ಮೈಸೂರು: ರಾಜ್ಯದಲ್ಲಿದ್ದಾಗಲೇ ಪ್ರಜ್ವಲ್ ರೇವಣ್ಣ, ಪಕ್ಷದ ಚಟುವಟಿಕೆಯ ಸಂದರ್ಭದಲ್ಲೂ ನನ್ನ ಸಂಪರ್ಕದಲ್ಲಿರಲಿಲ್ಲ. ಇನ್ನು ವಿದೇಶಕ್ಕೆ ಹೋದ ಮೇಲೆ ನನ್ನನ್ನು ಸಂಪರ್ಕಿಸಲು ಹೇಗೆ ಸಾಧ್ಯ ? ಎಂದು ಎನ್‌ಡಿಎ ಒಕ್ಕೂಟದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ವಿದೇಶ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅನಾವಶ್ಯಕವಾಗಿ ಎಸ್‌ಐಟಿ ಕೆಲವರನ್ನು ಬಂಧಿಸುತ್ತಿದೆ.
ಇದನ್ನು ಓದಿ : ಪೆನ್ಡ್ರೈವ್ ಲೈಂಗಿಕ ಹಗರಣ ಕುರಿತು ರಾಜ್ಯಮಟ್ಟದ ಸಮಾಲೋಚನಾ ಸಭೆ
ಈ ಕೇಸ್‌ನಲ್ಲಿ ಎಸ್‌ಐಟಿ ವಿಡಿಯೋ ವೈರಲ್ ಮಾಡಿದವರನ್ನು ಬಂಧಿಸುವಲ್ಲಿ ವಿಫಲಾವಗಿದೆ. ಆರೋಪಿ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಾನೆ ಆದರೆ ಪೊಲೀಸರ ಕೈಗೆ ಸಿಗುತ್ತಿಲ್ಲ ಏನಿದರ ಅರ್ಥ? ‘ ಎಂದು ಹೆಚ್‌ಡಿಕೆ ಪ್ರಶ್ನಿಸಿದ್ದಾರೆ.
ವಿಡೀಯೋ ಮಾಡಿಕೊಂಡವ ಹಾಗೂ ವಿಡೀಯೋ ಹಂಚಿದವ ಎಂಬ ಎರಡು ಭಾಗ ಈ ಪ್ರಕರಣದಲ್ಲಿದೆ. ಎಸ್‌ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ. ಪ್ರಕರಣ ದಾಖಲಾಗಿ ಒಂದು ತಿಂಗಳ ಮೇಲೆ ದೇವರಾಜೇಗೌರ ಬಂಧನ ಏಕೆ ಆಯಿತು? ದೇವರಾಜೇಗೌಡರಿಂದ ಏನು ಮಾಹಿತಿ ಬೇಕಿದೆ? ಏತಕ್ಕಾಗಿ ಎಸ್‌ಐಟಿ ಅವರನ್ನು 4 ದಿನಗಳಿಂದ ಬಂಧಿಸಿ ಇಟ್ಟುಕೊಂಡಿದೆ? ಎಂದು ಹೆಚ್‌ಡಿಕೆ ಪ್ರಶ್ನೆ ಇಟ್ಟಿದ್ದಾರೆ.
ಇದನ್ನು ನೋಡಿ : ಖಾಸಗಿ ಆಸ್ಪತ್ರೆಗಳ ಬಣ್ಣದ ಮಾತುಗಳಿಗೆ ಮರುಳಾದರೆ ಜೇಬಿಗೆ ಕತ್ರಿ ಬಿದ್ದಂತೆ – ಮರುಳಸಿದ್ದಪ್ಪ ಮಾತುಗಳು