“ಅವಳ ಹೆಜ್ಜೆ ಕಿರುಚಿತ್ರೋತ್ಸವ-2026”: ಕನ್ನಡ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಮಹಿಳಾ ನಿರ್ದೇಶಕಿಯರಿಗೆ ಕರೆ

ಬೆಂಗಳೂರು: “ಅವಳ ಹೆಜ್ಜೆ ಕಿರುಚಿತ್ರೋತ್ಸವ 2026″ರ ಕನ್ನಡ ಕಿರುಚಿತ್ರಗಳ ಸ್ಪರ್ಧೆಗೆ ಜನವರಿ 31ರೊಳಗೆ ಅರ್ಜಿ ಸಲ್ಲಿಸಲು ಮಹಿಳಾ ನಿರ್ದೇಶಕರನ್ನು ಗುಬ್ಬಿವಾಣಿ ಟ್ರಸ್ಟ್ ಆಹ್ವಾನಿಸುತ್ತಿದೆ ಎಂದು ಗುಬ್ಬಿವಾಣಿ ಟ್ರಸ್ಟ್‌ನ “ಅವಳಹೆಜ್ಜೆ” ಕಾರ್ಯಕ್ರಮ ನಿರ್ದೇಶಕಿ ಶಾಂತಲಾ ದಾಮ್ಲೆ ಕರೆ ನೀಡಿದ್ದಾರೆ.

ಇದು ಕಳೆದ ವರ್ಷದ ಮೊದಲ ಆವೃತ್ತಿಯಲ್ಲಿಯೇ ಅದ್ಭುತ ಯಶಸ್ಸು ಕಂಡ, ಮಹಿಳಾ ನಿರ್ದೇಶಕರಿಗೇ ಮೀಸಲಾದ ಏಕೈಕ ಕನ್ನಡ ಕಿರುಚಿತ್ರ ಸ್ಪರ್ಧೆ .

ಮೊದಲ ಬಹುಮಾನ : ಅತ್ಯುತ್ತಮ ಕಿರುಚಿತ್ರಕ್ಕೆ “ಅವಳ ಹೆಜ್ಜೆ ಪ್ರಶಸ್ತಿ” – ₹1,00,000 ನಗದು

ಇದನ್ನೂ ಓದಿ: ನಮ್ಮ ಮೆಟ್ರೋ: ಫೆಬ್ರವರಿಯಿಂದ ಶೇ 5 ರಷ್ಟು ದರ ಏರಿಕೆಗೆ ಸಿದ್ಧತೆ

ಜೊತೆಗೆ, ಕೆಳಗಿನ ವಿಶೇಷ ವಿಭಾಗಗಳಲ್ಲಿ ತಲಾ ಒಂದು ಕಿರುಚಿತ್ರಕ್ಕೆ ₹10,000 ನಗದು ಬಹುಮಾನ :

– ಗೂಡಿನಿಂದ ಗಗನದೆಡೆಗೆ – ಚೌಕಟ್ಟಿನಾಚೆ – ಅಸ್ಮಿತೆ, ಅಸ್ತಿತ್ವ, ಅನ್ವೇಷಣೆ
– ಅನಿಮೇಷನ್ ಮತ್ತು ಎಐ​​
– ಸ್ತ್ರೀ ಒಗ್ಗಟಿನಲ್ಲಿ ಬಲವಿದೆ
– ಹಾಸ್ಯ, ವ್ಯಂಗ್ಯ, ವಿಡಂಬನೆ
– ವಿಜ್ಞಾನ ಆಧಾರಿತ ಕಲ್ಪನೆ
– ಮಹಿಳಾ ಕ್ರೀಡಾಧಾರಿತ
– ಸಾಮಾಜಿಕ ಬದಲಾವಣೆಯ ಕಥಾವಸ್ತು
– ಉದಯೋನ್ಮುಖ ನಿರ್ದೇಶಕಿ – 21ನೇ ಶತಮಾನದಲ್ಲಿ ಜನಿಸಿದ ಮಹಿಳೆಯರು ನಿರ್ದೇಶಿಸಿದ ಕಿರುಚಿತ್ರ

ಸಲ್ಲಿಕೆ ವಿವರಗಳು:

* ನಿರ್ದೇಶಕರು ಮಹಿಳೆಯೇ ಆಗಿರಬೇಕು; 5–30 ನಿಮಿಷ; 2024, 2025 ಅಥವಾ 2026ರಲ್ಲಿ ನಿರ್ಮಿತ ಕನ್ನಡ ಕಿರುಚಿತ್ರಗಳು
* ಜನವರಿ 31, 2026 ರೊಳಗೆ ಸಲ್ಲಿಸಿದಲ್ಲಿ ಪ್ರವೇಶ ಶುಲ್ಕ ಕೇವಲ ₹1,000; ₹500 ತಡಶುಲ್ಕದೊಂದಿಗೆ ಫೆಬ್ರುವರಿ 14ರೊಳಗೆ ಸಲ್ಲಿಸಬಹುದು.
* ಸಲ್ಲಿಕೆ ಲಿಂಕ್: https://forms.gle/x5AZeeKkiDWbnvCA9

ಹೆಚ್ಚಿನ ಮಾಹಿತಿಗಾಗಿ http://www.gubbivanitrust.ngo ನೋಡಿ ಅಥವಾ 8867747236 ಮೂಲಕ ಸಂಪರ್ಕಿಸಿ.

ಗುಬ್ಬಿವಾಣಿ ಟ್ರಸ್ಟ್ ನ ಸ್ಥಾಪಕ ಟ್ರಸ್ಟೀ ಮಾಲವಿಕ ಗುಬ್ಬಿವಾಣಿ ಯವರು “ಮಹಿಳಾ ಪ್ರಧಾನ ಪಾತ್ರವಿರುವ, ಮಹಿಳಾ ದೃಷ್ಟಿಕೋನಗಳಿರುವ, ಲಿಂಗಸಮಾನತೆ, ಮಹಿಳಾ ಸಬಲೀಕರಣ ಮುಂತಾದ ಮೌಲ್ಯಗಳನ್ನು ಬಿಂಬಿಸುವ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರಲಿ. ಇದು ಕೇವಲ ಕಿರುಚಿತ್ರೋತ್ಸವವಲ್ಲ – ಮಹಿಳಾ ಸಬಲೀಕರಣದ ಒಂದು ಸಾಂಸ್ಕೃತಿಕ ಚಳುವಳಿ .” ಎಂದು ಕರೆ ನೀಡಿದರು.

ಇದನ್ನೂ ನೋಡಿ: ನಮ್ಮ ಆಹಾರ: ತಪ್ಪು ಒಪ್ಪುಗಳು| ಡಾ. ಎನ್.ಬಿ. ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *