ಬೆಂಗಳೂರು: ಪೋಕ್ಸೋ ಪ್ರಕರಣವನ್ನು ಎದುರಿಸುತ್ತಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಹೈಕೋರ್ಟ್ ರಿಲೀಫ್ ನೀಡಿದೆ. ಪ್ರಕರಣ ರದ್ದುಕೋರಿ ಬಿಎಸ್ವೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಅವರನ್ನು ಬಂಧಿಸದಂತೆ ಆದೇಶಿಸಿದೆ. ಪೋಕ್ಸೋ ಪ್ರಕರಣ
ಬಿಎಸ್‌ವೈಗೆ ಬಂಧನದ ಭೀತಿ ಎದುರಾಗಿದ್ದ ಕಾರಣ ನಿನ್ನೆ ಗುರುವಾರ ಪ್ರಕರಣ ರದ್ದುಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಪೀಠ ಶುಕ್ರವಾರ ಕೈಗೆತ್ತಿಕೊಂಡು ಬಂಧಿಸದಂತೆ ಮಧ್ಯಂತರ ಆದೇಶ ನೀಡಿದೆ. ವಿಚಾರಣೆಯಲ್ಲಿ ಬಿಎಸ್‌ವೈ ಪರ ವಕೀಲ ಸಿ.ವಿ.ನಾಗೇಶ್ ವಾದಿಸಿದರು. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೆಕ್ಷನ್ 8ರಡಿಯಲ್ಲಿ ಕಳೆದ ಫೆ.2ರಂದು ನಡೆದ ಘಟನೆ ಬಗ್ಗೆ ಮಾರ್ಚ್ 14ರಂದು ಎಫ್‌ಐಆರ್ ದಾಖಲಾಗಿದೆ ಎಂದರು. ಆಗ ನ್ಯಾಯಪೀಠವು ಪ್ರಕರಣದ ಮಹಿಳೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದಾಗ ಅವರಿಗೋರ್ವ ಪುತ್ರಿ, ಇಂಜಿಯರಿಂಗ್ ಓದಿದ ಮಗ ಇದ್ದಾನೆ. ದೂರು ಸಲ್ಲಿಸಿರುವ ಮಹಿಳೆಯ ವಿರುದ್ಧ ಈವರೆಗೆ 53 ದೂರುಗಳನ್ನು ನೀಡಲಾಗಿದೆ. ಈ ಮಹಿಳೆಯ ವಿರುದ್ಧ 3 ಕ್ರಿಮಿನಲ್ ಪ್ರಕರಣಗಳಿವೆ. ವಂಚನೆ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ದೂರುಗಳು ಸಹ ಮಹಿಳೆಯ ಮೇಲಿವೆ ಎಂದರು. ಪೋಕ್ಸೋ ಪ್ರಕರಣ
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಎಲ್ಲಾ ವಕೀಲರು ಭಾವನಾತ್ಮಕವಾಗಿ ವಾದಮಾಡುವುದನ್ನು ಬಿಡುವಂತೆ ಹೇಳಿದರು.
ಇದನ್ನೂ ಓದಿ : ಪೋಕ್ಸೋ ಪ್ರಕರಣ : ಮಾಜಿ ಸಿಎಂ ಬಂಧನಕ್ಕೆ ಸಿದ್ಧತೆ! ಯಡಿಯೂರಪ್ಪ ನಾಪತ್ತೆ?
ಎಜೆ ಶಶಿಕಿರಣ್ ಶೆಟ್ಟಿ ಮಾತನಾಡಿ, ಜೂನ್ 12 ರಂದು ವಿಚಾರಣೆಗೆ ಹಾಜರಾಗುವಂತೆ ಬಿಎಸ್ವೈಗೆ ನೊಟೀಸ್ ನೀಡಲಾಗಿದೆಯಾದರೂ ಅವರು ಹಾಜರಾಗಿರಲಿಲ್ಲ.ಹೀಗಾಗಿ ಬಂಧನದ ವಾರೆಂಟ್ ಜಾರಿಯಾಗಿರುವುದಾಗಿ ಹೇಳಿದರು. ಆಗ ಸಿಡುಕಿದ ನ್ಯಾಯಮೂರ್ತಿಗಳು ಯಡಿಯೂರಪ್ಪ ವಿಚಾರಣೆಗೆ ಬರುವುದಿಲ್ಲ ಎಂದು ನೀವೇ ಏಕೆ ಭಾವಿಸಿದಿರಿ? ಅವರೇನು ಟಾಮ್ ಡಿಕ್ ಎಂಡ್ ಹ್ಯಾರಿಯಲ್ಲ, ನಿಮ್ಮನ್ನು ಬಂಧಿಸುವ ಅವಕಾಶವಿದ್ದಾಗ ವಾರೆಂಟ್ ಜಾರಿ ಮಾಡಿದ್ದಾದರೂ ಏಕೆ ? ಅವರನ್ನು ಏಕೆ ಬಂಧಿಸಬೇಕು? ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದ ಎಜೆ ಶಶಿಕಿರಣ್ ಶೆಟ್ಟಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಯಡಿಯೂರಪ್ಪರನ್ನು ಕರ್ನಾಟಕ ರಾಜ್ಯದಲ್ಲಿಯೇ ಬಂಧಿಸಬೇಕಾದ್ದರಿಂದ ಬಂಧನದ ವಾರೆಂಟ್ ಜಾರಿಯಾಗಿದೆ ಎಂದರು.
ವಾದಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಬಿಎಸ್‌ವೈ ಪ್ರಕರಣ ರದ್ದಿಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಸರ್ಕಾರಕ್ಕೆ ನೊಟೀಸ್ ನೀಡಿ ಬಂಧಿಸದಂತೆ ಮಧ್ಯಂತರ ಆದೇಶ ನೀಡಿತು . ನ್ನು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ತನಿಖೆಗೆ ಹಾಜರಾಗುವಂತೆ ಷರತ್ತು ವಿಧಿಸಿ ಬಿಎಸ್ವೈ ಅವರನ್ನು ಮುಂದಿನ ವಿಚಾರಣೆವರೆಗೆ ಬಂಧನ ಮಾಡದಂತೆ ಆದೇಶಿಸಿದೆ. ತನಿಖೆಗಾಗಿ ಸದ್ಯಕ್ಕೆ ಅವರನ್ನು ಬಂಧಿಸುವುದು ಅಗತ್ಯವಿಲ್ಲ. ಹೀಗಾಗಿ ಮುಂದಿನ ವಿಚಾರಣೆವರೆಗೂ ಅವರನ್ನು ಅರೆಸ್ಟ್ ಮಾಡದಂತೆ ಸಿಐಡಿಗೆ ಹೈಕೋರ್ಟ್ ಸೂಚನೆ ನೀಡಿದೆ. ಜೂ.17ರಂದು ಬಿಎಸ್ವೈ ಅವರು ವಿಚಾರಣೆಗೆ ಹಾಜರಾಗಬೇಕು ಎಂದು ವಾದ-ಪ್ರತಿವಾದ ಆಲಿಸಿ ಕೋರ್ಟ್ ಈ ಸೂಚನೆ ನೀಡಿದೆ.