ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಲ ಪಂಥಿಯ ಸಂಘಟನೆಗಳು ಆಪತ್ತಿನಲ್ಲಿ ಸಿಲುಕಿಕೊಂಡಿದ್ದಾವೆ ಎಂಬ ಮಾತುಗಳು ಬಲ ಪಂಥಿಯ ವಲಯಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಬಲ ಪಂಥಿಯ ಸಂಘಟನೆಗಳ ವಿರುದ್ಧ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಶಾಸಕರು ಆಗಾಗ ಬಲ ಪಂಥಿಯ ಸಂಘನಟೆಗಳ ವಿರುದ್ಧ ಆಕ್ರೋಶವನ್ನ ವ್ಯಕ್ತ ಪಡಿಸುತ್ತಲೇ ಇದ್ದಾರೆ. ತತ್ವ
ಇದನ್ನೂ ಓದಿ:ಸಮಾನತೆ ನೀಡದ ಯಾವುದೇ ಧರ್ಮ ಧರ್ಮವಲ್ಲ: ಪ್ರಿಯಾಂಕ್ ಖರ್ಗೆ
ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ. ಆರ್.ಎಸ್.ಎಸ್ ತತ್ವದಿಂದ ಯಾರು ಉದ್ದಾರ ಆಗಿದ್ದಾರೆಂದು ತೋರಿಸಿ ಎಂದು ಹೇಳಿಕೆ ನೀಡುವ ಮೂಲಕ ಬಲ ಪಂಥಿಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು ಆರ್‌ಎಸ್‌ಎಸ್ ಸಂಘಟನೆ ಒಂದು ನಿಷ್ಪ್ರಯೋಜಕ ಸಂಘಟನೆ ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ.