ಬೆಂಗಳೂರು : ಬ್ರಿಟನ್ ನಿಂದ ಭಾರತಕ್ಕೆ ಮರಳಿದಂತರಹ 20 ಜನರಲ್ಲಿ ಹೊಸ ರೂಪಾಂತರ ಕೊರೊನಾ ಇರುವುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಅದರಲ್ಲಿ ಕರ್ನಾಟಕದ ಶಿವಮೊಗ್ಗದಲ್ಲಿ ಒಂದೇ ಕುಟುಂಬದ ನಾಲ್ವರು ಮತ್ತು ಬೆಂಗಳೂರಲ್ಲಿ ಮೂವರು ಸೇರಿ ರಾಜ್ಯದಲ್ಲಿ 7 ಮಂದಿಯಲ್ಲಿ ಹೊಸ ಮಾದರಿಯ ಬ್ರಿಟನ್ ಕೊರೋನಾ ವೈರಸ್ ಧೃಡಪಟ್ಟಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಹೊಸ ಮಾದರಿಯ ಬ್ರಿಟನ್ ಕೊರೋನಾ ವೈರಸ್ ಧೃಢಪಟ್ಟ ಬೆನ್ನಲ್ಲೆ ಮತ್ತೇ ಲಾಕ್ ಡೌನ್ ಹಸಿ ಬಿಸಿ ಚರ್ಚೆಗಳು ಹರಿದಾಡುತ್ತಿದ್ದು ಮತ್ತೆ ಜನರಲ್ಲಿ ಆತಂಕ್ಕೆ ಉಂಟುಮಾಡಿದೆ.
ಈ ಕುರಿತಾಗಿ ವಿಧಾನ ಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಯಾವುದೇ ರೀತಿಯ ಲಾಕ್ ಡೌನ್ ಘೊಷಣೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದು, ರೂಪಾಂತರ ವೈರಸ್ ಸೋಂಕಿತರಾದಂತ 7 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಕೆಲವರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕ್ವಾರಂಟೈನ್ ಕಡ್ಡಾಯವಾಗಿ ಎಲ್ಲರೂ ಒಪ್ಪಲೇ ಬೇಕು. ಸಾಂಸ್ಥಿಕವಾಗಿ ಕ್ವಾರಂಟೈನ್ ರೂಪಾಂತರಿ ವೈರಸ್ ದೃಢಪಟ್ಟವರು ಇರಲೇ ಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ವಸಂತಪುರ ವಾರ್ಡನ ವಿಠಲನಗರದಲ್ಲಿ ಬ್ರಿಟನ್ ರೂಪಾಂತರ ವೈರಸ್ ತಗುಲಿದ ತಾಯಿ – ಮಗುವಿನ ಸಂಪರ್ಕದಲ್ಲಿದ್ದ ಅಪಾರ್ಟೆಮೆಂಟ್ ನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.
ಈ ಹೊಸ ಮಾದರಿಯ ವೈರಾಣುವಿನ ಕುರಿತು ಮಾಧ್ಯಮಗಳು ಹಬ್ಬಿಸುತ್ತಿರುವ ಭಯ ಭೀತಿಗೆ ಜನರು ಮತ್ತಷ್ಟು ಕುಗ್ಗುತ್ತಿದ್ದಾರೆ. ಈ ಕುರಿತಾಗಿಯೇ ಈಗಾಗಲೇ ಈ ಹೊಸ ರೂಪಾಂತರಿ ವೈರಾಣುವಿಗೆ ಯಾರು ಹೆದರಬೇಕಾಗಿಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಸ್ಷಷ್ಟ ಪಡಿಸಿದೆ.