ವೇದರಾಜ ಎನ್ ಕೆ
ಅಮೃತಕಾಲದ ಚುನಾವಣಾ ಕಸರತ್ತಿನಲ್ಲಿ……
ಅಮೃತ ಕಾಲದ ಮೊದಲ ಚುನಾವಣಾ ಕಾಲ ಮುಗಿದಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತಿನ ವಿಧಾನಸಭಾ ಚುನಾವಣೆಗಳ ಪ್ರಚಾರ ಕಾರ್ಯ ಮುಗಿಸಿ ಪ್ರಧಾನಿಗಳು ಈಗ ದಿಲ್ಲಿಯಲ್ಲೇ ಇದ್ದಾರೆ. ಅಲ್ಲಿ ಗುಜರಾತಿನಲ್ಲಿ ಅವರು ನಿರ್ಮಿಸಿದ ಜಗತ್ತಿನ ಅತಿ ದೊಡ್ಡ ಪ್ರತಿಮೆಯೂ ನಿರಾಳವಾಗಿದೆಯಂತೆ. ವ್ಯಂಗ್ಯಚಿತ್ರಕಾರರ ರೇಖೆಗಳ ಮೂಲಕ ಈ ಕಾಲದ ಒಂದು ಅವಲೋಕನ….
ನಿಜ ಫಲಿತಾಂಶಗಳು ಬಂದಿಲ್ಲ. ಇನ್ನೇನು ಬರಲಿವೆ. ಆದರೆ ಮತಗಟ್ಟೆ ಸಮೀಕ್ಷೆಗಳು ಫಲಿತಾಂಶಗಳನ್ನು ಹೇಳಿಯೇ ಬಿಟ್ಟಿವೆ. ಎಲ್ಲವೂ ಎಂದಿನ ರೀತಿಯಲ್ಲೇ ಇವೆ.
ಅಂದರೆ ಅಮೃತ ಕಾಲ ಬದಲಾವಣೆಗಳ ಕಾಲವಂತೂ ಅಲ್ಲ ..ಇದುವರೆಗೆ.
ಎಂದಿನಂತೆ ಚುನಾವಣಾ ಆಯೋಗ ಒಂದೇ ದಿನ ಫಲಿತಾಂಶ ಪ್ರಕಟಿಸಬೇಕಾಗಿರುವ ಚುನಾವಣೆಗಳ ವೇಳಾಪಟ್ಟಿಯ ಪ್ರಕಟಣೆಗಳಲ್ಲಿ ಮಾತ್ರ 20ದಿನಗಳ ಅಂತರ ಇಟ್ಟಿತ್ತು.
ಏಕೆ ?
ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್
ಪಿ.ಮಹಮ್ಮದ್, ಫೇಸ್‍ಬುಕ್
ಆ ಇಪ್ಪತ್ತು ದಿನಗಳು 7000 ಕೋಟಿ ರೂ. ಮೊತ್ತದ 14 ಸರಕಾರೀ ಪ್ರಾಜೆಕ್ಟ್ ಗಳ ಪ್ರಕಟಣೆಗಳು ಮತ್ತು 8 ಉದ್ಘಾಟನೆ/ಶಂಕುಸ್ಥಾಪನೆಗಳ ಉತ್ಸವದ ದಿನಗಳು ಎಂದು ಒಂದು ಪತ್ರಿಕೆ ಅವುಗಳ ಪಟ್ಟಿಯನ್ನೇ ಪ್ರಕಟಿಸಿದೆ.
ಎಕ್ಸಿಟ್ ಪೋಲ್‍ಗಳ ಫಲಿತಾಂಶಗಳೂ ಅದೇ ಅನುಪಾತದಲ್ಲಿ ಇವೆ.
***
ಈ ನಡುವೆ ಮೇ ತಿಂಗಳಿಂದ ಖಾಲಿ ಬಿದ್ದಿದ್ದ ಒಬ್ಬ ಚುನಾವಣಾ ಆಯುಕ್ತರ ಹುದ್ದೆಯನ್ನು ಹಿಂದಿನ ದಿನ ನಿವೃತ್ತಿ ಹೊಂದಿದ್ದ ಐಎಎಸ್‍ಅಧಿಕಾರಿಯನ್ನು ತರಾತುರಿಯಿಂದ ನೇಮಿಸಿದ್ದೂ ಆಯಿತು……
ಎರಡು ಉದ್ಯೋಗ ಮೇಳಗಳು
ಒಂದರಲ್ಲಿ ನೇಮಕಕ್ಕೆ ಕೇವಲ 8ವರ್ಷಗಳು,
ಇನ್ನೊಂದರಲ್ಲಿ 24 ಗಂಟೆಗಳ ದೀರ್ಘ ಸಮಯ!
