ಪುಸ್ತಕ “ಮಂಗಳೂರು ಮಲ್ಲಿಗೆಯ ಕತೆ ಯಾರಿಗೆ ಗೊತ್ತಿಲ್ಲ? ಮಂಗಳೂರು ಮಲ್ಲಿಗೆಯನ್ನು ಬೆಳೆಯುವವರು ಉಡುಪಿ -ಶಂಕರಪುರದ ಕ್ರಿಶ್ಚಿಯನರು, ಮಾರುವವರು ಮುಸ್ಲಿಮರು, ಮುಡಿಯುವವರು ಹಿಂದೂಗಳು. ಯಾಂತ್ರಿಕೃತ ಮೀನುಗಾರಿಕೆಯ ಮೊದಲು ರಂಪಣಿಗಳಲ್ಲಿ ಮೀನು ಹಿಡಿಯುವವರು ಮೊಗವೀರರು, ಆ ಮೀನನ್ನು ಸಗಟು ಖರೀದಿ ಮಾಡುತ್ತಿದ್ದವರು ಮುಸ್ಲಿಮರು, ಅದೇ ಮೀನನ್ನು ಮುಸ್ಲಿಮರಿಂದ ಚಿಲ್ಲರೆಯಾಗಿ ಖರೀದಿಸಿ ಬುಟ್ಟಿಯಲ್ಲಿ ಹೊತ್ತುಕೊಂಡು ಊರಿನ ಮನೆಮನೆಗೆ ಹೋಗಿ ಮಾರುತ್ತಿದ್ದವರು ಅದೇ ಮೊಗವೀರ ಮಹಿಳೆಯರು. ಬೀಡಿ ಕಟ್ಟುತ್ತಿದ್ದವರಲ್ಲಿ ಬಹುಸಂಖ್ಯಾತರು ಹಿಂದೂಗಳು, ಬೀಡಿ ಬ್ರಾಂಚಿನ ಬಹುತೇಕ ಮಾಲೀಕರು ಮುಸ್ಲಿಮರು.” ಇಷ್ಟೊಂದು ವೈವಿದ್ಯಮಯ ಕೋಮು ಸಾಮರಸ್ಯವಿರುವ ಮತ್ತೊಂದು ಪ್ರದೇಶ ರಾಜ್ಯದಲ್ಲಿ ನಮಗೆ ಸಿಗುವುದು ಅಪರೂಪ. ಮುಂದೆ ಓದಿ….. ಪುಸ್ತಕ
– ಹೆಚ್.ಆರ್. ನವೀನ್‌ಕುಮಾರ್, ಹಾಸನ
“ಮನುಷ್ಯನನ್ನು ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯೇ” ಎಂದು ಪ್ರಶ್ನೆ ಮಾಡುವ ನಾಡಿನ ಸೃಜನಶೀಲ ಬರಹಗಾರರಾಗಿದ್ದ ಪೂರ್ಣ ಚಂದ್ರ ತೇಜಸ್ವಿಯವರ ಈ ಮಾತು ಎಲ್ಲಾ ದೇಶ ಕಾಲಕ್ಕೂ ಅನ್ವಯವಾಗುತ್ತದೆ. ಆದರೆ ಕರ್ನಾಟಕದ ಕರಾವಳಿಗೆ ಅನ್ವಯವಾಗುವುದರಲ್ಲಿ ಸ್ವಲ್ಪ ತೊಡಕಿದ್ದಂತೆ ಕಾಣುತ್ತದೆ.
ಕರಾವಳಿಯ ಪ್ರದೇಶದಲ್ಲಿ ಕೇವಲ ಧರ್ಮದ ಕಾರಣಕ್ಕಾಗಿ ಕೊಲ್ಲಲ್‌ಪಟ್ಟ ಒಬ್ಬ ವ್ಯಕ್ತಿ ಒಂದು ಧರ್ಮದವನಾಗಿರುತ್ತಾನೆ. ಅವನ ಸಾವಿಗೆ ಸೇಡು ತೀರಿಸಿಕೊಳ್ಳಲು ಈ ಘಟನೆಗೆ ಯಾವ ರೀತಿಯಲ್ಲೂ ಸಂಬಂಧವೇ ಇರದ ಮತ್ತೊಂದು ಧರ್ಮದ ವ್ಯಕ್ತಿಯನ್ನು ಕೊಲ್ಲುವ ಮೂಲಕ ತಮ್ಮ ಹಗೆಯನ್ನು ತೀರಿಸಿಕೊಳ್ಳುವ ಈ ವಿಕೃತ ಮನಸ್ಥಿತಿಗೆ ಬಲಿಯಾದವರ ಸಾಲು ಸಾಲು ಪಟ್ಟಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿವೆ.
ಇಂತಹ ಮತೀಯ ದ್ವೇಶದ ಬೆಂಕಿಯಲ್ಲಿ ನಲುಗಿದ ಬದುಕುಗಳ ಕರುಳಿನ ಕಥೆಯನ್ನು “ಕರಾವಳಿಯ ರಕ್ತ ಕಣ್ಣೀರು” ಎಂಬ ಕೃತಿಯ ಮೂಲಕ ಪತ್ರಕರ್ತರಾದ ಇರ್ಷಾದ್ ಉಪ್ಪಿನಂಗಡಿಯವರು ನಮ್ಮ ಮುಂದಿಟ್ಟಿದ್ದಾರೆ. ಮತೀಯ ದ್ವೇ಼ಷ ಎಂಬುದು ಎಷ್ಟು ವೇಗವಾಗಿ ಹತ್ತಿ ಉರಿಯುತ್ತದೆ ಎಂದರೆ ಅದಕ್ಕೆ ಹೊರಗಿನ ಯಾವ ಇಂಧನದ ಅಗತ್ಯವೂ ಬೀಳುವುದಿಲ್ಲ. ಇಂತಹ ಅತ್ಯಂತ ಅಪಾಯಕಾರಿ ಸಂದರ್ಭದಲ್ಲಿ ಒಬ್ಬ ದಿಟ್ಟ ಪತ್ರಕರ್ತನಾಗಿ ‘ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು’ ಎಂಬಂತೆ ಪ್ರತೀ ಮತೀಯ ಗಲಭೆ ನಡೆದದ್ದರ ಹಿನ್ನೆಲೆ ಏನು? ಅದಕ್ಕಿರುವ ವಸ್ತು ನಿಷ್ಟ ಕಾರಣಗಳೇನು? ಇದರ ಹಿಂದಿರುವ ಶಕ್ತಿಗಳು ಯಾವುವು? ಇವೆಲ್ಲವುಗಳಿಗೂ ಮಿಗಿಲಾಗಿ ಇಂತಹ ದ್ವೇಷದಲ್ಲಿ ಪ್ರಾಣ ಕಳೆದುಕೊಂಡವರನ್ನು ನಂಬಿ ಬದುಕು ಸಾಗಿಸುತ್ತಿದ್ದ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಮತ್ತಿತರರ ಬದುಕಿನ ಬವಣೆಗಳನ್ನು ನೇರವಾಗಿ ಸಂದರ್ಶಿಸುವ ಮೂಲಕ ಅವಲಂಬಿತರ ರಕ್ತ ಕಣ್ಣೀರನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ.
ಕರಾವಳಿ ಎಂದಾಕ್ಷಣ ನೆನಪಿಗೆ ಬರುವುದು ಸಮುದ್ರ, ಮೀನು, ಬುದ್ದಿವಂತ ಜನ ಹೀಗೆ.. ಆದರೆ ಇತ್ತೀಚಿನ ವರ್ಷಗಳಲ್ಲಿ ನಮಗೆ ನೆನಪಾಗುವುದು ಕೋಮು ಹಿಂಸೆ, ಕೊಲೆ ಇತ್ಯಾದಿ… ಆದರೆ ಕರಾವಳಿ ಎಂದರೆ ಅದು ಕೇವಲ ಧರ್ಮದ್ವೇಷದ ತಾಣವಲ್ಲ, ಇದು ನೈಸರ್ಗಕವಾಗಿ ಕೋಮುಸೌಹಾರ್ದತೆಯ ಬೀಡು ಎಂಬುದಕ್ಕೆ ಇಲ್ಲಿಯ ಮಲ್ಲಿಗೆ, ಮೀನು ಮತ್ತು ಬೀಡಿಗಳು ಜೀವಂತ ಸಾಕ್ಷಿಗಳು. ಈ ಕುರಿತು ಕೃತಿಯ ಆರಂಭದ ಮುನ್ನುಡಿಯಲ್ಲಿ ಹಿರಿಯ ಪತ್ರಕರ್ತರಾದ ದಿನೇಶ್ ಅಮ್ಮಿನ್ ಮಟ್ಟುರವರು ಹೀಗೆ ಹೇಳಿದ್ದಾರೆ. “ಮಂಗಳೂರು