ಬೆಂಗಳೂರು: ನಗರದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಸಾವಿರಾರು ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಅರ್ಹ ಫಲಾನುಭವಿಗಳ ಬಿಪಿಎಲ್ ಪಡಿತರ ಚೀಟಿಗಳನ್ನೂ ತೆಗೆದುಹಾಕಲಾಗಿದ್ದು, ದಿನಸಿ ಇಲ್ಲದೆ ನಾಗರಿಕರು ಪರಿತಪಿಸುತ್ತಿದ್ದಾರೆ. ಮುನ್ಸೂಚನೆ
ದಿನಸಿ ಪಡೆಯಲು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದ ನಾಗರಿಕರು ಪಡಿತರ ಅಂಗಡಿಗಳಿಗೆ ತೆರಳಿದಾಗ ‘ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ’ ಅಥವಾ ‘ನಿಮ್ಮ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿದೆ’ ಎಂಬ ಉತ್ತರ ಸಿಕ್ಕಿದೆ. ‘ಈ ಕಾರಣದಿಂದ ದಿನಸಿ ನೀಡಲು ಸಾಧ್ಯವಿಲ್ಲ’ ಎಂದು ಅಂಗಡಿ ಮಾಲೀಕರು ಅವರಿಗೆ ತಿಳಿಸುತ್ತಿದ್ದಾರೆ. ಮುನ್ಸೂಚನೆ
ಏಕಾಏಕಿ ಬಿಪಿಎಲ್ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಆತಂಕಗೊಂಡಿರುವ ನೂರಾರು ನಾಗರಿಕರು, ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಕೆಂಗೇರಿಯ ಪಲ್ಲವಿ ಮತನಾಡಿ,”ನಾನು ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಗಳು ಅಂಗವಿಕಲೆ. ನನಗೆ ಹೆಚ್ಚಿನ ಆದಾಯ ಇಲ್ಲ. ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಿದ್ದಾರೆ. ಇಲ್ಲಿನ ಕಚೇರಿಯಲ್ಲಿ ಕೇಳಿದರೆ ‘ಐಟಿ ರಿಟರ್ನ್ ಮಾಡಿದ್ದೀರ, ಅದಕ್ಕೆ ರದ್ದಾಗಿದೆ ಎನ್ನುತ್ತಾರೆ. ನಾವು ಯಾವುದೇ ರೀತಿಯಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಿಲ್ಲ. ಆದಾಯ ತೆರಿಗೆ ಕಚೇರಿಯಿಂದ ಪತ್ರ ತೆಗೆದುಕೊಂಡು ಬನ್ನಿ ಎನ್ನುತ್ತಾರೆ. ತೆರಿಗೆ ಇಲಾಖೆಗೆ ಹೋದರೆ ಅವರು, ‘ನೀವು ತೆರಿಗೆ ಕಟ್ಟಿಲ್ಲ. ಯಾವ ಪತ್ರವನ್ನೂ ಕೊಡಲು ಸಾಧ್ಯವಿಲ್ಲ’ ಎನ್ನುತ್ತಾರೆ. ಅವರ ಕಾಲಿಗೆ ಬಿದ್ದು ಕೇಳಿಕೊಂಡೆ. ಆಹಾರ ಇಲಾಖೆಯಿಂದ ಪತ್ರ ತೆಗೆದುಕೊಂಡು ಬನ್ನಿ ಅನ್ನುತ್ತಾರೆ. ಆಹಾರ ಇಲಾಖೆಯ ಅಧಿಕಾರಿಗಳು ಭೇಟಿಗೆ ಸಿಗುತ್ತಿಲ್ಲ” ಎಂದು ದೂರಿದರು.
”ಬಿಪಿಎಲ್ ಕಾರ್ಡ್ ರದ್ದಾಗಿದೆ. ನಮಗೆ ಯಾವುದೇ ಹೆಚ್ಚಿನ ಆದಾಯ ಇಲ್ಲ. ಅದನ್ನು ಹೇಳಲು ಜಿಲ್ಲಾಧಿಕಾರಿ ಕಚೇರಿ ಹಾಗೂ ಆಹಾರ ಇಲಾಖೆಯ ನಗರ ವಿಭಾಗದ ಅಧಿಕಾರಿಗಳ ಕಚೇರಿಗಳಿಗೆ ಅಲೆಯುತ್ತಿದ್ದೇನೆ. ಆಧಾರ್, ಪ್ಯಾನ್, ಬಿಪಿಎಲ್ ಪಡಿತರ ಚೀಟಿಯ ಪ್ರತಿ ನೀಡಿ ಹೋಗಿ ಎನ್ನುತ್ತಿದ್ದಾರೆ. ಆದರೆ, ಈ ತಿಂಗಳು ಅಕ್ಕಿ, ದಿನಸಿ ಸಿಗದಿದ್ದರೆ ನಾವು ಏನು ತಿನ್ನುವುದು” ಎಂದು ರಾಧಾ, ಅಮ್ಮಯಮ್ಮ, ತಿಪ್ಪಣ್ಣ, ಸುರೇಶ್ ಎಂಬುವವರು ಪ್ರಶ್ನಿಸಿದರು.
ಕೆಲವು ಅರ್ಹ ಫಲಾನುಭವಿಗಳ ಕಾರ್ಡ್‌ಗಳೂ ರದ್ದಾಗಿದ್ದು ಇದೆಲ್ಲವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಬೇಕಿದೆ’ ಎಂದು ಪ್ರತಿಭಟನೆಕಾರರು ವಿವರಿಸಿದರು.
ಇದನ್ನೂ ನೋಡಿ: ಖಾಲಿ ಹುದ್ದೆ 18 ಸಾವಿರ | ನೇಮಕಾತಿ ಆದೇಶ ಐದು ಸಾವಿರು|ನಾವೆಲ್ಲಿಗೆ ಹೋಗೋಣ ಹೇಳಿ ಸಿಎಂ ಸರ್ -ಉದ್ಯೋಗಾಕಾಂಕ್ಷಿಗಳ ಅಳಲು