ಅಂಗವಿಕಲರನ್ನು ಕಡೆಗಣಿಸಿದ ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ : ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಅಂಗವಿಕಲರನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟವು (KSDCF) ಹಗರಿಬೊಮ್ಮನಹಳ್ಳಿ ತಾಲೂಕ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್‌ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಸರ್ಕಾರದ ಆದ್ಯತೆಗಳು ದಮನಿತರ ಪರವಾಗಿಲ್ಲದಿರುವುದು ಈ ಬಜೆಟ್‌ನಲ್ಲಿ ಗೊತ್ತಾಗುತ್ತಿದೆ. ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಗೆ ಕೂಡ (DEPwD) ಈ ಬಜೆಟ್‌ನಿಂದ ಎನೂ ದಕ್ಕಿಲ್ಲ. ಪ್ರಸ್ತುತ ಬಜೆಟ್‌ನಲ್ಲಿ ಶೇಕಡ 0.025ರಷ್ಟು ಮಾತ್ರವೇ ಹಣ ದಕ್ಕಿದ್ದು ಬಿಟ್ಟರೇ ಏನೂ ಇಲ್ಲ ಎಂದು ಆರೋಪಿಸಿದರು.  ಅಂಗವಿಕಲರು

ಇಂದಿರಾಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆಗೆ (IGNDPS) ಹಣ ಹೆಚ್ಚಳ ಮಾಡಿಲ್ಲ. ಇದರಲ್ಲಿ ಬಡವರು , ದಮನಿತರು ಇದ್ದಾರೆ. ಪಿಂಚಣಿಯಲ್ಲಿ 2011ರಿಂದ ಕೇಂದ್ರ ಪಾಲು 300ರೂಗಳು ಮಾತ್ರವೇ ಆಗಿದೆ. ಇಡೀ ದೇಶದ ಅಂಗವಿಕಲರಿಗೆ ಒಂದೇ ರೀತಿಯ ಪೆನ್ಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಬೇಕು. ಪಕ್ಕದ ಆಂದ್ರದಲ್ಲಿ 06ಸಾವಿರ ರೂಗಳ ಮಾಸಾಶನ ಕೊಡುತ್ತಿದ್ದಾರೆ. ಕರ್ನಾಟಕದ ಅಂಗವಿಕಲರು ಕೂಡ ಒಂದೇ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಂಗವಿಕಲರಿಗೆ ಕನಿಷ್ಟ 10ಸಾವಿರ ರೂಗಳ ಮಾಸಾಶನ ನೀಡಬೇಕೆಂದು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಒತ್ತಾಯಿಸುತ್ತದೆ ಎಂದರು.

ಇದನ್ನು ಓದಿ : ಬಜೆಟ್ 2024-25: ದಿಗಿಲುಗೊಳಿಸುವ ಮೊಂಡುತನ

ಕೇಂದ್ರ ಸರ್ಕಾರ ಕೊಡುತ್ತಿರುವ ಹಣದಿಂದ ಅಕ್ಸೆಸ್ಸಿಬಲ್‌ ಇಂಡಿಯಾ ಅಭಿಯಾನ ನೆನೆಗುದಿಗೆ ಬೀಳಲಿದೆ. RPD ಕಾಯಿದೆಯ ನಿಗದಿತ ಗುರಿಗಳನ್ನು ಪೋರೈಸಲು ಸಾಧ್ಯ‌ವಾಗುವುದಿಲ್ಲ. ಅಂಗವಿಕಲರ ಕಾಯ್ದೆ (SIPDA) ಯೋಜನೆಯ ಅನುಷ್ಠಾನಕ್ಕಾಗಿ ಕಳೆದ ಬಾರಿಗಿಂತ ಈ ಬಾರಿ ಹಣ ಕಡಿಮೆಯಾಗಿದೆ.

ರಾಷ್ಟ್ರೀಯ ಸಂಸ್ಥೆಗಳು, ಪುನರ್ವಸತಿ ಕೌನ್ಸಿಲ್ ಆಫ್ ಇಂಡಿಯಾ, ಹಾಗಿಯೇ ಪುನರ್ವಸತಿ ಮತ್ತು ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರೀಯ ಟ್ರಸ್ಟ್‌ನಂತಹ ಸ್ವಾಯತ್ತ ಸಂಸ್ಥೆಗಳಿಗೆ ಹಣವನ್ನು ಕಡಿತಮಾಡಲಾಗಿದೆ. ಇದರಿಂದಾಗಿ ಹಲವಾರು ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆ. ವಿಧ್ಯಾರ್ಥಿ ವೇತನದ ಕಡಿತವು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತದೆ ಎಂದರು.

ಕೇಂದ್ರ ಸರ್ಕಾರ ತನ್ನ ತೆರಿಗೆ ಆದಾಯ ಗಳಿಕೆಯಲ್ಲಿ ಹೆಚ್ಚು ಮಾಡಿಕೊಂಡಿದೆ. ಇದಕ್ಕನುಗುಣವಾಗಿ ಅಂಗವಿಕಲರು ಮತ್ತು ಇತರ ಅಂಚಿನಲ್ಲಿರುವವರಿಗೆ ಖರ್ಚು ಮಾಡಲು ಸಿದ್ದರಿಲ್ಲ. ಕೇಂದ್ರ ಸರ್ಕಾರ ಇಂತವರ ಕುರಿತು ತನ್ನ ಹಿಂಜರಿತದ ಸ್ವಭಾವವನ್ನು ಮತ್ತೊಮ್ಮೆ ಸಾಬೀತು ಪಡೆಸಿದೆ ಎಂದರು.

ಇದನ್ನು ನೋಡಿ : ಕೇಂದ್ರ ಬಜೆಟ್‌ 2024-25 : ಬಡ ವಿದ್ಯಾರ್ಥಿಗಳ ಶಿಕ್ಷಣ ಕಸಿಯುವ ಬಜೆಟ್Janashakthi Media

Donate Janashakthi Media

Leave a Reply

Your email address will not be published. Required fields are marked *