ನಿರುದ್ಯೋಗ- ಬಡತನಕ್ಕೆ ಸ್ವಲ್ಪ ಮಟ್ಟಿನ ಪರಿಹಾರ ನೀಡುವ ಯೋಜನೆಗೂ ಬಜೆಟ್‍ ಕಡಿತ – ಏಕೆ?

ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಂದು ಕುಟುಂಬಕ್ಕೆ ಕನಿಷ್ಟ 100 ದಿನಗಳ ಉದ್ಯೋಗಾವಕಾಶಗಳನ್ನು ನಿರ್ಮಿಸಿ ಅಲ್ಲಿನ ಜನರ ಬವಣೆಗಳನ್ನು ಸ್ವಲ್ಪವಾದರೂ ತಗ್ಗಿಸುವ ಕಾನೂನಾತ್ಮಕ ಖಾತ್ರಿ ನೀಡುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗ) 100 ದಿನಗಳ ಕೆಲಸದ ಖಾತರಿಯನ್ನು ಈಡೇರಿಸುತ್ತಿಲ್ಲ ಮಾತ್ರವಲ್ಲ, ಮಾಡಿದ ಕೆಲಸಕ್ಕೂ ಕೂಲಿ ಕೊಡಲು ಬೇಕಾಗುವ ಹಣವನ್ನು ಕೂಡ ಕೇಂದ್ರ ಸರಕಾರ ಕೊಟ್ಟಿಲ್ಲ ಎಂದು ಈ ವಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಬಡತನ

2024-25ರ ಅವಧಿಗೆ ರೂ. 4315 ಕೋಟಿ ರೂ.ಗಳ ಕೊರತೆಯಿದ್ದು ಅದನ್ನು ಇನ್ನೂ ಕೊಟ್ಟಿಲ್ಲ. ಮನರೇಗ ಕಾಯ್ದೆಯ ಪ್ರಕಾರ ದಿನಗೂಲಿಯನ್ನು ಪ್ರತಿವಾರ ಕೊಡಬೇಕು. ಇದರಲ್ಲಿ 15 ದಿನಗಳಿಗಿಂತ ಹೆಚ್ಚಿನ ವಿಳಂಬವಾಗಬಾರದು. ಆದರೆ ಕಾಯ್ದೆಯ ಈ ಅಂಶದ ಉಲ್ಲಂಘನೆ ನಡೆಯುತ್ತಲೇ ಇದೆ. ಕಳೆದ ಬಜೆಟಿನಲ್ಲಿ ಕೇವಲ 86,000 ಕೋಟಿ ರೂ.ಗಳನ್ನು ಮಾತ್ರ ಕೊಟ್ಟಾಗ, ಹೆಚ್ಚವರಿ ನೀಡಿಕೆಗೆ ಆಗ್ರಹ ಎಲ್ಲೆಡೆಗಳಿಂದ ಬಂದಿತ್ತು. ಆದರೆ ಇಂತಹ ಆಗ್ರಹ ಬಂದಾಗಲೆಲ್ಲ ಮೋದಿ ಸರಕಾರ ಇದೊಂದು ಬೇಡಿಕೆ ಚಾಲಿತ ಯೋಜನೆ, ಆದ್ದರಿಂದ ಅಗತ್ಯ ಬಿದ್ದಾಗಲೆಲ್ಲ ಹಣವನ್ನು ನೀಡಲಾಗುತ್ತದೆ ಎಂದು ತಳ್ಳಿ ಹಾಕುತ್ತ ಬಂದಿದೆ. ಬಡತನ

ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿರುವ ಬಡ ಕೂಲಿಕಾರರಿಗೆ ಅವರು ಮಾಡಿದ ಕೆಲಸಕ್ಕೆ ಕೂಲಿ ಕೊಡಲು ಬೇಕಾದ ಹಣವನ್ನು ಕೊಟ್ಟಿಲ್ಲ ಮಾತ್ರವಲ್ಲ, ಈ ಕಾಮಗಾರಿಗಳಿಗೆ ಬೇಕಾಗುವ ಸಾಮಗ್ರಿಗಳಿಗೆ ಕೇಂದ್ರ ಸರಕಾರ ಕೊಡಬೇಕಾದ ಹಣದಲ್ಲಿಯೂ ರೂ. 5715 ಕೋಟಿ ರೂ.ಗಳನ್ನು ಬಾಕಿ ಇಟ್ಟುಕೊಂಡಿದೆ ಎಂದು ವರದಿಯಾಗಿದೆ. ಬಡತನ

ಇದನ್ನೂ ಓದಿ: ನಮ್ಮ ಸಂವಿಧಾನವು ಅಷ್ಟು ಯಶಸ್ವಿಯಾಗಿ ಅನುಷ್ಟಾನಕ್ಕೆ ಬರಲಿಲ್ಲ: ಜಸ್ಟೀಸ್ ವಿ.ಗೋಪಾಲಗೌಡ

