ಬಿಎಂಟಿಸಿ ಪ್ರಯಾಣಿಕರ ಬಸ್ ಪಾಸ್ ಅವಧಿ ವಿಸ್ತರಣೆ

ಬೆಂಗಳೂರು : ಮುಷ್ಕರ, ಲಾಕ್ ಡೌನ್ ನಿಂದಾಗಿ ಬಸ್ ಪಾಸ್ ಅವಧಿ ಕಳೆದುಕೊಂಡಿದ್ದ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ. ಮುಷ್ಕರ, ಲಾಕ್ ಡೌನ್ ನಿಂದ ಏಪ್ರಿಲ್ ತಿಂಗಳಿನಲ್ಲಿ ಪ್ರಯಾಣಿಕರಿಗೆ ಆದ ಬಸ್ ಪಾಸ್ ನಷ್ಟವನ್ನು ತುಂಬಿಕೊಡಲು ಬಿಎಂಟಿಸಿ ಮುಂದಾಗಿದ್ದು, ಪಾಸ್ ಅವಧಿಯನ್ನ ಜುಲೈ ವರೆಗೆ ವಿಸ್ತರಣೆ ಮಾಡಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಂಟಿಸಿ, ದಿನಾಂಕ 07.04.2021 ರಿಂದ ಸಂಸ್ಥೆಯ ಕೆಲವು ಚಾಲನಾ ಸಿಬ್ಬಂದಿಗಳು ಮುಷ್ಕರವನ್ನು ನಡೆಸಿದ್ದು ದಿನಾಂಕ 21.04.2021 ರವರೆಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯವಾದ್ದರಿಂದ, ಏಪ್ರಿಲ್-2021 ರ ಮಾಹೆಯ ಮಾಸಿಕ ಪಾಸಗಳ ಮಾನ್ಯತಾ ಅವಧಿಯನ್ನು ದಿನಾಂಕ 16.05.2021 ರವರೆಗೆ ಉಲ್ಲೇಖ-01 ರ ಸುತ್ತೋಲೆಯಂತೆ ವಿಸ್ತರಿಸಲಾಗಿತ್ತು.

ಜೊತೆಗೆ ಕೊರೊನಾ ಹಿನ್ನೆಲೆಯಲ್ಲಿ ದಿನಾಂಕ ಏಪ್ರಿಲ್ 20, 2021 ರಿಂದ ಜೂನ್ 20, 2021 ರವರೆಗೆ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿರುತ್ತದೆ.  ಮುಂದುವರೆದು, ಏಪ್ರಿಲ್-2021 ಮಾನೆಯಲ್ಲಿ ಮಾಸಿಕ ಪಾಸುಗಳನ್ನು ಪಡೆದಂತಹ ಸಾರ್ವಜನಿಕ ಪ್ರಯಾಣಿಕರು ಮುಷ್ಕರದ ಅವಧಿ ಹಾಗೂ ಕೋವಿಡ್ 19 ನಿಬರ್ಂಧಿತ ಅವಧಿಯಲ್ಲಿ ಮಾಸಿಕ ಪಾಸುಗಳನ್ನು ಬಳಕೆ ಮಾಡದೇ ಇರುವ ಕಾರಣ, ಏಪ್ರಿಲ್-2021 ಮಹಯ ಸಾಮಾನ್ಯ ಮಾಸಿಕ ಸಾಸ್ ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸ್ ಗಳ ಮಾನ್ಯತಾ ಅವಧಿಯನ್ನು ದಿನಾಂಕ 08.07.2011 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *