‘ಬುಲ್ಲಿ ಬಾಯಿ’ ಪ್ರಕರಣ: ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ನವದೆಹಲಿ: ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣದ ಇಬ್ಬರು ಆರೋಪಿಗಳಾದ ಮಯಾಂಕ್ ರಾವತ್ ಮತ್ತು ಶ್ವೇತಾ ಸಿಂಗ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಯಾಂಕ್‌ ರಾವತ್ ಪರ ವಕೀಲ ಸಂದೀಪ್ ಶೇರ್ಖಾನೆ, ಇವರಿಬ್ಬರ ಪೊಲೀಸ್ ಬಂಧನ ಶುಕ್ರವಾರಕ್ಕೆ ಕೊನೆಗೊಂಡಿತು.

ಜಾಮೀನು ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಲು ಪ್ರಾಸಿಕ್ಯೂಷನ್‌ಗೆ ಕಾಲಾವಕಾಶ ನೀಡಿರುವ ನ್ಯಾಯಾಲಯವು ಜಾಮೀನು ಮನವಿಯ ವಿಚಾರಣೆಯನ್ನು ಜನವರಿ 17ಕ್ಕೆ ಬಾಂದ್ರಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದೂಡಿದೆ. ಇಬ್ಬರೂ ಆರೋಪಿಗಳ ಜಾಮೀನು ಮನವಿಯ ಜೊತೆ ಮತ್ತೊಬ್ಬ ಆರೋಪಿ ಝಾ ಅರ್ಜಿಯನ್ನೂ ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಇಂದು ಮಯಾಂಕ್‌ ರಾವತ್‍ಗೆ ಕೋವಿಡ್ ದೃಢಪಟ್ಟ ಕಾರಣ ಮುಂಬೈನ ಕಲಿನಾ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಯಿತು. ಮೊದಲ ಆರೋಪಿ ವಿಶಾಲ್ ಕುಮಾರ್ ಝಾ ಕೂಡ ಕೆಲವು ದಿನಗಳ‌ ಹಿಂದೆ ಕೋವಿಡ್‍ಗೆ ತುತ್ತಾಗಿದ್ದರು. ಅವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು.

ಮಯಾಂಕ್‌ ರಾವತ್‌ ಅವರನ್ನು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇಂದಿನವರೆಗೂ ಅವರು ಪೊಲೀಸ್‌ ವಶದಲ್ಲಿದ್ದರು. ಉತ್ತರಾಖಂಡದ 18 ವರ್ಷದ ಮತ್ತೊಬ್ಬ ಆರೋಪಿ ಶ್ವೇತಾ ಸಿಂಗ್‌ ಅವರು ವಿಚಾರಣೆಯ ವೇಳೆ ತನಗೆ ಕಪಾಳ ಮೋಕ್ಷ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಯಾವುದೇ ರೀತಿಯ ಗಾಯವಾಗಿಲ್ಲ ಎಂದು ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋಮಲ್‌ಸಿಂಗ್‌ ರಜಪೂತ್‌ ಅವರಿಗೆ ತಿಳಿಸಿದ್ದಾರೆ.

ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಶ್ವೇತಾ ಸಿಂಗ್ ಪರ ವಕೀಲ ಎನ್ ದಾಸ್ ಹಾಜರಿದ್ದರು. ಕಪಾಳಮೋಕ್ಷ ಆರೋಪಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋಮಲಸಿಂಗ್ ರಜಪೂತ್ ಅವರು ತನಿಖೆ ನಡೆಸುವಂತೆ ಡಿಸಿಪಿ ರಶ್ಮಿ ಕರಂಡಿಕರ್ ಅವರಿಗೆ ನಿರ್ದೇಶನ ನೀಡಿದ್ದಾರೆ.

ಪ್ರಕರಣವು ‘ಬುಲ್ಲಿ ಬಾಯಿ’ ಅಪ್ಲಿಕೇಶನ್ ಮೂಲಕ ಮುಸ್ಲಿಂ ಮಹಿಳೆಯರನ್ನು ಆನ್‍ಲೈನ್‍ನಲ್ಲಿ ಹರಾಜು ಹಾಕುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಉತ್ತರಾಖಂಡದ ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಮತ್ತು ಬೆಂಗಳೂರಿನಿಂದ ವಿಶಾಲ್ ಕುಮಾರ್ ಝಾ ಅವರನ್ನು ಮುಂಬೈ ಸೈಬರ್ ಪೊಲೀಸರು ಬಂಧಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *