ಚಾಮರಾಜನಗರ : ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು – ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು

Please follow and like us:
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು,  ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಕೊಳ್ಳೆಗಾಲದ ಕುಂತೂರಿನಲ್ಲಿ ನಡೆದಿದೆ.

ಶುಭಾ ಹಾಗೂ ಕಾರು ಚಾಲಕ ಊರ್ಜಿತ್ ಮೃತ ದುರ್ದೈವಿಗಳು. ಶುಭಾ ಮೈಸೂರಿನಲ್ಲಿ ಟೆಲಿಕಾಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶುಭಾ ಹಾಗೂ ಮನಿತ್ ಎಂಬುವವರು ಕಾರಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು.

ಇದನ್ನೂ ಓದಿ : ಧಾರವಾಡ: ತಿನ್ನಲು ಕಡ್ಲೆ ಗಿಡ ಕಿತ್ತಿದ್ದಕ್ಕೆ ನಾಲ್ವರು ದಲಿತ ಹುಡುಗರ ಮೇಲೆ ಹಲ್ಲೆ

ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಕುಂತೂರು ಕೆರೆಗೆ ಬಿದ್ದಿದೆ. ತಡರಾತ್ರಿ ಈ ದುರಂತ ಸಂಭವಿಸಿದೆ. ಮನಿತ್ ಕಾರಿನ ಬಾನೆಟ್ ಮೇಲೆ ನಿಂತು ರಕ್ಷಿಸುವಂತೆ ಕೂಗಿದ್ದಾರೆ. ಯಾರೋ ಕೂಗುವುದನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮನಿತ್ ಸೇರಿ ಕಾರನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಅಷ್ಟರಲ್ಲಾಗಲೇ ಚಾಲಕ ಊರ್ಜಿತ್ ಹಾಗೂ ಶುಭಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮಾಂಬಳ್ಳಿ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ನೋಡಿ : ನಡುರಸ್ತೇಲಿ ಶರ್ಟ್‌ ಬಿಚ್ಚಿ ಚಾಟಿಯಿಂದ ಬಾರಿಸಿಕೊಂಡು ಹುಚ್ಚಾಟ ಮೆರೆದ ಅಣ್ಣಾಮಲೈ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *