ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಆಪ್ತ ಉಮೇಶ್ ನಿವಾಸದ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಓಓಡಿ ಮೇಲೆ ಸಿಎಂ ಕಚೇರಿಯಲ್ಲಿ ಉಮೇಶ್ ಕೆಲಸ ಮಾಡುತ್ತಿದ್ದ ಉಮೇಶ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಓಓಡಿ ಆದೇಶವನ್ನು ವಾಪಸ್ ಪಡೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಉಮೇಶ್ ಅನ್ಯ ಸೇವೆ ನಿಯೋಜನೆಯನ್ನು ಬಿಎಂಟಿಸಿ ವಾಪಸ್ ಪಡೆದಿದೆ. ಮುಖ್ಯಮಂತ್ರಿ ಆಪ್ತ ಸಹಾಯಕನಾಗಿ ಸಿಎಂ ಕಚೇರಿಗೆ ಉಮೇಶ್ ನಿಯೋಜನೆಗೊಂಡಿದ್ದರು. ಆದರೆ ಈಗ ಅವರು ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ.
ಇದನ್ನು ಓದಿ: ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ : ಹಲವು ದಾಖಲೆಗಳು ವಶಕ್ಕೆ
ಉಮೇಶ್ ಆದಾಯದಲ್ಲಿ ದಿಢೀರ್ ಏರಿಕೆ ಕಂಡು ಐಟಿ ಅಧಿಕಾರಿಗಳಿಗೆ ಆಶ್ಚರ್ಯವಾಯಿತು. ಕೇವಲ 2 ವರ್ಷದಲ್ಲಿ ಉಮೇಶ್ ಆದಾಯ ಶೇಕಡಾ 300ರಷ್ಟು ಏರಿಕೆಯಾಗಿದೆ ಅಂತಾ ಹೇಳಲಾಗುತ್ತಿದೆ. ಕಾವೇರಿ ನೀರಾವರಿ ನಿಗಮ ಟೆಂಡರ್‌ನಲ್ಲಿ ಅವ್ಯವಹಾರ ಆರೋಪ ಉಮೇಶ್ ಮೇಲಿದೆ. ಕೃಷ್ಣ ಭಾಗ್ಯ ಜಲ ನಿಗಮ ಟೆಂಡರ್ ನಲ್ಲಿಯೂ ಭ್ರಷ್ಟಾಚಾರ ನಡೆಸಿರೋ ಆರೋಪವಿದೆ.
2007-08ರಲ್ಲಿ ಬಿಎಂಟಿಸಿ ಉದ್ಯೋಗಿಯಾದ ಉಮೇಶ್, ಟ್ರೈನಿಯಾಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದೇ ವರ್ಷಕ್ಕೆ ಉದ್ಯೋಗ ಬೇಡ ಎನ್ನಿಸಿತ್ತು. ಇದೇ ವೇಳೆ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದರು. ಈ ವೇಳೆ ಉಮೇಶ್ ಎರವಲು ಸೇವೆ ಅರ್ಜಿ ಸಲ್ಲಿಸಿದ್ದ. 2008ರಲ್ಲಿ ಎರವಲು ಸೇವೆಯಡಿ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದ. ಎರವಲು ಸೇವೆಗೆ ನಿಯೋಜನೆಯಾಗುವ ಮುನ್ನ ಉಮೇಶ್ ತಿಂಗಳಿಗೆ 3,500ರೂ. ಸಂಬಳ ಪಡೆಯುತ್ತಿದ್ದ. ಒಂದೇ ವರ್ಷಕ್ಕೆ ಟ್ರೈನಿಯಿಂದ ಪ್ರೊಬೆಷನರಿಯಾಗಿ ಬಡ್ತಿ ಪಡೆದು ತಿಂಗಳಿಗೆ 18 ಸಾವಿರ ರೂ.ವೇತನ ಪಡೆಯಲಾರಂಭಿಸಿದೆ. ಇದೀಗ ಉಮೇಶ್ ವೇತನ ತಿಂಗಳಿಗೆ 30ರಿಂದ 32 ಸಾವಿರ ರೂ. ಇದೆ.
ಎರವಲು ಸೇವೆಗೆ ನಿಯೋಜನೆಯಾದರೆ ಎರಡು ವರ್ಷದ ಬಳಿಕ ಮಾತೃ ಇಲಾಖೆಯಲ್ಲಿ ಕೆಲಸ ಮಾಡಿ, ಡೆಪ್ಟೇಷನ್ ಪಡೆಯಬಹುದು. ಆದರೆ ಉಮೇಶ್ ಮಾತ್ರ 2008ರಿಂದ ಎರವಲು ಸೇವೆಯಲ್ಲಿಯೇ ಮುಂದುವರಿಯುತ್ತಿರುವುದು ವಿಶೇಷ. ಸದ್ಯ ಎರಡನೇ ದಿನವೂ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.