ಚಿತ್ರದುರ್ಗ: ಸ್ನೇಹಿತನ ಮದುವೆಯಲ್ಲಿ ಸಂಭ್ರಮಿಸುತ್ತ ಸ್ನೇಹಿತರೆಲ್ಲ ಕುಣಿಯುತ್ತಿರುವ ವೇಳೆ ಯುವಕನೊಬ್ಬ ಪ್ರಾಣ ಕಳೆದುಕೊಡಿರುವ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.
23 ವರ್ಷದ ಆದರ್ಶ ಮೃತ ದುರ್ದೈವಿ. ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಣ್ಣಮುಂದೆಯೇ ಸ್ನೇಹಿತ ಪ್ರಾಣ ಕಳೆದುಕೊಂಡದನ್ನು ಕಂಡು ಗೆಳೆಯರು, ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪತ್ನಿ – ಮಾವನ ಕಾಟಕ್ಕೆ ಬೇಸತ್ತು ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ
ಪಗಡಲಬಂಡೆ ಗ್ರಾಮದಲ್ಲಿ ಯುವಕನ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಸಂಭ್ರಮದಲ್ಲಿ ಎಲ್ಲರೂ ಸೇರಿ ಡಿಜೆ ಸೌಂಡಿಗೆ ಹೆಜ್ಜೆ ಹಾಕುವುದಕ್ಕೆ ಶುರು ಮಾಡಿದ್ದಾರೆ. ಜೊತೆಗೆ ಕುಣಿಯುತ್ತಿದ್ದ, ಆದರ್ಶ್ ಇದ್ದಕ್ಕಿದ್ದ ಹಾಗೇ ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ಅಲ್ಲಿಯೇ ಇದ್ದವರೂ ತಕ್ಷಣ ಆದರ್ಶ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆ ಸೇರುವುದರೊಳಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಯುವಕನ ದುರಂತ ಅಂತ್ಯದ ಕ್ಷಣದ ಡಾನ್ಸ್ ವಿಡಿಯೋದಲ್ಲಿ ಸೆರೆಯಾಗಿದೆ. ಮೃತಪಟ್ಟ ಯುವಕ ಆದರ್ಶ್ ಐನಳ್ಳಿ ಕುರುಬರಹಟ್ಟಿಯ ವಿವಾಸಿಯಾಗಿದ್ದಾನೆ. ಸ್ನೇಹಿತನ ವಿವಾಹಕ್ಕೆಂದು ಹಗಡಲಬಂಡೆಗೆ ಬಂದಿದ್ದನು. ಹುಟ್ಟುವುದು ಗೊತ್ತಾದರೂ ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿಯಲ್ಲ. ಹಾಗೇ ಆದರ್ಶ ಇದ್ದಕ್ಕಿದ್ದ ಹಾಗೇ ಸಾವನಪ್ಪಿದಕ್ಕೆ ಕಾರಣ ಏನು ಎಂಬುದು ಯಾರಿಗೂ ಗೊತ್ತಿಲ್ಲ.
ನಿನ್ನ ರಾತ್ರಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕ ಸಾವಿನಿಂದ ಮನೆಯವರು ದಿಗ್ರಾಂತರಾಗಿದ್ದಾರೆ. ಮದುವೆ ಮನೆಯಲ್ಲಿ ಖುಷಿಯಾಗಿರಬೇಕಾದವನು ಮಸಣ ಸೇರಿದ್ದಾನೆ.
ಇದನ್ನೂ ನೋಡಿ : ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ, ಪ್ರತ್ಯಕ್ಷವಾದ Janashakthi Media