ಸುಯೋಗ್ಯ ಉದ್ಯೋಗ ನಿಮರ್ಮಾಣಕ್ಕೆ ಹಣ ಒದಗಿಸಿ – ಸಿಪಿಐ(ಎಂ) ಪೊಲಿಟ್‍ಬ್ಯುರೊ
ನವದೆಹಲಿ: ದೊಡ್ಡ ಕಾರ್ಪೊರೇಟ್ ಸಮೂಹಗಳಿಗೆ ಹಣವನ್ನು ವರ್ಗಾಯಿಸುವ ಉದ್ದೇಶವನ್ನು ಹೊಂದಿರುವ ಉದ್ಯೋಗಕ್ಕೆ ತಳಕು ಹಾಕಿರುವ ಪ್ರೋತ್ಸಾಹಕ (Employment Linked Incentive-ಇಎಲ್‍ಐ) ಯೋಜನೆಗೆ ಕೇಂದ್ರ ಮಂತ್ರಿ ಸಂಪುಟ ಮಂಜೂರಾತಿ ನೀಡಿರುವುದನ್ನು ವಿರೋಧಿಸುವುದಾಗಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಕಾರ್ಮಿಕರ ಹಿತಗಳನ್ನು ಬಲಿಗೊಟ್ಟು ಕಾರ್ಪೊರೇಟ್‌ಗಳಿಗೆ ಲಾಭ ಮಾಡಿಕೊಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಾಡಿದ ಮತ್ತೊಂದು ಪ್ರಯತ್ನ ಇದು ಎನ್ನುತ್ತ, ಇದು ಅದರ ಬಂಟತನಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.. ಸಬ್ಸಿಡಿ
ಇಎಲ್‍ಐ ಯೋಜನೆಯು ಯುವಕರಲ್ಲಿ ಭ್ರಮೆ ಹುಟ್ಟಿಸಲು ಉದ್ಯೋಗ ಸೃಷ್ಟಿ, ಉದ್ಯೋಗಾರ್ಹತೆಯನ್ನು ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಭರವಸೆಯ ಮರೆಯಲ್ಲಿ ಕಾರ್ಪೊರೇಟ್‌ಗಳಿಗೆ ಸಾರ್ವಜನಿಕ ಹಣವನ್ನು ವರ್ಗಾಯಿಸುವ ಮತ್ತೊಂದು ಮೋಸದ ಯೋಜನೆಯಾಗಿದೆ. ಈ ಯೋಜನೆಯು ಶಿಥಿಲ ಮತ್ತು ಅನಿಶ್ಚಿತ ಸ್ವರೂಪದ ಉದ್ಯೋಗಗಳನ್ನು ಉತ್ತೇಜಿಸುತ್ತದೆ, ಹೂಡಿಕೆ ವೆಚ್ಚ, ಉತ್ಪಾದನಾ ವೆಚ್ಚಗಳು, ಶ್ರಮ ವೆಚ್ಚಗಳು ಮತ್ತು ದೇಶೀಯ ಮತ್ತು ವಿದೇಶಿ ಉದ್ದಿಮೆ ಮಾಲಕರ ಶಾಸನಾತ್ಮಕ ಬಾಧ್ಯತೆಗಳನ್ನು ನಿರ್ವಹಿಸಲು ಅವರಿಗೆ ಸಾರ್ವಜನಿಕ ಖಜಾನೆಯಿಂದ ಸಬ್ಸಿಡಿ ಒದಗಿಸುವಂತದ್ದು ಎಂದು ಸಿಪಿಐ(ಎಂ) ವಿಶ್ಲೇಷಿಸಿದೆ.
ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧ : ಏನಾಯ್ತು ? ಏಕಾಯ್ತು? ಮುಂದೇನು? – ಭಾಗ 2
ಗ್ರಾಮೀಣ ಪ್ರದೇಶದ ಬಡವರಿಗೆ ಪ್ರಯೋಜನವನ್ನು ನೀಡುವ ಮನರೇಗ (MGNREGA) ಗಾಗಿ ಬಜೆಟ್ ಹಂಚಿಕೆಗಳನ್ನು ಕಡಿತಗೊಳಿಸುತ್ತಿರುವ ಮತ್ತು ನಗರ ಪ್ರದೇಶಗಳಿಗೆ ಅಂತಹ ಉದ್ಯೋಗ ಖಾತರಿ ಕಾಯ್ದೆಯನ್ನು ರೂಪಿಸಬೇಕೆಂಬ ಆಗ್ರಹವನ್ನು ನಿರ್ಲಕ್ಷಿಸುತ್ತಿರುವ. ಬಿಜೆಪಿ ನೇತೃತ್ವದ ಸರ್ಕಾರವು, ಅದೇ ಸಮಯದಲ್ಲಿ ಕಾರ್ಪೊರೇಟ್‌ಗಳಿಗೆ ಪ್ರೋತ್ಸಾಹದ ಹೆಸರಿನಲ್ಲಿ ಭಾರಿ ರಿಯಾಯಿತಿಗಳನ್ನು ಕೊಡುತ್ತಿದೆ.
ಕಾರ್ಪೊರೇಟ್ ವರ್ಗಕ್ಕೆ ಸಬ್ಸಿಡಿ ನೀಡುವ ಬದಲು, ಸಾಕಷ್ಟು ಹಣವನ್ನು ಹಂಚಿಕೆ ಮಾಡಿ ಬೃಹತ್ ಸಂಖ್ಯೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಮತ್ತು ಆರೋಗ್ಯ, ಶಿಕ್ಷಣ, ಸಾರ್ವಜನಿಕ ಸಾರಿಗೆ ಮುಂತಾದ ಸಾರ್ವಜನಿಕ ಸೇವೆಗಳನ್ನು ವಿಸ್ತರಿಸುವ ಮೂಲಕ ಮೂಲಕ, ಕನಿಷ್ಠ ವೇತನ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆಯೊಂದಿಗೆ ಘನತೆ ನೀಡುವ ಉದ್ಯೋಗವನ್ನು ಖಚಿತಪಡಿಸಬೇಕು ಎಂದು ಆಗ್ರಹಿಸುತ್ತ, ಸಿಪಿಐ(ಎಂ) ಪೊಲಿಟ್‍ಬ್ಯುರೊ ಸರ್ಕಾರ ತಕ್ಷಣವೇ ಇಎಲ್ಐ ಯೋಜನೆಯನ್ನು ರದ್ದುಗೊಳಿಸಿ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿದೆ.
ಇದನ್ನೂ ನೋಡಿ: ರೈತರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡ್ತೀರಾ.. ಸಿದ್ರಾಮಯ್ಯನವರೇ? ಎಸ್ ವರಲಕ್ಷ್ಮೀ ಪ್ರಶ್ನೆ Janashakthi
