ಜಮ್ಮು ಮತ್ತು ಕಾಶ್ಮೀರದಲ್ಲಿ ಪುಸ್ತಕಗಳ ನಿಷೇಧ; ಸರ್ವಾಧಿಕಾರಶಾಹಿಯ ಮತ್ತೊಂದು ಅಭಿವ್ಯಕ್ತಿ

ನವದೆಹಲಿ: 25 ಪುಸ್ತಕಗಳನ್ನು ನಿಷೇಧಿಸುವ ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲರ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ವಿರೋಧಿಸಿದೆ. ಈ ಸೆನ್ಸಾರ್ ಶಿಪ್ ಸರ್ವಾಧಿಕಾರಶಾಹಿಯ ಮತ್ತೊಂದು ಅಭಿವ್ಯಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಗ್ನ ದಾಳಿಯಾಗಿದೆ ಎಂದು ಅದು ಹೇಳಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಉಪರಾಜ್ಯಪಾಲರು, ಭಾರತೀಯ ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಆಕ್ರಮಣಕಾರಿಯಾಗಿ ಮೊಟಕುಗೊಳಿಸುತ್ತಿದ್ದಾರೆ. ಈ ಪುಸ್ತಕಗಳು ‘ಪ್ರತ್ಯೇಕತೆ ಮತ್ತು ಭಯೋತ್ಪಾದನೆಗೆ’ ಸಹಾಯ ಮಾಡುತ್ತವೆ ಎಂಬ ನೆಪವನ್ನು ಉಲ್ಲೇಖಿಸಿ, ಅವರ ಆಡಳಿತವು ಕಾಶ್ಮೀರದ ಇತಿಹಾಸ ಮತ್ತು ಅದರ ಪ್ರಸ್ತುತ ಸಮಸ್ಯೆಗಳ ಬೇರುಗಳನ್ನು ಅನ್ವೇಷಿಸುವ 25 ಪುಸ್ತಕಗಳ ಮೇಲೆ ನಿಷೇಧ ಹೇರಿದೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಮಾರುಕಟ್ಟೆಗಳಲ್ಲಿ ವಸ್ತುಗಳ ಬೆಲೆ ಗಗನಕ್ಕೆ

ಇವುಗಳಲ್ಲಿ ಎ.ಜಿ. ನೂರಾಣಿ, ಅನುರಾಧಾ ಭಾಸಿನ್, ಅರುಂಧತಿ ರಾಯ್ ರಂತಹ ಪ್ರಸಿದ್ಧ ಲೇಖಕರ ಕೃತಿಗಳು ಸೇರಿವೆ.

ಸಿಪಿಐ(ಎಂ), ಪುಸ್ತಕಗಳ ಮೇಲಿನ ನಿಷೇಧವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸುವುದಾಗಿ ಪೊಲಿಟ್‍ಬ್ಯುರೊ ಹೇಳಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ಪ್ರಜಾಪ್ರಭುತ್ವ ಹಕ್ಕುಗಳೊಂದಿಗೆ ರಾಜ್ಯದ ದರ್ಜೆಯನ್ನು ವಿಳಂಬವಿಲ್ಲದೆ ಪುನಃಸ್ಥಾಪಿಸಬೇಕು.

ಚುನಾಯಿತ ಸರ್ಕಾರಕ್ಕೆ ಸಂಪೂರ್ಣ ಆಡಳಿತಾತ್ಮಕ ಅಧಿಕಾರ ನೀಡಬೇಕು. ಇಂತಹ ಕ್ರಮಗಳ ಮೂಲಕ ಮಾತ್ರ ಜಮ್ಮು ಮತ್ತು ಕಾಶ್ಮೀರದ ಜನರ ವಿಶ್ವಾಸವನ್ನು ಮರಳಿ ಪಡೆಯಲು ಸಾಧ್ಯ ಎಂದು ಅದು ಹೇಳಿದೆ.

ಇದನ್ನೂ ನೋಡಿ: ಧರ್ಮಸ್ಥಳ | ಮಗಳನ್ನು ನೆನೆದು ಕಣ್ಣೀರು ಹಾಕಿದ ತಾಯಿ, ಆ ದಿನ ಏನಾಯ್ತು? ವಿವರವಾಗಿ ಬಿಚ್ಚಿಟ್ಟ ಪದ್ಮಲತಾಳ ಅಕ್ಕ

Donate Janashakthi Media

Leave a Reply

Your email address will not be published. Required fields are marked *