ಎಲ್ಲಾ ಅನನುಕೂಲ ಅಪಪ್ರಚಾರಗಳು ವಿವಾದಗಳ ನಡುವೆಯೂ, ಬೊಲಿವಿಯಾದಲ್ಲಿ ನಡೆದ ಅಕ್ಟೋಬರ್ 18 ರ ಚುನಾವಣೆಯಲ್ಲಿ ಮೂವ್ಮೆಂಟ್ ಟುವರ್ಡ್ ಸೋಷಿಯಲಿಸಂ (ಎಂಎಎಸ್) ಪಕ್ಷವು 55.1% ಮತಗಳನ್ನು ಗಳಿಸಿ ವಿಜಯ ಸಾಧಿಸಿದೆ. ಶೇ. 53.75% ಬೆಂಬಲದೊಂದಿಗೆ 2005 ರಲ್ಲಿ ಇವೊ ಮೊರೇಲ್ಸ್ ಅವರ ಸಾಧನೆಗಿಂತ ಇದು ಉತ್ತಮವಾಗಿದೆ. ಮಾಸ್ ಅಧ್ಯಕ್ಷ-ಚುನಾಯಿತ ಲುಚೊ ಆರ್ಸ್‌ಗೆ ಬೊಲಿವಿಯನ್ ಇತಿಹಾಸದ ಅತಿ ದೊಡ್ಡ ಜನಾದೇಶವಾಗಿದೆ. ಇದು ಮಾಸ್ ನೀತಿಗಳ ಪ್ರಮುಖ ಅನುಮೋದನೆ ಮತ್ತು ಅದರ 14 ವರ್ಷಗಳ ಬೊಲಿವಿಯಾ ಜನರ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಕ್ಕೆ ಸಿಕ್ಕಿರುವ ಜಯವೆಂದು ಭಾವಿಸಲಾಗಿದೆ.
ಬಲ ಪಂಥೀಯ ಜೀನೈನ್ ಎನೆಝ್ ಅವರ ಕಾನೂನು-ಬಾಹಿರ ಕ್ಷಿಪ್ರದಂಗೆ ಮೂಲಕ ಒಂದು ವರ್ಷದ ಹಿಂದೆ ಸ್ಥಾಪಿತಗೊಂಡಿದ್ದ ಸರ್ಕಾರವು ಇತ್ತೀಚಿಗೆ ಅಕ್ಟೋಬರ್ 18,ರಂದು ನಡೆದ ಚುನಾವಣೆಯಲ್ಲಿ ಸೋಲನ್ನುಂಡು ತೀವ್ರ ಮಖಭಂಗ ಅನುಭವಿಸಿದೆ. ದಂಗೆ ಮತ್ತು ಹಿಂಸಾತ್ಮಕ ಪ್ರಕ್ಷುಬ್ಧ ವಾತಾವರಣ ಇಡೀ ವರ್ಷದಾದ್ಯಂತ ಆವರಿಸಿಕೊಂಡಿತ್ತು. ಇದರಲ್ಲಿ ಮೂವ್ಮೆಂಟ್ ಟುವರ್ಡ್ಸ್ ಸೋಷಿಯಲಿಸಂ (ಎಂಎಎಸ್-ಮಾಸ್) ಅಧ್ಯಕ್ಷ ರಾಗಿದ್ದ ಇವೊ ಮೊರಲೆಸ್ ರನ್ನು ಗಡಿ ಪಾರು ಗೊಂಡಿದ್ದರು. ಅವರು ಕ್ಷಿಪ್ರದಂಗೆಯ ನಂತರ, ಅರ್ಜೆಂಟೀನಾ ದಲ್ಲಿ ಆಶ್ರಯ ಪಡೆದಿದ್ದರು. ಮಾಸ್ ನ ಇನ್ನಿತರ ನಾಯಕರು, ಮತ್ತು ಎಡಪಂಥೀಯ ಕಾರ್ಯಕರ್ತರನ್ನು ಬಂದೂಕಿನಿಂದ ಹಾಗೂ ರಾಜಕೀಯವಾಗಿ ನಾಶ ಮಾಡಲು ಎಲ್ಲಾ ರೀತಿಯ ಪ್ರಯತ್ನ ಗಳನ್ನು ಕಳೆದ ಒಂದು