ಸ್ಮಶಾನದಲ್ಲಿ ಬ್ರೋಕರ್ ಹಾವಳಿ ಹೆಚ್ಚಳ; ಸತ್ತಮೇಲೂ ಜನರಿಗೆ ನೆಮ್ಮದಿ ಇಲ್ಲ

ಬೆಂಗಳೂರು: ಜನರು ಮಾತಿಗೆ ಇದ್ದಾಗಂತೂ ನೆಮ್ಮದಿ ಇಲ್ಲ, ಸತ್ತಮೇಲಾದರೂ ನೆಮ್ಮಲಿ ಸಿಗಲಿ ಅಂತ ಹೇಳ್ತಾರೆ. ಆದ್ರೆ ನಗರದಲ್ಲಿ ಜನಗಳ ಪರಿಸ್ಥಿತಿ ಹೇಗಾಗಿದೆ ಅಂದರೆ ಸತ್ತ ಮೇಲೂ ನೆಮ್ಮದಿ ಇಲ್ಲ ಎನ್ನವಂತಾಗಿದೆ. ಸ್ಮಶಾನ

ಬ್ರೋಕರ್ ಗಳ ಹಾವಳಿಗಳು ಇತ್ತೀಚಿನ ದಿನಗಳಲ್ಲಿ ಮಿತಿಮೀರಿ ಹೋಗಿದೆ. ಎಲ್ಲೆಲ್ಲೂ ನಾವೇ ಇದ್ದೀವಿ ಎನ್ನುವಂತೆ ಎಲ್ಲಾ ಕಡೆ ಸುತ್ತು ವರೆದಿದ್ದಾರೆ. ಅದರಂತೆ ಸ್ಮಶಾನದಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಅಲ್ಲಿ ಹೆಣ ಸುಡಬೇಕು ಅಂದರೆ ಸೌದೆಗೆ ಆರು ಸಾವಿರ ರೂ. ಕೊಡಬೇಕು.

ಇದನ್ನೂ ಓದಿ: ‘ಆನ್’ಲೈನ್ ಬೆಟ್ಟಿಂಗ್’ ತಡೆಗೆ ಹೊಸ ಕಾನೂನು ಜಾರಿ: ಪ್ರಿಯಾಂಕ್ ಖರ್ಗೆ

ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರದಲ್ಲಿ ಈಗಲೂ ಸೌದೆ ಬಳಸಿ ಹೆಣಗಳನ್ನು ಸುಡಲಾಗುತ್ತದೆ. ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ತಿರ್ಮಾನಿಸಲಾಗಿದೆ. ಸದ್ಯ ಸೌದೆಗಳ ಮೂಲಕವೇ ಹೆಣ ಸುಡಲಾಗುತ್ತಿದೆ. ಈ ಸ್ಮಶಾನದಲ್ಲಿ ಹೆಣ ಸುಡಬೇಕಾದರೆ ಸೌದೆಗಾಗಿ 6 ಸಾವಿರ ರೂ. ಕೊಡಬೇಕು.

ಸೌದೆ ತೆಗೆದುಕೊಂಡರೆ ಮಾತ್ರ ಮೃತದೇಹ ಸುಡಲು ಸ್ಲಾಟ್ ಕೊಡುತ್ತಾರೆ. ಸೌದೆ ಬ್ರೋಕರ್‌ಗಳ ಕಾರುಬಾರು ವಿಪರೀತ ಹೆಚ್ಚಾಗಿದ್ದು ಇರುವ ಸ್ಲಾಟ್‌ಗಳನ್ನು ಮೂವರು ಸೌದೆ ಮಂಡಿಯವರು ಹಂಚಿಕೊಂಡಿದ್ದಾರೆ. ಇವರ ಬಳಿಸೌದೆ ಖರೀದಿಸಿದರೆ ಮಾತ್ರ ಜನರಿಗೆ ಸ್ಲಾಟ್ ಸಿಗುತ್ತದೆ. ಸೌದೆ ಬೇಡ ಅಂದರೆ ಇಲ್ಲಿ ಸುಡಲು ಅವಕಾಶವಿಲ್ಲ ಎಂಬ ಶಾಕಿಂಗ್‌ ವಿಚಾರವನ್ನು ಬ್ರೋಕರ್‌ಗಳೇ ತಿಳಿಸಿದ್ದಾರೆ.

ಇದನ್ನೂ ನೋಡಿ: ಆರೋಗ್ಯ ಹಕ್ಕು | ಆರೋಗ್ಯ ಎಂದರೆ ರೋಗವಿಲ್ಲದಿರುವುದೇ?! | ಸರಣಿ ಕಾರ್ಯಕ್ರಮ – ಸಂಚಿಕೆ 01 Janashakthi Media

Donate Janashakthi Media

Leave a Reply

Your email address will not be published. Required fields are marked *