ಸಾಮಗ್ರಿಗಳಿಗೆ ಬೇಕಾದ ಹಣವನ್ನು ಕೊಡದ್ದರಿಂದ ಕೆಲಸಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಪೂರೈಕೆ ವಿಳಂಬವಾಗುತ್ತದೆ, ಅದರೊಂದಿಗೆ ಕೂಲಿ ಪಾವತಿಯಲ್ಲಿ ಕೂಡ ವಿಪರೀತ ವಿಳಂಬ ಈ ಯೋಜನೆಯ ಅಡಿಯಲ್ಲಿ ಕೆಲಸಕ್ಕೆ ಬೇಡಿಕೆಯನ್ನು ತಗ್ಗಿಸುವ ಪರಿಣಾಮ ಬೀರುತ್ತದೆ ಎಂದು ಪರಿಣಿತರು ಮತ್ತು ಈ ಕ್ಷೇತ್ರದಲಿರುವ ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ. ಬಡತನ

ಗ್ರಾಮೀಣಾಭಿವೃದ್ಧಿ ಕುರಿತ ಸಂಸದೀಯ ಸ್ಥಾಯೀ ಸಮಿತಿ ಕೂಡ ಫೆಬ್ರುವರಿ 2024ರಲ್ಲಿ ಸಲ್ಲಿಸಿದ ವರದಿಯಲ್ಲಿ ಬಜೆಟಿನಲ್ಲಿ ಅಗತ್ಯಕ್ಕಿಂತ ಕಡಿಮೆ ಹಣ ನೀಡಿಕೆಯು ಬೇಡಿಕೆಯನ್ನು ಕೃತಕವಾಗಿ ತಗ್ಗಿಸುವ ಪರಿಣಾಮ ಬೀರುತ್ತದೆ ಎಂದಿದೆ ಎಂದೂ ವರದಿಯಾಗಿದೆ. ಬಡತನ

ಮುಂದುವರೆದು ಅದು “ಬಜೆಟ್ ಅಂದಾಜಿನ ಹಂತದಲ್ಲೇ ಹಣನೀಡಿಕೆಯನ್ನು ಕಡಿತ ಮಾಡುವುದು ಸರಿಯಾದ ಸಮಯದಲಿ ಕೂಲಿ ನೀಡಿಕೆ, ಸಾಮಗ್ರಿಗಳ ಪೂರೈಕೆ ಮುಂತಾದವುಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಈ ಯೋಜನೆಯ ಪ್ರಗತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಬುಡಮಟ್ಟದಲ್ಲಿ ಮನರೇಗದ ಸುಲಲಿತ ಜಾರಿಗೆ ಇಂತಹ ಕೊರತೆ ದೊಡ್ಡ ಅಡ್ಡಿ” ಎಂದೂ ಸಂಸದೀಯ ಸ್ಥಾಯಿ ಸಮಿತಿಯ ವರದಿ ಹೇಳಿದೆ ( ದಿ ಹಿಂದು, ಜನವರಿ 27). ಬಡತನ

ಬಹುಶಃ ಸರಕಾರದ ಉದ್ದೇಶವೂ ಅದೇ ಆಗಿರಬಹುದೇ ಎಂಬ ಸಂದೇಹವೂ ಮೂಡದಿರದು. ಏಕೆಂದರೆ, ಯುಪಿಎ-1 ಸರಕಾರದ ಅಡಿಯಲ್ಲಿ ಎಡಪಕ್ಷಗಳು ಮತ್ತು ಇತರ ಪ್ರಗತಿಪರರ ಒತ್ತಡದಿಂದ ರೂಪುಗೊಂಡು ಜಾರಿಗೊಂಡ ಈ ಹಕ್ಕು-ಆಧಾರಿತ ಯೋಜನೆಯ ಬಗ್ಗೆ ವೈಷಮ್ಯವನ್ನು ಸ್ವತಃ ಪ್ರಧಾನ ಮಂತ್ರಿಗಳೂ ಸೇರಿದಂತೆ ಆಳುವ ಪಕ್ಷದ ಮುಖಂಡರು ಪ್ರದರ್ಶಿಸುತ್ತಲೇ ಬಂದಿದ್ದಾರೆ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಬಡತನ

ಮೋದಿ ನೇತೃತ್ವದ ಸರಕಾರ ಬಂದಂದಿನಿಂದ ಇದಕ್ಕೆ ಬಜೆಟ್ ನೀಡಿಕೆಯ ಪ್ರಮಾಣ ಸತತವಾಗಿ ಕಡಿಮೆಯಾಗುತ್ತಲೇ ಬಂದಿದೆ. ಕಳೆದ 7 ವರ್ಷಗಳ ಬಜೆಟುಗಳಲ್ಲಿ ಮನರೇಗಕ್ಕೆ ಒಟ್ಟು ಬಜೆಟ್ ಮೊತ್ತದಲ್ಲಿ ನೀಡಿರುವ ಹಣದ ಪ್ರಮಾಣ ಹೀಗಿದೆ: ಬಡತನ