ವರ್ಷದಿಂದ, ಜೀನೈನ್ ಎನಝ್ ಆಡಳಿತ ಮಾಡಿತ್ತು. ಆದಾಗ್ಯೂ, ಅಕ್ಟೊಬರ್ 18 ರಂದು ನಡೆದ ಚುನಾವಣೆಯಲ್ಲಿ, ಮಾಸ್ ನ ಚುನಾಯಿತ -ಅದ್ಯಕ್ಷ ಲುಚೊ ಆರ್ಸೆ ಯವರು, ತಮ್ಮ ಹಿಂದಿನ ಮಾಸ್ ಅದ್ಯಕ್ಷ ಇವೊ ಮೊರೆಲ್ಸ್ ಗಿಂತ ಉತ್ತಮ ಮತ ಪಡೆದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಬೊಲಿವಿಯಾದಲ್ಲಿ ಕಳೆದ ಒಂದು ವರ್ಷ ದಿಂದೀಚೆಗೆ, ಒಟ್ಟಾರೆಯಾಗಿ, ಬಲಪಂಥೀಯ ಕ್ಷಿಪ್ರದಂಗೆ ಮತ್ತು ಹಿಂಸಾಕಾಂಡದ ಸ್ಥಿತಿಯನ್ನು ಎದುರಿಸಿ ಹಿಮ್ಮೆಟ್ಟಿಸುವಲ್ಲಿ ಮತ್ತು ಮತಪತ್ರಗಳು ಬುಲೆಟ್ ಗಳನ್ನು ಸೋಲಿಸಬಲ್ಲುದು ಎಂದು ತೋರಿಸಿದ ಮಾಸ್ ಮೈತ್ರಿ ಕೂಟದ ಗೆಲುವು , ಇತ್ತೀಚಿನ ಲ್ಯಾಟಿನ್ ಅಮೆರಿಕ ಮಾತ್ರವಲ್ಲ ಜಾಗತಿಕ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ.
ಎಲ್ಲಾ ಅನನುಕೂಲ ಅಪಪ್ರಚಾರಗಳು ವಿವಾದಗಳ ನಡುವೆಯೂ, ಬೊಲಿವಿಯಾದಲ್ಲಿ ನಡೆದ ಅಕ್ಟೋಬರ್ 18 ರ ಚುನಾವಣೆಯಲ್ಲಿ ಮೂವ್ಮೆಂಟ್ ಟುವರ್ಡ್ ಸೋಷಿಯಲಿಸಂ (ಎಂಎಎಸ್) ಪಕ್ಷವು 55.1% ಮತಗಳನ್ನು ಗಳಿಸಿ ವಿಜಯ ಸಾಧಿಸಿದೆ. ಶೇ. 53.75% ಬೆಂಬಲದೊಂದಿಗೆ 2005 ರಲ್ಲಿ ಇವೊ ಮೊರೇಲ್ಸ್ ಅವರ ಸಾಧನೆಗಿಂತ ಇದು ಉತ್ತಮವಾಗಿದೆ. ಮಾಸ್ ಅಧ್ಯಕ್ಷ-ಚುನಾಯಿತ ಲುಚೊ ಆರ್ಸ್‌ಗೆ ಬೊಲಿವಿಯನ್ ಇತಿಹಾಸದ ಅತಿ ದೊಡ್ಡ ಜನಾದೇಶವಾಗಿದೆ. ಇದು ಮಾಸ್ ನೀತಿಗಳ ಪ್ರಮುಖ ಅನುಮೋದನೆ ಮತ್ತು ಅದರ 14 ವರ್ಷಗಳ ಬೊಲಿವಿಯಾ ಜನರ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಕ್ಕೆ ಸಿಕ್ಕಿರುವ ಜಯವೆಂದು ಭಾವಿಸಲಾಗಿದೆ.
ಮಾಜಿ ಎಂಎಎಸ್ ಅಧ್ಯಕ್ಷ ಇವೊ ಮೊರೇಲ್ಸ್ ರವರ ಆಡಳಿತದ ವಿರುದ್ದ, ಕ್ಷಿಪ್ರದಂಗೆ ಎಬ್ಬಿಸಿ ಬಲಪಂಥೀಯ ಸೆನೆಟರ್ ಜೀನೈನ್ ಎನೆಜ್ ಅವರನ್ನು ಅಧಿಕಾರಕ್ಕೆ ತಂದ ಒಂದು ವರ್ಷದ ನಂತರ ಈ ಚುನಾವಣೆ ನಡೆಯಿತು. ಕಳೆದ ನವೆಂಬರ್‌ನಲ್ಲಿ ಬೊಲಿವಿಯಾದ ಸಕಾಬಾ ಮತ್ತು ಸೆಂಕಾಟಾ ನಗರಗಳಲ್ಲಿ ನಡೆದ ಹತ್ಯಾಕಾಂಡದಲ್ಲಿ ಎನೆಜ್ ಮತ್ತು ಅವರ ಕುಖ್ಯಾತ ಸರ್ಕಾರಿ ಸಚಿವ ಆರ್ಟುರೊ ಮುರಿಲ್ಲೊ ಅವರ ಅಡಿಯಲ್ಲಿ, ಸರ್ಕಾರವು ಭಿನ್ನಮತೀಯರನ್ನು ಮತ್ತು ಕ್ಷಿಪ್ರದಂಗೆ-ವಿರೋಧಿ ಕಾರ್ಯಕರ್ತರನ್ನು ದಮನಿಸಿತು, ಡಜನ್ ಗಟ್ಟಲೆ ಜನರನ್ನು ಕೊಂದು ನೂರಾರು ಜನರನ್ನು ಗಾಯಗೊಳಿಸಿತು. ಇತ್ತೀಚಿನ ಚುನಾವಣೆಗಳಿಗೆ ಕಾರಣವಾದ ಪ್ರಕ್ಷುಬ್ಧ ವರ್ಷದಲ್ಲಿ ಸರಕಾರ ಮಾಸ್, ಅದರ ಮೈತ್ರಿಕೂಟದ ಮತ್ತು ಎಡಪಂಥೀಯ ಕಾರ್ಯಕರ್ತರಿಗೆ ರಾಜಕೀಯ ಕಿರುಕುಳ ನೀಡಿತ್ತು.
ಮಾಸ್ ಗೆಲುವು ದಂಗೆಯಿಂದ ಸ್ಥಾಪಿಸಲ್ಪಟ್ಟ ಜನಾಂಗೀಯ-ನೀತಿಯ ಸರ್ಕಾರವನ್ನು ತಿರಸ್ಕರಿಸಿದೆ. ಕಳೆದ ವರ್ಷವಿಡೀ ಪ್ರಜಾಪ್ರಭುತ್ವವನ್ನು ರಕ್ಷಿಸುವ ಚಳುವಳಿಗಳು ಬೊಲಿವಿಯಾವನ್ನು ಪ್ರಸ್ತುತ ಈ ಐತಿಹಾಸಿಕ ಕಾಲ ಘಟ್ಟಕ್ಕೆ ತಂದವು. ಆಗಸ್ಟ್ ನಲ್ಲಿ ವಾರಗಳವರೆಗೆ, ಮಾಸ್-ಮತ್ತು ಅದರ ಮೈತ್ರಿಕೂಟದ ಕ್ಯಾಂಪೆಸಿನೊ, ಸ್ಥಳೀಯ ಮತ್ತು ಕಾರ್ಮಿಕ ಗುಂಪುಗಳು ಆಯೋಜಿಸಿದ್ದ ಬೃಹತ್ ರಸ್ತೆ ತಡೆ ಪ್ರತಿಭಟನೆಗಳು, ಹಲವು ತಿಂಗಳ ವಿಳಂಬದ ನಂತರ, ಚುನಾವಣೆ ನಡೆಸಲು ಯಶಸ್ವಿಯಾಗಿ ಒತ್ತಡ ಹೇರಿದ್ದವು ಎಂಬ ಅಂಶವನ್ನು ಮರೆಯಬಾರದು.
ಚುನಾವಣೆಯಲ್ಲಿ ಜಯಗಳಿಸಿದ ನಂತರ, ಮುಂದಿನ ತಿಂಗಳು ಮಾಸ್ ಸರ್ಕಾರವನ್ನು ಪ್ರವೇಶಿಸಲಿದ್ದು, ಹಲವು ನಿರ್ಣಾಯಕ ಪ್ರಶ್ನೆಗಳನ್ನು ಎದುರಿಸಬೇಕಾಗಿದೆ. ಈ ಪ್ರಶ್ನೆಗಳಲ್ಲಿ ಪ್ರಮುಖವಾದ, ಒಂದು – ಪಕ್ಷದ ನಾಯಕತ್ವ ಎಷ್ಟು ಬದಲಾಗುತ್ತದೆ ಎಂಬುದಾಗಿದೆ. ಕಳೆದ ವರ್ಷದ ಬಿಕ್ಕಟ್ಟು ಹೊಸ ನಾಯಕತ್ವವು ಮುನ್ನೆಲೆಗೆ ಬರುವುದಕ್ಕೆ ಕಾರಣವಾಗಿದೆ. ಉದಾಹರಣೆಗೆ, ಯುವ ಎಂಎಎಸ್ ಕೋಕಲೆರೊ ನಾಯಕರಾದ ಆಂಡ್ರಿನಿಕೊ ರೊಡ್ರಿಗಸ್ ಮತ್ತು ಲಿಯೊನಾರ್ಡ್ ಲೊಜಾವೆರೆ ಅವರು ಕೊಚಬಾಂಬಾದಲ್ಲಿ ಸೆನೆಟರ್‌ಗಳಾಗಿ ಆಯ್ಕೆಯಾಗಿದ್ದಾರೆ.
ಈ ಚುನಾವಣಾ ಫಲಿತಾಂಶ ಮಾಸ್ ನಲ್ಲಿರುವ ಎಡಪಂಥೀಯ ಗುಂಪನ್ನು ಬಲಪಡಿಸಿದೆ ಎನ್ನಲಾಗಿದೆ. ಉಪಾಧ್ಯಕ್ಷ-ಚುನಾಯಿತ ಡೇವಿಡ್ ಚೊಕ್ಹುವಾಂಕಾ ಅವರನ್ನು ಮಾಸ್ ಪಕ್ಷದ ಹೆಚ್ಚು ನಿರ್ಣಾಯಕ ಎಡಪಂಥೀಯ ಪ್ರತಿನಿಧಿಯೆಂದು ಪರಿಗಣಿಸಲಾಗುತ್ತದೆ. ಎಡಪಂಥ ಕಾರ್ಮಿಕ, ರೈತ ಮತ್ತು ಸ್ಥಳೀಯ ಜನರ ಚಳುವಳಿಗಳ ತಳಮಟ್ಟದ ಮೇಲೆ ನೇರವಾಗಿ ಆಧಾರಿತವಾಗಿದೆ. ಇದು ಮಾಸ್ ನೆಲೆಗಳೊಂದಿಗಿನ ಸಂಬಂಧವನ್ನು ಬಲಪಡಿಸಬಹುದು ಹಾಗೂ, ಸಾಮಾಜಿಕ ಚಳುವಳಿಗಳೊಂದಿಗೆ ಪಕ್ಷದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು.
ಪರಿಸ್ಥಿಯಲ್ಲಿ ಇವೊ ಮೊರೇಲ್ಸ್ ರ ಪಾತ್ರವೇನು ? ಚುನಾವಣಾ ವಿಜಯದ ನಂತರ, ಅಧ್ಯಕ್ಷ-ಚುನಾಯಿತ ಆರ್ಸ್ ಅವರು ಹೊಸ ಸರ್ಕಾರದಲ್ಲಿ ಮೊರೇಲ್ಸ್ ಪಾತ್ರವನ್ನು ಹೊಂದಿಲ್ಲ, ಆದರೆ ಅರ್ಜೆಂಟೀನಾದಿಂದ ಬೊಲಿವಿಯಾಕ್ಕೆ ಮರಳಲು ಅವರಿಗೆ ಸ್ವಾಗತವಿದೆ ಎಂದು ಹೇಳಿದ್ದಾರೆ.
ಸರ್ಕಾರ ಮತ್ತು ಬೀದಿಗಳಲ್ಲಿ ರಾಜಕೀಯ ಸೋಲನ್ನು ಬಲಪಂಥೀಯರು ಹೇಗೆ ಸ್ವೀಕರಿಸುತ್ತಾರೆ ಕಾದುನೋಡಬೇಕು.? ಅಧ್ಯಕ್ಷೀಯ ಅಭ್ಯರ್ಥಿ ಕಾರ್ಲೋಸ್ ಮೆಸಾ, ಮತ್ತು ಆರ್ಗನೈಸೇಶನ್ ಆಫ್ ಅಮೇರಿಕನ್ ಸ್ಟೇಟ್ಸ್ ಎಲ್ಲರೂ ಮಾಸ್ ವಿಜಯವನ್ನು ಒಪ್ಪಿಕೊಂಡ್ಡಿದ್ದಾರೆ. ಆದಾಗ್ಯೂ, ಬಲಪಂಥೀಯ ಕಾಮಿಟೆ ಸೆವಿಕೊ ಪರ ಸಾಂತಾ ಕ್ರೂಜ್, ದಂಗೆ ನಾಯಕ ಫರ್ನಾಂಡೊ ಕ್ಯಾಮಾಚೊ ಮತ್ತು ಇತರ ಮಾಸ್ ವಿರೋಧಿ ಗುಂಪುಗಳು ಮಾಸ್ ವಿಜಯವನ್ನು ತಿರಸ್ಕರಿಸಿವೆ. ಕಳೆದ ವರ್ಷದಲ್ಲಿ ದೇಶದಲ್ಲಿ ಜನಾಂಗೀಯ ಮತ್ತು ಅರೆಸೈನಿಕ ಗುಂಪುಗಳ ಕಾರ್ಯಾಚರಣೆಗಳನ್ನು ಗಮನಿಸಿದರೆ, ಅವರು ಬೊಲಿವಿಯಾದಲ್ಲಿ ಅಶಾಂತಿಯನ್ನು ಹುಟ್ಟುಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಧಿಕಾರ ವಹಿಸಿಕೊಂಡ ಮಾಸ್, ಈ ಸವಾಲುಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.
ಮಾಸ್ ಈ ವರ್ಷದುದ್ದಕ್ಕೂ, ನಂಬಲಾಗದಷ್ಟು ಸವಾಲುಗಳನ್ನು ಎದುರಿಸಿದೆ ಮತ್ತು ಚುನಾವಣೆಯಲ್ಲಿಯೂ ಜಯ ಗಳಿಸಿದೆ. ಪ್ರಸ್ತುತ, ದೇಶದಲ್ಲಿ ವಿನಾಶಕಾರಿ ಕೋರೊನಾ ಸಾಂಕ್ರಾಮಿಕ, ಹೆಚ್ಚುತ್ತಿರುವ ಫ್ಯಾಸಿಸಂ ಮತ್ತು ನಿಧಾನ ಗತಿಯ ಆರ್ಥಿಕತೆಗೆ ಮುಖಾಮುಖಿಯಾಗಬೇಕಾಗುತ್ತದೆ. ಎಲ್ಲಾ ಬೊಲಿವಿಯನ್ನರ ಪರವಾಗಿ ಈ ಕಾರ್ಯವನ್ನು ನಿರ್ವಹಿಸಲು ಅದಕ್ಕೆ ಐತಿಹಾಸಿಕ ಆದೇಶವಂತೂ ಸಿಕ್ಕಿದೆ.