ನಂತರ ಏಕೆ ಈ ‘ಮಿಂಚಿನ ವೇಗ’ದ ನೇಮಕ ಎಂದು ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆಯನ್ನು ಎದುರಿಸಬೇಕಾಯಿತು ಎಂಬುದು ಬೇರೆ ಮಾತು
***
ಅದೇನೇ ಇರಲಿ, ಗುಜರಾತಿನಲ್ಲಿ ತನ್ನ ಐತಿಹಾಸಿಕ ಪ್ರಯತ್ನ ಆರಂಭಿಸಿರುವ ಪಕ್ಷದ ದಿಲ್ಲಿ ಮುಖ್ಯಮಂತ್ರಿಗಳು ರಾಜಕೀಯ ಟೂರ್ ಗಳಲ್ಲಿ ವ್ಯಸ್ತರಾಗಿರುವುದರಿಂದ ದಿಲ್ಲಿಗೆ ಒಬ್ಬರು ಅರೆಕಾಲಿಕ ಮುಖ್ಯಮಂತ್ರಿ ಬೇಕು ಎಂದು ಕೇಂದ್ರದಲ್ಲಿ ಆಳುವ ಪಕ್ಷದ ಮುಖಂಡರೊಬ್ಬರು ಲೇವಡಿ ಮಾಡಿದರಂತೆ-ಗಾಜಿನ ಮನೆಯಲ್ಲಿರುವವರು ಕಲ್ಲು ತೂರಬಾರದು ಎಂಬ ಜಾಣರ ಮಾತನ್ನು ಮರೆತು.
ಸಹಜವಾಗಿಯೇ, ಭಾರತಕ್ಕೆ ಒಬ್ಬ ಅರೆಕಾಲಿಕ ಪ್ರಧಾನ ಮಂತ್ರಿ ಬೇಕು ಎಂಬ ಪ್ರತ್ಯುತ್ತರವೂ ಕೇಳಬಂತು.
***
ಸಹಜವಾಗಿಯೇ ಪ್ರಧಾನಿಗಳು ಇತ್ತೀಚೆಗಷ್ಟೇ ಲೇವಡಿ ಮಾಡಿದ ರೆವ್ಡಿ ಪ್ರಶ್ನೆಯೂ ಚರ್ಚೆಗೆ ಬಂತು, ಅದಕ್ಕೆ ಸಮಜಾಯಿಷಿಯೂ ಬಂತು.
ಗುಜರಾತಿನಲ್ಲಿ ವೇಳಾಪಟ್ಟಿ-ಪೂರ್ವ ಉತ್ಸವವಲ್ಲದೆ, ಹಿಮಾಚಲ ಪ್ರದೇಶದ ಚುನಾವಣಾ ಆಶ್ವಾಸನೆಗಳಲ್ಲಿ ಸೈಕಲ್ ಕೊಡುವುದೂ ಇದೆ. ಆದರೆ ಇದು ‘ಫ್ರೀಬೀ’ ಅಂದರೆ ಪುಕ್ಕಟೆ ಕೊಡುಗೆ ಅಲ್ಲ ‘ಸಬಲೀಕರಣ’ ವಂತೆ.
ಫ್ರೀಬೀ ಮತ್ತು ಸಬಲೀಕರಣದ ನಡುವಿನ ಗೆಗೆ ಬಹಳ ತೆಳುವಾಗಿದೆ: ಬಿಜೆಪಿ
ಸೈಕಲಿನ ನಮ್ಮ ಆಶ್ವಾಸನೆ ಸಾಮಾನ್ಯ ಫ್ರೀಬೀ ಅಲ್ಲ. ಸ್ವಲ್ಪ
ಸೂಕ್ಷ್ಮವಾಗಿ ಗಮನಿಸಿದರೆ ಅದು ಸಬಲೀಕೃತ ಸೂಪರ್ ಬೈಕಿನ ಹಾಗೆ ಓಡುತ್ತದೆ
‘ಇವರ’ ಆಶ್ವಾಸನೆಗಳು ಮತ್ತು ‘ಅವರ’ ಅಂದರೆ ಇತರರ ರೆವ್ಡಿಗಳಲ್ಲಿನ ವ್ಯತ್ಯಾಸಗಳನ್ನು ನೋಡಿ:
ನಮ್ಮ ಉದಾರ ಕಲ್ಯಾಣ ಕ್ರಮಗಳು .. ..ಅವರ ದುಂದುವೆಚ್ಚದ ಫ್ರೀಬೀಗಳು
ಅಲ್ಪಸಂಖ್ಯಾತರಿಗೆ ನಮ್ಮ ಕಾಳಜಿಯುಕ್ತ ಸಹಾಯಹಸ್ತ.. .. ಅವರ ಸ್ವಾರ್ಥಪರ ವೋಟ್‍ಬ್ಯಾಂಕ್ ತುಷ್ಟೀಕರಣ
ನಮ್ಮ ಕಾರ್ಯತತ್ಪರ ಪುತ್ರರು ಮತ್ತು ಪ್ರತ್ರಿಯರು.. .. ಅವರ ಕೆಡಿಸಿಟ್ಟ ರಾಜಕೀಯ ವಂಶ ಪರಂಪರೆ
ಅಷ್ಟೇ ಅಲ್ಲ,
ನಾವು ಬಡ ಜನಗಳಿಗೆ ಕೋಟಾಗಳನ್ನು ಕೊಡುತ್ತೇವೆ..ಅದು ಅತ್ಯಂತ ಅಂಚಿನಲ್ಲಿರುವವರನ್ನು ಹೊರಗಿಡುತ್ತದೆ
ನಮ್ಮ ರಾಜ್ಯಗಳು ಧಾರ್ಮಿಕ ಸ್ವಾತಂತ್ರ್ಯದ ಕಾಯ್ದೆಗಳನ್ನು ಪಾಸು ಮಾಡುತ್ತವೆ.. ,, ಅವು ಮತಾಂತರಗಳನ್ನು ನಿಷೇಧಿಸುತ್ತವೆ.
ನಾವು ರಾಜಕೀಯ ನಿಧಿನೀಡಿಕೆಯನ್ನು ಪಾರದರ್ಶಕಗಳಿಸುತ್ತೇವೆ..
ಅವು ರಹಸ್ಯಮಯ ಚುನಾವಣಾ ಬಾಂಡುಗಳ ಮೂಲಕ ಎಂಬುದು ಬೇರೆ ಮಾತು.
ಪೆನ್‍ಪೆನ್ಸಿಲ್‍ಡ್ರಾ, ಫೇಸ್‍ಬುಕ್
***
ಈ ನಡುವೆ ಸುಪ್ರಿಂ ಕೋರ್ಟ್ ಅಚ್ಛೇ ದಿನ್‍ಗಳ ಆರ್ಥಿಕ ವಾಗಿ ದುರ್ಬಲರಾಗಿರುವವರಿಗೆ (ಇಡಬ್ಲ್ಯುಎಸ್) 10% ಮೀಸಲಾತಿಯ ಕ್ರಮವನ್ನು ಎತ್ತಿ ಹಿಡಿಯಿತು. ಹಾಗಾಗಿ ಇದನ್ನಂತೂ ರೆವ್ಡಿ ಎನ್ನುವಂತೆಯೇ ಇಲ್ಲ!
ವರ್ಷ1 (ಕೆಲಸ ಬೇಕು) ವರ್ಷ2 ವರ್ಷ3 ಅದೇ ಕತೆ
ವರ್ಷ 4 10% ಇಡಬ್ಲ್ಯುಎಸ್ ವರ್ಷ 5 ಮತಗಟ್ಟೆಯತ್ತ ಮುಂದೆ? ಕಾದು ನೋಡಿ
***
ಆದರೆ, ಇತ್ತ ಗುಜರಾತಿನ ಮೊರ್ಬಿಯಲ್ಲಿ ‘ನವೀಕರಿಸಿದ’ ತೂಗುಸೇತುವೆ ಪುನರಾರಂಭದ ಕೇಲವೇ ದಿನಗಳಲ್ಲಿ ಮುರಿದು ಬಿದ್ದು 130ಕ್ಕೂ ಹೆಚ್ಚು ಮಂದಿ ಪ್ರಾಣ ಕಳಕೊಂಡರು.
ಇದು ಚುನಾವಣಾ ವೇಳಾಪಟ್ಟಿ ಪ್ರಕಟಣೆಯ ಸ್ವಲ್ಪವೇ ಮೊದಲು ನಡೆದರೂ, ಬ್ರಿಟಿಷರ ಕಾಲದ ಸೇತುವೆಯಾದ್ದರಿಂದ, ಮತ್ತು ಸುಮಾರು ಮೂರು ದಶಕದಿಂದ ಇಲ್ಲಿ ಬಿಜೆಪಿ ಆಳ್ವಿಕೆಯೇ ಇದ್ದುದರಿಂದ ಬೇರೆ ಯಾರನ್ನೂ ದೂರುವಂತಿರಲಿಲ್ಲ.
ಗುಜರಾತ್ ಮಾದರಿಯ ಈ ಪರಿ!
ಆದರೆ ಇದಕ್ಕೂ ಬಣ್ಣ ಸಾರಿಸುವುದು ಕಷ್ಟವೇನಲ್ಲ -ಇದಕ್ಕೆ 30 ಕೋಟಿ ರೂ.ಗಳಷ್ಟು ತೆರಿಗೆದಾರರ ಹಣ ವೆಚ್ಚವಾಯಿತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ- ಅದು ಬೇರೆ ಮಾತು.
ಆದರೂ ಬಣ್ಣ ಸಾರಿಸುವವರ ಕೆಲಸ ಮುಗಿಯಲಿಲ್ಲ….ಆವೇಳೆಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಯಿತು.
ಸಜಿತ್‍ಕುಮಾರ್, ಡೆಕ್ಕನ್ ಹೆರಾಲ್ಡ್
***
ಅದರಿಂದಾಗಿ ಯಾವುದರ ಪರಿವೆಯೂ ಇಲ್ಲದೆ ಗುಜರಾತಿನಲ್ಲಿ ಚುನಾವಣಾ ಪ್ರಚಾರ ಆರಂಭವಾಗಿಯೇ ಬಿಟ್ಟಿತು. ಪ್ರಧಾನ ಮಂತ್ರಿಗಳು, ಅದಕ್ಕಿಂತ ಹೆಚ್ಚಾಗಿ ಆಳುವ ಪಕ್ಷದ ಪ್ರಧಾನ ಸ್ಟಾರ್ ಪ್ರಚಾರಕರು ಕೂಡ ಯಾವುದೇ ಪರಿವೆಯಿಲ್ಲದೆ, “ನಾನು ಈ ಗುಜರಾತನ್ನು ಮಾಡಿದ್ದು” ಎಂಬುದು ಈ ಬಾರಿಯ ಚುನಾವಣಾ ಘೋಷವಾಕ್ಯ ಎಂದು ಸಾರಿದರು.
ನಾನು ಈ ಗುಜರಾತ್ ಮಾಡಿದೆ .. ಅವರು ಆ ಸೇತುವೆ ಮಾಡಿದರು
ಖಂಡಿತಾ ಹೌದು,
ನಾನೇ ಈ ಗುಜರಾತನ್ನು ಮಾಡಿದ್ದು
***
ಮುಂಂದೆ ಎಲ್ಲವೂ, ಅಭ್ಯರ್ಥಿಗಳ ಆಯ್ಕೆಯೂ ಸೇರಿದಂತೆ, ‘ಗುಜರಾತ್ ಮಾದರಿ’ಯಲ್ಲೇ ನಡೆದವು….
ಆಳುವ ಪಕ್ಷದ ಅಭ್ಯರ್ಥಿ ಪಟ್ಟಿಯಲ್ಲಿ ಸುಮಾರು 20%ದಷ್ಟು ಪಕ್ಷಾಂತರಿ ಕಾಂಗ್ರೆಸಿಗರು ಎನ್ನಲಾಗಿದೆ.
***
ಎರಡನೇ ಪ್ರಧಾನ ಸ್ಟಾರ್ ಪ್ರಚಾರಕರು 2002ರಲ್ಲಿ ‘ಅವರಿಗೆ’ ಸರಿಯಾದ ಪಾಟ ಕಲಿಸಿದ್ದೇವೆ , ಆ ಮೂಲಕ ಗುಜರಾತಿನಲ್ಲಿ ಶಾಶ್ವತ ಶಾಂತಿ ನೆಲೆಸುವಂತ ಮಾಡಿದ್ದೇವೆ ಎಂದು ಬೆನ್ನು ತಟ್ಟಿಕೊಂಡರು..
..”ಅವರಿಗೆ ಪಾಟ ಕಲಿಸಿ” ನೆಲೆಗೊಳಿಸಿದ ಶಾಶ್ವತ ಶಾಂತಿಯ ದೂತರುಗಳು
ಇಂತಹ ಅಭ್ಯರ್ಥಿಗಳ ಒಂದು ಸ್ಯಾಂಪಲ್ ಇಲ್ಲಿದೆ:
***
ಇನ್ನು ಚುನಾವಣಾ ಕಾರ್ಯತಂತ್ರ.. ಸ್ವಯಂವೇದ್ಯ..
ಉದಾಹರಣೆಗೆ, ಕಾರ್ಪೊರೇಷನ್ ಚುನಾವಣೆಯಿಂದ ಹಿಡಿದು ಎಲ್ಲ ಚುನಾವಣೆಗಳಲ್ಲೂ ‘ನನ್ನನ್ನು ನೋಡಿ ಓಟು ಕೊಡಿ’ ಎನ್ನಲು ಅವರೇನು 10 ತಲೆಯ ರಾವಣರೇ ಎಂದು ಹೊಸ ಕಾಂಗ್ರೆಸ್ ಅಧ್ಯಕ್ಷರ ಟಿಪ್ಪಣಿಯ ಬಳಕೆ..
“ಕಾಂಗ್ರೆಸಿನಿಂದ ಯಾರಾದರೂ ಏನಾದರೂ ಪ್ರಚಾರದಲ್ಲಿ
ನನಗೆ ನೆರವಾಗುವುದನ್ನು ಹೇಳುತ್ತೀರಾ, ಪ್ಲೀಸ್…”
***
ಪ್ರಧಾನ ಸ್ಟಾರ್ ಪ್ರಚಾರಕರ ಪ್ರಚಾರ ಕಾರ್ಯ ಚುನಾವಣಾ ಆಯೋಗದ ಗೆರೆ ದಾಟಿಯೂ ನಡೆದಿದೆ ಎಂಬುದು ಪ್ರತಿಪಕ್ಷಗಳವರು ಚುನಾವಣಾ ಆಯೋಗಕ್ಕೆ ದೂರು ಕೂಡ ಸಲ್ಲಿಸಿದ್ದಾರಂತೆ…
***
ಈ ಬಾರಿಯ ಪ್ರಚಾರದಲ್ಲಿ ಒಂದು ಹೊಸ ಅಂಶ ಎಂದರೆ ‘ಅಂಬ್ಯುಲೆನ್ಸ್’ ಪ್ರಚಾರ ..
ಪ್ರಧಾನಿಗಳು ತಮ್ಮ ಪ್ರಚಾರದ ವೇಳೆಯಲ್ಲಿ ಒಂದು ಅಂಬ್ಯುಲೆನ್ಸಿಗೆ ದಾರಿ ಮಾಡಿ ಕೊಡಲು ತಮ್ಮ ವಾಹನ ಸಾಲನ್ನು ನಿಲ್ಲಿಸಿದರು ಎಂಬುದಕ್ಕೆ ಭಾರೀ ಮಾಧ್ಯಮ ಪ್ರಚಾರ ನೀಡಲಾಯಿತು-ಆದರೆ ವ್ಯಂಗ್ಯಚಿತ್ರಕಾರರು ಇದನ್ನು ಕಂಡ ಬಗೆಯೇ ಬೇರೆ-
“”ಮೊದಲು ಅಂಬ್ಯುಲೆನ್ಸ್ ಹೋಗಲಿ.. ನಮ್ಮ ತಪ್ಪು ನೀತಿಗಳಿಗೆ ಬಲಿಯಾದ ಜನಗಳು…”
ಒಳಗಿರುವುದು ಗುಜರಾತ್ ಮಾದರಿ? ಅಥವ ವಿಕಾಸ? ,
ಗೊತ್ತಾಗುತ್ತಿಲ್ಲ!
***
ಅದೇನೇ ಇರಲಿ, ಕೊನೆಗೂ ಸತ್ಯಮೇವ ಜಯತೇ .. ..?
ತಪ್ಪು ತಪ್ಪು… ಜಯ ಮೋದೀಜೀ ಅವರಿಗೇ!!
***
ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಣೆಯ ನಂತರ….
ಅಭಿನಂದನೆಗಳು, ನಾನಿನ್ನು ಕೆಲಸಕ್ಕೆ ಮರಳಬಹುದೇ?
(ಪ್ರಧಾನಿ ಮೋದಿ ಪ್ರಚಾರಕ ಮೋದಿಗೆ)
***
ಕೊನೆಯದಾಗಿ, ಪ್ರಧಾನಿಗಳ ಸೋದರ ‘ಮೋದಿ ಬಹಳ ಕೆಲಸ ಮಾಡ್ತಾರೆ, ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದೆ” ಎಂದು ಭಾವುಕರಾಗಿ ಹೇಳಿದರಂತೆ..ಇದನ್ನು ಕೇಳಿ ನಿಟ್ಟುಸಿರು ಬಿಟ್ಟದ್ದು ಫೋಟೋಗ್ರಾಫರ್ ಅಂತೆ..
ಒಬ್ಬರಾದರೂ ನನ್ನ ಪರಿಸ್ಥಿತಿ ಗಮನಿಸಿದರಲ್ಲಾ !!
***