2020-21ರಲ್ಲಿ ಮೊದಲಿಗೆ ಕೇವಲ 61,500 ಕೋಟಿ ರೂ.ಗಳನ್ನು ಮಾತ್ರ, ಅಂದರೆ ಒಟ್ಟು ಬಜೆಟ್ ಮೊತ್ತದ 1.75%ದಷ್ಟು ಮಾತ್ರ ನೀಡಲಾಗಿತ್ತು. ಆದರೆ ಕೊವಿಡ್ ಲಾಕೌಟ್ ಗ್ರಾಮೀಣ ಪ್ರದೇಶಗಳತ್ತ ವಿರುದ್ಧ ವಲಸೆಯನ್ನು ಸೃಷ್ಟಿಸಿದ್ದರಿಂದಾಗಿ ಸರಕಾರ ಇನ್ನೂ 50,000 ಕೋಟಿ ರೂ.ಗಳನ್ನು ನೀಡಲೇ ಬೇಕಾಗಿ ಬಂತು. ಲಾಕೌಟಿನಿಂದ ತತ್ತರಿಸಿ ಹೋದ ಜನಗಳಿಗೆ ಸ್ವಲ್ಪವಾದರೂ ಪರಿಹಾರ ದೊರೆಯುವಂತಾದ್ದು ದೇಶದ ತೀವ್ರ ನಿರುದ್ಯೋಗದ ಸಂದರ್ಭದಲ್ಲಿ ಮನರೇಗದ ನಿಜವಾದ ಮಹತ್ವವನ್ನೂ ಅದರ ಬಗ್ಗೆ ಸಂದೇಹ ಇದ್ದವರಿಗೂ ಮನಗಾಣಿಸಿತು, ನಿಜ, ಆಳುವವರನ್ನು ಬಿಟ್ಟು..

ಸಾಮಾಜಿಕ ವಲಯದ ಎಲ್ಲ ಬಾಬ್ತುಗಳಲ್ಲಿಯೂ ಸತತ ಕಡಿತ

ಬಜೆಟ್ ಕಡಿತ ಕೇವಲ ಮನರೇಗಕ್ಕೆ ಸೀಮಿತವಾಗಿಲ್ಲ. ಗ್ರಾಮೀಣಾಭಿವೃದ್ಧಿ ಮಂತ್ರಾಲಯಕ್ಕೆ ಬಜೆಟ್ ನೀಡಿಕೆಯ ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಒಟ್ಟು ಬಜೆಟ್ ಮೊತ್ತದ 6%ವನ್ನು ದಾಟಿಲ್ಲ. ಆರೋಗ್ಯ, ಶಿಕ್ಷಣ ಸೇರಿದಂತೆ ಸಾಮಾಜಿಕ ವಲಯದ ಇತರ ಎಲ್ಲ ರಂಗಗಳಲ್ಲಿಯೂ ಬಜೆಟ್ ನೀಡಿಕೆಯಲ್ಲಿ ಸತತ ಕಡಿತ ಕಂಡು ಬಂದಿದೆ ಎಂದು ಅಂಕಿ-ಅAಶಗಳು ಹೇಳುತ್ತವೆ (ಇನ್ನಷ್ಟು ವಿವರಗಳಿಗೆ ನೋಡಿ: ಜನವರಿ 28ರಂದು ‘ದಿ ಹಿಂದೂ’ನಲ್ಲಿ ಪ್ರಕಟವಾದ ‘ಡಾಟಾ ಪಾಯಿಂಟ್,ಪುಟ 9).

ಈ ಅಂಕಿ-ಅಂಶಗಳನ್ನು ನೀಡಿರುವವರು ಪ್ರಸಕ್ತ ಬಜೆಟಿನಲ್ಲಾದರೂ ಸಾಮಾಜಿಕ ವಲಯಗಳಿಗೆ ಖರ್ಚಿನ ಪ್ರಮಾಣದಲ್ಲಿ ಕಡಿತ ಮಾಡುವ ಪ್ರಕ್ರಿಯೆ ಬದಲಾಗಬಹುದೇ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ರೈತರ ಬೇಡಿಕೆಗಳ ಬಗ್ಗೆ ಸರಕಾರದ ನಿಲುವನ್ನು ನೋಡಿದರೆ ಅದಕ್ಕೆ ಅವಕಾಶ ಕಡಿಮೆ. ಆದರೂ 2025-26ರ ಬಜೆಟನ್ನು ಕಾದು ನೋಡಬೇಕಾಗಿದೆ.

ಇದನ್ನೂ ನೋಡಿ: “ಸೌಹಾರ್ದತೆ – ಸಮಾನತೆ” ದೇಶದ ಎರಡು ಕಣ್ಣುಗಳು – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *