ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್ ) ಭಾರತಾದ್ಯಂತ ಟೆಲಿಕಾಂ ರಂಗದಲ್ಲಿ ಹೊಸತನಕ್ಕೆ ನಾಂದಿ ಹಾಡುಲು ಗ್ರಾಹಕ ಸ್ನೇಹಿ ಯೋಜನೆಗಳನ್ನು ಘೋಷಿಸುತ್ತಿದೆ. ಮಾತ್ರವಲ್ಲದೇ 5ಜಿಗೆ ಅಪ್‌ಗ್ರೇಡ್ ಆಗಲು ಸಜ್ಜಾಗಿರುವ ಬಿಎಸ್‌ಎನ್‌ಎಲ್ ಹೊಸ ಸೇವೆ ಆರಂಭಿಸಿದೆ. ಇಂಟರ್‌ನೆಟ್
ಭಾರತಾದ್ಯಂತ ಟೆಲಿಕಾಂ ರಂಗದಲ್ಲಿ ಹೊಸತನಕ್ಕೆ ನಾಂದಿ ಹಾಡುತ್ತಿರುವ ಬಿಎಸ್‌ಎನ್‌ಎಲ್ ಗ್ರಾಹಕ ಸ್ನೇಹಿ ಯೋಜನೆಗಳನ್ನು ಘೋಷಿಸುತ್ತಿದೆ. ಮಾತ್ರವಲ್ಲದೇ 5ಜಿಗೆ ಅಪ್‌ಗ್ರೇಡ್ ಆಗಲು ಸಜ್ಜಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್ ) ಹೊಸ ಸೇವೆ ಆರಂಭಿಸಿದೆ. ಇಂಟರ್‌ನೆಟ್ ಪ್ರೋಟೋಕಾಲ್ ಆಧಾರಿತ IFTV (Intranet Fibre TV) ಸೇವೆಯನ್ನು ಪರಿಚಯಿಸಿದೆ.
ಬಿಎಸ್‌ಎನ್‌ಎಲ್ ಕೆಲವು ದಿನಗಳ ಹಿಂದಷ್ಟೇ ದೇಶದ ಇನ್ನೊಂದು ರಾಜ್ಯದಲ್ಲಿ ಇಂಟರ್‌ನೆಟ್ ಪ್ರೋಟೋಕಾಲ್ ಆಧಾರಿತ ಐಎಫ್‌ಟಿವಿ ಸೇವೆ ನೀಡಲು ಶುರು ಮಾಡಿದೆ. ಈ ಸೇವೆ ಪಡೆದ ಗ್ರಾಹಕರು 500 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ವಿಶೇಷವೆಂದರೆ ‘ಸೆಟ್-ಟಾಪ್ ಬಾಕ್ಸ್’ ಅಗತ್ಯವಿಲ್ಲದೇ ಈ ಸೇವೆಯನ್ನು ನೀಡುತ್ತಿದೆ.
ಇದನ್ನೂ ಓದಿ : ಟವರ್ ನಿರ್ಮಿಸುವುದಾಗಿ ಸುಳ್ಳು ಹೇಳಿ ನಕಲಿ ಆಫರ್: BSNL ಎಚ್ಚರಿಕೆ
ಗ್ರಾಹಕರು ಬ್ರಾಡ್‌ಬ್ಯಾಂಡ್ ಸಂಪರ್ಕದ ಮೂಲಕ ಎಚ್‌ಡಿ ಗುಣಮಟ್ಟ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲು ಈ ಸೇವೆ ಅನುಕೂಲ ಮಾಡಿಕೊಟ್ಟಿದೆ. ಈ ರಾಜ್ಯದಲ್ಲಿ ಮತ್ತಷ್ಟು ಗ್ರಾಹಕರು ಈ ಸೇವೆಯಡಿ ಬರುವ ವಿಶ್ವಾಸ ವ್ಯಕ್ತವಾಗಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಬಿಎಸ್‌ಎನ್‌ಎಲ್ ಸಂಸ್ಥೆಯ ಹೊಸ ಸೇವೆಗೆ ಸಾವಿರಾರು ಚಂದಾದಾರರನ್ನು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಹಳೆಯ LCD ಅಥವಾ LED ಟಿವಿಗಳಲ್ಲಿ ಫೈರ್ ಸ್ಟಿಕ್ ಬಳಸುವ ಮೂಲಕವೂ ಈ IFTV ಸೇವೆಯನ್ನು ಪಡೆಯಬಹದು.
ಗುಜರಾತ್ ಸೇರಿ 4 ರಾಜ್ಯಗಳಲ್ಲಿ IFTV ಸೇವೆ ಗುಜರಾತ್‌ನಲ್ಲಿ ಹೊಸ ಸೇವೆ ಆರಂಭಿಸಿರುವ ಕುರಿತು ಬಿಎಸ್‌ಎನ್‌ಎಲ್ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಮಾಹಿತಿ ನೀಡಿದೆ. ರಾಜ್ಯದ ಟೆಲಿಕಾಂ ವಲಯದಲ್ಲಿ ಹೊಸ ಸೇವೆ ಸಂಚಲನ ಸೃಷ್ಟಿಸುತ್ತಿದೆ.
ಕಳೆದ ಬಾರಿ ಈ IFTV ಸೇವೆಯನ್ನು ಮಧ್ಯಪ್ರದೇಶ, ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಲ್ಲಿ ಆರಂಭಿಸಲಾಗಿದೆ. ಪಂಜಾಬ್ ನಲ್ಲಿ ಟೆಲಿಕಾಂ ಸಂಸ್ಥೆಯು ಸ್ಕೈಪ್ರೊ ಜೊತೆ ಪಾಲುದಾರಿಕೆ ಹೊಂದಿದೆ.
ಇದನ್ನೂ ನೋಡಿ : ಸೈಬರ್ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice