ಸಾವೊ ಪೌಲೊ: ಆಕಾಶದಿಂದ ನೆಲದ ಮೇಲೆ ವಿಮಾನ ಅಪ್ಪಳಿಸಿದ್ದರಿಂದ ವಿಮಾನದಲ್ಲಿ ಎಲ್ಲಾ 62 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬ್ರೆಜಿಲ್ ನಲ್ಲಿ ಶುಕ್ರವಾರ ಸಂಭವಿಸಿದೆ.
ಏರ್ ಲೈನ್ ವಿಯೊಪಾಸ್ ಲಿನ್ಹಾಸ್ ಏರಿಯಾಸ್ ಸಂಸ್ಥೆಯ ಎಟಿಆರ್-72 ವಿಮಾನ ದುರಂತಕ್ಕೀಡಾಗಿದೆ. ಸಾವೊಪ್ಲಾವೊದ ಗುರುಲ್ಹಾಸ್ ರಾಜ್ಯದ ಪರ್ಹಾಸ್ ನ ಪರಾಣದಿಂದ ಕೇಸ್ ಕಾವೇಲ್ ಗೆ ವಿಮಾನ ಹೊರಟಾಗ ಇದ್ದಕ್ಕಿದ್ದಂತೆ ವಿಮಾನ ಕುಸಿತ ಕಂಡಿದೆ.
ಬ್ರೆಜಿಲ್ ಅಧಿಕಾರಿಗಳು ಅಪಘಾತವನ್ನು ದೃಢಪಡಿಸಿದ್ದು, ವಿಮಾನದಲ್ಲಿ 7 ಮಂದಿ ಸಿಬ್ಬಂದಿ ಕೂಡ ಇದ್ದರು. ವಿಮಾನ ದುರಂತಕ್ಕೆ ಕಾರಣ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
ವಿಮಾನ ಮನೆಗಳ ಮಧ್ಯೆ ಇರುವ ಮರದ ಮೇಲೆ ಬಿದ್ದಿದ್ದರಿಂದ ದೊಡ್ಡ ದುರಂತ ತಪ್ಪಿದೆ. ವಸತಿ ಬಡಾವಣೆಗಳಲ್ಲಿನ ಮನೆಗಳ ಮೇಲೆ ಬಿದ್ದಿದ್ದರೆ ಸಾವಿನ ಪ್ರಮಾಣ ಹೆಚ್ಚಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
BREAKING: Voepass Flight 2283, a large passenger plane, crashes in Vinhedo, Brazil pic.twitter.com/wmpJLVYbB3
— BNO News (@BNONews) August 9, 2024
ವಿಮಾನವು ಪತನ ಹೊಂದಲು ಕಾರಣವೇನು ಎಂಬುದರ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಹವಾಮಾನ ವೈಪರಿತ್ಯದಿಂದ ಪೈಲಟ್ ಎಂಜಿನ್ ಮೇಲೆ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. Voepass ಏರ್‌ಲೈನ್ಸ್ ಬ್ರೆಜಿಲ್‌ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.
ಏರ್‌ಬಸ್ ಮತ್ತು ಇಟಾಲಿಯನ್ ಏರೋಸ್ಪೇಸ್ ಗ್ರೂಪ್ ಲಿಯೊನಾರ್ಡೊ ಜಂಟಿ ಒಡೆತನದದ ಎಟಿಆರ್ (ATR) ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.