ಬಿಎಂಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ: ಕೆಳಗೆ ಬಿದ್ದ ಮಹಿಳೆಯ ಮೇಲೆ ಹರಿದು ಹೋದ ಕಾರು

ಬೆಂಗಳೂರು: ಬೆಂಗಳೂರಿನ ಕೆಂಗೇರಿಯ ಉಲ್ಲಾಳ ಬಳಿ ಬಿಎಂಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್‌ ಹೋಡಿಸುತ್ತಿದ್ದ ಮಹಿಳೆಯ ಕೆಳಗೆ ಬಿದ್ದು, ಆಕೆಯ ಮೇಲೆ ಕಾರೊಂದು ಹರಿದು ಹೋಗಿರುವ ಘಟನೆ ಸಂಭವಿಸಿದೆ.

ಮಹಿಳೆ ಸ್ಥಲದಲ್ಲೇ ಸಾವನಪ್ಪಿದ್ದಾಳೆ. 25 ವರ್ಷದ ಮೋನಿಕಾ ಮೃತ ಮಹಿಳೆ. ಸೊನ್ನೇನಹಳ್ಳಿಯ ಮಾರುತಿ ನಗರದ ನಿವಾಸಿ. ಉಲ್ಲಾಳ ಬಳಿಯ ರಿಂಗ್ ರಸ್ತೆಯಲ್ಲಿನ ಶೋ ರೂಂ ಒಂದರಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದ ಮೋನಿಕಾ ಎಂದಿನಂತೆ ತಮ್ಮ ಸ್ಕೂಟರ್ ನಲ್ಲಿ ಆಫೀಸ್ ಗೆ ತೆರಳುತ್ತಿದ್ದರು.

ಇದನ್ನು ಓದಿ : ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು 3 ಕರಡಿಗಳು ಸಾವು

ಈ ವೇಳೆ ಬಿಎಂಟಿಸಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು, ರಸ್ತೆಗೆ ಬಿದ್ದ ಮೋನಿಕಾ ಅವರ ಮೇಲೆಯೇ ಹಿಂದಿನಿಂದ ಬಂದ ಕಾರು ಹರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮೋನಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಸ್ತೆ ಕಾಮಗಾರಿ ನಡೆಯುತ್ತಿದುದರಿಂದ ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ನೋಡಿ : ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು – ಸಚಿವ ದಿನೇಶ್‌ ಗುಂಡೂರಾವ್‌

Donate Janashakthi Media

Leave a Reply

Your email address will not be published. Required fields are marked *