗತಿಗೆ ಕಂಟಕವಾಗುತ್ತಿದೆ ಎಂದರು! ದೇಶದ ಮುಖ್ಯ ನ್ಯಾಯಾಧೀಶರು, ಈ ಮೊದಲು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಸತ್ತಿನಲ್ಲಿ ಚರ್ಚೆಗಳ ಅಭಾವದಿಂದಾಗಿ ಅದು ರೂಪಿಸುವ ಕಾನೂನುಗಳಲ್ಲಿ ಸ್ಪಷ್ಟತೆಯ ಅಭಾವ ಉಂಟಾಗಿದೆ ಎಂದವರು, ಅದನ್ನೇ ಮುಂದುವರೆಸಿ, 75 ವರ್ಷಗಳಲ್ಲಿ ನಮ್ಮ ಸಂವಿಧಾನ ಹೆಚ್ಚು ಶ್ರೀಮಂತವಾಗಿದೆ, ಇದು ಚರ್ಚೆ, ಸಂವಾದಗಳ ಫಲ, ಇದರಲ್ಲಿ ಸ್ವತಂತ್ರ ಭಾರತದ ನಾಗರಿಕರ ಕೊಡುಗೆಯನ್ನೂ ಸಂಭ್ರಮಿಸಬೇಕು ಎಂದರು. ಅದಾದ ಮೂರನೇ ದಿನ ಒಬ್ಬ ಖ್ಯಾತ ಕಾಮಿಡಿಯನ್ ಇನ್ನು ಮುಂದೆ ಜನರನ್ನು ನಗಿಸಲಾರೆ ಎಂದು ಕೈಚೆಲ್ಲಿದರು. ಮರುದಿನ, ಪ್ರಧಾನಿಗಳು ವಾರದ ಹಿಂದೆಯಷ್ಟೇ ಕೊಟ್ಟ ಮಾತಿನಂತೆ ಮೂರೂ ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ಸಂಸತ್ತು ಅನುಮೋದನೆ ಕೊಟ್ಟಿತು- ಈ ಬಾರಿಯೂ ಯಾವುದೇ ಚರ್ಚೆಯಿಲ್ಲದೆ! ಈ ನಡುವೆ ಶತಕ ಬಾರಿಸಿದ ಟೊಮಾಟೋ ಬೆಲೆ, ಬಿಟ್ ಕಾಯಿನ್ ಹಗರಣ- ವ್ಯಂಗ್ಯಚಿತ್ರಕಾರರಿಗೆ ಪುಷ್ಕಳ ವಿಷಯಗಳು- ಇವುಗಳತ್ತ ಒಂದು ಇಣುಕು ನೋಟ.
ಪ್ರಧಾನ ಮಂತ್ರಿಗಳು ಮೂರೂ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆಯುವ ಪ್ರಕಟಣೆಯನ್ನು ಮಾಡಿದ ಐದು ದಿನಗಳಲ್ಲೇ ಅದಕ್ಕೆ ಸಂಪುಟದ ‘ಅನುಮೋದನೆ’ ಪಡೆದರು, ನಂತರ ಐದು ದಿನಗಳಲ್ಲೇ, ಅಂದರೆ ಒಟ್ಟು ಹತ್ತು ದಿನಗಳಲ್ಲೇ ಅದಕ್ಕೆ ಸಂಸತ್ತಿನ ಅನುಮೋದನೆಯನ್ನೂ ಪಡೆದುಕೊಂಡೇ ಬಿಟ್ಟಿದ್ದಾರೆ. ಯಾವ ರೀತಿಯಲ್ಲಿ ಈ ಕಾಯ್ದೆಗಳು ಬಂದವೋ ಅದೇ ರೀತಿಯಲ್ಲಿ ಅವು ಹೋಗಿ ಬಿಟ್ಟಿವೆ- ಅಂದರೆ ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ, ನಿಖರವಾಗಿ ಹೇಳಬೇಕೆಂದರೆ ಯಾವುದೇ ಚರ್ಚೆಗೆ ಅವಕಾಶವನ್ನೂ ಕೊಡದೆ!
2020- ಚರ್ಚೆಯಿಲ್ಲದೆ ಪಾಸಾಯಿತು.
2021-ಚರ್ಚೆಯಿಲ್ಲದೆ ರದ್ದಾಯಿತು
ಎಲ್ಲ ಸರಕಾರದ ಲೀಲೆ!
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
ಕಾಯ್ದೆ ರದ್ಧತಿಯ ಮಸೂದೆಯಲ್ಲಿ ಒಟ್ಟು 1495 ಪದಗಳಿದ್ದವು, ಅದರಲ್ಲಿ ರದ್ದಾಗುತ್ತಿದ್ದ ಕಾನೂನುಗಳ ಉದ್ದ ಹೆಸರುಗಳು ಮತ್ತು ಇತರ ತಾಂತ್ರಿಕ ಅಂಶಗಳನ್ನು ಬಿಟ್ಟರೆ ಹೆಚ್ಚೆಂದರೆ 743 ಪದಗಳಿದ್ದವು. ಇವನ್ನು ಈ ಮೂರು ಕಾನೂನುಗಳು ಸರಿಯಾಗಿದ್ದವು, ರೈತರ ಕಲ್ಯಾಣಕ್ಕಾಗಿಯೇ ಇದ್ದವು ಎಂದೆಲ್ಲ ಹೇಳಲಿಕ್ಕೇ ಖರ್ಚು ಮಾಡಲಾಗಿದೆ ಎಂದೊಬ್ಬ ರೈತ ಮುಖಂಡರು ಈ ಬಗ್ಗೆ ಬರೆಯುತ್ತ ಹೇಳಿದ್ದಾರೆ.
“ಅವು ಒಳ್ಳೇ ಕಾನೂನುಗಳು. ಆದರೆ ನಾವು ನಿಮಗೆ ಮನದಟ್ಟು ಮಾಡುವಲ್ಲಿ ವಿಫಲರಾದೆವು”
“ಅವು ಕೆಟ್ಟ ಕಾನೂನುಗಳಾಗಿದ್ದವು. ನಿಮಗೆ ಮನದಟ್ಟು ಮಾಡುವಲ್ಲಿ ನಾವು ಯಶಸ್ವಿಯಾದೆವು”
(ಪಂಜು ಗಂಗೊಳ್ಳಿ, ಫೇಸ್ ಬುಕ್)
ಹೌದು, ರೈತರು ತಮ್ಮ ಹೋರಾಟದಲ್ಲಿ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬಾರಿ ಉತ್ತರ ಕೊಟ್ಟಿದ್ದಾರೆ. ಆದರೂ ಈ ರದ್ಧತಿ ಮಸೂದೆಯಲ್ಲಿ ಸರಕಾರ ಮತ್ತೆ ಅದನ್ನೇ ಹೇಳಿದೆ ಎಂದು ರೈತ ಮುಖಂಡರು ಬೇಸರ ವ್ಯಕ್ತಪಡಿಸುತ್ತ ಹೇಳುತ್ತಿದ್ದಾರೆ.
ಅತ್ತ ಲೋಕಸಭೆಯಲ್ಲಿ “ಪರಿಶೀಲನೆ ಮತ್ತು ಅಂಗೀಕಾರ” ಎಂದಿದ್ದರೂ, ಸರಕಾರ ಅಂಗೀಕಾರಕ್ಕೇ ನೆಗೆಯಿತು ಎಂದು ಪ್ರತಿಪಕ್ಷಗಳ ಸದಸ್ಯರು ಆಕ್ಷೇಪವೆತ್ತಿದ್ದಾರೆ. ರಾಜ್ಯಸಭೆಯಲ್ಲಂತೂ ಅಂಗೀಕಾರದ ಸಮಯದಲ್ಲಿ ಆದಂತೆ 12 ಸದಸ್ಯರನ್ನು ಅಮಾನತು ಕೂಡ ಮಾಡಲಾಗಿದೆ. ಎರಡೂ ಸದನಗಳಲ್ಲಿ ಧ್ವನಿಮತದಿಂದ ಅಂಗೀಕಾರವಾಗಿದೆ ಎಂದು ಘೋಷಿಸಲಾಯಿತು.
“ನೀವು ಯಾವ ಧ್ವನಿಮತದ ಬಗ್ಗೆ ಹೇಳುತ್ತಿದ್ದೀರಿ, ಮೇಡಂ?”
(ಕೀರ್ತೀಶ್, ಬಿಬಿಸಿ ನ್ಯೂಸ್ ಹಿಂದಿ)
ಅಧಿವೇಶನ ಆರಂಭವಾಗುವ ಮೊದಲು ಪ್ರಧಾನಿಗಳು ಪತ್ರಕರ್ತರೊಂದಿಗೆ ಮಾತಾಡುತ್ತ ಸರಕಾರ ಪ್ರತಿಯೊಂದು ವಿಚಾರವನ್ನು ಚರ್ಚಿಸ ಬಯಸುತ್ತದೆ, ಯಾವುದೇ ಪ್ರಶ್ನೆಗೆ ಉತ್ತರ ಕೊಡಲು ಸಿದ್ಧವಿದೆ” ಎಂದಿದ್ದರು. ಆದರೂ ಚರ್ಚೆಗೆ ಏಕೆ ಅವಕಾಶ ಕೊಡಲಿಲ್ಲ?
ಪ್ರತಿಯೊಂದು ವಿಚಾರ ಎಂದರೆ, ನಿಜವಾಗಿಯೂ ಈ ಕಾಯ್ದೆಗಳು ರೈತರ ಕಲ್ಯಾಣಕ್ಕೆಂದು ತಂದವುಗಳೇ, ಹಾಗಿದ್ದರೆ, ರೈತರು ಎತ್ತಿದ ಪ್ರಶ್ನೆಗಳಿಗೆ ಸರಕಾರದ ಬಳಿ ಉತ್ತರವಿದೆಯೇ? “ರೈತರ ಒಂದು ವಿಬಾಗ’ಕ್ಕಷ್ಟೇ ಇದನ್ನು ಮನದಟ್ಟುಮಾಡುವಲ್ಲಿ ಪ್ರಧಾನಿಗಳ ‘ತಪಸ್ಸಿನಲ್ಲಿದ್ದ ಕೊರತೆ’ಯಾದರೂ ಏನು ಎಂದು ಸರಕಾರಕ್ಕೆ ಮನದಟ್ಟಾಗಿದೆಯೇ? ಇವೆಲ್ಲಕ್ಕೂ ಮಿಗಿಲಾಗಿ ಎಂಎಸ್‍ಪಿ ಮತ್ತಿತರ ಆರು ಬೇಡಿಕೆಗಳ ಬಗ್ಗೆ ಸರಕಾರ ಏನು ಮಾಡಬೇಕೆಂದಿದೆ ಇತ್ಯಾದಿ ಇತ್ಯಾದಿ ಸೇರುವುದಿಲ್ಲವೇ?
ಇವಕ್ಕೆಲ್ಲ ಉತ್ತರ ಇಲ್ಲವಾದ್ದರಿಂದ, ಅಥವ ಉತ್ತರ ಕೊಡಬೇಕಾಗಿಲ್ಲ ಎಂಬ ಅದೇ ಈ ಒಂದು ವರ್ಷದಲ್ಲಿ ವಿಫಲವಾದ ಅಹಂಭಾವವೇ ಕಾರಣ ಎಂದು ಕೆಲವರು ಹೇಳುತ್ತಾರೆ.
“ನಾವು ನಿಮ್ಮ ಅಪ್ಪ…” “ಅಯ್ಯೋ!”
ಯು-ಟರ್ನ್ “ಇಲ್ಲ! ಚರ್ಚೆ ಇಲ್ಲ!”
(ಸತೀಶ ಆಚಾರ್ಯ, ಫೇಸ್ ಬುಕ್)
ಇಲ್ಲ, ಈ ರದ್ಧತಿ ಮಸೂದೆಯ ಪ್ರಸ್ತಾವನೆ ನೋಡಿದರೆ, ಮತ್ತು ಚರ್ಚೆ ತಪ್ಪಿಸಿದ್ದನ್ನು ನೋಡಿದರೆ, ಸದ್ಯ ಚುನಾವಣೆಯ ಭಯದಿಂದಷ್ಟೇ ಕಾಯ್ದೆಗಳನ್ನು ಹಿಂತೆಗೆದುಕೊಳ್ಳವುದಕ್ಕೆ ಮುಂದಾಗಿರುವುದು, ಮತ್ತು ರೈತರು ನಂಬಲೆಂದು ಈ ರದ್ಧತಿ ಮಸೂದೆ ತಂದಿರುವುದು, ಚುನಾವಣೆಯ ನಂತರ ಯಾವುದಾದರೂ ರೂಪದಲ್ಲಿ ಇದನ್ನು ಮತ್ತೆ ತರುವ ದುರಾಲೋಚನೆ ಇವರಿಗಿದೆ ಎಂದು ಇನ್ನು ಕೆಲವರು ಹೇಳುತ್ತಾರೆ.
ಈ ಅಭಿಪ್ರಾಯಕ್ಕೆ ಕಾರಣ ಈ ಮೊದಲು 2015ರಲ್ಲಿ ಭೂಸ್ವಾಧೀನ ಕಾಯ್ದೆಯನ್ನು ಇದೇ ರೀತಿಯಲ್ಲಿ ರೈತರ ಐಕ್ಯ ಪ್ರತಿಭಟನೆಯಿಂದಾಗಿ ವಾಪಾಸು ಪಡೆದ ಮೇಲೆ ತಮ್ಮ ರಾಜ್ಯ ಸರಕಾರಗಳ ಮೂಲಕ ಅದನ್ನು ತರಲಾಗಿದೆ ಎಂಬ ಅನುಭವ ಮಾತ್ರವೇ ಅಲ್ಲ,
“ಕೇಂದ್ರ ಸರಕಾರ ಮತ್ತೊಮ್ಮೆ ಕೃಷಿ ಕಾಯ್ದೆ ತರಬಹುದು”
-ಆಳುವ ಪಕ್ಷದ ಕಡೆಯಲ್ಲಿ ಕೇಳಬಂದ ಮಾತು
“,,, ರೈತರ ಬಗ್ಗೆ ಏನೆಂಬೆ, ಈ ನಮ್ಮವರೂ ಕೂಡ ತಮ್ಮ ಟಿಪ್ಪಣಿಗಳ ಮೂಲಕ
ರೈತರ ಸಂದೇಹಗಳನ್ನು ಬಲಪಡಿಸುವಲ್ಲಿ ತೊಡಗಿದ್ದಾರೆ”
(ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್ ಆಫ್ ಇಂಡಿಯ)
ಹೌದು, ಮಧ್ಯಪ್ರದೇಶದ ಕೃಷಿ ಮಂತ್ರಿ ಇದನ್ನು ಸ್ಪಷ್ಟವಾಗಿ ಹೇಳಿದ್ದರೆ, ಉತ್ತಪ್ರದೇಶದ ಆಳುವ ಪಕ್ಷದ ಪ್ರಮುಖ ಮುಖಂಡರೊಬ್ಬರು ಹಾಗೂಮತ್ತೊಬ್ಬ ಆಳುವ ಪಕ್ಷದ ಸಾಧು ಮಹಾರಾಜ ಕೂಡ ಇದನ್ನು ಯಾವಾಗ ಬೇಕಾದರೂ ಮತ್ತೆ ತರಬಹುದು ಎಂದಿರುವುದಾಗಿ ವರದಿಯಾಗಿದೆ. ಇದು ಈ ಮೂವರ ವೈಯಕ್ತಿಕ ಅಭಿಪ್ರಾಯಗಳಲ್ಲ ಎನ್ನುತ್ತಾರೆ ರೈತ ಮುಖಂಡರು.
ಮತ್ತೊಂದು ಕಡೆ, ಮಾಸ್ಟರ್ ಸ್ಟ್ರೋಕ್ ಭಕ್ತರಂತೂ ಈ ಚರ್ಚೆಯಿಲ್ಲದ ಅನುಮೋದನೆಯ ಮೂಲಕ ಪ್ರತಿಪಕ್ಷಗಳಿಗೆ ತಮ್ಮ ಸರ್ವೋಚ್ಚ ಮುಖಂಡರುಗಳು ಚಳ್ಳೆಹಣ್ಣು ತಿನ್ನಿಸಿದ್ದಾರೆ ಎಂದು ಹಿರಿಹಿರಿ ಹಿಗ್ಗುತ್ತಿದ್ದಾರಂತೆ.
“ಮಾಸ್ಟರ್ ಸ್ಟ್ರೋಕ್! ಎಲ್ಲ ಕೀರ್ತಿ ನಮಗೇ ಬರುತ್ತದೆ, ಪ್ರತಿಪಕ್ಷಗಳಿಗಲ್ಲ!”
“ಚರ್ಚೆ ರದ್ಧತಿಯ ಮಸೂದೆಗೆ ಅಭಿನಂದನೆಗಳು”
(ಸಜಿತ್ ಕುಮಾರ್, ಡೆಕ್ಕನ್ ಕ್ರಾನಿಕಲ್) (ಮಂಜುಲ್, ನ್ಯೂಸ್9)
ಇದು ‘ಸೆಂಟ್ರಲ್ ವಿಸ್ತಾ’ದ ಮುಂಬರುವ ದಿನಗಳ ವೇಗದ ಕರಾಮತ್ತು ಎಂದು ಈ ವ್ಯಂಗ್ಯಚಿತ್ರಕಾರರಿಗೆ ಅನ್ನಿಸಿದೆ.
“ಹೊಸ ಸಂಸದ್ ಮಾರ್ಗದಲ್ಲಿ ವೇಗವಾಗಿ ಸಾಗದಿದ್ದರೆ
ನಿಮಗೆ ದಂಡ ಹಾಕಬಹುದು”
(ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್)
***
ಇದರ ಹಿಂದಿನ ದಿನವೇ ನಗೆ-ಪ್ರದರ್ಶನಗಳಿಗೆ ಹೆಸರಾದ ಮುನವ್ವರ್ ಫಾರುಕಿಯ ಬೆಂಗಳೂರು ಕಾರ್ಯಕ್ರಮ ರದ್ದಾದ ಸುದ್ದಿ ಬಂದಿತ್ತು. ಇದು ಕೇವಲ ಕಾಕತಾಳಿಯವಾಗಿರಲಿಕ್ಕಿಲ್ಲ ಎಂದು ಹಲವು ವ್ಯಂಗ್ಯಚಿತ್ರಕಾರರಿಗೆ ಅನ್ನಿಸಲಾರಂಭಿಸಿದೆ.
ಕೃಷಿ ಕಾಯ್ದೆಗಳು ರದ್ದು.. ……ಬೆಂಗಳೂರು ಕಾಮಿಡಿ ಇವೆಂಟ್ ರದ್ದು
ಹಾ ಹಾ ಹಾ ಹಾ ಹೌದು ಗಳು ಗೆದ್ದಿವೆ !
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
ಆದರೆ ಸತತವಾಗಿ ಹನ್ನೆರಡನೇ ಬಾರಿಗೆ ತನ್ನ ನಗೆ ಪ್ರದರ್ಶನ ರದ್ದಾದ ಮೇಲೆ ನಗೆಗಾರ “ದ್ವೇಷ ಗೆದ್ದಿದೆ, ಕಲೆ ಸೋತಿದೆ” ಎಂದು ಹೇಳಿದ್ದಾರಂತೆ.
ಇಲ್ಲ ರದ್ದಾಗಿಲ್ಲ, ಅದು ದಿಲ್ಲಿಗೆ ವರ್ಗವಾಗಿದೆ……
ತಲೆಕೆಡಿಸಿಕೊಳ್ಳಬೇಡಿ, ದಿಲ್ಲಿ ಶೋ ವೀಕ್ಷಿಸಿ
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಇನ್ನೂ ನಿಖರವಾಗಿ.. ಅದೂ ದಿಲ್ಲಿಯಲ್ಲಿ, ದಿಲ್ಲಿಯಿಂದಾಳುವ ಪಕ್ಷದ ರಾಜಧಾನಿಗಳಲ್ಲಿ ಕೇಂದ್ರೀಕರಣಗೊಂಡಿದೆ ಎನ್ನಬಹುದೇ?
ಪಂಜು ಗಂಗೊಳ್ಳಿ, ಫೇಸ್ ಬುಕ್
ಪಿ.ಮಹಮ್ಮದ್, ವಾರ್ತಾಭಾರತಿ
ಹೌದು, ಬೆಲೆಯೇರಿಕೆ, ಪೆಟ್ರೋಲ್ ದರ ಏರಿಕೆ, ಉದ್ಯೋಗ ನಷ್ಟ, ಹಸಿವು, ಬಡತನ , ಅಸಹಿಷ್ಣುತೆ ಇವೆಲ್ಲದರ ನಡುವೆಯೂ ಜನಗಳನ್ನು ನಗಿಸುವುದೆಂದರೇನು?
ನಿಲ್ಲಿಸಿ ಅವನನ್ನು! (ಸತೀಶ ಆಚಾರ್ಯ, ಫೇಸ್ ಬುಕ್)
ಆದರೂ…ಎಸ್.ಯು.ವಿ. ಚಕ್ರ ತಂದ ಪಕ್ಕೆಲುಬು ಮುರಿತಕ್ಕೆ ನಗು ಉತ್ತಮ ಮದ್ದೇನೂ ಅಲ್ಲ
ಪ್ರಜಾಪ್ರಭುತ್ವ (ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯ)
***
ಇದರ ಮೂರು ದಿನಗಳ ಮೊದಲಷ್ಟೇ ದೇಶಾದ್ಯಂತ ‘ಸಂವಿಧಾನ ದಿನ’ ಆಚರಣೆ ನಡೆಯಿತು.
ಪ್ರಧಾನಿಗಳು, ಒಂದೆಡೆ ಮುಂದುವರೆದ ದೇಶಗಳು “ಅವರದ್ದೇ ಅಭಿವೃದ್ಧಿ ದಾರಿ ಹಿಡಿಯ ಬಯಸುವ”(?) ನಮ್ಮಂತಹ ದೇಶಗಳ ದಾರಿಯಲ್ಲಿ ಮುಳ್ಳು ಹಾಕುತ್ತಿವೆ(!) ಇನ್ನೊಂದೆಡೆಯಲ್ಲಿ ಭಾರತೀಯರು ಸಂವಿಧಾನದಲ್ಲಿ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮುಂತಾದ ಹಕ್ಕುಗಳನ್ನು ದುರುಪಯೋಗ ಪಡಿಸಿಕೊಂಡು ಪ್ರಗತಿಗೆ ಕಂಟಕವಾಗುತ್ತಿದ್ದಾರೆ ಎಂದರು!!
ಇತ್ತ ದೇಶದ ಮುಖ್ಯ ನ್ಯಾಯಾಧೀಶರು 75 ವರ್ಷಗಳಲ್ಲಿ ನಮ್ಮ ಸಂವಿಧಾನ ಹೆಚ್ಚು ಶ್ರೀಮಂತವಾಗಿದೆ, ಇದು ಚರ್ಚೆ, ಸಂವಾದಗಳ ಫಲ, ಇದರಲ್ಲಿ ಸ್ವತಂತ್ರ ಭಾರತದ ನಾಗರಿಕರ ಕೊಡುಗೆಯನ್ನೂ ಸಂಭ್ರಮಿಸಬೇಕು ಎಂದರು !
ಮೂರನೇ ದಿನ ನಗೆ ಕಾರ್ಯಕ್ರಮ ರದ್ದಾಗಿ ಬೆಂಗಳೂರಿನಿಂದ ಹಿಂದಿರುಗಬೇಕಾಗಿ ಬಂದ ನಗೆಗಾರ ಸಾಕಪ್ಪಾ ಸಾಕು,, ಇನ್ನು ಮುಂದೆ ಜನರನ್ನು ನಗಿಸಲಾರೆ ಎಂದರು.
ಮಂಜುಲ್, ವೈಬ್ಸ್ ಆಫ್ ಇಂಡಿಯ ಪಿ.ಮಹಮ್ಮದ್, ಫೇಸ್‍ಬುಕ್
ಇದರ ನಡುವೆಯೂ ಸಂವಿಧಾನವನ್ನು ಉಳಿಸಿಕೊಳ್ಳುವ ಕೆಲಸವೂ ಸಾಗಿದೆ
ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
***
ಈ ನಡುವೆ ಬೆಂಗಳೂರನ್ನು ಜಗತ್ಪಸಿದ್ಧಗೊಳಿಸಿರುವ ಬಿಟ್ ಕಾಯ್ನ್ ಹಗರಣ ಕ್ರಿಪ್ಟೊ ಕರೆನ್ಸಿ ಎಂಬ ಅದೃಶ್ಯ ನಾಣ್ಯ ಕೇಂದ್ರ ಸರಕಾರ ತಲೆ ಕಡಿಸಿಕೊಳ್ಳುವಂತೆ ಮಾಡುತ್ತಿದೆಯಂತೆ..ಅದೂ ಪ್ರಧಾನಿಗಳ ಅಮೆರಿಕಾ ಭೇಟಿಯ ನಂತರ…
“ನಿಮ್ಮ ಯೋಚನೆಯೇನು? ಭಾರತಕ್ಕೆ ಕ್ರಿಷ್ಟೊ ಬೇಕೇ?”
“ಬೇಕಿಲ್ಲ! ನಮ್ಮಲ್ಲಿ ಚುನಾವಣಾ ಬಾಂಡುಗಳಿವೆ!”
(ಮಂಜುಲ್, ಫಸ್ಟ್ ಪೋಸ್ಟ್)
ಓ.ಕೆ. ಈ ಬಿಟ್ ಕಾಯ್ನ್ ಅಥವ ಕ್ರಿಪ್ಟೊ ಕರೆನ್ಸಿ ಎಂದರೇನು?
“ಅದು ದ್ವಿಮಾನ ಮಾಹಿತಿ ಪೋಣಿಕೆ … ಬ್ಲಾಕ್‍ಚೈನ್‍ನಿಂದ ನಡೆಯುತ್ತದೆ
ಅರ್ಥವಾಗಲಿಲ್ಲವೇ? ….ಸರಳೀಕರಿಸಿ ಹೇಳುತ್ತೇನೆ…”
ಅದು ಅದೃಶ್ಯವಾಗಿರುತ್ತದೆ, ಕಣ್ಣಿಗೆ ಕಾಣುವ ಅಸ್ತಿತ್ವ ಅದಕ್ಕಿಲ್ಲ,
ಅಚ್ಛೇ ದಿನ್‍ನಂತೆ ………ಈಗ ಅರ್ಥವಾಯಿತು!
(ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯಾ)
ಹಾಗಾದರೆ ಇನ್ನೊಂದು ಪ್ರಶ್ನೆ -ಚುನಾವಣಾ ಬಾಂಡ್ ಮತ್ತು ಕ್ರಿಪ್ಟೋ ಕರೆನ್ಸಿ ಎರಡೂ ಒಂದೇನಾ?
ಚುನಾವಣಾ ಬಾಂಡ್ ಹೇಳುತ್ತದೆ- “ ನೀನೂ ನನ್ನಂತೆಯೇ!”
ಕ್ರಿಪ್ಟೊ ಹೇಳುತ್ತದೆ – “ ಇಲ್ಲ ನನ್ನನ್ನು ಪತ್ತೆ ಹೆಚ್ಚಬಹುದು”
(ಸತೀಶ ಆಚಾರ್ಯ, ಫೇಸ್ ಬುಕ್)
ಅದರ ಅನಾಮಧೇಯತೆ, ಅಪಾರದರ್ಶಕತೆ, ಕಪ್ಪು ಹಣ ಸೆಳೆಯುವ ಸಾಮರ್ಥ್ಯ ಈ ಅದೃಶ್ಯ ನಾಣ್ಯಕ್ಕೆಲ್ಲಿ?
ಅದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ.
ಅಂದರೆ ಅಚ್ಛೇ ದಿನ್‍ಗಳಲ್ಲಿ ಬಂದು ನ್ಯೂಇಂಡಿಯಾದಲ್ಲಿ ನೆಲೆಯೂರಿರುವ ಚುನಾವಣಾ ಬಾಂಡಿನದ್ದೇ ಕೈಮೇಲೆ!
ಕೊನೆಯದಾಗಿ, ….. ಟೊಮಾಟೋ…ಬಡತನದ ರೇಖೆಯ ಮೇಲೇರಿದೆ..! ಸೇಬಿನ ಮಟ್ಟಕ್ಕೆ ಬಂದಿದೆ !!
ಬಡತನ ರೇಖೆ (ದಿನೇಶ್ ಕುಕ್ಕುಜಡ್ಕ) ಸಬ್ ಕೆ ಸಾಥ್ ಸಬ್ ಕಾ ವಿಕಾಸ್ (ಸತೀಶ ಆಚಾರ್ಯ)