ಬ್ರಹ್ಮಾವರ ವಾರಂಬಳ್ಳಿ ಪಂಚಾಯತ್ ಅವ್ಯವಸ್ಥೆಗಳ ಆಗರ

ಉಡುಪಿ: ಜಿಲ್ಲೆಯ ಶ್ರೀಮಂತ ಪಂಚಾಯತ್ , ಹಾಗೆಯೇ ವರ್ಷಕ್ಕೆ ಸುಮಾರು ಐವತ್ತು ಲಕ್ಷ ಆದಾಯ ಇರುವ ವಾರಂಬಳ್ಳಿ ಪಂಚಾಯತ್ ನ ಸರಕಾರಿ ಸಾರ್ವಜನಿಕ ಆಸ್ತಿಪಾಸ್ತಿಗಳ ನಿರ್ವಹಣೆ ಹದಗೆಟ್ಟು ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬ್ರಹ್ಮಾವರ 

ವಾರಂಬಳ್ಳಿ ಪಂಚಾಯತ್ ನ ಸಂತೆ ಮಾರ್ಕೆಟ್ ನ ಒಳಗೆ ವಿಧ್ಯುತ್ ದೀಪದ ವ್ಯವಸ್ಥೆಯೇ ಇಲ್ಲಾ ಸಾರ್ವಜನಿಕ ಹರಾಜಿನಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿಗಳಿಗೆ ಹರಾಜಾದಾ ತರಕಾರಿ ಸಂತೆ ಮಾರುಕಟ್ಟೆಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನೇ ಒದಗಿಸಿಲ್ಲಾ. ಹಾಗೆಯೇ ಮೀನು ಮಾರುಕಟ್ಟೆ ಸುಮಾರು ಒಂದು ಲಕ್ಷ ಮೂವತ್ತೈದು ಸಾವಿರ ರೂಪಾಯಿಗಳಿಗೆ ಹರಾಜಾಗಿದೆ.

ಇದನ್ನೂ ಓದಿ: ಪಟಾಕಿ ಉತ್ಪಾದನಾ ಘಟಕದಲ್ಲಿ ಸ್ಫೋಟ; 6 ಮಂದಿ ಸಾವು

ಮಟನ್ ಮಾರುಕಟ್ಟೆ ಸುಮಾರು ನಾಲ್ಕು ಲಕ್ಷ ರೂಪಾಯಿ ಗಳಿಗೆ ಹರಾಜಾಗಿದೆ. ಉಳಿದ ಅಂಗಡಿ ಕೋಣೆಗಳು ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ. ಇಷ್ಟೆಲ್ಲಾ ಆದಾಯ ಇರುವ ವಾರಂಬಳ್ಳಿ ಪಂಚಾಯತ್ ಗೆ ಹಲವು ಬಾರಿ ಮನವಿ ಮಾಡಿದರೂ , ಪ್ರತೀ ತಿಂಗಳ ಪೋಲಿಸ್ ಮಾಸಿಕ ಸಭೆಯಲ್ಲಿ ದೂರು ಕೊಟ್ಟರೂ ಸೋಮವಾರ ಸಂತೆ ನಡೆಯುವ ದಿನ ಸಂತೆ ಮಾರುಕಟ್ಟೆ ಒಳಗಡೆ ವಿಧ್ಯುತ್ ದೀಪದ ವ್ಯವಸ್ಥೆ ಮತ್ತು ಸೋಮವಾರ ವಾರದಂದು ವಾಹನ ದಟ್ಟಣೆಯಿಂದಾಗಿ ಹಲವು ಅಫಘಾತಗಳು ಸಂಭವಿಸುತ್ತಿದೆ.

ದಯವಿಟ್ಟು ಸೋಮವಾರದಂದು ಕನಿಷ್ಠ ಇಬ್ಬರು ಪೋಲೀಸರನ್ನು ನಿಯೋಜಿಸಿ ವಾಹನಗಳು ಮಾರುಕಟ್ಟೆ ಒಳಗಡೆ ನುಗ್ಗುವುದನ್ನು ಕಡಿಮೆ ಮಾಡಿ ಎಂದು ಹಲವು ಬಾರಿ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲಾ.

ವಾರಂಬಳ್ಳಿ ಸಂತೆ ಮಾರ್ಕೆಟ್ ಬಳಿ ಇರುವ ಸಾರ್ವಜನಿಕ ಶೌಚಾಲಯ ಮತ್ತು ತ್ಯಾಜ್ಯ ಕಸದ ರಾಶಿಗಳು , ಕೊಳಚೆ ನೀರು ಹರಿಯುವ ಈ ಗುಂಡಿಗಳೇ ಈ ಅವ್ಯವಸ್ಥೆ ಸಾಕ್ಷಿಯಾಗಿದೆ.

ಈ ಎಲ್ಲಾ ಅವ್ಯವಸ್ಥೆ ಹಾಗೂ ದುರವಸ್ಥೆಗಳನ್ನು ಜಿಲ್ಲಾಡಳಿತ ಆದಷ್ಟು ಬೇಗ ಸರಿಪಡಿಸಬೇಕೆಂದು ಬ್ರಹ್ಮಾವರದ ಸಮಸ್ತ ನಾಗರಿಕರ ಪರವಾಗಿ ನಾಗರಿಕ ಹೋರಾಟ ವೇಧಿಕೆಯ ಸಧಾಶಿವ ಶೆಟ್ಟಿ ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ‘ಪ್ರಾಣ ಕೊಟ್ಟೇವು, ಭೂಮಿ ಬಿಡೆವು’ ಚನ್ನರಾಯಪಟ್ಟಣ ರೈತರ ಸಂಕಲ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *