ನೈಟ್ ಕರ್ಪ್ಯೂ ಜಾರಿ : ಬಿಎಂಟಿಸಿ, ಕೆಎಸ್ ಆರ್ ಟಿ ಸಿ, ಆಟೋ, ಕ್ಯಾಬ್ ಸಂಚಾರ ಎಂದಿನಂತೆ : ಸವದಿ

ಬೆಂಗಳೂರು : ರಾಜ್ಯದಲ್ಲಿ ಬ್ರಿಟನ್ ಹೊಸ ಸ್ವರೂಪದ ಕೋರೊನಾ ತಡೆಗಟ್ಟುವ ಮುಂಜಾಗ್ರುತ ಕ್ರಮವಾಗಿ ಗುರುವಾರದಿಂದ  ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಜಾರಿಯಾಗಲಿದೆ. ಇಂತಹ ನೈಟ್ ಕರ್ಪ್ಯೂ ನಡುವೆಯೂ, ಬಿಎಂಟಿಸಿ, ಕೆಎಸ್ ಆರ್ ಟಿ ಸಿ, ಆಟೋ, ಕ್ಯಾಬ್ ಸಂಚಾರ ಎಂದಿನಂತೆ ಯಥಾಸ್ಥಿತಿಯಲ್ಲಿ ಇರಲಿದೆ ಎಂಬುದಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ್ ಸವದಿ ಅವರು, ರಾಜ್ಯ ಸರ್ಕಾರದಿಂದ ಕೋವಿಡ್-19 ಹೊಸ ರೂಪಾಂತರದ ಹಿನ್ನಲೆಯಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಇಂದು ರಾತ್ರಿಯಿಂದ ನೈಟ್ ಕರ್ಪ್ಯೂ ಜಾರಿಗೊಳ್ಳಲಿದೆ. ಇಂತಹ ನೈಟ್ ಕರ್ಪ್ಯೂ ಮಾರ್ಗಸೂಚಿ ಕ್ರಮಗಳನ್ನು ಸಹ ಸರ್ಕಾರ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.

ಇದನ್ನು ಓದಿ : ನಾಳೆಗೆ ಜಂಪ್ ಹೊಡೆದ ಕರ್ಫ್ಯೂ : ಸಿಎಂ, ಸುಧಾಕರ ನಡುವೆ ಮೂಡದ ಒಮ್ಮತ

ಇನ್ನೂ ಮುಂದುವರೆದು ಮಾತನಾಡಿದ ಅವರು, ಕೊರೋನಾ ಹೊಸ ರೂಪಾಂತದ ಭೀತಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೈಟ್ ಕರ್ಪ್ಯೂ ಇಂದು ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ.

ಇದರ ನಡುನೆಯೂ ಸಾರಿಗೆ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ, ಆಟೋ, ಕ್ಯಾಬ್ ಸಂಚಾರ ಯಥಾಸ್ಥಿತಿಯಲ್ಲಿ ಇರಲಿದೆ ಎಂಬುದಾಗಿ ತಿಳಿಸಿದರು.

ಬುಧವಾರದಿಂದ ಜ. 2ರವರೆಗೆ ನೈಟ್ ಕರ್ಫ್ಯೂ ಜಾರಿ; ರಾತ್ರಿ 10ರ ನಂತರ ಸಂಚಾರ ನಿಷೇಧ. ಬುಧವಾರ ರಾತ್ರಿಯಿಂದಲೇ ಜನವರಿ 2ರವರೆಗೆ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿತ್ತು. ಸರಕಾರದ ಈ  ನಡೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ನೈಟ್ ಕರ್ಪ್ಯೂ ಜಾರಿಯ ಕುರಿತು ಸರ್ಕಾರದ ಸಚಿವರಗಳ ನಡುವೆಯೇ ಒಮ್ಮತವಿಲ್ಲೆಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇವರ ದಿಢೀರ್ ನಿರ್ಧಾರಕ್ಕೆ ಜನರು ಗೊಂದಲಕ್ಕೆ ಒಳಗಾಗಿದ್ದು ಸರ್ಕಾರದ ವಿರುದ್ದ ಬೇಸರವನ್ನು ವ್ಯಕ್ತಿಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *