ಕಾರು ರಿವರ್ಸ್‌ ತೆಗೆದುಕೊಳ್ಳಲು ಹೋಗಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು; ಯುವತಿ ಮೃತ

ಮಹರಾಷ್ಟ್ರ : ಮಹಿಳೆಯೊಬ್ಬರು ಡ್ರೈವಿಂಗ್‌ ಕಲಿಯುತ್ತಿದ್ದಾಗ ಕಾರು ರಿವರ್ಸ್‌ ತೆಗೆದುಕೊಳ್ಳಲು ಹೋಗಿ 300 ಅಡಿ ಆಳದ ಕಂದಕಕ್ಕೆ ಕಾರ್ ಉರುಳಿಬಿದ್ದು ಸಾವನ್ನಪ್ಪಿರುವ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.

ಕಾರ್ ಚಲಾಯಿಸುತ್ತಿದ್ದ ಯುವತಿ ರಿವರ್ಸ್​ ಗೇರ್​ನಲ್ಲಿದ್ದಾಗ ಏಕಾಏಕಿ ಎಕ್ಸಲೇಟರ್​​ ಒತ್ತಿದ ಪರಿಣಾಮ ಕಾರ್ ಕಂದಕಕ್ಕೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದಲ್ಲಿ 23 ವರ್ಷದ ಯುವತಿ ಆಕಸ್ಮಿಕವಾಗಿ ರಿವರ್ಸ್​ ಗೇರ್​ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರ್ ಹಿಂಬದಿಯ ಕ್ರ್ಯಾಶ್​ ಬ್ಯಾರಿಯರ್​ ಅನ್ನು ಮುರಿದು ಕಂದಕಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾಳೆ.

ಕಾರ್ ರಿವರ್ಸ್ ಗೇರ್ ನಲ್ಲಿದ್ದಾಗ ಯುವತಿ ಕ್ಲಚ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ನೇರವಾಗಿ ಕಂದಕಕ್ಕೆ ಬಿದ್ದಿದೆ. ಸುಲಿಭಂಜನ್ ಪ್ರದೇಶದಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಯುವತಿಯನ್ನು ಶ್ವೇತಾ ಸುರ್ವಾಸೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರ್ ಓಡಿಸಲು ಕಲಿಸಿದ್ದನು.

ಇದನ್ನು ಓದಿ : ಬಾಬರಿ ಮಸೀದಿಯ ಹೆಸರು ಅಳಿಸಿದ ಎನ್‌ಸಿಇಆರ್‌ಟಿಯ ಹೊಸ ಪುಸ್ತಕ

ಶ್ವೇತಾಗೆ ಕಾರ್ ಓಡಿಸುವಾಗ ರೀಲ್‌ಗಳನ್ನು ತಯಾರಿಸುವ ಆಸೆ ಇತ್ತು. ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್​ ಮಾಡುವಂತೆ ಕೇಳಿದ್ದಳು. ಇದ್ದಕ್ಕಿದ್ದಂತೆ ಕಾರ್ ರಿವರ್ಸ್ ಗೇರ್‌ನಲ್ಲಿ ಚಲಿಸಲು ಪ್ರಾರಂಭಿಸಿತು ಮತ್ತು ಶ್ವೇತಾ ಎಕ್ಸಲೇಟರ್ ಅನ್ನು ಒತ್ತಿದ್ದಾಳೆ. ಥಟ್ಟನೆ ಶ್ವೇತಾಳ ಕಾರ್ ವೇಗವಾಗಿ ಹಿಂದಕ್ಕೆ ಚಲಿಸತೊಡಗಿತು.

ಶಿವರಾಜ್​ ಕ್ಲಚ್ ಕ್ಲಚ್​ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ, ಅಷ್ಟರಲ್ಲಾಗಲೇ ಕಾರ್ ಕೆಳಗೆ ಬಿದ್ದಿದೆ. ಕಾರು ಚಾಲನೆ ಮಾಡುವಾಗ ಆಕೆಯ ಸ್ನೇಹಿತ ಶಿವರಾಜ್​ ಎಂಬಾತ ವಿಡಿಯೋ ಮಾಡುತ್ತಿದ್ದ, ಕಾರು ರಿವರ್ಸ್​ ಗೇರ್​ನಲ್ಲಿದ್ದಾಗ ಅಕಸ್ಮಾತ್​ ಆಗಿ ಆಕ್ಸಲರೇಟರ್ ಒತ್ತಿದ್ದರಿಂದ ಈ ಅವಘಡ ಸಂಭವಿಸಿದೆ.

ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ತಲುಪಲು ಗಂಟೆಗಳ ಸಮಯವನ್ನು ತೆಗೆದುಕೊಂಡಿತು, ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆಕೆ ಸಾವನ್ನಪ್ಪಿದ್ದಾಳೆ. ಒಂದೊಮ್ಮೆ ಕಾರು ರಿವರ್ಸ್​ ಗೇರ್​ನಲ್ಲಿರುವಾಗ ಆಕ್ಸಲರೇಟರ್​ ಒತ್ತಿದರೆ ಕಾರ್ ನಾವಂದುಕೊಂಡಿದ್ದಕ್ಕಿಂತ ವೇಗವಾಗಿ ಚಲಿಸುವ ಸಾಧ್ಯತೆ ಇರುತ್ತದೆ.

ಇದನ್ನು ನೋಡಿ : ಅಂಗನವಾಡಿ ಕಾರ್ಯಕರ್ತರು ಪಿಯುಸಿ, ಪದವಿ ಮುಗ್ಸಿದ್ದಾರೆ, Janashakthi Media

 

Donate Janashakthi Media

Leave a Reply

Your email address will not be published. Required fields are marked *