ನವದೆಹಲಿ: ಕೆನಡಾದಲ್ಲಿ ಸಕ್ರಿಯರಾಗಿರುವ ಭಾರತ ವಿರೋಧಿ ಖಲಿಸ್ತಾನಿ ವ್ಯಕ್ತಿಗಳ ಚಟುವಟಿಕೆಗಳು ಒಂದು ಗಂಭೀರ ಕಳವಳದ ವಿಷಯವಾಗಿದೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.
ಭಾರತದ ವಿರುದ್ಧ ಕೆನಡಾ ಸರ್ಕಾರದ ವಿವಿಧ ಅಧಿಕಾರಿಗಳು ಹೊರಿಸಿರುವ ಆರೋಪಗಳನ್ನು ಭಾರತ ಸರ್ಕಾರ ತಿರಸ್ಕರಿಸಿದೆ.
ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತ ಸರ್ಕಾರವು ಕರ್ತವ್ಯ ಬದ್ಧವಾಗಿದೆ, ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಬೆಂಬಲವಿದೆ. ಇಂತಹ ಸನ್ನಿವೇಶದಲ್ಲಿ , ಲಾರೆನ್ಸ್ ಬಿಷ್ಣೋಯ್ ಕ್ರಿಮಿನಲ್ ಗ್ಯಾಂಗ್‌ನ ಪಾತ್ರದ ಬಗ್ಗೆ ಮಾಡಿರುವ ಆರೋಪ ಸೇರಿದಂತೆ ಈ ವಿಷಯಗಳಲ್ಲಿ ಭಾರತ ಸರ್ಕಾರವು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸುವುದಾಗಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.