ಮಲ್ಲಿಗೆಯ ಕತೆ ಯಾರಿಗೆ ಗೊತ್ತಿಲ್ಲ? ಮಂಗಳೂರು ಮಲ್ಲಿಗೆಯನ್ನು ಬೆಳೆಯುವವರು ಉಡುಪಿ -ಶಂಕರಪುರದ ಕ್ರಿಶ್ಚಿಯನರು, ಮಾರುವವರು ಮುಸ್ಲಿಮರು, ಮುಡಿಯುವವರು ಹಿಂದೂಗಳು. ಯಾಂತ್ರಿಕೃತ ಮೀನುಗಾರಿಕೆಯ ಮೊದಲು ರಂಪಣಿಗಳಲ್ಲಿ ಮೀನು ಹಿಡಿಯುವವರು ಮೊಗವೀರರು, ಆ ಮೀನನ್ನು ಸಗಟು ಖರೀದಿ ಮಾಡುತ್ತಿದ್ದವರು ಮುಸ್ಲಿಮರು, ಅದೇ ಮೀನನ್ನು ಮುಸ್ಲಿಮರಿಂದ ಚಿಲ್ಲರೆಯಾಗಿ ಖರೀದಿಸಿ ಬುಟ್ಟಿಯಲ್ಲಿ ಹೊತ್ತುಕೊಂಡು ಊರಿನ ಮನೆಮನೆಗೆ ಹೋಗಿ ಮಾರುತ್ತಿದ್ದವರು ಅದೇ ಮೊಗವೀರ ಮಹಿಳೆಯರು. ಬೀಡಿ ಕಟ್ಟುತ್ತಿದ್ದವರಲ್ಲಿ ಬಹುಸಂಖ್ಯಾತರು ಹಿಂದೂಗಳು, ಬೀಡಿ ಬ್ರಾಂಚಿನ ಬಹುತೇಕ ಮಾಲೀಕರು ಮುಸ್ಲಿಮರು.” ಇಷ್ಟೊಂದು ವೈವಿದ್ಯಮಯ ಕೋಮು ಸಾಮರಸ್ಯವಿರುವ ಮತ್ತೊಂದು ಪ್ರದೇಶ ರಾಜ್ಯದಲ್ಲಿ ನಮಗೆ ಸಿಗುವುದು ಅಪರೂಪ. ಈ ಕಾರಣಕ್ಕಾಗಿಯೇ ಧರ್ಮಾಂದ ಶಕ್ತಿಗಳು ಕರಾವಳಿಯ ಮೇಲೆ ಕಣ್ಣಿಟ್ಟಂತೆ ಕಾಣುತ್ತದೆ. ಪುಸ್ತಕ
ಇದನ್ನೂ ಓದಿ : ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ: ಭಾರತದಲ್ಲಿ ಎಲ್‌ಪಿಜಿ ಸರಬರಾಜಿನ ಆತಂಕ – ದುರ್ಬಲ ಶಕ್ತಿ ಸಂಗ್ರಹ ಬಯಲಿಗೆ ಪುಸ್ತಕ
ಈ ಕೃತಿಯ ಪ್ರಧಾನ ವಸ್ತುವಾಗಿರುವ ಮತೀಯ ಗಲಭೆಗಳಲ್ಲಿ ಬಲಿಯಾದವರ ಕುಟುಂಬಗಳ ನೋವನ್ನು ಅನಾವರಣ ಮಾಡುವ ಪ್ರಯತ್ನ. ಇದರಲ್ಲಿ ಇರ್ಷಾದ ತಮ್ಮ ವೃತ್ತಿ ಬದುಕಿನ ಎಲ್ಲಾ ಅನುಭವಗಳನ್ನು ದಾರೆಯೆರೆದಂತಿದೆ. ಯಾಕೆಂದರೆ ಮೊದಲಿಗೆ ಈ ವಿಷಯವೇ ಅತ್ಯಂತ ಸೂಕ್ಷö್ಮವಾದದ್ದು, ಇನ್ನು ಬರೆಯುತ್ತಿರುವವರು ಯಾರು ಎಂಬುದನ್ನು ಗಮನಿಸಿ ಅದಕ್ಕೆ ಬಣ್ಣ ಹಚ್ಚುವವರ ಸಂಖ್ಯೆ ಕಡಿಮೆಯೇನಿಲ್ಲ. ಇವೆಲ್ಲವನ್ನು ಮೀರಿ. ಸತ್ಯವನ್ನು ಹುಡುಕುತ್ತಾ ಅದನ್ನೇ ದಾಖಲಿಸುವ ಇವರ ಧೈರ್ಯ ಮೆಚ್ಚುಗೆಗೆ ಪಾತ್ರವಾದ್ದು. ಈ ಕೃತಿಯನ್ನ ಇರ್ಷಾದ್ ಅಲ್ಲದೆ ಬೇರೆ ಯಾರೇ ರಚಿಸಿದ್ದರು ಈ ಲಯ ಬರುತ್ತಿರಲಿಲ್ಲ ಎಂಬುದು ನನ್ನ ಭಾವನೆ ಯಾಕೆಂದರೆ ಇವರು ಕರಾವಳಿಯಲ್ಲೇ ಹುಟ್ಟಿ ಬೆಳೆದು ಸೌಹಾರ್ದತೆ ಮತ್ತು ಸಂಘರ್ಷ ಎರಡನ್ನೂ ನೇರವಾಗಿ ಕಂಡವರು. ಮತ್ತು ಕ್ಷೇತ್ರ ಕಾಯಾ ನಡೆದಿ ಅಕ್ಷರಗಳನ್ನು ಪೋಣಿಸಿದವರು.
ಕೊಲೆಗೀಡಾದ ಮಗನೋ, ಗಂಡನೋ, ಅಪ್ಪನೋ ಯಾವ ಕಾರಣಕ್ಕೆ ಕೊಲೆಗೀಡಾದ ಎಂದು ಅರಿಯದೇ, ಆತನ ಸಾವಿನ ನಂತರ ಅತ್ಯಂತ ಭಯದಲ್ಲಿ ತಮ್ಮ ಬದುಕನ್ನು ದೂಡುತ್ತಿರುವವರ ಕಥೆಯನ್ನು ಕೇಳುತ್ತಿದ್ದರೆ ಕಣ್ಣಂಚು ಒದ್ದೆಯಾಗುತ್ತದೆ. ಒಂದು ಕಡೆ ಅವರದಲ್ಲದ ತಪ್ಪಿಗೆ ಅನುಭವಿಸುತ್ತಿರುವ ನೋವನ್ನು ಕೇಳಿದಾಗ ಸಂಕಟವಾಗುತ್ತದೆ. ಇದಕ್ಕೆ ಕಾರಣವಾದವÀರ ಮೇಲೆ ಆಕ್ರೋಶವಾಗುತ್ತದೆ. ಎಲ್ಲರ ಬಲಿಯ ಹಿಂದಿನ ಏಕೈಕ ಕಾರಣ “ಧರ್ಮ”. ಕೊಲೆಗೀಡಾದ ಬಹುತೇಕರು ಯುವಕರು, ಕಷ್ಟಪಟ್ಟು ದುಡಿದು ಜೀವನ ಸಾಗುಸುತ್ತಿದ್ದ ಶ್ರಮಜೀವಿಗಳು, ಯಾವುದೇ ರಾಜಕೀಯದಲ್ಲಾಗಲಿ, ಧಾರ್ಮಿಕ ಚಟುವಟಿಕೆಗಳಲ್ಲಾಗಲಿ, ಮತೀಯ ಸಂಘಟನೆಗಳಲ್ಲಾಗಲಿ ಭಾಗವಹಿಸಿದವರಲ್ಲ, ಯಾವ ಕ್ರಿಮಿನಲ್ ಹಿನ್ನೆಲೆಯನ್ನೂ ಹೊಂದಿದವರಲ್ಲ. ಇವರೆಲ್ಲಾ ಜನಸಾಮಾನ್ಯರು. ಬಹುತೇಕ ಇಂತಹವರೇ ಕರಾವಳಿಯ ಮತೀಯ ದ್ವೇಷಕ್ಕೆ ಬಲಿಯಾಗಿರುವವರು. ಪುಸ್ತಕ
ಈ ಕೃತಿ ನೋವಿನ ಕಥೆಯನ್ನು ಹೇಳುವ ಜೊತೆಗೆ ಅವರ ನಡುವಿನ ಸೌಹಾರ್ದತೆಯನ್ನು ಅನಾವರಣ ಮಾಡುತ್ತದೆ. ಕರಾವಳಿ ಎಂದರೆ ಅದು ‘ಕೋಮುವಾದ’ದ ಮಾದರಿ ಮಾತ್ರವಲ್ಲ ಅದಕ್ಕೊಂದು ಶಾಶ್ವತವಾದ ‘ಸೌಹಾರ್ದ’ ಮಾದರಿಯಿದೆ ಅದು ಈ ಮಣ್ಣಿನಲ್ಲಿ ಆಳವಾಗಿ ಬೇರೂರಿದೆ ಎಂಬುದನ್ನು ನೊಂದವರ ಮಾತುಗಳ ಮೂಲಕ ದಾಖಲಿಸುತ್ತಾರೆ. ಈ ಕೃತಿಯ ಮಹತ್ವ ಇರುವುದು ಇಲ್ಲೇ.
ಮತ್ತೊಂದು ಅಂಶವನ್ನು ಗಮನಿಸಬೇಕಾದದ್ದು ಏನೆಂದರೆ, ಯಾವ ಧರ್ಮಕ್ಕೆ ಸೇರಿದವರು ಕೊಲೆಗೀಡಾದರೂ, ಕೊಲೆಗೀಡಾದ ವ್ಯಕ್ತಿಯ ಕುಟುಂಬ ಮತ್ತೊಂದು ಧರ್ಮದ ವಿರುದ್ಧ ಧ್ವೇಷ ತೀರಿಸಿಕೊಳ್ಳುವ ಯಾವ ಪ್ರಯತ್ನವನ್ನು ಮಾಡಿರುವುದು ಕಂಡುಬರುವುದಿಲ್ಲ. ಇನ್ನೊಂದು ಸಂಗತಿಯೆAದರೆ ಕೊಲೆಗೆ ಕಾರಣರಾದ ಬಹುತೇಕರಿಗೆ ಸರಿಯಾದ ಶಿಕ್ಷೆಯಾಗಿಲ್ಲ ಎಂಬ ನೋವು ಕುಟುಂಬ ಸದಸ್ಯರನ್ನು ಕಳೆದುಕೊಂಡದ್ದಕ್ಕಿಂತ ಹೆಚ್ಚಾಗಿ ಕಾಡುತ್ತಿದೆ.
ಈ ಕಾಲದ ಅಗತ್ಯವನ್ನು ತಮ್ಮ ಅಕ್ಷರಗಳ ಮೂಲಕ ಪೂರೈಸಲು ಪ್ರಯತ್ನಿಸಿರುವ ಇರ್ಷಾದ್ ಉಪ್ಪಿನಂಗಡಿ ಅಭಿನಂದನಾರ್ಹರು ಮತ್ತು ಈ ಕೃತಿಯನ್ನು ಪ್ರಕಟಿಸಿ ಅದನ್ನು ಜನರತ್ತ ಕೊಂಡೊಯ್ಯುತ್ತಿರುವ ಅಹರ್ನಿಷಿ ಪ್ರಕಾಶನಕ್ಕೂ ಅಭಿನಂದನೆಗಳು. ನಿಜವಾದ ಅರ್ಥದಲ್ಲಿ ಸೌಹಾರ್ದ ಬಯಸುವವರು, ಮತ್ತು ಕೋಮುದ್ವೇಷದ ಕೊಲೆಗಳ ಹಿಂದಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕಾದವರೆಲ್ಲಾ ಈ ಕೃತಿಯನ್ನು ಕಡ್ಡಾಯವಾಗಿ ಕೊಂಡು ಓದಲೇ ಬೇಕು. 144 ಪುಟಗಳಿರುವ ಕೃತಿಯ ಬೆಲೆ 160 ರೂ.
ಇದನ್ನೂ ನೋಡಿ : ಜೀವನೋಪಾಯದ ಮೇಲೆ ದಾಳಿ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಮಹಿಳಾ ದಿನದ ಪ್ರತಿಭಟನೆ Janashakthi Media
