ನೆಲಬಾಂಬ್​ಗಳನ್ನು ಪತ್ತೆ ಮಾಡುತ್ತಿದ್ದ ಇಲಿ ” ಮಾಗ್ವಾ” ಇನ್ನೂ ನೆನಪು ಮಾತ್ರ

  • ಗೋಲ್ಡ್ ಮೆಡಲ್ ಪಡೆದಿದ್ದ ಮಾಗ್ವಾ
  • ಹೀರೋ ರಾಟ್​ ಎಂದೇ ಖ್ಯಾತಿ ಪಡೆದಿತ್ತು

ಕಾಂಬೋಡಿಯಾ : ನೆಲದಲ್ಲಿ ಅಡಗಿಸಿಟ್ಟ ಬಾಂಬ್​ಗಳನ್ನು ಪತ್ತೆ ಮಾಡಿವುದರಲ್ಲಿ ನಿಸ್ಸೀಮನಾಗಿದ್ದ ಇಲಿ ಮಾಗ್ವಾ ಇನ್ನು ನೆನಪು ಮಾತ್ರ. ತಾಂಜೇನಿಯಾದಲ್ಲಿ ಹುಟ್ಟಿ ವಿಶೇಷ ತರಬೇತಿ ಪಡೆದು 5 ವರ್ಷಗಳ ಕಾಲ ಕಾಂಬೋಡಿಯಾದಲ್ಲಿ ಭದ್ರತಾಪಡೆಗಳೊಂದಿಗೆ ಕಾರ್ಯನಿರ್ವಹಿಸಿದ್ದ ಮಾಗ್ವಾ ಇದೀಗ ಸಾವನ್ನಪ್ಪಿದ್ದಾನೆ.

ಈ ಕುರಿತು Sky News ವರದಿ ಮಾಡಿದೆ. ಇತ್ತೀಚೆಗಷ್ಟೇ 8ನೇ ವರ್ಷಕ್ಕೆ ಕಾಲಿಟ್ಟಿದ್ದ ಮಾಗ್ವಾ ವಾರಾಂತ್ಯದಲ್ಲಿ ಸಾವನ್ನಪ್ಪಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಆರಾಮವಾಗಿಯೇ ಇದ್ದ ಮಾಗ್ವಾ ಇದ್ದಕ್ಕಿದ್ದಂತೆ ಊಟ ಮಾಡುವುದನ್ನು ನಿಲ್ಲಿಸಿತ್ತು. ಕ್ರಮೇಣ ಆರೋಗ್ಯ ಕ್ಷೀಣಸಿ ಸಾವನ್ನಪ್ಪಿದೆ ಎಂದು ತಿಳಿಸಿದೆ.

ಗೋಲ್ಡ್ ಮೆಡಲ್ ಪಡೆದಿದ್ದ ಮಾಗ್ವಾ :
ಐದು ವರ್ಷಗಳಲ್ಲಿ ಮಾಗ್ವಾ 100ಕ್ಕೂ ಹೆಚ್ಚು ನೆಲಬಾಂಬುಗಳನ್ನು ಪತ್ತೆ ಮಾಡಿತ್ತು. ಮಾಗ್ವಾ ಅಪ್ರತಿಮ ಸಾಧನೆಗಾಗಿ ಗೋಲ್ಡ್​ ಮೆಡಲ್​ನ್ನು ನೀಡಲಾಗಿತ್ತು. ಈ ಇಲಿಯನ್ನು ಹೀರೋ ರಾಟ್​ ಎಂದೇ ಕರೆಯಲಾಗುತ್ತಿತ್ತು ಎಂದು ಬಣ್ಣಿಸಿದೆ.

ಬದುಕಿರುವವರೆಗೆ 5 ವರ್ಷಗಳ ಅವಧಿಯಲ್ಲಿ 2,25,000 ಚದರ ಕಿಮೀನಷ್ಟು ಭೂಮಿಯಲ್ಲಿ ಬಾಂಬ್​ಗಳನ್ನು ಹುಡುಕಿದೆ. 31 ಪುಟ್ಬಾಲ್​ ಕ್ರೀಡಾಂಗಣದಲ್ಲಿ 71 ಜೀವಂತ ನೆಲಬಾಂಬ್​ಗಳನ್ನು ಪತ್ತೆ ಮಾಡಿದ್ದು, 38 ನಿಶ್ಯೇಷ್ಟಿತ ಬಾಂಬ್​ಗಳನ್ನು ಗುರುತಿಸಿದೆ ಎಂದು ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ. ಮಾಗ್ವಾದಿಂದ ನಾವು ಜೀವ ಅಥವಾ ಅಂಗವನ್ನು ಕಳೆದುಕೊಳ್ಳುವ ಭಯವಿಲ್ಲದೆ ಬದುಕಿ, ಕೆಲಸ ಮಾಡಿ, ಅನಂದವಾಗಿರಿ ಎನ್ನುವ ದೊಡ್ಡ ಪಾಠವನ್ನು ಕಲಿತಿದ್ದೇವೆ. ಅಷ್ಟು ದೈರ್ಯದಿಂದ ಕೂಡಿದ ಮಾಗ್ವಾವನ್ನು ಕಳೆದುಕೊಂಡಿರುವುದು ನಮ್ಮ ಭದ್ರತಾಪಡೆಗೆ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ.

ಈ ಇಲಿಯು 2014 ರಲ್ಲಿ ತಾಂಜೇನಿಯಾದ ಬಿದುರಿನ ಕಾಡಿನಲ್ಲಿ ಜನಿಸಿತ್ತು. ನಂತರ ತರಬೇತಿ ಪಡೆದು ಕಾಂಬೋಡಿಯಾ ಭದ್ರತಾಪಡೆಯನ್ನು ಸೇರಿಕೊಂಡಿತ್ತು. ಕಾಂಬೋಡಿಯಾ ಜಗತ್ತಿನಲ್ಲಿಯೇ ಅತಿ ಹೆಚ್ಚು ನೆಲಬಾಂಬ್​ಗಳನ್ನು ಪ್ರಯೋಗಿಸುವ ದೇಶವಾಗಿದೆ. ಇದರಿಂದ ಈಗಾಗಲೇ ಹಲವರು ಅಂಗಾಂಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಾಣಿಗಳು ಮತ್ತು ಪಕ್ಷಿಗಳು ಜೀವವೈವಿಧ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದೇ ಸಮಯದಲ್ಲಿ, ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳು ಎಷ್ಟು ಸ್ಮಾರ್ಟ್ ಆಗಿರುತ್ತವೆ ಎಂದರೆ ಅವು ಮನುಷ್ಯರ ಪ್ರಾಣವನ್ನು ಉಳಿಸುತ್ತವೆ ಮತ್ತು ಅವುಗಳನ್ನು ತೊಂದರೆಯಿಂದ ಪಾರು ಮಾಡುತ್ತವೆ. ತನ್ನ ಇಡೀ ಜೀವನವನ್ನು ತನ್ನ ದೇಶ ಸೇವೆಗಾಗಿ ಮುಡಿಪಾಗಿಟ್ಟ ಅಂತಹ ಇಲಿಯ ಬಗ್ಗೆ ಇಡೀ ಜಗತ್ತು ಹೆಮ್ಮೆ ಪಡುತ್ತಿದೆ.

Donate Janashakthi Media

Leave a Reply

Your email address will not be published. Required fields are marked *