ಹೋಮ್ ವರ್ಕ್ ಮಾಡಿಲ್ಲವೆಂದು ಬಾಲಕನ ಮೇಲೆ ಹಲ್ಲೆ; ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ನಾಲ್ಕನೇ ತರಗತಿ ಬಾಲಕನ ಮೇಲೆ ಹಲ್ಲೆ ಮಾಡಿದ ಆರೋಪ ನಗರದ ಲಕ್ಷ್ಮೀದೇವಿನಗರದಲ್ಲಿರುವ ಖಾಸಗಿ ಶಾಲೆಯ ಇಂಗ್ಲಿಷ್ ಶಿಕ್ಷಕಿ ವಿರುದ್ಧ ಕೇಳಿಬಂದಿದೆ. 10 ವರ್ಷದ ನೊಂದ ಬಾಲಕನ ತಾಯಿ ನಂದಿನಿ ಲೇಔಟ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಶಿಕ್ಷಕಿ ಆ್ಯಂಗ್ಲಿನಾ ಹಾಗೂ ಶಾಲೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಹೋಮ್

ಜನವರಿ 10ರಂದು ಶಾಲೆಗೆ ಹೋಗಿದ್ದ ಬಾಲಕ ಹೋಮ್ ವರ್ಕ್ ಮಾಡಿಲ್ಲವೆಂದು ಶಾಲೆಯ ಶಿಕ್ಷಕಿ ಆ್ಯಂಗ್ಲಿನಾ ಬಾಸುಂಡೆ ಬರುವಂತೆ ಹಲ್ಲೆಗೈದಿದ್ದಾರೆ. ಅಲ್ಲದೆ, ಹಲ್ಲೆಯ ವಿಚಾರ ಯಾರಿಗಾದರೂ ಹೇಳಿದರೆ ಮತ್ತೆ ಥಳಿಸುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬಲವಂತದ ಹೆಚ್ಚುವರಿ ಸಮಯ – ಗುಪ್ತ ಶೋಷಣೆ ವಿರುದ್ಧ ಎಂಟಿಎಂ ಸ್ವಯಂಸೇವಕರ ಪ್ರತಿಭಟನೆ

ಜನವರಿ 10ರಂದು ಬಾಲಕನ ತಾಯಿ ಮಗನನ್ನು ನೋಡಲು ಹೋದಾಗ ಹಲ್ಲೆಯ ವಿಚಾರ ತಿಳಿದಿದೆ. ಶಾಲಾ ಆಡಳಿತ ಮಂಡಳಿಯವರಿಗೆ ವಿಷಯ ತಿಳಿಸಿದಾಗ, ಆ್ಯಂಗ್ಲಿನಾರನ್ನು ಸಸ್ಪೆಂಡ್ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಸಸ್ಪೆಂಡ್ ಮಾಡಿಲ್ಲ ಎಂದು ಬಾಲಕನ ತಾಯಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ, ಎರಡು ತಿಂಗಳಿನಿಂದ ಮಗನಿಗೆ ಬೆದರಿಸುವುದು, ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಟೀಚರ್​ನ್ನು ಪ್ರಶ್ನಿಸಿದರೆ ಅವನು ಚೆನ್ನಾಗಿ ಓದಲಿ ಎಂದು ಹೊಡೆದೆ ಅಂತಾರೆ. ಮೂರ್ನಾಲ್ಕು ದಿನವಾದರೂ ಬಾಸುಂಡೆ ಹೋಗದೆ ಇರುವ ಥರ ಹೊಡೆಯುತ್ತಾರಾ? ಈಗ ನನ್ನ ಮಗ ಆ ಶಾಲೆಗೆ ಹೋಗಲ್ಲ ಅಂತಾ ಹಠ ಮಾಡುತ್ತಿದ್ದಾನೆ ಎಂದು ಬಾಲಕನ ತಾಯಿ ಲಕ್ಷ್ಮೀ ತಿಳಿಸಿದ್ದಾರೆ.

ಸದ್ಯ ಬಾಲಕನ ತಾಯಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ನಂದಿನಿ ಲೇಔಟ್‌ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ: ಬಾದಲ್‌ ಸರ್ಕಾರ ನಾಟಕಗಳಲ್ಲಿ ಸಾಮಾಜಿಕ ಬದ್ಧತೆ ಇತ್ತು – ಧು. ಸರಸ್ವತಿ Janashakthi Media

Donate Janashakthi Media

Leave a Reply

Your email address will not be published. Required fields are marked *