ಬಳ್ಳಾರಿಯ ಬಾಣಂತಿಯರ ಸಾವು | ನ್ಯಾಯಾಂಗ ತನಿಖೆಗೆ ಒಪ್ಪಿಸಿ – ಸಿಪಿಐಎಂ ಆಗ್ರಹ

ಬೆಂಗಳೂರು: ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾಲ್ಕು ಬಾಣಂತಿ ಮಹಿಳೆಯರ ಸಾವಿಗೆ ಕೊಲ್ಕತ್ತಾದ ಕಂಪನಿಯು ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ಗ್ಲೂಕೋಸ್ ದ್ರಾವಣವೇ ಕಾರಣವೆಂದು ಕಂಡುಬಂದು, ಪೂರೈಸಿದ ಸಂಸ್ಥೆಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮತ್ತು ಔಷಧ ನಿಯಂತ್ರಕರನ್ನು ಅಮಾನತಿನಲ್ಲಿಟ್ಟು ತನಿಖೆಗೆ ಕ್ರಮವಹಿಸಲು, ಮುಖ್ಯಮಂತ್ರಿಗಳು ಆದೇಶಿಸಿದ ಕ್ರಮವನ್ನು ಸಿಪಿಐಎಂ ಸ್ವಾಗತಿಸುತ್ತದೆ ಎಂದು ಕಾರ್ಯದರ್ಶಿ ಯು. ಬಸವರಾಜ್‌ ಹೇಳಿದ್ದಾರೆ. ಬಳ್ಳಾರಿ

ಈ ಘಟನೆಗಳು ರಾಜ್ಯದ ನಾಗರೀಕರನ್ನು ತೀವ್ರ ಆತಂಕಕ್ಕೀಡು ಮಾಡಿದ್ದವು ! ಸರಕಾರಿ ಆಸ್ಪತ್ರೆಗಳ ಗೌರವವನ್ನು ಕುಗ್ಗಿಸಿ ಜನಗಳ ವಿಶ್ವಾಸಕ್ಕೆ ಘಾಸಿ ಉಂಟು ಮಾಡಿದ್ದವು. ಇವು ಜನರು ಸರಕಾರಿ ಆಸ್ಪತ್ರೆಗಳ ಔಷದಿಗಳ ಗುಣ ಮಟ್ಟದ ಕುರಿತು ಅನುಮಾನಗಳನ್ನು ಹೊಂದಿದ್ದು ಇವು ಅವರ ವಿಶ್ವಾಸಾರ್ಹತೆಯನ್ನು ಮತ್ತಷ್ಠು ಕುಗ್ಗಿಸಿದ್ದವು. ಇದೀಗ ಅವರ ಅನುಮಾನ ಸರಿ ಎಂಬಂತೆ ಮುಖ್ಯಮಂತ್ರಿಗಳು ಈ ಸಭೆಯ ಮೂಲಕ ಕಳಪೆ ಔಷಧಿಯು ಈ ಸಾವುಗಳಿಗೆ ಕಾರಣವಾಗಿರುವುದನ್ನು ಸಾಬೀತು ಪಡಿಸಿದೆ ಎಂದರು. ಬಳ್ಳಾರಿ

ಈ ಪ್ರಕರಣದ ಮೂಲಕ ಜನತೆಯ ವಿಶ್ವಾಸಕ್ಕುಂಟಾದ ಘಾಸಿತನವನ್ನು ಸರಿಪಡಿಸಲು ಸರಕಾರಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿರುವ ಎಲ್ಲ ಔಷಧಗಳ ಗುಣ ಮಟ್ಟ ಪರಿಶೀಲನೆಗೊಳಪಡಿಸಲು ಮತ್ತು ಔಷದ ಒದಗಿಸುವ ಕಂಪನಿಗಳ ಸಮರ್ಪಕತೆಯನ್ನು ಪರಿಶೀಲಿಸಲು ನ್ಯಾಧೀಶರೊಬ್ಬರ ನೇತೃತ್ವದಲ್ಲಿ ಒಂದು ತಜ್ಞರ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಮುಖ್ಯಮಂತ್ರಿಗಳನ್ನು ಸಿಪಿಐಎಂ ಆಗ್ರಹಿಸುತ್ತದೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್: ಸಾಲ ಮರುಪಾವತಿ ಮಾಡದ ಕಾರಣಕ್ಕಾಗಿ ಗರ್ಭಿಣಿಯನ್ನು ಮನೆಯಿಂದ ಹೊರ ನೂಕಿ ಕ್ರೌರ್ಯ ಮೆರೆದ ಫೈನಾನ್ಸ್  ಸಿಬ್ಬಂದಿ

ಅದೇ ರೀತಿ, ರಾಜ್ಯ ಸರಕಾರ ತನ್ನ ಹೊಣೆಗಾರಿಕೆಯನ್ನು ಮೆರೆಯಲು ಕೂಡಲೇ ಸಾವಿಗೀಡಾದ ಬಾಣಂತಿಯರ ಕುಟುಂಬಕ್ಕೆ ತಲಾ 25 ಲಕ್ಷ ರೂಗಳ ಪರಿಹಾರವನ್ನು ನೀಡಬೇಕು ಮತ್ತು ಔಷಧ ನಿಯಂತ್ರಕರ ಶಾಮೀಲುತನವು ಕ್ರಿಮಿನಲ್ ಸ್ವರೂಪದ್ದಾಗಿದ್ದು ಅವರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಮತ್ತು ಔಷಧಿ ಕಂಪನಿ ಹಾಗು ಔಷಧ ನಿಯಂತ್ರಕರ ಆಸ್ತಿಗಳ ಮುಟ್ಟು ಗೋಲಿಗೆ ಅಗತ್ಯ ಕ್ರಮ ವಹಿಸುವಂತೆಯು ಸಿಪಿಐಎಂ ಒತ್ತಾಯಿಸುತ್ತದೆ.

ಸಮಾಜ ಪರಿವರ್ತಕ ಅಣ್ಣ ಬಸವಣ್ಣನ ಕುರಿತ ಯತ್ನಾಳ್ ತುಚ್ಛ ಹೇಳಿಕೆ – ಸಿಪಿಐಎಂ ಖಂಡನೆ.

ಕೋಮುವಾದಿ, ಪ್ರಜಾಪ್ರಭುತ್ವ ವಿರೋದಿ, ಜಾತಿ ತಾರತಮ್ಯ ಪ್ರತಿಪಾದಕ ಬಿಜೆಪಿ ಹಾಗು ಆರ್ ಎಸ್ ಎಸ್ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ರವರು, ಸಮಾಜ ಪರಿವರ್ತಕ ಜಾತಿ ಹಾಗು ಲಿಂಗ ದಬ್ಬಾಳಿಕೆ ಯ ವಿರೋದಿ, ಮಾನವ ಘನತೆಯನ್ನು ಮೆರೆದ ಅಣ್ಣ ಬಸವಣ್ಣರವರ ಕುರಿತು ಅತ್ಯಂತ ತುಚ್ಛವಾಗಿ ಮಾತನಾಡಿರುವುದನ್ನು ಅದೇ ಬರದಲ್ಲಿ ಮುಸ್ಲಿಂ ಅಲ್ಪ ಸಂಖ್ಯಾತ ನಾಗರೀಕರನ್ನು ನಿಂದಿಸಿದ್ದನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ. ಅವರ ಮೇಲೆ ಕಠಿಣ ಕಾನೂನಿನ ಕ್ರಮವನ್ನು ವಹಿಸಬೇಕೆಂದು ಸಿಪಿಐಎಂ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ ಎಂದು ಹೇಳಿದರು. ಬಳ್ಳಾರಿ

ಲಿಂಗಾಯಿತ ಪಂಚಮಶಾಲಿ ಸಮಾಜದ ಮುಖಂಡನೆಂದು ಹೇಳಿಕೊಂಡು, ರಾಜಕೀಯ ರಕ್ಷೆ ಪಡೆದುಕೊಂಡಿರುವ ಈತ ಆ ಸಮುದಾಯಕ್ಕೆ ಈ ರೀತಿಯ ದುರ್ವರ್ತನೆಯ ಮೂಲಕ ಕೆಸರು ಮೆತ್ತುತ್ತಿದ್ದಾನೆಂದು ಆ ಕುರಿತು ಸಮುದಾಯವು ಕೂಡಾ ಅಗತ್ಯ ಶಿಸ್ತು ಕ್ರಮ ವಹಿಸ ಬೇಕೆಂದು ಎಂದಿದ್ದಾರೆ.

ಬಿಜೆಪಿ ಮುಖಂಡನಾಗಿದ್ದರೂ ಬಿಜೆಪಿ ಇಂತಹ ವಿಷಯಗಳಲ್ಲಿ ಇಂತಹ ದುರ್ವರ್ತನೆಗಳನ್ನು ಅದು ಖಂಡಿಸುವುದಿಲ್ಲ. ಬದಲಿಗೆ, ಮೌನ ಸಮ್ಮತಿ ನೀಡುತ್ತದೆ. ಹೀಗಾಗಿ, ಬಿಜೆಪಿ ಅವರ ಮೇಲೆ ಕ್ರಮವಹಿಸಬೇಕೆಂದು ಸಿಪಿಐಎಂ ಒತ್ತಾಯಿಸುವುದಿಲ್ಲ.

ಇದನ್ನೂ ನೋಡಿ: ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಕೊಲ್ಲಲ್ಪಡುತ್ತಿದ್ದಾಳೆ ; ಮನೆಯಲ್ಲೂ ಮಹಿಳೆಗೆ ಸುರಕ್ಷತೆ ಇಲ್ಲJanashakthi Media

Donate Janashakthi Media

Leave a Reply

Your email address will not be published. Required fields are marked *